ಬೆಂಗಳೂರು ಶಾಪಿಂಗ್ ಪ್ರಿಯರೇ ಎಚ್ಚರ; ಮಂತ್ರಿಮಾಲ್‌ ಟ್ರೇಡ್ ಲೈಸೆನ್ಸ್ ರದ್ದುಗೊಳಿಸಿದ ಬಿಬಿಎಂಪಿ!

By Sathish Kumar KH  |  First Published May 10, 2024, 1:21 PM IST

ಬೆಂಗಳೂರಿನ ಶಾಪಿಂಗ್ ಪ್ರಿಯರೇ ಎಚ್ಚರ. ಮಲ್ಲೇಶ್ವರದ ಬಳಿಯ ಮಂತ್ರಿಮಾಲ್‌ನ ವ್ಯಾಪಾರ ಪರವಾನಗಿಯನ್ನು ಬಿಬಿಎಂಪಿ ರದ್ದುಗೊಳಿಸಿದ್ದು, ಮಾಲ್‌ ಅನ್ನು ಸೀಜ್ ಮಾಡಲಾಗಿದೆ..


ಬೆಂಗಳೂರು (ಮೇ 10): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಪ್ರಸಿದ್ಧ ಶಾಪಿಂಗ್ ಮಾಲ್‌ಗಳಲ್ಲಿ ಒಂದಾಗಿರುವ ಮಂತ್ರಿ ಸಸ್ಕ್ವೇರ್ ಮಾಲ್‌ನ ಮಾಲೀಕರಿಂದ ಬರೋಬ್ಬರಿ 50 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಮಂತ್ರಿ ಮಾಲ್ ಬಂದ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಶಾಪಿಂಗ್ ಮಾಡಲು ಬಂದವನ್ನು ವಾಪಸ್ ಕಳಿಸಲಾಗುತ್ತಿದೆ.

ಬಸವ ಜಯಂತಿಯ ಹಿನ್ನೆಲೆಯಲ್ಲಿ ಇಂದು ಸರ್ಕಾರಿ ರಜೆಯಿದೆ. ಜೊತೆಗೆ, ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಶಾಪಿಂಗ್ ಮಾಡುವವರ ಸಂಖ್ಯೆಯೂ ಅಧಿಕವಾಗಿರುತ್ತದೆ. ಹಾಗೆಂದು, ಮಂತ್ರಿ ಮಾಲ್‌ಗೆ ಶಾಪಿಂಗ್ ಮಾಡಲು ಹೀಗುವವರಿದ್ದರೆ ಎಚ್ಚರ. ಏಕೆಂದರೆ ಮಂತ್ರಿ ಮಾಲ್ ಅನ್ನು ಬಿಬಿಎಂಪಿ ಅಧಿಕಾರಿಗಳು ಬಂದ್ ಮಾಡಿದ್ದಾರೆ. ಮಂತ್ರಿಮಾಲ್ ಮಾಲೀಕರು ಆಸ್ತಿ ತೆರಿಗೆ ಪಾವತಿ ಮಾಡಿಲ್ಲ ಎಂಬ ಹಿನ್ನೆಲೆಯಲ್ಲಿ ಮಾಲ್‌ ದ್ವಾರ ಬಾಗಿಲಿಗೆ ಬೀಗ ಜಡಿದು ಸೀಲ್ ಮಾಡಲಾಗಿದೆ. ಇನ್ನು ಮಂತ್ರಿ ಮಾಲ್‌ನಲ್ಲಿ ರಜೆಯ ಹಿನ್ನೆಲೆಯಲ್ಲಿ ಶಾಪಿಂಗ್ ಮಾಡಲು ಬಂದವರಿಗೆ ನಿರಾಸೆ ಉಂಟಾಗಿದೆ. ಜೊತೆಗೆ, ಮಂತ್ರಿ ಮಾಲ್‌ನ ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ನೋಡಲು ಟಿಕೆಟ್ ಬುಕಿಂಗ್ ಮಾಡಿದವರಿಗೆ ತೊಂದರೆ ಉಂಟಾಗಿದೆ.

ಪತಿಯಿಂದ ದುಬಾರಿ ಗಿಫ್ಟ್, ದುಡ್ಡು ಬಂದಿದ್ದೆಲ್ಲಿಂದವೆಂದು ಗೊತ್ತಾದ ಕೂ ...

Tap to resize

Latest Videos

ತೆರಿಗೆ ಬಾಕಿ‌ ಉಳಿಸಿಕೊಂಡ ಮಂತ್ರಿಮಾಲ್ ಗೆ ಬಿಬಿಎಂಪಿ ಅಧಿಕಾರಿಗಳು ಮತ್ತೆ ಶಾಕ್ ಕೊಟ್ಟಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಬೆಳ್ಳಂ ಬೆಳಗ್ಗೆ ಬಂದು ಮಂತ್ರಿಮಾಲ್ ಗೆ ಬೀಗ ಹಾಕಿದ್ದಾರೆ. ಜೊತೆಗೆ, ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದೆ ಎಂದು ನೊಟೀಸ್ ಬ್ಯಾನರ್ ಅಂಟಿಸಲಾಗಿದೆ. ಇನ್ನು ಈ ಹಿಂದೆಯೂ ಮಂತ್ರಿಮಾಲ್‌ಗೆ ಆಸ್ತ ತೆರಿಗೆ ಬಾಕಿ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಬೀಗ ಹಾಕಿದ್ದರು. ಆ ಕ್ಷಣಕ್ಕೆ ನ್ಯಾಯಾಲಯದ ಮೊರೆ ಹೋಗಿದ್ದ ಮಂತ್ರಿ ಮಾಲ್ ಮಾಲೀಕರು ತೆರಿಗೆ ಪಾವತಿ ಮಾಡುವುದಾಗಿ ಹೇಳಿ ಬಾಗಿಲು ಓಪನ್ ಮಾಡಿಸಿದ್ದರು. ಆದರೆ, ಪುನಃ ತೆರಿಗೆ ಪಾವತಿ ಮಾಡದೇ ನಿರ್ಲಕ್ಷ್ಯ ಮಾಡಿದ್ದರಿಂದಾಗಿ ನಿಮ್ಮ ವ್ಯಾಪಾರ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಹೀಗಾಗಿ, ವ್ಯಾಪಾರಿ ಮಳಿಗೆಯನ್ನು ಸೀಜ್ ಮಾಡಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಮಂತ್ರಿ ಮಾಲ್‌ ಮಾಲೀಕರಿಂದ ಬಿಬಿಎಂಪಿಗೆ ಸುಮಾರು 50 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ ಎಂಬ ಮಾಹಿತಿಯಿದೆ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಕಾರಣ ಪಾಲಿಕೆ ಅಧಿಕಾರಿಗಳು ಬೀಗ ಜಡಿದು ಸೀಜ್ ಮಾಡಿ ಯಾರನ್ನೂ ಒಳಗೆ ಹೋಗದಂತೆ ನಿರ್ಬಂಧಿಸಲಾಗಿದೆ. ಪ್ರತಿ ಬಾರಿ ಬೀಗ ಹಾಕಿದಾಗ ಕೋರ್ಟ್ ಗೆ ಹೋಗುವ ಮಂತ್ರಿ ಮಾಲ್ ಮಾಲೀಕರು, ಪಾಲಿಕೆಯಿಂದ ಕೈಗೊಳ್ಳುವ ಕ್ರಮದ ವಿರುದ್ಧ ಸ್ಟೇ ತಂದು ಮಂತ್ರಿ ಮಾಲ್ ರೀ ಓಪನ್ ಮಾಡಿಸಿಕೊಳ್ಳುತ್ತಿದ್ದರು. ಈ ಬಾರಿಯೂ ಕೋರ್ಟ್ ಗೆ ಹೋಗಲು ಪ್ಲಾನ್ ಮಾಡಿದ್ದಾರೆ ಎಂಂದು ತಿಳಿದುಬಂದಿದೆ. 

ಆಸ್ತಿ ತೆರಿಗೆ ಪಾವತಿ ಮಾಡದ ಹಿನ್ನೆಲೆ ಕಳೆದೆರಡು ದಿನಗಳಿಂದ ಕ್ಲೋಸ್ ಆಗಿದ್ದ ಮಂತ್ರಿಮಾಲ್ ಇಂದು ಓಪನ್

ಶಾಪಿಂಗ್ ಪ್ರಿಯರಿಗೆ ಭಾರಿ ನಿರಾಸೆ: 
ಸರ್ಕಾರಿ ರಜೆ ಹಿನ್ನೆಲೆಯಲ್ಲಿ ಶಾಪಿಂಗ್ ಮಾಡಲು ಕೆಲವರು ಕುಟುಂಬ ಸಮೇತವಾಗಿ ಬಂದಿದ್ದರು. ಆಸ್ತಿ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಬಿಬಿಎಂಪಿ ಸೀಜ್ ಮಾಡಿರುವುದನ್ನು ನೋಡಿ ಪೇಚಿಗೆ ಸಿಲುಕಿದ್ದಾರೆ. ಪುನಃ ಮಂತ್ರಿಮಾಲ್‌ನಿಂದ ಬೇರೆಡೆಗೆ ಶಾಪಿಂಗ್ ಮಾಡಲು ಹೋಗಿದ್ದಾರೆ. ಇನ್ನು ಮಾಲ್‌ನ ಮುಂದೆ ಬಿಬಿಎಂಪಿ ಮಾರ್ಷಲ್‌ಗಳನ್ನು ನಿಯೋಜನೆ ಮಾಡಲಾಗಿದ್ದು, ಇವರು ಆಸ್ತಿ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಸೀಜ್ ಮಾಡಲಾಗಿದೆ. ಸಾರ್ವಜನಿಕರು ಬೇರೆಡೆಗೆ ಹೋಗಬೇಕು. ಇನ್ನು ಶಾಪಿಂಗ್ ಮಾಲ್‌ನ ಮುಂದೆ ವಾಹನಗಳನ್ನು ನಿಲ್ಲಿಸಿಕೊಂಡು ಟ್ರಾಫಿಕ್‌ ಜಾಮ್ ಮಾಡಬಾರದು ಎಂದು ಮೈಕ್‌ನ ಮೂಲಕ ಸಂದೇಶ ಸಾರುತ್ತಿದ್ದಾರೆ. ಆದರೆ, ಗುಂಪು ಗುಂಪಾಗಿ ಬಂದಿದ್ದ ಶಾಪಿಂಗ್ ಪ್ರಿಯರಿಗೆ ಮಾತ್ರ ಶಾಕ್ ಉಂಟಾಗಿದೆ. 

click me!