ಬೆಂಗಳೂರಿನ ಕೋಡಿಗೆಹಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಬೈಕ್‌ನಲ್ಲಿ ಬಂದು ಜ್ಯೂವೆಲ್ಲರಿ ಶಾಪ್ ಮಾಲೀಕನ ಮೇಲೆ ಗುಂಡಿದ ದಾಳಿ ನಡೆಸಿರುವ ಘಟನೆ ನಡೆದಿದೆ.
ಬೆಂಗಳೂರು (ಮಾ.14): ಬೆಂಗಳೂರಿನ ಕೋಡಿಗೇಹಳ್ಳಿಯಲ್ಲಿನ ಜ್ಯೂವೆಲ್ಲರಿ ಶಾಪ್ ಮಾಲೀಕನ ಮೇಲೆ ರಿವಾಲ್ವರ್‌ನಿಂದ ಶೂಟ್ ಮಾಡಿ, ಆರೋಪಿಗಳು ಪರಾರಿ ಆಗಿರುವ ಘಟನೆ ನಡೆದಿದೆ. ಇನ್ನು ಜ್ಯೂವೆಲ್ಲರಿ ಮಾಲೀಕನ ಸ್ಥಿತಿ ಗಂಭೀರವಾಗಿದ್ದು, ಎಂ.ಎಸ್. ರಾಮಯ್ಯ ಆಸ್ಪತ್ರೆಯೆಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಪುಡಿರೌಡಿಗಳು ಹಾಗೂ ಕ್ರಮಿನಲ್‌ಗಳ ಅಟ್ಟಹಾಸ ಹೆಚ್ಚಾಗುತ್ತಿದೆ. ಹಾಡಹಗಲೇ ಸಾರ್ವಜನಿಕರು, ಉದ್ಯಮಿಗಳು ಹಾಗೂ ರೌಡಿಗಳನ್ನು ಹೊಡೆದು ಹಾಕುವ ಘಟನೆಗಳು ಮೇಲಿಂದ ಮೇಲೆ ಮರುಕಳಿಸುತ್ತಿವೆ. ಗುರುವಾರ ಬೆಳಗ್ಗೆಯೂ ಕೂಡ ಜ್ಯೂವೆಲ್ಲರಿ ಶಾಪ್ ಮಾಲೀಕನ ಮೇಲೆ ರಿವಾಲ್ವರ್‌ನಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದಾರೆ. ಈ ವೇಳೆ ಅಂಗಡಿಯ ಇತರೆ ಸಿಬ್ಬಂದಿಗೂ ಗುಂಡು ಹಾರಿಸಿದ್ದಾರೆ. ಸ್ಥಳೀಯ ಸಾರ್ವಜನಿಕರು ಜಮಾಯಿಸುತ್ತಿದ್ದಂತೆ ರಿವಾಲ್ವರ್ ಅನ್ನು ಸ್ಥಳದಲ್ಲಿಯೇ ಬಿಟ್ಟು ಆರೋಪಿಗಳು ಬೈಕ್‌ನಲ್ಲಿ ಪರಾರಿ ಆಗಿದ್ದಾರೆ.
undefined
ತಾಯಿಗಾಗಿ 2 ಕೋಟಿ ರೂ.ಗೆ ಕಿಡ್ನಿ ಮಾರಾಟಕ್ಕೆ ಮುಂದಾಗಿ, 6 ಲಕ್ಷ ರೂ. ಕಳೆದುಕೊಂಡ ಚಾರ್ಟೆಡ್ ಅಕೌಂಟೆಂಟ್!
ಬೆಂಗಳೂರಿನ ಕೊಡಗೇಹಳ್ಳಿ ಠಾಣಾ ವ್ಯಾಪ್ತಿಯ ದೇವಿನಗರ ಬಳಿಯಿರುವ ಲಕ್ಷ್ಮೀ ಬ್ಯಾಂಕರ್ಸ್ ಡಂಡ್ ಜ್ಯುವೆಲ್ಲರ್ಸ್ ಮಳಿಗೆಯಲ್ಲಿ ಘಟನೆ ನಡೆದಿದೆ. ಎರಡು ದ್ವಿಚಕ್ರ ವಾಹನದಲ್ಲಿ ಬಂದ ಆಗಂತುಕರು, ರಿವಾಲ್ವಾರ್ ನಿಂದ ಜ್ಯುವೆಲ್ಲರಿ ಮಾಲೀಕನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಸ್ಥಳಕ್ಕೆ ಕೊಡಗೇಹಳ್ಳಿ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದಾರೆ. ಇನ್ನು ಘಟನೆಯಲ್ಲಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅಪ್ಪೂರಾವ್ ಹಾಗೂ ಮತ್ತೊಬ್ಬ ಸಿಬ್ಬಂದಿಯನ್ನು ಎಂ.ಎಸ್.ರಾಮಯ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಖದೀಮರು ಜ್ಯೂವೆಲ್ಲರಿ ಶಾಪ್‌ನಲ್ಲಿ ಸುಪಾರಿ ಪಡೆದು ಮಾಲೀಕನನ್ನು ಕೊಲೆ ಮಾಡುವುದಕ್ಕೆ ಬಂದಿದ್ದರು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಜ್ಯುವೆಲ್ಲರಿ ಶಾಪ್‌ಗೆ ನುಗ್ಗಿದ ಆರೋಪಿಗಳು ಮಾಲೀಕ ಅಪ್ಪೂರಾಮ್ ಮೇಲೆ ಬಂದೂಕಿನಿಂದ ಶೂಟ್ ಮಾಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಅಂದಾರಾಮ್ ಅವರ ಮೇಲೂ ಗುಂಡು ಹಾರಿಸಿದ್ದಾರೆ. ನಂತರ ಜನರು ಸೇರುತ್ತಿದ್ದಂತೆ, ಅಲ್ಲಿಂದ ಪಲ್ಸರ್ ಬೈಕ್‌ನಲ್ಲಿ ಪರಾರಿ ಆಗಿದ್ದಾರೆ. ಇನ್ನು ಆರೋಪಿಗಳು ಅತಿ ವೇಗವಾಗಿ ಬೈಕ್‌ನಲ್ಲಿ ಪರಾರಿ ಆಗುತ್ತಿರುವ ದೃಶ್ಯಗಳು ಅಕ್ಕಪಕ್ಕದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಇನ್ನು ಆರೋಪಿಗಳ ಬೆನ್ನು ಬಿದ್ದಿರುವ ಪೊಲೀಸರು ಸ್ಥಳ ಪರಿಶೀಲನೆ ಮಾಡುತ್ತಿದ್ದು, ಶ್ವಾನದಳದಿಂದಲೂ ಅರೋಪಿಗಳ ಜಾಡು ಹಿಡಿಯಲಾಗುತ್ತಿದೆ.
ಬೆಂಗಳೂರಿನ ಹೋಟೆಲ್‌ನಲ್ಲಿ ವಿದೇಶಿ ಮಹಿಳೆ ಶವ ಪತ್ತೆ: 4 ದಿನದ ಹಿಂದೆ ಟೂರಿಸ್ಟ್ ವೀಸಾದಡಿ ಬಂದಿದ್ದ ಜರೀನಾ!
ಜ್ಯೂವೆಲ್ಲರಿ ಮಳಿಗೆಯಲ್ಲಿ ಒಟ್ಟು 4 ರೌಂಡ್ ಫೈರ್ ಮಾಡಲಾಗಿದೆ. ಇನ್ನು ಆರೋಪಿಗಳು ಸುಪಾರಿ ಪಡೆದು ಕೊಲೆ ಮಾಡೋಕೆ ಬಂದಿದ್ದ ಶಂಕೆ ವ್ತಕ್ತವಾಗಿದ್ದು, ಸದ್ಯ ಜುವೆಲರಿಯಲ್ಲಿ ಯಾವುದೇ ಕಳ್ಳತನ ಪತ್ತೆಯಾಗಿಲ್ಲ. ಏಕಾ ಏಕಿ ಬಂದು ಫೈರ್ ಮಾಡಿ ಎಸ್ಕೇಪ್ ಆಗಿದ್ದಾರೆ. ಅವಸರದಲ್ಲಿ ಫೈರ್ ಮಾಡಿ ಒಂದು ಪಿಸ್ತೂಲ್ ಅಲ್ಲೇ ಬಿಟ್ಟು ಹೋಗಿದ್ದಾರೆ. ಕಳೆದ 15 ವರ್ಷಗಳಿಂದ ಇಲ್ಲಿ ಜ್ಯೂವೆಲ್ಲರಿ ಶಾಪ್ ನಡೆಸುತ್ತಿದ್ದರು. ಇದು ರಾಬರಿಗಾಗಿ ನಡೆದಿದೆಯಾ ಅಥವಾ ದ್ವೇಷಕ್ಕಾ ಎಂದು ಪತ್ತೆ ಮಾಡಬೇಕಿದೆ. ಒರ್ವನ ಹೊಟ್ಟೆಗೆ ಗುಂಡು ಬಿದ್ದಿದ್ದು, ಅದನ್ನು ತೆಗೆಯುವ ಕಾರ್ಯ ನಡೆಯುತ್ತಿದೆ. ಆದರೆ, ಜೀವಕ್ಕೆ ಯಾವುದೇ ಅಪಾಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನು ಆಗಂತುಕರು ಮಾಲೀಕ ಅಪ್ಪೂರಾಮ್ ಅವರೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಅಂದಾರಾಮ್ ಎನ್ನುವ ಇನ್ನೊಬ್ಬ ವ್ಯಕ್ತಿ ಅರೋಪಿಗಳ ವಿರುದ್ದ ಗಲಾಟೆಗೆ ಹೋಗಿದ್ದಾನೆ. ಈ ವೇಳೆ ಅಂಗಡಿ ಒಳಗಿಂದ ಒಬ್ಬ ಹಾಗೂ ಹೊರಗಿನಿಂದ ಮತ್ತೊಬ್ಬ ಫೈರ್ ಮಾಡಿದ್ದಾರೆ. ಹೊರಗಿನಿಂದ ಫೈರ್ ಮಾಡಿರೋದು ಗುಂಡು ಬಿದ್ದಿಲ್ಲ. ಹೀಗಾಗಿ, ಒಳಗೆ ಹೋಗಿ ಗುಂಡು ಹಾರಿಸಿದ್ದು ಅದು ದೇಹಕ್ಕೆ ತಗುಲಿದೆ. ಸದ್ಯ ಇಬ್ಬರು ಗಾಯಾಳುಗಳ ಜೀವಕ್ಕೆ ಯಾವುದೇ ತೊಂದರೆ ಇಲ್ಲ. ಗಾಯಾಳುಗಳು ಇಬ್ಬರು ಸಂಬಂಧಿಕರಾಗಿದ್ದಾರೆ.