ರೇಷ್ಮೆ ನಗರಿ ರಾಮನಗರದಲ್ಲಿ ಕೊಂಚ ಬಿಡುವು ಕೊಟ್ಟಿದಂತಹ ಮಳರಾಯ ತಡರಾತ್ರಿ ಅಬ್ಬರಿಸಿ ಬೊಬ್ಬಿರಿದ್ದಾನೆ. ನಿನ್ನೆ (ಭಾನುವಾರ) ರಾತ್ರಿ ಸುರಿದ ಧಾರಾಕಾರ ಮಳೆ ರೇಷ್ಮೆನಗರಿಯಲ್ಲಿ ಸಾಕಷ್ಟು ಅವಾಂತ ಸೃಷ್ಟಿ ಮಾಡಿದೆ.
ವರದಿ: ಜಗದೀಶ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ
ರಾಮನಗರ (ಸೆ.05): ರೇಷ್ಮೆ ನಗರಿ ರಾಮನಗರದಲ್ಲಿ ಕೊಂಚ ಬಿಡುವು ಕೊಟ್ಟಿದಂತಹ ಮಳರಾಯ ತಡರಾತ್ರಿ ಅಬ್ಬರಿಸಿ ಬೊಬ್ಬಿರಿದ್ದಾನೆ. ನಿನ್ನೆ (ಭಾನುವಾರ) ರಾತ್ರಿ ಸುರಿದ ಧಾರಾಕಾರ ಮಳೆ ರೇಷ್ಮೆನಗರಿಯಲ್ಲಿ ಸಾಕಷ್ಟು ಅವಾಂತ ಸೃಷ್ಟಿ ಮಾಡಿದೆ. ಜಲಾಸುರನ ಆರ್ಭಟಕ್ಕೆ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ಹೌದು! ರೇಷ್ಮೆನಗರಿ ರಾಮನಗರದಲ್ಲಿ ಕಳೆದ 5 ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆರಾಯ ತಡರಾತ್ರಿ ಮತ್ತೆ ಸಾಕಷ್ಟು ಅವಾಂತರಗಳನ್ನು ಸೃಷ್ಠಿಮಾಡಿದೆ. ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಒಂದೆಡೆ ಜನರು ತತ್ತರಿಸಿ ಹೋಗಿದ್ದರೆ. ರೈತರ ಬದುಕು ಬೀದಿಗೆ ಬೀಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಅಂದಹಾಗೆ ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯ ಜನರ ಮೇಲೆ ವರುಣ ದೇವ ಕರುಣ ತೋರಿದ್ದ, ಜಿಲ್ಲೆಯ ಜನರು ಕೂಡ ಕೊಂಚ ನಿಟ್ಟುಸಿರು ಬಿಟ್ಟಿದ್ರು, ಆದ್ರೆ ಮತ್ತೆ ಜಿಲ್ಲೆಯಲ್ಲಿ ರಕ್ಕಸ ಮಳೆ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಧಾರಾಕಾರವಾಗಿ ಸುರಿದ ಮಳೆಗೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಕೊಂಡಾಪುರ ಗ್ರಾಮಕ್ಕೆ ಜಲಕಂಟಕ ಎದುರಾಗಿತ್ತು. ಹುಣಸನಹಳ್ಳಿ ಕೆರೆ ಕೋಡಿ ಬಿದ್ದಂತಹ ಪರಿಣಾಮ ನೂರಾರು ಹೆಕ್ಟೇರ್ ಪ್ರದೇಶ ಜಲಾವೃತವಾಗಿತ್ತು. ಜಮೀನಿನಲ್ಲಿದ್ದ ತೆಂಗು,ಬಾಳೆ,ಜೋಳ,ಹಿಪ್ಪು ನೇರಳೆ, ಬೇಬಿ ಕಾರ್ನ್, ಸೀಮೆಹುಲ್ಲು, ತರಕಾರಿ ಹಲವು ಬೆಳೆಗಳು ಸರ್ವನಾಶವಾಗಿದ್ದವು.
ಮಕ್ಕಳಿಗೆ ವಿಷ ಕುಡಿಸಿ ಸಾವಿಗೆ ಶರಣಾದ ರೈತ ಸಂಘ ಮುಖಂಡನ ಪತ್ನಿ
ಅಲ್ಲದೇ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಹಲವು ಮನೆಗಳಿಗೆ ಹಳ್ಳದ ನೀರು ನುಗ್ಗಿತ್ತು. ಇನ್ನೂ ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ ಮೇವು ಕೂಯಲು ಸಾಧ್ಯವಾಗದೇ ಜಾನುವಾರುಗಳು ಮೇವಿನ ಸಮಸ್ಯೆ ಎದುರಿಸಿದ್ದವು. ಮತ್ತೊಂದೆಡೆ ಚನ್ನಪಟ್ಟಣ ತಾಲ್ಲೂಕಿನ ಕೋಡಂಬಳ್ಳಿ ಕೆರೆ ತುಂಬಿ ಕೋಡಿ ಬಿದ್ದ ಪರಿಣಾಮ ನೂರಾರು ಹೆಕ್ಟೇರ್ ಪ್ರದೇಶ ಜಲಾವೃತವಾಗಿತ್ತು, ಜಮೀನಿನಲ್ಲಿದ್ದಂತಹ ತೆಂಗು,ಬಾಳೆ, ಜೋಳ, ಹಿಪ್ಪು ನೇರಳೆ, ಸೀಮೆಹುಲ್ಲು ತರಕಾರಿ ಬೆಳೆಗಳು ನಾಶವಾಗಿತ್ತು, ಅಲ್ಲದೇ ಕೊಂಡಾಪು ಹಾಗೂ ಕರಲಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ಕೂಡ ಅಪಾರ ಪ್ರಮಾಣದ ನೀರು ಹರಿದು, ಹಲವು ಗ್ರಾಮಗಳ ಸಂಪರ್ಕ ಕಟ್ ಆಗಿತ್ತು.
ಚನ್ನಪಟ್ಟಣದಲ್ಲೊಬ್ಬ ನಕಲಿ ಸಾಯಿಬಾಬಾ, ಭಕ್ತರನ್ನ ನಂಬಿಸಿ ಹಣ ವಸೂಲಿ!
ತುಂಬಿ ಹರಿಯುತ್ತಿರುವ ರಸ್ತೆ ಮೇಲೆಯೆ ಬೈಕ್ ಸವಾರರು ಪ್ರಾಣದ ಹಂಗು ತೊರೆದು ಸಂಚರಿಸುತ್ತಿದ್ದರು. ಮತ್ತೊಂದೆಡೆ ಮಾಗಡಿ ತಾಲ್ಲೂಕಿನ ಬಿಸ್ಕೂರು ಗ್ರಾಮದ ಬಳಿಯಿರುವ ಕೆರೆ ಸಹ ಕೋಡಿ ಬಿದ್ದು, ಬಿಸ್ಕೂರು ಮತ್ತು ಕುದೂರು ಗ್ರಾಮಗಳ ಸಂಪರ್ಕ ಕಟ್ ಆಗಿತ್ತು. ಒಟ್ಟಾರೆ ರಾಮನಗರ ಜಿಲ್ಲೆಯಲ್ಲಿ ತಡರಾತ್ರಿ ಸುರಿದ ಮಳೆ ಸಾಕಷ್ಟು ಅವಾಂತರಗಳನ್ನು ಸೃಷ್ಟಿ ಮಾಡಿ, ಜನರನ್ನು ತತ್ತರಿಸುವಂತೆ ಮಾಡಿದ್ದು, ರೈತರನ್ನು ಬೀದಿಗೆ ಬೀಳುವಂತೆ ಮಾಡಿದೆ.