ಚುನಾವಣಾ ಭರವಸೆ ಈಡೇರಿಸಲು ಸರ್ಕಾರ ಬದ್ಧ: ಶಾಸಕ ಪ್ರದೀಪ್‌ ಈಶ್ವರ್‌

By Kannadaprabha News  |  First Published May 29, 2023, 11:11 AM IST

ದಕ್ಷಿಣ ಭಾರತದಲ್ಲಿ ಕಾಂಗ್ರೆಸ್‌ ಸಂಘಟಿಸುವ ಸಾಮರ್ಥ ರಾಜ್ಯ ಸಂಪುಟಕ್ಕೆ ಇದೆ. ಈ ಸ್ವಲ್ಪ ಕಾಲಾವಕಾಶ ನೀಡಿದರೆ ಚುನಾವಣೆಯಲ್ಲಿ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಶಾಸಕ ಪ್ರದೀಪ್‌ ಈಶ್ವರ್‌ ಭರವಸೆ ನೀಡಿದರು. 


ಚಿಕ್ಕಬಳ್ಳಾಪುರ (ಮೇ.29): ನಿನ್ನೆಯಷ್ಟೇ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯಾಗಿದ್ದು, ದಕ್ಷತೆಯಿಂದ ಕೂಡಿದ್ದು ಉತ್ತಮವಾದ ಆಡಳಿತವನ್ನು ರಾಜ್ಯಕ್ಕೆ ಕಾಂಗ್ರೆಸ್‌ ಸರ್ಕಾರ ನೀಡಲಿದೆ. ದಕ್ಷಿಣ ಭಾರತದಲ್ಲಿ ಕಾಂಗ್ರೆಸ್‌ ಸಂಘಟಿಸುವ ಸಾಮರ್ಥ ರಾಜ್ಯ ಸಂಪುಟಕ್ಕೆ ಇದೆ. ಈ ಸ್ವಲ್ಪ ಕಾಲಾವಕಾಶ ನೀಡಿದರೆ ಚುನಾವಣೆಯಲ್ಲಿ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಶಾಸಕ ಪ್ರದೀಪ್‌ ಈಶ್ವರ್‌ ಭರವಸೆ ನೀಡಿದರು. ಭಾನುವಾರ ನಗರದ ಅಂಬೇಡ್ಕರ್‌ ಭವನದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಅಧಿಕಾರಿಗಳನ್ನು ನನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಕೆಲಸವನ್ನು ನಾನು ಮಾಡೊಲ್ಲ. ಬದಲಿಗೆ ವಿಶ್ವಾಸದಿಂದಲೇ ಕೆಲಸ ಮಾಡಿಸುತ್ತೇನೆ ಎಂದರು.

ಅಧಿಕಾರಿಗಳಿಗೂ ಕಷ್ಟ, ಸುಖ ಗೊತ್ತು: ಅಧಿಕಾರಿಗಳು ಸಹ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಪಾಸ್‌ ಮಾಡಿ ಬಂದಿತ್ತಾರೆ. ಅವರಲ್ಲಿ ಸಾಕಷ್ಟು ಅಧಿಕಾರಿಗಳು ರೈತರ, ಕೃಷಿ ಕಾರ್ಮಿಕರ,ಬಡ ಕುಟುಂಬಗಳು ಮತ್ತು ಗ್ರಾಮಾಂತರ ಪ್ರದೇಶಗಳಿಂದಲೇ ಬಂದಿದ್ದಾರೆ. ಹಾಸ್ಟೆಲ್‌ಗಳಲ್ಲಿ ಇದ್ದು, ಸರ್ಕಾರಿ ಶಾಲೆಗಳಲ್ಲಿಯೇ ವಿದ್ಯಾಭ್ಯಾಸ ಮಾಡಿದವರಾಗಿದ್ದಾರೆ. ಅವರಿಗೂ ಎಲ್ಲ ಕಷ್ಟಸುಖ ತಿಳಿದಿರುತ್ತದೆ. ಕ್ಷೇತ್ರದ ಜನರಿಗೆ ಉತ್ತಮ ಸೇವೆಯನ್ನು ನೀಡುತ್ತಾರೆ ಎನ್ನುವ ಭರವಸೆ ನನಗಿದೆ. ಅಧಿಕಾರಿಗಳ ಮತ್ತು ಎಲ್ಲ ಸಚಿವರ ಸಹಕಾರದಿಂದ ಚಿಕ್ಕಬಳ್ಳಾಪುರವನ್ನು ಅಭಿವೃದ್ಧಿಪಡಿಸುತ್ತೇನೆ ಎಂದರು.

Tap to resize

Latest Videos

ಕನಿಷ್ಠ 20 ಎಂಪಿ ಸೀಟು: ಸಚಿವರಿಗೆ ಸಿದ್ದರಾಮಯ್ಯ ಗುರಿ

ಪಕ್ಷಕ್ಕೆ ದುಡಿದವರಿಗೆ ಸ್ಥಾನ: ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಬಾಗೇಪಲ್ಲಿಯ ಹಿರಿಯ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿಗೂ ಸಚಿವ ಸ್ಥಾನ ಮುಂದೆ ಸಿಗಲಿದೆ. ಕಾಂಗ್ರೆಸ್‌ ಪಕ್ಷಕ್ಕಾಗಿ ದುಡಿದ ಎಲ್ಲರನ್ನು ಗುರ್ತಿಸಿ ಎಲ್ಲರಿಗೂ ಉತ್ತಮ ಸ್ಥಾನ ಮಾನವನ್ನು ಪಕ್ಷ ನೀಡುತ್ತದೆ. ಹಾಗೆಯೇ ಪಕ್ಷದ ಮುಖಂಡರಾದ ನಂದಿ ಆಂಜಿನಪ್ಪ, ಜಿಲ್ಲಾ ಕಾಂಗ್ರೆಸ್‌ ಅದ್ಯಕ್ಷ ಕೆ.ಎನ್‌.ಕೇಶವರೆಡ್ಡಿಗೆ ಬೋರ್ಡ ಅಧ್ಯಕ್ಷರನ್ನಾಗಿಸಿ, ಯಲುವಳ್ಳಿ ರಮೇಶ್‌ಗೆ ಎಂಎಲ್‌ಸಿ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಸುಖಾಸುಮ್ಮನೆ ಸಂಘಟನೆಗಳ ಬ್ಯಾನ್‌ ಇಲ್ಲ: ಸಚಿವ ಡಾ.ಜಿ.ಪರಮೇಶ್ವರ್‌

ಸಚಿವ ಡಾ.ಎಂ.ಸಿ. ಸುಧಾಕರ್‌ಗೆ ವೈದ್ಯಕೀಯ ಶಿಕ್ಷಣ ಖಾತೆ ದೊರೆಯಲಿದೆ ಎನ್ನಲಾಗಿತ್ತು. ಆದರೆ ಈಗ ಉನ್ನತ ಶಿಕ್ಷಣ ಖಾತೆ ಸಿಗುವ ಸಾಧ್ಯತೆ ಇದ್ದು, ಅವರು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಇದೇ ವೇಳೆಪೆರೇಸಂದ್ರ ಜೋಳದ ಕಿಟ್ಟಿ,ಅಡ್ಡಗಲ್‌ ಶ್ರೀಧರ್‌, ಡ್ಯಾನ್ಸ್‌ ಸೀನ, ಸುನಿಲ್‌, ದಯಾನಂದ್‌ ಇತರರು ಇದ್ದರು.

click me!