* ಬೆಂಗಳೂರು ಸಂಚಾರ ಪೊಲೀಸರ ಮಾದರಿ ಕಾರ್ಯ
* ಪತ್ನಿಯ ಅಗಲಿಕೆಯಿಂದ ನೊಂದು ಭಿಕ್ಷುಕನಾಗಿದ್ದ ಶಂಕರ್
* ಸ್ನಾನ ಮಾಡಿಸಿ ಕೆಲಸ ಕೊಡಿಸಿದ ಮಡಿವಾಳ ಸಂಚಾರ ಪೊಲೀಸರು
ಮೋಹನ್ ಹಂಡ್ರಂಗಿ
ಬೆಂಗಳೂರು(ನ.12): ಕೊಳಕು ಬಟ್ಟೆ, ನಡುಗುವ ಮೈ, ಮುಖದಲ್ಲಿ ಗಾಯ, ಕಪ್ಪು-ಬಿಳುಪಿನ ದಾಡಿ, ಮುಷ್ಠಿಯಲ್ಲಿ ಅನ್ನ ಹಿಡಿದು ನೀರಿಗಾಗಿ ರಸ್ತೆಯಲ್ಲಿ ಅಲೆದಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಮಡಿವಾಳ ಸಂಚಾರ ಠಾಣೆ ಪೊಲೀಸರು(Traffic Police) ಹೊಸ ಬದುಕು ಕಟ್ಟಿಕೊಟ್ಟಿದ್ದಾರೆ.
ಪತ್ನಿಯ ಅಗಲಿಕೆಯ ನೋವಿನಲ್ಲಿ ಮಾನಸಿಕ ಖಿನ್ನತೆಗೆ(Mental Depression) ಒಳಗಾಗಿ ಊರು-ಮನೆ ತೊರೆದು ಭಿಕ್ಷುಕನಂತೆ(Beggar) ಅಲೆಯುತ್ತಿದ್ದ ವ್ಯಕ್ತಿಗೆ ಪುನರ್ ಜೀವನ ಕಲ್ಪಿಸಿರುವ ಮಡಿವಾಳ ಸಂಚಾರ ಠಾಣೆ ಪೊಲೀಸರ ಈ ಮಾದರಿ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಎರಡು ದಿನದ ಹಿಂದೆ ಬೆಳಗ್ಗೆ 11.30ರ ಸುಮಾರಿಗೆ ಮಡಿವಾಳ ಸಂಚಾರ ಪೊಲೀಸ್ ಠಾಣೆ ಎದುರಿನ ರಸ್ತೆಯಲ್ಲಿ ಮಾನಸಿಕ ಅಸ್ವಸ್ಥನಂತೆ ಕಾಣುವ ವ್ಯಕ್ತಿಯೊಬ್ಬ ಕೈಯಲ್ಲಿ ಅನ್ನ ಹಿಡಿದುಕೊಂಡು ದಾರಿಹೋಕರನ್ನು ನೀರು ಕೇಳುತ್ತಿದ್ದ. ಈ ವೇಳೆ ಸಮೀಪದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರ ಪೊಲೀಸರು ಆ ವ್ಯಕ್ತಿಯನ್ನು ಕಂಡು ಸಮೀಪಕ್ಕೆ ಕರೆದು ಕುಡಿಯಲು ನೀರು ಕೊಟ್ಟಿದ್ದಾರೆ. ಬಳಿಕ ಆತನ ಪೂರ್ವಾಪರ ವಿಚಾರಣೆ ವೇಳೆ ಮನಕಲಕುವ ಕಥೆಯೊಂದು ಹೊರಬಿದ್ದಿದೆ.
ಆ ವ್ಯಕ್ತಿಯ ಹೆಸರು ಶಂಕರ್. ಸುಮಾರು 42 ವರ್ಷದ ಆತ ಪಾವಗಡ ಮೂಲದವರು. ವೃತ್ತಿಯಲ್ಲಿ ಟೈಲರ್ ಆಗಿದ್ದ ಶಂಕರ್ ಮಡದಿ ಮಕ್ಕಳೊಂದಿಗೆ ಸಂತೋಷದಿಂದ ಜೀವನ ದೂಡುತ್ತಿದ್ದರು. ಕಳೆದ ಎರಡೂವರೆ ವರ್ಷದ ಹಿಂದೆ ಕಡಿಮೆ ರಕ್ತದೊತ್ತಡದಿಂದ ಪತ್ನಿ(Wife) ಮೃತಪಟ್ಟಿದ್ದರು(Death). ಇದರಿಂದ ತೀವ್ರ ನೊಂದಿದ್ದ ಶಂಕರ್, ಬಳಿಕ ಊರು-ಮನೆ ತೊರೆದು ಬೆಂಗಳೂರಿಗೆ(Bengaluru) ಬಂದಿದ್ದರು. ನಗರದಲ್ಲಿ ಮೃತ ಪತ್ನಿಯ ನೆನಪಿನಲ್ಲಿ ಅಲೆಮಾರಿಯ ಹಾಗೆ ಅಲೆದಾಡುತ್ತಾ ಭಿಕ್ಷೆ(Begging) ಬೇಡಿಕೊಂಡು ದಿನ ದೂಡುತ್ತಿದ್ದರು.
ತಾಯಿ ಶವದೊಂದಿಗೆ 5 ದಿನ ಕಳೆದ ಮಾನಸಿಕ ಅಸ್ವಸ್ಥ ಪುತ್ರಿ!
ಬಳಿಕ ಶಂಕರ್ ಅವರನ್ನು ಸಲೂನ್‌ಗೆ ಕರೆದೊಯ್ದು ಕಟಿಂಗ್, ಶೇವಿಂಗ್ ಮಾಡಿಸಿ ಸ್ನಾನ ಮಾಡಿಸಲಾಯಿತು. ನಂತರ ಆಸ್ಪತ್ರೆಗೆ ಕರೆದೊಯ್ದು ಗಾಯಕ್ಕೆ ಚಿಕಿತ್ಸೆ(Treatment) ಕೊಡಿಸಲಾಯಿತು. ಹಳೆಯದನ್ನೆಲ್ಲ ಮರೆತು ಹೊಸ ಬದುಕು ಕಟ್ಟಿಕೊಳ್ಳುವಂತೆ ಶಂಕರ್‌ಗೆ ಧೈರ್ಯ ತುಂಬಲಾಗಿದೆ. ಶಂಕರ್‌ಗೆ ಟೈಲರ್ ಕೆಲಸದ ಅನುಭವ ಇರುವುದರಿಂದ ಕೆಲಸಕ್ಕೆ ಗಾರ್ಮೆಂಟ್ ಕಾರ್ಖಾನೆಯ ಅಧಿಕಾರಿಗಳ ಜತೆಗೆ ಮಾತನಾಡಿ ಒಪ್ಪಿಸಲಾಗಿದೆ. ಸದ್ಯ ಶಂಕರ್ ಲವಲವಿಕೆಯಿಂದ ಇದ್ದು, ಎರಡು ದಿನಗಳಲ್ಲಿ ಕೆಲಸಕ್ಕೆ ಸೇರಲಿದ್ದಾರೆ ಎಂದು ಪೊಲೀಸರು(Police) ಮಾಹಿತಿ ನೀಡಿದರು.
ಪುನೀತ್ ಬಗ್ಗೆ ಕವನ!
ಐದನೇ ತರಗತಿ ಓದಿರುವ ಶಂಕರ್ ಕವನ ರಚಿಸುತ್ತಾರೆ. ಜೇಬಿನಲ್ಲಿ ಪುಟ್ಟಡೈರಿ ಇರಿಸಿಕೊಂಡಿರುವ ಶಂಕರ್ ಪ್ರೀತಿ, ದೇವರು, ತಂದೆ, ತಾಯಿ, ಪತ್ನಿ, ಪ್ರಕೃತಿ ಬಗ್ಗೆ ನಾಲ್ಕು-ಐದು ಸಾಲುಗಳ ಹತ್ತಾರು ಕವನ ಬರೆದಿರುವುದು ಕಂಡು ಬಂದಿದೆ. ಇತ್ತೀಚೆಗೆ ಅಕಾಲಿಕ ಮರಣವನಪ್ಪಿದ ಪವರ್ ಸ್ಟಾರ್(Powerstar) ಪುನೀತ್ ರಾಜ್‌ಕುಮಾರ್(Puneeth Rajkumar) ಕುರಿತು ಶಂಕರ್ ಕವನ ಬರೆದು ಅಭಿಮಾನ ಮೆರೆದಿದ್ದಾರೆ. ಶಂಕರ್‌ನ ಈ ಕವನ ಪ್ರೀತಿಗೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಪುನೀತ್’
ಸಾವಿರಾರು ಜೀವಕ್ಕೆ ಮುತ್ತಿನ ಮಾಣಿಕ್ಯ. ಈ ದಿನ ನಮ್ಮ ಮುಂದೆ ಕಣ್ಮರೆಯಾದ ದಿನ. ನಮಗೆ ಕತ್ತಲೆಯ ಕಾರ್ಮೋಡ ಕವಿದ ದಿನ. ಆದರೂ ಅವರ ದಾರಿ ದೀಪದಲ್ಲಿ ಬದುಕುತ್ತಿರುವೆವು ನಾವು ಶಂಕರ್ ಪಾವಗಡ
ಮಾನವೀಯತೆ ಸತ್ತು ಹೋಗಿದ್ಯಾ? ಯುವಕನ ಕೈಕಾಲು ಕಟ್ಟಿ ರಸ್ತೆಗೆ ಬಿಸಾಕಿದ ಜನ
ಮಾನಸಿಕ ಅಸ್ವಸ್ಥನಿಗೆ ಜೀವನ ರೂಪಿಸಿಕೊಟ್ಟ ಸುದೀಪ್ ಕಿಚ್ಚ ಸುದೀಪ್ ಸಂಘ!
ಕಿಚ್ಚ ಸುದೀಪ್ (Kiccha Sudeep) ತಮ್ಮ ಸುದೀಪ್ ಚಾರಿಟೇಬಲ್ ಟ್ರಸ್ಟ್ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಟ್ರಸ್ಟ್ ಮಾತ್ರವಲ್ಲದೇ ರಾಜ್ಯಾದ್ಯಂತ ಇರುವ ಸುದೀಪ್ ಅಭಿಮಾನಿಗಳ ಸಂಘಗಳು ಕೂಡ ಜನರ ನೆರವಿಗೆ ಧಾವಿಸುತ್ತಾರೆ. ಇದೀಗ ಹಾಸನ (Hassan) ಜಿಲ್ಲೆಯಲ್ಲಿರುವ ಯುವಕನಿಗೂ ಸಹಾಯ ಮಾಡಿದ್ದಾರೆ, ತಮ್ಮ ಸಾಮಾಜಿಕ ಕಳಕಳಿಯುಳ್ಳ ಕೆಲಸಗಳನ್ನು ಮುಂದುವರಿಸಿದ್ದಾರೆ.
ಮಾನಸಿಕ ಅಸ್ವಸ್ಥ ಯುವಕನೊಬ್ಬ ಹಾಸನದಲ್ಲಿ ರಸ್ತೆಯಲ್ಲಿಯೇ ಜೀವನ ನಡೆಸುತ್ತಿದ್ದ. ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರಾಗಿ, ಸಾವು ಬದುಕಿನ ನಡುವೆ ಹೋರಾಡುತ್ತಿದ್ದ. ಅದೇ ರಸ್ತೆಯಲ್ಲಿ ವಾಸಿಸುತ್ತಿದ್ದ ಹುಡುಗ ಕಿಚ್ಚ ಸುದೀಪ್ ಸಂಘಕ್ಕೆ ಫೋನ್ ಮಾಡಿ, ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಭೇಟಿ ಕೊಟ್ಟ ಸುದೀಪ್ ಬಳಗದವರು ಆ ಯುವಕನಿಗೆ ಅಲ್ಲೇ ಸ್ನಾನ ಮಾಡಿಸಿ, ಬಟ್ಟೆ ಬದಲಾಯಿಸಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ.