Bengaluru- ಬಿಬಿಎಂಪಿ ಚುನಾವಣೆಗೆ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಮಿತಿ ರಚನೆ

By Sathish Kumar KHFirst Published May 29, 2023, 6:38 PM IST
Highlights

ಬಿಬಿಎಂಪಿ ಚುನಾವಣೆ ನಡೆಸಲು ಕಾಂಗ್ರೆಸ್‌ ಸರ್ಕಾರ ಮುಂದಾಗಿದ್ದು, ಈ ಕುರಿತು ವರದಿ ಸಲ್ಲಿಸಲು ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ.

ಬೆಂಗಳೂರು (ಮೇ 29): ಕಳೆದ ಮೂರೂವರೆ ವರ್ಷಗಳಿಂದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿ ಪಾಲಿಕೆ ಸದಸ್ಯರಿಲ್ಲದೇ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಬಿಜೆಪಿ ಸರ್ಕಾರ ಆಡಳಿತ ವಿರೋಧಿ ಅಲೆಯಿಂದಾಗಿ ವಿವಿಧ ನೆಪವೊಡ್ಡಿ ಚುನಾವಣೆ ಮುಂದೂಡಿಕೆ ಮಾಡುತ್ತಾ ಬಂದಿತ್ತು. ಈಗ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಬಿಬಿಎಂಪಿ ಚುನಾವಣೆ ನಡೆಸಲು ಸಿದ್ಧತೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುತ್ತಿದೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಸ್ವತಃ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಹೊಂದಿದ್ದು, ಬಿಬಿಎಂಪಿ, ಬಿಡಿಎ ಸೇರಿದಂತೆ ಸ್ಥಳೀಯ ಆಡಳಿತ ಸಂಸ್ಥೆಗಳ ಹಿರಿಯ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌ (Karnataka Deputy chief minister DK Shivakumar) ಅವರು, ಬಿಬಿಎಂಪಿ ( Bruhat Bengaluru Mahanagara Palike -BBMP) ಪಾಲಿಕೆಯ ಚುನಾವಣೆಯನ್ನು ಆದಷ್ಟು ಬೇಗ ಮಾಡಿಸುತ್ತೇವೆ. ಈ ಹಿನ್ನೆಲೆಯಲ್ಲಿ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ (Minister Ramalinga reddy Chairmanship)  ಸಮಿತಿ ರಚನೆ ಮಾಡಲಾಗುವುದು. ಡೀಲಿಮಿಟೇಶನ್ (BBMP Delimitaion) ಕುರಿತು ರಾಮಲಿಂಗಾರೆಡ್ಡಿ ಅಧ್ಯಕ್ಷತೆಯ ಸಮಿತಿ ನೀಡುವ ಮಾಹಿತಿ ನಂತರ ಡಿಲಿಮಿಟೇಶನ್‌ ಬಸಲಾಯಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧಾರ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

Bengaluru- ನಂದಿ ಬೆಟ್ಟಕ್ಕೆ ಹೋದ ಸ್ನೇಹಿತರು ಜಲಸಮಾಧಿಯಾದರು: ಕೈ-ಕೈ ಹಿಡಿದು ಕೆರೆಯಲ್ಲಿ ಮುಳುಗಿದರು 

ಆಸ್ತಿ ತೆರಿಗೆ ಹೆಚ್ಚಳಕ್ಕೆ ಶೀಘ್ರ ತೀರ್ಮಾನ:
ಸರ್ಕಾರದಲ್ಲಿ ಬಹಳ ವಿಶ್ವಾಸವಿಟ್ಟು ಬದಲಾವಣೆ ತರುವ ವಿಶ್ವಾಸದಿಂದ ಬೆಂಗಳೂರು ನಗರದ ಅಭಿವೃದ್ಧಿ ಜವಬ್ದಾರಿಯನ್ನು ನನಗೆ ನೀಡಲಾಗಿದೆ. ನಾನು ಗ್ರಾಮೀಣ ಭಾಗದಿಂದ ಬಂದಿದ್ರು ಸಹ ಬೆಂಗಳೂರಿನ ಇತಿಹಾಸ, ಬೆಂಗಳೂರಿನ ಅಭಿವೃದ್ಧಿ ಹಾಗೂ ಬೆಂಗಳೂರಿನ ಮಹಾತ್ವ ಅರಿತಿದ್ದೇನೆ. ಆದಷ್ಟು ಬೇಗಾ ನಾನು ಬಿಬಿಎಂಪಿ ಎಲೆಕ್ಷನ್ ಮಾಡುತ್ತೇವೆ. ಇನ್ನು ಬೆಂಗಳೂರಿನ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳದ (Bengaluru Property Tax hike) ಬಗ್ಗೆ ಪ್ರಸ್ತಾವನೆ ಬಂದಿದೆ. ಆದರೆ, ಏಕಾಏಕಿ ಈ ಬಗ್ಗೆ ನಿರ್ಧಾರ ಕೈಗೊಳ್ಳದೇ ಪ್ರಸ್ತಾವನೆ ಬಗ್ಗೆ ವಿಸ್ತೃತ ಅಧ್ಯಯನ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. 

ಬೆಂಗಳೂರಿಗೆ ಹಚ್ಚಿನ ಮೂಲಸೌಕರ್ಯ ಒದಗಿಸಲು ಕ್ರಮ: ಬೆಂಗಳೂರು ಈ ಮಟ್ಟಕ್ಕೆ ಬೆಳೆಯಲು ಬಹಳ ಶ್ರಮವಹಿಸಿದ್ದಾರೆ. ಕಾರ್ಪೊರೇಟರ್‌ಗಳು, ಹಲವು ನಾಯಕರು ಸಹ ತಮ್ಮದೇ ಕೊಡುಗೆ ನೀಡಿದ್ದಾರೆ. ಒಂದು‌ ಕೋಟಿಗಿಂತ ಹೆಚ್ಚು ಜನ ಇಲ್ಲಿ ವಾಸ ಮಾಡ್ತಾ ಇದ್ದಾರೆ. ಈ ಪೈಕಿ ವಾರ್ಷಿಕ 40 ರಿಂದ 50 ಲಕ್ಷ ಜನರು ಹೊರಗಿನಿಂದ ಬೆಂಗಳೂರಿಗೆ ಬಂದು ಹೋಗೋದನ್ನು ಮಾಡ್ತಾ ಇದ್ದಾರೆ. ವಿಶ್ವದ ಅನೇಕ ನಾಯಕರು, ಉದ್ಯಾಮಿಗಳು ಬೆಂಗಳೂರಿನ ಮುಖಾಂತರ ಭಾರತವನ್ನು ನೋಡುವಂತಹ ಸ್ಥಿತಿ ಇದೆ. ಹಾಗಾಗಿ ಇಲ್ಲಿಗೆ ಹಚ್ಚಿನ ಸೌಲಭ್ಯವನ್ನು ಹೊದಗಿಸುವಂತಹ ಕೆಲಸ ಮಾಡಲಾಗುವುದು. ನಾನು‌ ಈ‌ಮೀಟಿಂಗ್ ಮೂಲಕ ಬೆಂಗಳೂರಿನ ಬಗ್ಗೆ ಒಂದು ಪಾಠ ಕಲಿತುಕೊಂಡಿದ್ದೇನೆ. ಬಿಬಿಎಂಪಿ ಬೆಂಗಳೂರಿನ ಅಭಿವೃದ್ಧಿಗಾಗಿ (Bengaluru Development) ಹಾಕಿಕೊಂಡಿರುವ ಯೋಜನೆಗಳ ಬಗ್ಗೆ ತಿಳಿದುಕೊಂಡಿದ್ದೆನೆ ಎಂದು ತಿಳಿಸಿದರು.

ಕಾಂಗ್ರೆಸ್‌ನ ಐದು ಗ್ಯಾರಂಟಿ ಅನುಷ್ಠಾನ ವಿಳಂಬ, ಕೇಸು ದಾಖಲಿಸಲು ಮುಂದಾದ ವಕೀಲ

ಭ್ರಷ್ಟಾಚಾರ ಮುಕ್ತ ಬಿಬಿಂಎಪಿ ಮಾಡ್ತೀನಿ:  ಒಂದೆ ದಿನದಲ್ಲಿ ಎಲ್ಲ ಬದಲಾವಣೆ ಮಾಡುತ್ತೆನೆ ಎಂದು ನಾನು ಹೇಳೊದಿಲ್ಲ. ಮುಖ್ಯವಾಗಿ ನಾನು ಭ್ರಷ್ಟಾಚಾರ ಮುಕ್ತ ಬಿಬಿಎಂಪಿ (Corruption free BBMP) ಆಗಬೇಕು ಅನ್ನೋದನ್ನು ತಿಳಿಸಿದ್ದೇನೆ. ಬಿಬಿಎಂಪಿಗೆ ಬರುವ ಸಾರ್ವಜನಿಕರಿಗೆ ಗೌರವದಿಂದ ನಡೆಸಿಕೊಳ್ಳಬೇಕು ಎಂದು ಹೇಳಿದ್ದೀನಿ. ಡಬಲ್ ಬಿಲ್ , ಆ ಬಿಲ್ ಈ ಬಿಲ್ ಎಲ್ಲವೂ ನಿಲ್ಲಬೇಕು ಎಂದು ಸೂಚನೆ ನೀಡಿದ್ದೇನೆ. ಹಣಕಾಸಿನ ವ್ಯವಸ್ಥೆಗೆ ಭದ್ರತೆ ತರಬೇಕು. ಬೆಂಗಳೂರಿನ ಅಭಿವೃದ್ಧಿಗೆ ಸರ್ಕಾರದ ಅನುದಾನದ ಮೇಲೆ ಅವಲಂಬನೆ ಆಗಬಾರದು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾಹಿತಿ ನೀಡಿದರು.

click me!