ಬೆಂಗಳೂರು ಭಿಕ್ಷುಕರಿಗೆ ಬಿಗ್ ಶಾಕ್

Suvarna News   | Asianet News
Published : Feb 16, 2021, 12:12 PM ISTUpdated : Feb 16, 2021, 01:06 PM IST
ಬೆಂಗಳೂರು ಭಿಕ್ಷುಕರಿಗೆ ಬಿಗ್ ಶಾಕ್

ಸಾರಾಂಶ

ಬೆಂಗಳೂರು ಭಿಕ್ಷುಕರಿಗೆ ಬಿಗ್ ಶಾಕ್ ನೀಡಿದ್ದಾರೆ ಪೊಲೀಸ್ ಕಮಿಷನರ್. ಇನ್ಮುಂದೆ ಟ್ರಾಫಿಕ್ ಸಿಗ್ನಲ್‌ನಲ್ಲಿ ಭಿಕ್ಷೆ ಬೇಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. 

ಬೆಂಗಳೂರು (ಫೆ.16):  ಬೆಂಗಳೂರಿನ ಟ್ರಾಫಿಕ್ ಸಿಗ್ನಲ್ ನಲ್ಲಿ ಭಿಕ್ಷೆ ಬೇಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ  ಪೊಲೀಸ್ ಕಮಿಷನರ್ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.

ಭಿಕ್ಷುಕರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಭಿಕ್ಷೆ ಬೇಡುವುದನ್ನು ನಿಲ್ಲಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. 

ಭಿಕ್ಷೆ ಬೇಡುವಾಗ ಹಣ ಕೊಡದವರ ಜೊತೆ ಅನುಚಿತ ವರ್ತನೆ ಮಾಡುತ್ತಿರುವುದು ಕಂಡು ಬರುತ್ತಿದೆ. ಹೀಗಾಗಿ ಟ್ರಾಫಿಕ್ ಸಿಗ್ನಲ್ ನಲ್ಲಿ ಭಿಕ್ಷೆ ಬೇಡುವುದನ್ನು ತಪ್ಪಿಸುವಂತೆ ಸೂಚನೆ  ನೀಡಿದ್ದಾರೆ. 

ವೃದ್ಧ ಭಿಕ್ಷುಕಿಯಿಂದ ಸಾಲಿಗ್ರಾಮ ದೇವಾಲಯಕ್ಕೆ 1ಲಕ್ಷ ದೇಣಿಗೆ ! .

ಲಾ ಅಂಡ್ ಆರ್ಡರ್ ಹಾಗೂ ಟ್ರಾಫಿಕ್ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಲು ಸೂಚನೆ ನೀಡಿದ್ದು, ಎಲ್ಲಾ ಡಿಸಿಪಿ ವಿಭಾಗಗಳಲ್ಲಿ ಭಿಕ್ಷೆ ಬೇಡುವುದನ್ನು ತಪ್ಪಿಸಲು ಆದೇಶ ನೀಡಿದ್ದಾರೆ. 

ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಕಮಿಷನರ್ ಸೂಚನೆ ನೀಡಿದ್ದಾರೆ. 

PREV
click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
New Hate-Speech Law: ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!