ಆಂಧ್ರ, ತೆಲಂಗಾಣದಲ್ಲಿ ಮಳೆ: ಬೆಂಗಳೂರಿನಿಂದ ರೈಲು ರದ್ದು

By Kannadaprabha NewsFirst Published Nov 24, 2021, 6:33 AM IST
Highlights
  • ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಕಳೆದ ಕೆಲದಿನಗಳಿಂದ ಆಗುತ್ತಿರುವ ಭಾರೀ ಮಳೆ
  • ಬೆಂಗಳೂರಿನಿಂದ ಆಂಧ್ರದ ಮೂಲಕ ವಿವಿಧ ಭಾಗಗಳಿಗೆ ಸಂಚಿರಿಸುವ ರೈಲುಗಳನ್ನು ಸ್ಥಗಿತ

 ಬೆಂಗಳೂರು (ನ.24):  ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಕಳೆದ ಕೆಲದಿನಗಳಿಂದ ಆಗುತ್ತಿರುವ ಭಾರೀ ಮಳೆಯಿಂದ (Heavy rain) ಬೆಂಗಳೂರಿನಿಂದ (bengaluru) ಆಂಧ್ರದ ಮೂಲಕ ವಿವಿಧ ಭಾಗಗಳಿಗೆ ಸಂಚಿರಿಸುವ ರೈಲುಗಳನ್ನು  (Train)ಸ್ಥಗಿತಗೊಳಿಸಲಾಗಿದೆ. ಬುಧವಾರ ಹೊರಡಬೇಕಿದ್ದ ಬೆಂಗಳೂರು ದಂಡು-ಗೌಹಾಟಿ ಎಕ್ಸ್‌ಪ್ರೆಸ್‌, ಕಾಮಾಕ್ಯ-ಯಶ್ವಂತಪುರ ವೀಕ್ಲಿ ಎಕ್ಸ್‌ಪ್ರೆಸ್‌, ಪಾಟ್ನಾ-ಬಾನಸವಾಡಿ ಹುಮ್ಸಫರ್‌ ಎಕ್ಸ್‌ಪ್ರೆಸ್‌ ರೈಲುಗಳನ್ನು ರದ್ದುಗೊಳಿಸಲಾಗಿದೆ. ಅಲ್ಲದೆ, ಚೆನೈನಿಂದ ಮಹಾರಾಷ್ಟ್ರಕ್ಕೆ ತೆರಳಬೇಕಾಗಿರುವ ಚಕ್ರಪತಿ ಶಿವಾಜಿ ಮಹಾರಾಜ್‌ ಎಕ್ಸ್‌ಪ್ರೆಸ್‌ ರೈಲಿನ ಮಾರ್ಗ ಬದಲಾಯಿಸಿದ್ದು, ಕಟಪಾಡಿ, ಜೋಲಾರ್‌ಪೇಟೆ, ಯಲಹಂಕ ಮತ್ತು ಧರ್ಮವರಂ ಮೂಲಕ ಹಾದುಹೋಗಲಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರು :    ಬೆಂಗಳೂರಿನಲ್ಲಿ (Bengaluru) ಕಳೆದ ಭಾನುವಾರ ರಾತ್ರಿ ಧಾರಾಕಾರವಾಗಿ ಸುರಿದು ಜನ ಜೀವನ ಅಸ್ತವ್ಯಸ್ತಗೊಳಿಸಿದ ಮಳೆ (Rain) ಒಂದು ಶತಮಾನದ ನಂತರ ಸುರಿದ ದಾಖಲೆಯ ಮಳೆಯಾಗಿದೆ. ನವೆಂಬರ್‌ ತಿಂಗಳಲ್ಲೆ 24 ಗಂಟೆಯಲ್ಲಿ ಸುರಿದ ಅತ್ಯಧಿಕ ಮಳೆ ಇದಾಗಿದೆ ಎಂಬುದು ಭಾರತೀಯ ಹವಾಮಾನ ಇಲಾಖೆಯ (Imd) ವರದಿ ದೃಢಪಡಿಸಿದೆ.

ಹೌದು, 116 ವರ್ಷಗಳ ನಂತರ ಬೆಂಗಳೂರು ನಗರ ಜಿಲ್ಲೆ ಇದೇ ನವೆಂಬರ್‌ ತಿಂಗಳಲ್ಲಿ ಇಂಥದೊಂದು ದೊಡ್ಡ ಮಳೆ ಕಂಡಂತಾಗಿದೆ. ಭಾನುವಾರ ಸಂಜೆ ನಂತರ ಸುರಿದ ಮಳೆ ಈ ದಾಖಲೆಗೆ ಕಾರಣವಾಗಿದೆ. ಯಲಹಂಕ (yalahanka) ವ್ಯಾಪ್ತಿಯಲ್ಲಿ ನವೆಂಬರ್‌ ತಿಂಗಳ ವಾಡಿಕೆ ಮಳೆ 55 ಮಿ.ಮೀ. ಇದೆ, ಆದರೆ 153 ಮಿ.ಮೀ. ಮಳೆ ಸುರಿದಿದೆ.

1916ರ ನವೆಂಬರ್‌ 9ರಂದು 114.5 ಮಿ.ಮೀ ಬೀಳುವ ಮೂಲಕ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ಇದು ಆ ವರ್ಷದ ನವೆಂಬರ್‌ ತಿಂಗಳಲ್ಲಿ ಹಾಗೂ 24 ಗಂಟೆಯಲ್ಲಿ ಬಿದ್ದ ಅತ್ಯಧಿಕ ಮಳೆಯಾಗಿತ್ತು. ಇದು ಭಾರತೀಯ ಹವಾಮಾನ ಇಲಾಖೆ (ಐಎಂಡಿ IMD) ವ್ಯಾಪ್ತಿಯ ಅರಮನೆ ರಸ್ತೆಯಲ್ಲಿ (Palace road) ಮಳೆ ಮಾಪನ ಕೇಂದ್ರದಲ್ಲಿ ದಾಖಲಾದ ಮಳೆಯಾಗಿದೆ.

ಸದ್ಯ ಕೆಲವು ವರ್ಷಗಳಿಂದ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ KSNDmC) ಬೆಂಗಳೂರಿನಲ್ಲಿ ಒಟ್ಟು ಸುಮಾರು 100 ಮಳೆ ಮಾಪನ ಕೇಂದ್ರ ಅಳವಡಿಸಿದ್ದು, ಈ ಪೈಕಿ ಯಲಹಂಕ ಕೇಂದ್ರದಲ್ಲಿ ದಾಖಲಾದ ಅಂಕಿ ಅಂಶ ಪ್ರಕಾರ ಶತಮಾನದ ನಂತರ ನವೆಂಬರ್‌ (ನ 1ರಿಂದ 22ರವರೆಗೆ) ಹೋಲಿಸಿದರೆ ಕೇವಲ 22 ದಿನದಲ್ಲಿ ಸಾರ್ವಕಾಲಿಕ ದಾಖಲೆ ಸರಿಗಟ್ಟುವಂತ ಭಾರಿ ಮಳೆ (153 ಮಿ.ಮೀ.) ಬಿದ್ದಂತಾಗಿದೆ.

ನಗರದಲ್ಲಿ 1916ಕ್ಕೂ ಮುನ್ನ ಇಷ್ಟುಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದಿರುವ ಬಗ್ಗೆ ಇಲಾಖೆ ಬಳಿ ಖುದ್ದು ಮಾಹಿತಿ ಇಲ್ಲ. ಕಾರಣ ರಾಜ್ಯದಲ್ಲಿ 1901ರ ನಂತರ ಮಳೆ ಮಾಪನ ವ್ಯವಸ್ಥೆ ಆರಂಭವಾಯಿತು. ಸದ್ಯ ಲಭ್ಯ ಭಾರತೀಯ ಹವಾಮಾನ ಇಲಾಖೆ ವರದಿ ಪ್ರಕಾರ ನವೆಂಬರ್‌ ಮಾಸದಲ್ಲಿ ಸಾರ್ವಕಾಲಿಕ ದಾಖಲೆ ಮಳೆ 116 ವರ್ಷಗಳ ಹಿಂದೆ ಆಗಿದ್ದು ಬಿಟ್ಟರೆ, ಇದೇ (2021) ನವೆಂಬರ್‌ನಲ್ಲಿ ಎನ್ನಬಹುದು.

10 ವರ್ಷದ ದಾಖಲೆ ಮಳೆಯೂ ಹೌದು

ಕಳೆದ 116 ವರ್ಷಗಳ ನಂತರ ಅತ್ಯಧಿಕ ಮಳೆ ಈ ನವೆಂಬರ್‌ನಲ್ಲಿ ದಾಖಲಾಗಿದ್ದರೆ, ಇದರ ನಂತರದ ಸ್ಥಾನ ಎಂಟು ವರ್ಷಗಳ ಹಿಂದೆ ಅಂದರೆ 2013ರ ನವೆಂಬರ್‌ 24ರಂದು ಆಗಿತ್ತು. ಅಂದು ಸಹ ಕೇವಲ 24 ಗಂಟೆಯಲ್ಲಿ ನಗರದಲ್ಲಿ 108.4 ಮಿ.ಮೀ. ಮಳೆ ಸುರಿದಿತ್ತು. ನವೆಂಬರ್‌ನ ವಾಡಿಕೆ 55 ಮಿ.ಮೀ. ಆಗುತ್ತದೆ. ಆದರೆ ಅದಕ್ಕಿಂತಲೂ ತಿಂಗಳ ವಾಡಿಕೆ ಮಳೆಗಿಂತ ಅಧಿಕ ಮಳೆ 24 ತಾಸಿನಲ್ಲೇ ಸುರಿದಿತ್ತು. ಐಎಂಡಿ ಮಾಪನ ಕೇಂದ್ರ ಹಾಗೂ ಇತ್ತೀಚೆಗೆ ಆರಂಭವಾದ ಕೆಎಸ್‌ಎನ್‌ಡಿಎಂಸಿ ಮಾಪನ ಕೇಂದ್ರಗಳ ಮಾಹಿತಿ ಆಧರಿಸಿ ಶತಮಾನದಲ್ಲಿ ಹಾಗೂ ಕಳೆದ 10 ವರ್ಷದಲ್ಲೇ ಅತ್ಯಧಿಕ ಮಳೆ ಇದೇ ನವೆಂಬರ್‌ನಲ್ಲಿ ಸುರಿದಿದೆ ಎಂದು ಪರಿಗಣಿಸಬಹುದು ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದರು.

ಈ ವರ್ಷ ಹಿಂಗಾರು ಆರಂಭವಾದ ನಂತರ ಮೊದಲ ಅತ್ಯಧಿಕ ಮಳೆ (153 ಮಿ.ಮೀ.) ಇದಾಗಿದೆ. ಕೇವಲ ನವೆಂಬರ್‌ನ 22 ದಿನದಲ್ಲಿ ವಾಡಿಕೆಗಿಂತ ಅಧಿಕ 216 ಮಿ.ಮೀ. ಮಳೆ ಆಗಿದೆ. ಮಾಸಾಂತ್ಯಕ್ಕೆ ಇನ್ನಷ್ಟುಉತ್ತಮ ಮಳೆ ಸಂಭವವಿದೆ.

click me!