Bengaluru: ತುಂತುರು ಮಳೆಯಲ್ಲಿ ರಸ್ತೆ ಮದ್ಯದಲ್ಲಿಯೇ ಕಿಸ್ಸಿಂಗ್, ಹಗ್ಗಿಂಗ್ ಮಾಡಿದ ಬೆಂಗಳೂರಿನ ಲಜ್ಜೆಗೆಟ್ಟ ಜೋಡಿ!

By Sathish Kumar KH  |  First Published Jul 16, 2024, 1:38 PM IST

ಬೆಂಗಳೂರಿನಲ್ಲಿ ತುಂತುರು ಮಳೆಗೆ ಮೈಚಳಿ ತಾಳಲಾರದೇ ಯುವ ಜೋಡಿಯೊಂದು ರಸ್ತೆ ಮದ್ಯದಲ್ಲಿಯೇ ಕಾರನ್ನು ನಿಲ್ಲಿಸಿ ಪರಸ್ಪರ ಚುಂಬಿಸಿಕೊಳ್ಳುತ್ತಾ ರೊಮ್ಯಾನ್ಸ್ ಮಾಡಿದ್ದಾರೆ.


ಬೆಂಗಳೂರು/ನೆಲಮಂಗಲ (ಜು.16): ಬೆಂಗಳೂರಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಬೆಳಗ್ಗೆಯಿಮದಲೇ ತುಂತುರು ಮಳೆ ಸುರಿಯುತ್ತಿದ್ದು, ಮೈಚಳಿ ತಾಳಲಾರದೇ ಯುವ ಜೋಡಿಯೊಂದ ರಸ್ತೆ ಮದ್ಯದಲ್ಲಿಯೇ ಕಾರನ್ನು ನಿಲ್ಲಿಸಿ ಪರಸ್ಪರ ಚುಂಬಿಸಿಕೊಳ್ಳುತ್ತಾ ರೊಮ್ಯಾನ್ಸ್ ಮಾಡಿದ್ದಾರೆ. ಇದನ್ನು ನೋಡಿದ ಜನರು ಲಜ್ಜೆಗೆಟ್ಟ ಜೋಡಿಗೆ ಹಿಡಿಶಾಪ ಹಾಕಿದ್ದಾರೆ. 

ಕಳೆದೊಂದು ವಾರದಿಂದ ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು, ಬೆಂಗಳೂರು ಸೇರಿದಂತೆ ಎಲ್ಲೆಡೆ ಚಳಿಯ ವಾತಾವರಣ ನಿರ್ಮಾಣವಾಗಿದೆ. ಚಳಿ ತಾಳಲಾರದೇ ಬೆಂಗಳೂರಿನ ಜೋಡಿಯೊಂದು ಬಟಾ ಬಯಲಿನಲ್ಲಿ ಕಾರು ನಿಲ್ಲಿಸಿದ ಜೋಡಿಯೊಂದು ನೂರಾರು ಜನರು ಓಡಾಡುತ್ತಿದ್ದರೂ ಲೆಕ್ಕಿಸದೇ ಕಿಸ್ಸಿಂಗ್, ಹಗ್ಗಿಂಗ್ ಅಂಡ್ ರೊಮ್ಯಾನ್ಸ್ ಮಾಡಿದ್ದಾರೆ.  ಇದನ್ನು ನೂರಾರು ಜನರು ನೋಡುತ್ತಿದ್ದರೂ ಯಾರ ಬಗ್ಗೆಯೂ ಗಮನ ಹರಿಸದೇ ಅಸಭ್ಯವಾಗಿ ನಡೆದುಕೊಂಡಿದ್ದಾರೆ.

Tap to resize

Latest Videos

undefined

ಪಬ್ಲಿಕ್ ಪ್ಲೇಸ್‌ನಲ್ಲಿ ಕಾಲೇಜು ಪ್ರೇಮಿಗಳ ಖುಲ್ಲಂ ಖುಲ್ಲಾ ಹಗ್ಗಿಂಗ್, ಕಿಸ್ಸಿಂಗ್ ಅಂಡ್ ರೊಮ್ಯಾನ್ಸ್!

ಸಾಮಾನ್ಯವಾಗಿ ನಾವು ನೀವೆಲ್ಲರೂ ಸಾರ್ವಜನಿಕ ಪ್ರದೇಶದಲ್ಲಿ ಕೈ ಕೈ ಹಿಡಿದುಕೊಮಡು ಓಡಾಡುವುದಕ್ಕೇ ಮುಜುಗರ ಅನುಭವಿಸುತ್ತೇವೆ. ಇದೇನಿದು ಕೈಬಿಡಿ ನಿಮ್ಮಷ್ಟಕ್ಕೆ ನೀವು ನಡೆದುಕೊಂಡು ಬನ್ನಿ ಎಂದು ಹೇಳುವವರೇ ಬಹುತೇಕರಿದ್ದಾರೆ. ಇನ್ನು ಹೊಸ ಜೋಡಿಗಳು, ನವದಂಪತಿ ಹಾಗೂ ಪ್ರೇಮಿಗಳು ಕೆಲವು ಜನನಿಬಿಡ ಸ್ಥಳಗಳಲ್ಲಿ ಕೈ ಕೈ ಹಿಡಿದುಕೊಂಡು ಓಡಾದುವುದು ಬಿಟ್ಟರೆ ಬೇರೆ ಇನ್ಯಾವುದನ್ನೂ ಮಾಡಲು ಮುಂದಾಗುವುದಿಲ್ಲ. ಅದರಲ್ಲಿಯೂ ಬೆಂಗಳೂರಿನ ಪಾರ್ಕ್ ಹಾಗೂ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ ಹಗ್ ಮಾಡುವುದನ್ನು ನೋಡಿರಬಹುದು. ಇದನ್ನು ಬಿಟ್ಟು ಬೇರೇನೂ ಮಾಡುವುದಿಲ್ಲ. ಇದಕ್ಕೆ ಸಾರ್ವಜನಿಕರು ಅನುಮತಿಸುವುದೂ ಇಲ್ಲ. ಆದರೆ, ಇಲ್ಲೊಬ್ಬ ಬೆಂಗಳೂರಿನ ಲಜ್ಜೆಗೆಟ್ಟ ಜೋಡಿ ನೂರಾರು ಜನರು ಓಡಾಡುವ ರಸ್ತೆಯಲ್ಲಿಯೇ ಕಿಸ್ ಮತ್ತು ಹಗ್‌ ಮಾಡಿದ್ದಾರೆ.

ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪಟ್ಟಣದ ಬಸ್ ನಿಲ್ದಾಣದ ಅನತಿ ದೂರದಲ್ಲಿ ನಡೆದಿದೆ. ನೆಲಮಂಗಳದ ಬಿಹೆಚ್. ರಸ್ತೆಯ ಮದ್ಯದಲ್ಲಿ ಕಾರನ್ನು ನಿಲ್ಲಿಸಿ ಅಸಭ್ಯವಾಗಿ ವರ್ತಿಸಿದ್ದಾರೆ. ಬೆಳಗ್ಗೆಯೇ ತುಂತುರು ಮಳೆ ಸುರಿಯುತ್ತಿದ್ದು, ಎಲ್ಲರೂ ಕೆಲಸ ಕಾರ್ಯಗಳಿಗೆ ಹೋಗುವ ಧಾವಂತದಲ್ಲಿದ್ದಾರೆ. ಆದರೆ, ಬಿಹೆಚ್ ರಸ್ತೆಯಲ್ಲಿ ಕಾರು ನಿಲ್ಲಿಸಿದ ಜೋಡಿಯೊಂದು ಯಾರೇನು ಎಂದುಕೊಳ್ಳುತ್ತಾರೆ ಎಂಬ ಭಯವೂ ಇಲ್ಲದೇ ಬೆಳಗ್ಗೆಯೇ ಕಿಸ್ ಮಾಡಲು ಆರಂಭಿಸಿದ್ದಾರೆ. ಬಟಾ ಬಯಲಿನಲ್ಲಿ ರಸ್ತೆ ನಡುವೆಯೇ ಕಾರು ನಿಲ್ಲಿಸಿ ಹೀಗೆ ಲಜ್ಜೆಗೆಟ್ಟು ಮುತ್ತಿಡುವುದನ್ನು ನೋಡಿದ ಜನರು ಬೈದುಕೊಂಡೇ ಓಡಾಡಿದ್ದಾರೆ. ಇನ್ನು ಕೆಲವರು ಇವರ ರೊಮ್ಯಾನ್ಸ್ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮಳೆಯಲಿ ಜೊತೆಯಲಿ ಕದ್ದು ಮುಚ್ಚಿ ಮಹಡಿ ಮೇಲೆ ಕಿಸ್ಸಿಂಗ್, ರೋಮ್ಯಾನ್ಸ್ ವಿಡಿಯೋ ವೈರಲ್!

ರಸ್ತೆ ಮದ್ಯದಲ್ಲಿ ಕಿಸ್ ಮಾಡಿ ಅಸಭ್ಯ ವರ್ತನೆ ತೋರಿದ ಜೋಡಿಯಿದ್ದ ಕಾರಿನ ಗ್ಲಾಸ್‌ ಮೇಲೆ ಡಾಕ್ಟರ್ ಲೋಗೋ ಇತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆದರೆ, ವಿಡಿಯೋದಲ್ಲಿ ಕಾರಿನ ನಂಬರ್ ಅನ್ನು ಸೆರೆ ಹಿಡಿದಿಲ್ಲ. ಇನ್ನು ರಸ್ತೆಯಲ್ಲಿ ಹೀಗೆ ಅಸಭ್ಯವಾಗಿ ನಡೆದುಕೊಂಡಿದ್ದರಿಂದ ಅಕ್ಕಪಕ್ಕದ ಜನರು ಹಾಗೂ ರಸ್ತೆಯಲ್ಲಿ ಓಡಾಡುತ್ತಿದ್ದ ಜನರು ಮುಜುಗರಕ್ಕೆ ಒಳಗಾಗಿದ್ದಾರೆ. ಇನ್ನು ಕಾಲೇಜಿನ ಶಾಲಾ- ಕಾಲೇಜು ವಿದ್ಯಾರ್ಥಿಗಳು ಹಾಗೂ ಸಣ್ಣ ಮಕ್ಕಳ ಮೇಲೆ ಇದು ಪರಿಣಾಮ ಬೀರಲಿದ್ದು, ಪೊಲೀಸರು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. 

click me!