ವಿದೇಶಿ ಶಂಕಿತ ಉಗ್ರರ ಜೊತೆ ನಿರಂತರ ಚಾಟ್ ಬಹಿರಂಗ, ತುಮಕೂರಿನ ಅಲ್ಲಾ ಬಕ್ಷು ಅರೆಸ್ಟ್

Published : Jun 05, 2026, 08:40 AM IST
Karnataka police

ಸಾರಾಂಶ

ವಿದೇಶಿ ಶಂಕಿತ ಉಗ್ರರ ಜೊತೆ ನಿರಂತರ ಸಂಪರ್ಕದಲ್ಲಿದ್ದ ತುಮಕೂರಿನ 24ರ ಹರೆಯದ ಯುವಕ ಅಲ್ಲಾ ಬಕ್ಷುವನ್ನು ಪೊಲೀಸರು ಬಂಧಿಸಿದ್ದಾರೆ. ಹಲವು ಚಾಟ್‌ಗಳು, ಉಗ್ರರ ಚಟುವಟಿಕೆ ಕುರಿತು ಚಾಟ್ ಮಾಡಿರುವುದು ಬಯಲಾಗಿದೆ. 

ತುಮಕೂರು (ಜೂ.05) ವಿದೇಶದ ಶಂಕಿತ ಉಗ್ರರ ಜೊತೆ ನಿರಂತರ ಸಂಪರ್ಕದಲ್ಲಿದ್ದು ಹಲವು ಉಗ್ರ ಚಟುವಟಿಕೆಗಳಿಗೆ ಪ್ಲಾನ್ ರೂಪಿಸುತ್ತಿದ್ದ ತುಮಕೂರಿನ ಶ್ರೀರಾಮನಗರ ನಿವಾಸಿ ಅಲ್ಲಾ ಬಕ್ಷುನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲಾ ಬಕ್ಷು ಚುಟವಟಿಕೆ ಕುರಿತು ಕೇಂದ್ರ ತನಿಖಾ ತಂಡ ನಿಗಾವಹಿಸಿತ್ತು. ಉಗ್ರ ಚಟುವಟಿಕೆಗಳು ಖಚಿತವಾಗುತ್ತಿದ್ದಂತೆ ತುಮಕೂರು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಹೀಗಾಗಿ ತುಮಕೂರು ನಗರ ಠಾಣೆಯ ಇನ್ಸ್ ಪೆಕ್ಟರ್ ಅವಿನಾಷ್ ತಂಡ ಉಗ್ರರ ಜೊತೆ ಲಿಂಕ್ ಹೊಂದಿದ್ದ ಅಲ್ಲಾ ಬಕ್ಷುವನ್ನು ಅರೆಸ್ಟ್ ಮಾಡಿದ್ದಾರೆ.

ಉಗ್ರರ ಜೊತೆ ನಿರಂತರ ಸಂಪರ್ಕ, ಚಾಟ್ ಮಾಹಿತಿ ಬಹಿರಂಗ

ಕ್ಯಾತಸಂದ್ರದಲ್ಲಿ ಅಲ್ಲಾಬಕ್ಷುನನ್ನು ಪೊಲೀಸರು ಬಂಧಿಸಿದ್ದಾರೆ. ಶಂಕಿತ ಉಗ್ರ ಸಂಘಟನೆಯ ವ್ಯಕ್ತಿ ಜೊತೆ ಲಿಂಕ್ ಹೊಂದಿರುವ ಬಗ್ಗೆ ಮಾಹಿತಿ ಪಡೆದ ಕೇಂದ್ರ ತನಿಖಾ ತಂಡ ಯುವಕನ ಮೇಲೆ ನಿಗಾ ಇಟ್ಟಿತ್ತು.ಎಕ್ಸ್ ಖಾತೆಯ ಮುಖಾಂತರ ವಿದೇಶಿ ಉಗ್ರರ ಜೊತೆ ನಿರಂತರ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿತ್ತು. ಇದೇ ವೇಳೆ ದೇಶದ ಭದ್ರತೆಗೆ ಧಕ್ಕೆ ಬರುವ ರೀತಿ ಚಾಟ್ ನಡೆಸಿರುವುದು ಬೆಳಕಿಗೆ ಬಂದಿದೆ.

ಪ್ಪಚೋದನಾತ್ಮಕ ಸಂದೇಶ

ಸಮುದಾಯಕ್ಕೆ ಸೀಮಿತವಾಗಿ ದೇಶದೊಳಗೆ ಆದ ಬೆಳವಣಿಗೆ ಸಂಬಂಧಿತ ಪ್ರಚೋಧನಾತ್ಮಕ ಸಂದೇಶಗಳು ಪತ್ತೆಯಾಗಿದೆ. ಅಲ್ಲಾ ಬಕ್ಷು ಪ್ರತಿ ಚಲನವಲನಗಳ ಬಗ್ಗೆ ನಿಗಾವಹಿಸಿದ್ದ ಕೇಂದ್ರ ತನಿಖಾ ತಂಡ ಪೊಲೀಸರಿಗೆ ಮಾಹಿತಿ ನೀಡಿತ್ತು. ಮಾಹಿತಿ ಹಿನ್ನಲೆಯಲ್ಲಿ ಅಲ್ಲಾ ಬಕ್ಷುವನ್ನು ಅರೆಸ್ಟ್ ಮಾಡಿದ್ದಾರೆ. ಈತನ ಜೊತೆ ಮತ್ತೊಬ್ಬ ಸಂಹ ಸಂಪರ್ಕದ ಮಾಹಿತಿಗಳು ಬಯಲಾಗಿದೆ. ಅಲ್ಲಾ ಬಕ್ಷು ಅರೆಸ್ಟ್ ಆಗುತ್ತಿದ್ದಂತೆ ಮತ್ತೋರ್ವ ಪರಾರಿಯಾಗಿದ್ದಾನೆ. ಆತನ ಪತ್ತೆ ತುಮಕೂರು ನಗರ ಠಾಣಾ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಘಟನೆ ಸಂಬಂಧ ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು.

ತುಮಕೂರಿನಲ್ಲಿ ದೇಶ ವಿರೋಧಿ ಚುಟವಟಿಕೆ

ಇದೇ ವೇಳೆ ಕೇಂದ್ರ ತನಿಖಾ ತಂಡ ಅಲ್ಲಾ ಬಕ್ಷು ಜೊತೆ ಆತ್ಮೀಯ ಸಂಪರ್ಕದಲ್ಲಿರುವ ಮಾಹಿತಿಯನ್ನು ಕಲೆ ಹಾಕಿದೆ. ತುಮಕೂರಿನಲ್ಲಿ ದೇಶದ ಭದ್ರತೆಗೆ ಸವಾಲು ಹಾಕುವ ರೀತಿಯ ಚುಟವಟಿಕೆಗಳು ನಡೆಯುತ್ತರುವುದು ಸ್ಥಳೀಯರ ಆತಂಕಕ್ಕೆ ಕಾರಣಾಗಿದೆ. ಶಾಂತವಾಗಿದ್ದ ತುಮಕೂರಿನಲ್ಲೂ ದೇಶ ವಿರೋಧಿ ಚಟುವಟಿಗೆಳು ನಡೆಯುತ್ತಿರುವುದು ಬೆಳಕಿಗೆ ಬಂದಿದ್ದು, ಪೊಲೀಸರು ಇದೀಗ ಕಾರ್ಯಪ್ರವೃತ್ತರಾಗಿದ್ದಾರೆ.

 

PREV
Read more Articles on
click me!

Recommended Stories

ಅದ್ಧೂರಿ ದಸರಾಗೆ ಅಡ್ಡಗಾಲಾದ ಬರಗಾಲ: ಸರಳ ಶ್ರೀರಂಗಪಟ್ಟಣ ದಸರಾ ಆಚರಣೆಗೆ ತೀರ್ಮಾನ-ಸಚಿವ ಚಲುವರಾಯಸ್ವಾಮಿ!
'ನನಗೆ ಮುಸ್ಲಿಮರೇ ಮೊದಲು', ವಿವಾದಕ್ಕೆ ಕಾರಣವಾಯ್ತು ತುಳು ಹಾಸ್ಯನಟ ಅರವಿಂದ್ ಬೋಳಾರ್ ಹೇಳಿಕೆ