ಆಘಾತಕಾರಿ! ಏನಾಗಿದೆ ಯುವ ಸಮೂಹಕ್ಕೆ? ಕನ್ಯೆ ಸಿಗಲಿಲ್ಲವೆಂದು ಯುವಕ ದುರಂತ ಅಂತ್ಯ, ಬಿಎಸ್ಸಿಯಲ್ಲಿ ಒಂದು ವಿಷಯ ಫೇಲ್ ಆಗಿದ್ದಕ್ಕೆ ವಿದ್ಯಾರ್ಥಿನಿಯೂ ಜೀವ ಕಳೆದುಕೊಂಡಳು!

Kannadaprabha News   | Kannada Prabha
Published : Jun 05, 2026, 04:26 AM IST
Two Shocking Tragedies Haveri Young Man Dies Over Marriage Setback Hassan Student Found Dead After Fail bsc rav

ಸಾರಾಂಶ

ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಮದುವೆಗೆ ಕನ್ಯೆ ಸಿಗದಿದ್ದಕ್ಕೆ ಯುವಕನೊಬ್ಬ ಆತ್ಮ೧ಹತ್ಯೆ ಮಾಡಿಕೊಂಡಿದ್ದಾನೆ. ಮತ್ತೊಂದು ಪ್ರಕರಣದಲ್ಲಿ, ಹಾಸನದ ಹೊಳೆನರಸೀಪುರದಲ್ಲಿ ಪರೀಕ್ಷೆಯಲ್ಲಿ ಒಂದು ವಿಷಯದಲ್ಲಿ ಫೇಲ್ ಆದ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿದ್ದಾಳೆ.

ಹಾವೇರಿ (ಜೂ.5): ಮದುವೆಗೆ ಕನ್ಯೆ ಸಿಗದಿದ್ದಕ್ಕೆ ಬೇಸತ್ತು ಯುವಕನೊಬ್ಬ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮ೧ಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಮ್ಯಾಗೇರಿ ಓಣಿಯಲ್ಲಿ ನಡೆದಿದೆ. ಮ್ಯಾಗೇರಿ ಓಣಿ ನಿವಾಸಿ ಮನೋಜ ಬಸವರಾಜ ಹಡಪದ(Manoj Basavaraj Hadapad) (27) ಮೃತ ಯುವಕ. ಈತ ಸಲೂನ್‌ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ. ಹಲವು ದಿನಗಳಿಂದ ನಾನಾ ಕಡೆ ಕನ್ಯೆ ಹುಡುಕಿದರೂ ಯಾರೂ ಸಿಕ್ಕಿರಲಿಲ್ಲ. ಇದರಿಂದ ಮಾನಸಿಕವಾಗಿ ನೊಂದಿದ್ದ. ಬುಧವಾರ ಅಡುಗೆಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಸಂಬಂಧ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಬಿಎಸ್ಸಿಯಲ್ಲಿ 1 ವಿಷಯ ಫೇಲ್‌ ಆಗಿದ್ದಕ್ಕೆ ವಿದ್ಯಾರ್ಥಿನಿ ನೇಣಿಗೆ

ಇನ್ನೊಂದೆಡೆ ಹೊಳೆನರಸೀಪುರ(ಹಾಸನ ಬಿಎಸ್‌ಸ್ಸಿ ಅಂತಿಮ ವರ್ಷದ ಪರೀಕ್ಷೆಯಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣ ಆಗಿದ್ದಕ್ಕೆ ಮನನೊಂದು ವಿದ್ಯಾರ್ಥಿನಿಯೊಬ್ಬಳು ಬಿಸಿಎಂ ವಿದ್ಯಾರ್ಥಿನಿಲಯದಲ್ಲಿ ನೇಣು ಬಿಗಿದುಕೊಂಡು ಆತ್ಮ೧ಹತ್ಯೆಗೆ ಶರಣಾಗಿರುವ ಘಟನೆ ಬುಧವಾರ ಸಂಜೆ ನಡೆದಿದೆ. ಹಳಿಯೂರು ಗ್ರಾಮದ ಶ್ರೀರಕ್ಷಾ (21) ಮೃತ ವಿದ್ಯಾರ್ಥಿನಿ.

ಇವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎಸ್ಸಿಯಲ್ಲಿ ಅಂತಿಮ ವರ್ಷ ವ್ಯಾಸಂಗ ಮಾಡುತ್ತಿದ್ದು, 2 ವರ್ಷದಿಂದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಇದ್ದರು. ಒಂದು ವಿಷಯದಲ್ಲಿ ಅನುತ್ತೀರ್ಣ ಆಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಸಂಬಂಧ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Read more Articles on
click me!

Recommended Stories

ಮೈಸೂರು ಅಳಿಯ ಎಲ್ಲವನ್ನೂ ಸರಿಪಡಿಸಬೇಕು: ಡಿಕೆಶಿ ಆಡಳಿತಕ್ಕೆ ಎಚ್‌.ವಿಶ್ವನಾಥ್‌ ಸಲಹೆಯೇನು?
ವನ್ಯಜೀವಿ ಬೇಟೆಯ ವೀಡಿಯೋ ವೈರಲ್: ಐವರನ್ನು ಬಂಧಿಸಿದ್ಯಾಕೆ ಅರಣ್ಯ ಇಲಾಖೆ!