ಉಗ್ರರ ವಾಸ್ತವ್ಯ : ಬೆಂಗಳೂರಿನ ಪಿಜಿಗಳ ಮೇಲೆ ಪೊಲೀಸರ ಹದ್ದಿನ ಕಣ್ಣು

By Suvarna News  |  First Published Dec 4, 2019, 11:15 AM IST

ಬೆಂಗಳೂರಿನಲ್ಲಿರುವ ಪಿಜಿಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಉಗ್ರ ವಾಸ್ತವ್ಯ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. 


ಬೆಂಗಳೂರು [ಡಿ.04]: ಬೆಂಗಳೂರಿನ ಸೋಲದೇವನಹಳ್ಳಿಯ ಪಿಜಿಯಲ್ಲಿ ಭಯೋತ್ಪಾದಕರು ವಾಸ್ತವ್ಯ ಹೂಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚು ಅಲರ್ಟ್ ಆಗಿದ್ದಾರೆ. 

ಪಿಜಿ ಮಾಲಿಕರು ವಾರಕ್ಕೊಮ್ಮೆ ಪಿಜಿಗಳಲ್ಲಿ ವಾಸ್ತವ್ಯ ವಿವರ ನೀಡಲು ಸೂಚನೆ ಪೊಲೀಸರು ಸೂಚನೆ ನೀಡಿದ್ದು, ಪಿಜಿಗಳಲ್ಲಿ ವಾಸ್ತವ್ಯ ಹೂಡಿರುವವರ ಬಗ್ಗೆ ಸಂಪೂರ್ಣ ಮಾಹಿತಿ ಇರಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. 

Tap to resize

Latest Videos

ಅಲ್ಲದೇ ಪ್ರತಿನಿತ್ಯ ಪಿಜಿಗೆ ಬಂದು ಹೋಗುವವರ ಬಗ್ಗೆ ವಿವರ ಕಲೆಹಾಕಬೇಕು.  ರಾಷ್ಟ್ರ ವಿರೋಧಿ, ಉಗ್ರಗಾಮಿ ಚಟುವಟಿಕೆ, ಭಯೋತ್ಪಾದ ಕತೆಯ ಪಿಜಿ ಮಾಲಿಕರು ನಿಗಾ ಇಡುಬೇಕು. ರಾಷ್ಟ್ರ ವಿರೋಧಿ, ದುಷ್ಕತ್ಯಗಳಲ್ಲಿ  ಭಾಗಿಯಾಗುವವರಿಗೆ ವಾಸ್ತವ್ಯ ಹೂಡಲು ಅವಕಾಶ ನೀಡಬಾರದು ಎಂದು ಪೊಲೀಸರು ಸೂಚನೆ ನೀಡಿದ್ದಾರೆ. 

ಬೆಂಗಳೂರಿನ ಸೌತ್ ಈಸ್ಟ್ ಪೊಲೀಸರು ಪಿಜಿ ಓನರ್ ಗಳ ಜೊತೆ ಸಭೆ ನಡೆಸಿದ್ದು, ಸಭೆಯಲ್ಲಿ ಮಹತ್ವದ ಸೂಚನೆಗಳನ್ನು ನೀಡಲಾಗಿದೆ. ಪಿಜಿಗೆ ಸೇರುವವರಿಂದ ಕೆಲವು ದಾಖಲೆಗಳನ್ನು ಸಂಗ್ರಹಿಸಿಡುವುದು. ಓಟರ್ ಐಡಿ, ಆಧಾರ್ ಕಾರ್ಡ್, ಕಾಲೇಜ್ ಐಡಿ ಕಾರ್ಡ್ ಗಳನ್ನು ಪಡೆದುಕೊಳ್ಳುವುದು ಕಡ್ಡಾಯ. ಪೂರ್ವಾಪರ ವಿಚಾರಣೆ ಮಾಡದೇ ನೆಲೆಗೆ ಅವಕಾಶ ಕಲ್ಪಿಸಬಾರದು ಎಂದು ತಿಳಿಸಿದ್ದಾರೆ. 

ಒಂದು ವೇಳೆ ಪಿಜಿಯಲ್ಲಿ ವಾಸ ಇರುವವರ ಬಗ್ಗೆ ಯಾವುದೇ ರೀತಿಯ ಅನುಮಾನ ಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಲಾಗಿದೆ.  

ಓ ಮೈ ಗಾಡ್! ಬೆಂಗ್ಳೂರಲ್ಲಿ ಸೇಫ್‌ ಅಲ್ಲ ATM ಮಶೀನ್ ಮತ್ತು ATM ಕಾರ್ಡ್!...

ಪಿಜಿ ಮಾಲೀಕರು ಭದ್ರತಾ ಕ್ರಮಗಳನ್ನು ಅನುಸರಿಸಬೇಕು. ಪಿಜಿಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಸೆಕ್ಯೂರಿಟಿ ಗಾರ್ಡುಗಳನ್ನು ನೇಮಿಸಬೇಕು. ರಿಜಿಸ್ಟರ್ ಇಟ್ಟು ಅದರಲ್ಲಿ ಪ್ರತಿಯೊಬ್ಬರ ಹೆಸರು ನಮೂದಿಸಬೇಕು ಎಂದಿದ್ದಾರೆ. 

ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್  ಸೂಚನೆ ನೀಡಿದ್ದು, ಪಿಜಿಗಳನ್ನು ನಡೆಸಲು ಲೈಸೆನ್ಸ್ ಪಡೆಯುವುದು ಕಡ್ಡಾಯ ಎಂದು ತಿಳಿಸಿದ್ದಾರೆ. ಇನ್ನು ಎಲ್ಲಾ ಪಿಜಿಗಳ ಮೇಲೆ ಹದ್ದಿನ ಕಣ್ಣು ಇಟ್ಟಿದ್ದಾರೆ. 

click me!