ಸಿಲಿಕಾನ್ ಸಿಟಿಯಲ್ಲಿ ಭಾರಿ ಮಳೆ ಆಗಿದೆ. 51 ವರ್ಷಗಳಲ್ಲಿ ದಾಖಲೆಯ ಮಳೆ ಸುರಿದಿದೆ. ಮಹದೇವಪುರ ವಲಯದಲ್ಲಿ ಅತಿ ಹೆಚ್ಚಿನ ಮಳೆಯಾಗಿದೆ. ನಿನ್ನೆಯೂ (ಭಾನುವಾರ) ಭಾರೀ ಮಳೆ ಸುರಿದಿದೆ. ಬೊಮ್ಮನಹಳ್ಳಿ, ಬೆಂಗಳೂರು ಈಸ್ಟ್ ವಲಯದಲ್ಲಿ ಹೆಚ್ಚಿನ ಮಳೆ ಬಿದ್ದಿದೆ.
ಬೆಂಗಳೂರು (ಸೆ.05): ಸಿಲಿಕಾನ್ ಸಿಟಿಯಲ್ಲಿ ಭಾರಿ ಮಳೆ ಆಗಿದೆ. 51 ವರ್ಷಗಳಲ್ಲಿ ದಾಖಲೆಯ ಮಳೆ ಸುರಿದಿದೆ. ಮಹದೇವಪುರ ವಲಯದಲ್ಲಿ ಅತಿ ಹೆಚ್ಚಿನ ಮಳೆಯಾಗಿದೆ. ನಿನ್ನೆಯೂ (ಭಾನುವಾರ) ಭಾರೀ ಮಳೆ ಸುರಿದಿದೆ. ಬೊಮ್ಮನಹಳ್ಳಿ, ಬೆಂಗಳೂರು ಈಸ್ಟ್ ವಲಯದಲ್ಲಿ ಹೆಚ್ಚಿನ ಮಳೆ ಬಿದ್ದಿದೆ. ಒಟ್ಟಾರೆ ಈ ಬಾರಿಯ ಮಳೆಗಾಲದಲ್ಲಿ ( ಜೂನ್ ನಿಂದ ಇಲ್ಲಿಯವರೆಗೆ) 709 ಎಂ.ಎಂ ಮಳೆಯಾಗಿದೆ. ಪ್ರತಿ ವರ್ಷಕ್ಕಿಂತ ಈ ಬಾರಿ ಎರಡು ವರೆ ಪಟ್ಟು ಹೆಚ್ಚು ಮಳೆ ಸುರಿದಿದ್ದು, 1998ರ ಮಳೆಗಾಲದಲ್ಲಿ 725 ಎಂ. ಎಂ ಮಳೆಯಾಗಿತ್ತು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ನಿನ್ನೆ ನಗರದಲ್ಲಿ ಸುರಿದ ಭಾರಿ ಮಳೆಯ ಅವಾಂತರಗಳ ಕುರಿತು ಪಾಲಿಕೆ ಕೇಂದ್ರ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡದ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ 2017ರಲ್ಲಿ ಬೊಮ್ಮನಹಳ್ಳಿ ವಲಯದಲ್ಲಿ 846 ಎಂ. ಎಂ ಮಳೆಯಾಗಿತ್ತು. ಈ ವರ್ಷ 703 ಎಂ. ಎಂ ಮಳೆಯಾಗಿದೆ. 2017ರ ಆಗಸ್ಟ್, ಸೆಪ್ಟಂಬರ್‌ನಲ್ಲಿ ಸುರಿದ ಮಳೆ ಇದುವರೆಗಿನ ಅತಿ ಹೆಚ್ಚು ಮಳೆಯ ದಾಖಲೆಯಾಗಿದೆ. ಈ ಬಾರಿಯ ಎರಡನೆಯ ಅತಿ ಹೆಚ್ಚು ಮಳೆಯಾಗಿದೆ ಎಂದು ಮಾಹಿತಿ ನೀಡಿದರು.
Bengaluru Rain; 1998ರ ಬಳಿಕ ಮೊದಲ ಬಾರಿ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆ!
ಕೆಲ ವಲಯಗಳಲ್ಲಿ 4 ಪಟ್ಟು ಹೆಚ್ಚು ಮಳೆ: ಕಳೆದ ಕೆಲ ವರ್ಷಗಳಿಗೆ ಹೋಲಿಸಿಕೊಂಡರೆ ಆಗಸ್ಡ್ ತಿಂಗಳಿನಲ್ಲಿ ಈ ಬಾರಿ ಕೆಲ ವಲಯಗಳಲ್ಲಿ ನಾಲ್ಕು ಪಟ್ಟು ಹೆಚ್ಚು ಮಳೆ ಸುರಿದಿದೆ. ಮಹದೇವಪುರ ವಲಯದ 28 ಕಡೆಗಳಲ್ಲಿ ಮಳೆ ನೀರು ನುಗ್ಗಿದೆ. ಬೊಮ್ಮನಹಳ್ಳಿಯಲ್ಲಿ 9 ಕಡೆ. ಈಸ್ಟ್ ಜೋನ್‌ನಲ್ಲಿ 24 ಕಡೆ ಮಳೆ ನೀರು ನುಗ್ಗಿದೆ. ಕೇಂದ್ರ ಭಾಗದಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಎತ್ತರದಲ್ಲಿ ಇರುವುದರಿಂದ ಮಳೆ ನೀರು ನಿಂತಿಲ್ಲ. ದೊಮ್ಮಲೂರು ಭಾಗದಲ್ಲಿ ಮಳೆ ನೀರಿನ ತೊಂದರೆ ಇದೆ. ಸೌತ್, ವೆಸ್ಟ್, ಆರ್ ಆರ್ ನಗರ ವಲಯಗಳಲ್ಲಿ ಹೆಚ್ಚಿನ ತೊಂದರೆಯಾಗಿಲ್ಲ. ಈಜಿಪುರ ದಲ್ಲಿ 16, ಕೋರಮಂಗಲದಲ್ಲಿ 26 ಕಡೆ ಮನೆಯೊಳಗೆ ನೀರು ನುಗ್ಗಿರುವ ದೂರುಗಳು ಬಂದಿವೆ.ಹೆಚ್.ಎ.ಎಲ್ ಬಳಿ ಅಪಾರ್ಟ್ಮೆಂಟ್ ಒಳಗೆ ಮಳೆ ನೀರು ನುಗ್ಗಿದೆ ಎಂದು ಮಾಹಿತಿ ನೀಡಿದರು.
43 ಪಂಪ್ ಬಳಕೆ: ಒಟ್ಟು ಪಾಲಿಕೆ ಬಳಿಯಿರುವ 63 ಪಂಪ್ ಗಳಲ್ಲಿ 43 ಪಂಪ್ ಬಳಕೆಯಾಗುತ್ತಿದೆ. ಎಸ್.ಡಿ.ಆರ್.ಎಫ್ ಸಹಾಯ, ಬೋಟ್ ಬಳಕೆ ಮಾಡಲಾಗುತ್ತಿದೆ. ಸದ್ಯ ಔಟರ್ ರಿಂಗ್ ರೋಡ್‌ನಲ್ಲಿ ಎರಡು ಅಡಿ ನೀರು ಹರಿಯುತ್ತಿದೆ ಎಂದು ತಿಳಿಸಿದರು.
ಕೆರೆಗಳು ಫುಲ್: ಬೆಳ್ಳಂದೂರು, ವಿಭೂತಿಪುರ, ಬೇಗೂರು ಕೆರೆ ನೀರು ತುಂಬಿದೆ. ಸಾವಳಕೆರೆ ನೀರು ಇಕೊ ಸ್ಪೇಸ್ ಬೆಳ್ಳಂದೂರು ರಸ್ತೆಗೆ ಹರಿದುಬರುತ್ತಿದೆ. ಈಗಲೂ ಎರಡು ಮೂರು ಅಡಿ ಮಳೆ ನೀರು ರಸ್ತೆಯ ಮೇಲೆ ನಿಂತಿದೆ.
ಒತ್ತುವರಿ ನೋಟೀಸ್ ನೀಡುವ ಅವಶ್ಯಕತೆ ಇಲ್ಲ: ರಾಜಕಾಲುವೆ ಒತ್ತುವರಿಗೆ ಯಾವುದೇ ನೋಟೀಸ್ ನೀಡುವ ಅವಶ್ಯಕತೆ ಇಲ್ಲ. ನೋಟೀಸ್ ನೀಡದೆ ರಾಜಕಾಲುವೆ ಮೇಲಿರುವ ಕಟ್ಟಡ ತೆರವುಗೊಳಿಸುತ್ತೇವೆ. ಒತ್ತುವರಿಯಾದ 700 ಕಟ್ಟಡಗಳಲ್ಲಿ 200 ಕಟ್ಟಡಗಗಳನ್ನು ತೆರವುಗೊಳಿಸಲಾಗಿದೆ. 150 ರಾಜಕಾಲುವೆ ಬಫರ್ ಜೋನ್‌ನಲ್ಲಿ ಕಟ್ಟಡಗಳು ಇವೆ. ಮಹದೇವಪುರದಲ್ಲಿ 350 ರಾಜಕಾಲುವೆ ಮೇಲೆ ನಿರ್ಮಿಸಿರುವ ಕಟ್ಟಡಗಳಿವೆ. ಎರಡು ತಿಂಗಳಿನಲ್ಲಿ ರಾಜಕಾಲುವೆ ಒತ್ತುವರಿ ಮಾಡಿದ ಕಟ್ಟಡಗಳನ್ನು ತೆರವುಗೊಳಿಸಲಾಗುವುದು. ಅಕ್ಟೋಬರ್ ಅಂತ್ಯದೊಳಗೆ ರಾಜಧಾನಿಯಲ್ಲಿ ಎಲ್ಲ ಒತ್ತುವರಿ ತೆರವು ಕಾರ್ಯಚರಣೆ ಪೂರ್ಣಗೊಳಿಸಲಾಗುತ್ತಿದೆ.
ಪರಿಹಾರ ಕಾರ್ಯದಲ್ಲಿ ಯಾವುದೇ ತಾರತಮ್ಯ ಇಲ್ಲ: ಐಟಿ ಕಂಪನಿ ಬೆಂಗಳೂರು ಬಿಟ್ಟು ಹೋಗುವ ವಿಚಾರವಾಗಿ ಮಾತಾನಾಡಿದ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಐಟಿ ಬಿಟಿ ಸೇರಿದಂತೆ ಎಲ್ಲರಿಗೂ ಸೌಲಭ್ಯ ಬಿಬಿಎಂಪಿ ಒದಗಿಸಲಾಗುತ್ತದೆ. ಯಾವ ತಾರತಮ್ಯವನ್ನು ಮಾಡುವುದಿಲ್ಲ. ನಮ್ಮ ಶಕ್ತಿ ಮೀರಿ ಕೆಲಸ ಮಾಡುತ್ತಿದೆ. ನಾವು ಯಾವ ವಿಚಾರವನ್ನು ಹಗುರವಾಗಿ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಕೆರೆಗಳಲ್ಲಿ ತುಂಬಿರುವ ಹೂಳು: ಕೆರೆಗಳಲ್ಲಿ ಹೂಳು ಇರುವುದು ನಿಜ. ಬೆಳ್ಳಂದೂರು, ವರ್ತೂರು ಕೆರೆಯಲ್ಲಿ ಸದ್ಯಕ್ಕೆ ಹೂಳು ಎತ್ತುವ ಕಾರ್ಯ ಮಾಡಬೇಕಿದೆ. ಮಳೆಗಾಲದಲ್ಲಿ ಕಷ್ಟ ಸಾಧ್ಯವಿದ್ದು, ಬೇಸಿಗೆ ಕಾಲದಲ್ಲಿ ಅಲ್ಲಿನ ಕೆರೆಗಳ ಹೂಳು ತೆಗೆಯಲಾಗುವುದು. ಬೆಂಗಳೂರಿನ ಬಹುತೇಕ ಎಲ್ಲ ಕೆರೆ ತುಂಬಿವೆ. ಬೆಳ್ಳಂದೂರು, ವರ್ತೂರು, ಬೇಗೂರು ತುಂಬಿ ಹರಿಯುತ್ತಿವೆ. ಹೂಳು ತೆಗೆಯುವ ವಿಚಾರ ಸಿಎಂ ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ತಿಳಿಸಿದರು.
Bengaluru Rains: ಬಿಜೆಪಿ ಬಂದು ಬ್ರಾಂಡ್ ಬೆಂಗಳೂರು ಹೋಯ್ತು, ರಾಮಲಿಂಗಾ ರೆಡ್ಡಿ ಕಿಡಿ
ಮಳೆ ಬರದಿದ್ದರೆ ನಾಳೆಯ ವೇಳೆಗೆ ತಹಬಂದಿಗೆ: ಬೆಳ್ಳಂದೂರು ರಸ್ತೆಯಲ್ಲಿ ಇನ್ನೆರಡು ದಿನ ಇದೇ ಪರಿಸ್ಥಿತಿ ಇರಬಹುದು. ಮಳೆ ಬಂದರೆ ನಮ್ಮ ಕಂಟ್ರೋಲ್ ಮೀರಿ ಹೋಗುತ್ತಿದೆ. ನಾಳೆ ರಸ್ತೆ ಮೇಲೆ ಹರಿಯುತ್ತಿರುವ ಕೆರೆ ನೀರು ಕಡಿಮೆ ಆಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.