Chitradurga: ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠಕ್ಕೆ ನೂತನ ವಟು ಸ್ವೀಕಾರ

Published : May 10, 2024, 01:01 PM IST
Chitradurga: ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠಕ್ಕೆ ನೂತನ ವಟು ಸ್ವೀಕಾರ

ಸಾರಾಂಶ

ಮಠದ ಆವರಣದಲ್ಲಿರುವ ಬಸವಾದಿ ಶರಣರ ಧರ್ಮ ಸಂಸತ್ ಸಭಾ ಮಂಟಪದಲ್ಲಿ ವಟು ಸ್ವೀಕಾರ ಧಾರ್ಮಿಕ ಕಾರ್ಯಗಳು ನಡೆದವು. ನೂತನ ವಟುವಿಗೆ ಜಯಬಸವ ದೇವರು ಎಂದು ನಾಮಕರಣ ಮಾಡಲಾಯಿತು.  

ಚಿತ್ರದುರ್ಗ (ಮೇ.10): ನಗರದ ಹೊರವಲಯದಲ್ಲಿರುವ ಶಿವಶರಣ ಮಾದಾರ ಚನ್ನಯ್ಯ ಗುರುಪೀಠಕ್ಕೆ ವಟು ಸ್ವೀಕಾರ ಮಾಡಲಾಯಿತು. ಮಠದ ಆವರಣದಲ್ಲಿರುವ ಬಸವಾದಿ ಶರಣರ ಧರ್ಮ ಸಂಸತ್ ಸಭಾ ಮಂಟಪದಲ್ಲಿ ವಟು ಸ್ವೀಕಾರ ಧಾರ್ಮಿಕ ಕಾರ್ಯಗಳು ನಡೆದವು. ನೂತನ ವಟುವಿಗೆ ಜಯಬಸವ ದೇವರು ಎಂದು ನಾಮಕರಣ ಮಾಡಲಾಯಿತು.

ಬೆಳಗ್ಗೆ 8 ಗಂಟೆಗೆ ಪ್ರಾರಂಭವಾದ ವಟು ಸ್ವೀಕಾರ ಸಮಾರಂಭದಲ್ಲಿ ಲಿಂಗಧೀಕ್ಷೆ, ವಿಭೂತಿ ಧಾರಣೆ, ಲಿಂಗಧಾರಣೆ, ಹಸ್ತಮಸ್ತಕ ಸಂಯೋಜನೆ, ಪಾದಪೂಜೆ ಸೇರಿದಂತೆ ಬಸವ ತತ್ವದ ಪ್ರಕಾರ ಧಾರ್ಮಿಕ ವಿಧಿ ವಿಧಾನ ನೆರವೇರಿದವು. ಮಾದಾರ ಶ್ರೀ ವಟು ಸ್ವೀಕಾರ ಮಾಡಿದರು. ಮಾದಾರ ಚನ್ನಯ್ಯ ಗುರುಪೀಠಕ್ಕೆ ಸ್ವೀಕಾರ ಮಾಡಿರುವ ವಟು ಜಯಬಸವ ದೇವರ ಮೂಲ ಊರು, ಬಾಗಲಕೋಟೆ ಜಿಲ್ಲೆ, ಮಹಾಲಿಂಗಪುರ. ಸವಿತಾ ಮಹಾಲಿಂಗಪ್ಪ ದಂಪತಿಗಳ ಎರಡನೇ ಪುತ್ರ 9 ವರ್ಷದ ಲಖನ್ ಮಠಕ್ಕೆ ವಟು ಆಗಿದ್ದಾರೆ. ಈ ದಂಪತಿಗೆ ಒಟ್ಟು ನಾಲ್ವರು ಮಕ್ಕಳಿದ್ದು, ಇಬ್ಬರು ಪುತ್ರಿಯರು, ಇಬ್ಬರು ಪುತ್ರರು. ಇದರಲ್ಲಿ ಎರಡನೇ ಮಗ ಲಖಬ್ ಅವರನ್ನು ಮಠಕ್ಕೆ ನೀಡಲಾಗಿದೆ.

ಕೇರಳದ ದೇಗುಲಗಳಲ್ಲಿಇನ್ನು ಕಣಗಲೆ ಹೂವು ಬಳಕೆಗೆ ನಿಷೇಧ ಜಾರಿ: ಕಾರಣವೇನು?

ವಟು ಸ್ವೀಕಾರ ಸಮಾರಂಭದಲ್ಲಿ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಶಾಂತವೀರ ಮಹಾಸ್ವಾಮಿಜಿ, ಭಗಿರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಹೊಸದುರ್ಗ, ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಹಂಪಿಯ ಮಾತಂಗಮುನಿ ಮಠದ ಶ್ರೀ ಮಾತಂಗಮುನಿ ಸ್ವಾಮೀಜಿ, ಲಂಬಾಣಿ ಗುರುಪೀಠದ ಶ್ರೀ ನಂದ ಮಸಂದ ಸ್ವಾಮಿಗಳು,  ಚಿತ್ರದುರ್ಗದ ಶ್ರೀ ವೇದಾರ ಗುರುಪೀಠದ ಕೇತೇಶ್ವರ ಸ್ವಾಮೀಜಿ,ಕೊರಟಗೆರೆಯ ಶ್ರೀ ಮಹಾಲಿಂಗ ಸ್ವಾಮಿಗಳು, ರಾಣೆಬೆನ್ನೂರಿನ ಶ್ರೀ ಗಜದಂಡ ಸ್ವಾಮಿಗಳು, ಸಿದ್ದಾರೂಢ ಆಶ್ರಮದ ಶ್ರೀ ಜಯದೇವ ಸ್ವಾಮಿಗಳು,ತಿಳುವಳ್ಳಿಯ ಶ್ರೀ ನಿರಂಜನಾಂದ ಸ್ವಾಮಿಗಳು ಶ್ರೀ ತಿಪ್ಪೇರುದ್ರ ಸ್ವಾಮಿಗಳು  ಸತ್ಯಕ್ಕ ಜಯದೇವಿತಾಯಿ ಶ್ರೀ ಪೂರ್ಣಾನಂದ ಸ್ವಾಮಿಗಳು ಇದ್ದರು.

PREV
Read more Articles on
click me!

Recommended Stories

ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!
Video: ಚಲಿಸುವ BMTC ಬಸ್ಸಲ್ಲಿ ಸ್ಟೇರಿಂಗ್ ಹಿಡಿದು ಡ್ರೈವರ್‌ಗಳ ಕಿತ್ತಾಟ; ಪ್ರಯಾಣಿಕರಿಗೆ ಪ್ರಾಣ ಸಂಕಟ!