ಬೆಂಗಳೂರು ಪೊಲೀಸರು ವರ್ಗಾವಣೆ ಕೇಳಿದ್ರೆ ಕಡ್ಡಾಯ ನಿವೃತ್ತಿ, ಇದೆಂಥಾ ಆದೇಶ?

By Web DeskFirst Published Nov 21, 2018, 8:28 PM IST
Highlights

ಅನಾರೋಗ್ಯದ ನಿಮಿತ್ತ ವರ್ಗಾವಣೆ ಕೇಳಿದರೆ ಬೆಂಗಳೂರು ಪೊಲೀಸರು ಕಡ್ಡಾಯ ನಿವೃತ್ತಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಪೊಲೀಸ್ ಇಲಾಖೆ ಇಂಥದ್ದೊಂದು ಆದೇಶ ಹೊರಡಿಸಿದ್ದು ಹಲವಾರು ಪ್ರಶ್ನೆಗಳನ್ನು ಎತ್ತಿದೆ.

ಬೆಂಗಳೂರು[ನ.21] ಬೆಂಗಳೂರು ಜಿಲ್ಲೆಗೆ ಸಂಬಂಧಿಸಿದ ಪೊಲೀಸ್ ಘಟಕದಲ್ಲಿ ಕೆಲಸ ಮಾಡುತ್ತಿರುವ ಎಎಸ್‌ಐ, ಸಿಎಚ್‌ಸಿ, ಸಿಪಿಸಿಗಳು ಅನಾರೋಗ್ಯದ ಕಾರಣ ನೀಡಿ ವರ್ಗಾವಣೆ ಕೇಳುವಂತಿಲ್ಲ. ಕೇಳಿದರೆ ಕಡ್ಡಾಯ ವರ್ಗಾವಣೆಗೆ ಗುರಿಯಾಗಬೇಕಾಗುತ್ತದೆ.

ಬೆಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕರು ಇಂಥದ್ದೊಂದು ಆದೇಶವನ್ನು ನವೆಂಬರ್ 19 ರಂದೇ ನೀಡಿದ್ದಾರೆ.  ಪೊಲೀಸ್ ಸಿಬ್ಬಂದಿ ಅನಾರೋಗ್ಯದ ಕಾಣ ಮಾತ್ರ ನೀಡುತ್ತಿದ್ದು ವೖದ್ಯಕೀಯ ದಾಖಲೆ ಸಲ್ಲಿಕೆ ಮಾಡುತ್ತಿಲ್ಲ. ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ ಕಾರಣಗಳನ್ನು ನೀಡಿ ವರ್ಗಾವಣೆ ಕೇಳಲಾಗುತ್ತಿರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಇನ್ನು ಮುಂದೆ ಮೇಲಧಿಕಾರಿಗಳಿಗೂ ಗೊತ್ತಿಲ್ಲದೆ ಅರ್ಜಿ ಸಲ್ಲಿಸಿದರೆ ಅಂಥವರನ್ನು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಲು ಅನರ್ಹರು ಎಂದು ಪರಿಗಣಿಸಿ ಕೆಸಿಎಸ್‌ಆರ್ ನಿಯಮ 285 ರ ಅಡಿ ಕಡ್ಡಾಯ ನಿವೃತ್ತಿ ನೀಡಲಾಗುತ್ತದೆ ಎಂದು ಆದೇಶ ಸ್ಪಷ್ಟಪಡಿಸಿದೆ.

click me!