Bengaluru| ಮಳೆ-ಚಳಿ ಜುಗಲ್‌ ಬಂಧಿ, ಐಟಿ ಸಿಟೀಲಿ ಮಲ್ನಾಡ್‌ ಹವೆ..!

By Kannadaprabha News  |  First Published Nov 12, 2021, 7:56 AM IST

* ನಿನ್ನೆ ರಾತ್ರಿಯಿಂದಲೇ ಶುರುವಾದ ಜಿಟಿ ಜಿಟಿ ಮಳೆ
* ಬೀಸುತ್ತಿದ್ದ ಶೀತಗಾಳಿ ಮಲೆನಾಡಿನ ವಾತಾವರಣ
* ಈ ಬಾರಿ ಉತ್ತರ ಭಾರತದಲ್ಲಿ ಭಾರೀ ಚಳಿ: 3 ಡಿ.ಸೆಗಿಳಿಯಲಿದೆ ಉಷ್ಣಾಂಶ 
 


ಬೆಂಗಳೂರು(ನ.12): ಬೆಂಗಳೂರಿನಲ್ಲಿ(Bengaluru) ಬುಧವಾರ ರಾತ್ರಿಯಿಂದ ಆರಂಭವಾದ ಜಿಟಿ ಜಿಟಿ ಮಳೆ(Rain) ಗುರುವಾರ ದಿನವಿಡೀ ಮುಂದುವರೆಯಿತು. ಜೊತೆಗೆ ಆಗಾಗ ಬೀಸುತ್ತಿದ್ದ ಶೀತಗಾಳಿಯಿಂದಾಗಿ(Cold Air)ಜನರು ಚಳಿಯಿಂದ ನಡುಗುವಂತಹ ವಾತಾವರಣ ಕಂಡು ಬಂದಿತು.

ನಿರಂತರ ಸೋನೆ ಮಳೆಯಿಂದಾಗಿ ಮಳೆಗಾಲದಲ್ಲಿನ(Rainy Season)ಮಲೆನಾಡಿನ ವಾತಾವರಣ ನಗರದಲ್ಲಿ ಕಂಡು ಬಂದಿತ್ತು. ಇಡೀ ದಿನ ಬಿಸಿಲಿನ ದರ್ಶನ ಆಗಲೇ ಇಲ್ಲ. ಹೀಗಾಗಿ ಮೈಕೊರೆಯುವ ಥಂಡಿ ವಾತಾವರಣ(Weather) ಸೃಷ್ಟಿಯಾಗಿತ್ತು. ನಿರಂತರವಾಗಿ ಸುರಿದ ಜಿಟಿ ಜಿಟಿ ಮಳೆಯಿಂದಾಗಿ ಚಳಿ ಶಾಲಾ, ಕಾಲೇಜು, ಕಚೇರಿಗೆ ತೆರಳುವ ಉತ್ಸಾಹಕ್ಕೂ ತಣ್ಣೀರು ಎರಚಿತ್ತು. ಚಳಿಯಿಂದ ಪಾರಾಗಲು ಜನರು ಸ್ವೇಟರ್‌, ಬೆಚ್ಚನೆಯ ಬಟ್ಟೆ ಧರಿಸುವುದರ ಜೊತೆ ಜೊತೆಗೆ ಬಿಸಿಬಿಸಿ ಕಾಫಿ, ಚಹಾ ಮತ್ತು ಕುರುಕಲು ತಿಂಡಿಯ ಮೊರೆ ಹೋದರು. ಜನರ ಓಡಾಟ ಸಹ ಗಣನೀಯವಾಗಿ ಕಡಿಮೆಯಾಗಿತ್ತು.

Tap to resize

Latest Videos

undefined

ಭಾರತೀಯ ಹವಾಮಾನ ಇಲಾಖೆಯ(Indian Meteorological Department) ಬೆಂಗಳೂರು ನಗರದ ಮಾಪಕದಲ್ಲಿ ದಿನದ ಗರಿಷ್ಠ ಉಷ್ಣಾಂಶ 19.8 ಡಿಗ್ರಿ ಮತ್ತು ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಕ್ರಮವಾಗಿ 20 ಡಿಗ್ರಿ ಮತ್ತು 17.8 ಡಿಗ್ರಿ, ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಕ್ರಮವಾಗಿ 19.9 ಡಿಗ್ರಿ ಮತ್ತು 16.7 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಚಳಿ ಇಳಿಕೆ, ಬಿಸಿಲು ಏರಿಕೆ: ಕಲಬುರಗಿಯಲ್ಲಿ 38.6 ಡಿಗ್ರಿ!

ನಗರದ ಯಾವುದೇ ಮಾಪನ ಕೇಂದ್ರದಲ್ಲಿ 20 ಡಿಗ್ರಿಗಿಂತ ಹೆಚ್ಚು ಗರಿಷ್ಠ ಉಷ್ಣಾಂಶ ದಾಖಲಾಗಿಲ್ಲ. ನಗರದಲ್ಲಿ ನವೆಂಬರ್‌ ತಿಂಗಳಿನಲ್ಲಿ ಗರಿಷ್ಠ ಉಷ್ಣಾಂಶ 20 ಡಿಗ್ರಿಗಿಂತ ಕಡಿಮೆ ದಾಖಲಾಗುವುದು ಅತ್ಯಂತ ವಿರಳ. ಆದರೆ ಗುರುವಾರ ನಗರದ ಅತ್ಯಂತ ತಣ್ಣನೆಯ ದಿನವೇ ಎಂದು ಹೇಳಲು ನಮ್ಮ ಬಳಿ ದಾಖಲೆಗಳಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ತಜ್ಞ ಸದಾನಂದ ಅಡಿಗ ‘ಕನ್ನಡ ಪ್ರಭ’ಕ್ಕೆ(Kannada Prabha) ಹೇಳಿದ್ದಾರೆ.

ಇನ್ನೂ 4-5 ದಿನ ಇದೇ ವಾತಾವರಣ

ನಗರದಲ್ಲಿ ಇದೇ ರೀತಿಯ ಮಳೆ, ಚಳಿ, ಮೋಡ ಮತ್ತು ಮಂಜು ಕವಿದ ವಾತಾವರಣ ಇನ್ನೂ ನಾಲ್ಕೈದು ದಿನ ಮುಂದುವರಿಯಲಿದೆ. ನಗರದ ಉಷ್ಣತೆಯಲ್ಲಿಯೂ(Temperature) ಗಣನೀಯ ಏರಿಕೆ ಆಗುವ ಸಾಧ್ಯತೆ ಸದ್ಯಕ್ಕಿಲ್ಲ.
ನಗರದಲ್ಲಿ ದಿನವಿಡೀ ಜಿಟಿಜಿಟಿ ಮಳೆಯಷ್ಟೆ ಸುರಿದಿದೆ. ಎಲ್ಲೂ ಭಾರಿ ಮಳೆಯಾಗಿಲ್ಲ. ವಿದ್ಯಾಪೀಠ 2.3 ಸೆಂ.ಮೀ., ಲಕ್ಕಸಂದ್ರ 1.8 ಸೆಂ.ಮೀ., ಬೇಗೂರು ಮತ್ತು ಸಂಪಂಗಿರಾಮನಗರ (2), ಕೆಂಗೇರಿ ತಲಾ 1.7 ಸೆಂ.ಮೀ., ಕೊಣನಕುಂಟೆ ಮತ್ತು ಗೊಟ್ಟಿಗೆರೆ ತಲಾ 1.6 ಸೆಂ.ಮೀ., ವಿವಿ ಪುರ 1.5 ಸೆಂಮೀ ಮಳೆಯಾಗಿದೆ.

ಈ ಬಾರಿ ಉತ್ತರ ಭಾರತದಲ್ಲಿ ಭಾರೀ ಚಳಿ: 3 ಡಿ.ಸೆಗಿಳಿಯಲಿದೆ ಉಷ್ಣಾಂಶ!

ಕಾಲಿಕ ಮಳೆ ಮತ್ತು ತಡವಾಗಿ ಮುಂಗಾರು ನಿರ್ಗಮನದ ಪರಿಣಾಮ ಈ ಬಾರಿ ಉತ್ತರ ಭಾರತದ ಹಲವು ರಾಜ್ಯಗಳು ವಿಪರೀತ ಚಳಿಗೆ ತುತ್ತಾಗಲಿವೆ. ಪೆಸಿಫಿಕ್‌ ಸಾಗರದಲ್ಲಿನ(Pacific Ocean) ಲಾ ನಿನಾ(La Nina) ಬೆಳವಣಿಗೆಯು ಉತ್ತರ ಗೋಳಾರ್ಧದಲ್ಲಿ ವಿಪರೀತ ಚಳಿಗೆ ಕಾರಣವಾಗಲಿದೆ.

ಉಷ್ಣಾಂಶ ಮೈನಸ್‌ ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಸಾಧ್ಯತೆಯಿದೆ. ಇದರಿಂದ ಜನವರಿ ಮತ್ತು ಫೆಬ್ರವರಿಯಲ್ಲಿ ಉತ್ತರ ಪ್ರದೇಶ(Uttar Pradesh), ಪಂಜಾಬ್‌(Punjab), ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ತೀವ್ರ ಚಳಿಯು ಮೈ ಕೊರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಲಾ ನಿನಾ(La Nina) ಪರಿಣಾಮ ಭಾರತದಲ್ಲಿ ಕಳೆದ ಹಲವು ದಿನಗಳಿಂದ ಭಾರೀ ಪ್ರಮಾಣದ ಮಳೆಯಾಗುತ್ತಿದೆ. ಈಗಾಗಲೇ ನಿರ್ಗಮಿಸಬೇಕಿದ್ದ ಮುಂಗಾರು ಮಾರುತಗಳು ಇನ್ನೂ ಮಳೆಯನ್ನು ಸುರಿಸುತ್ತಿವೆ. ಅಲ್ಲದೆ ದೇಶದಲ್ಲಿ ಉದ್ಭವಿಸಲಿರುವ ಚಳಿಗೆ ಲಾ ನಿನಾ ಅಷ್ಟೇ ಅಲ್ಲದೆ ಹವಾಮಾನ ವೈಪರಿತ್ಯವೂ ಕಾರಣವಾಗಿರಬಹುದು.
 

click me!