ಮದುವೆಗೊಪ್ಪದ ಸಾಕು ಮಗಳು : ನೇಣು ಬಿಗಿದುಕೊಂಡು ಅಪ್ಪ ಅಮ್ಮ ಆತ್ಮಹತ್ಯೆ

Kannadaprabha News   | Asianet News
Published : Feb 16, 2021, 09:42 AM IST
ಮದುವೆಗೊಪ್ಪದ ಸಾಕು ಮಗಳು : ನೇಣು ಬಿಗಿದುಕೊಂಡು ಅಪ್ಪ ಅಮ್ಮ ಆತ್ಮಹತ್ಯೆ

ಸಾರಾಂಶ

ಮಕ್ಕಳಿಲ್ಲದ ಕಾರಣ ಸಾಕಿ ಬೆಳೆಸಿದ್ದ ಮಗಳು ತಾವು ತೋರಿಸಿದ ವರನನ್ನು ವಿವಾಹವಾಗಲು ಒಪ್ಪದ ಕಾರಣ ತಂದೆ ತಾಯಿ ಇಬ್ಬರೂ  ಆತ್ಮಹತ್ಯೆಗೆ ಶರಣಾದ ಘಟನೆ ಹಾಸನದಲ್ಲಿ ನಡೆದಿದೆ. 

ಹಾಸನ (ಫೆ.16):  ಸಾಕಿ ಬೆಳೆಸಿದ ಮಗಳು ತಾವು ತೋರಿಸಿದ ವರನನ್ನು ಮದುವೆಯಾಗಲು ಒಪ್ಪದೆ ಬೇರೊಬ್ಬನನ್ನು ಪ್ರೀತಿಸಿದ್ದರಿಂದ ನೊಂದ ಪುಟ್ಟರಾಜು(58) ಹಾಗೂ ಕಾಂತಮ್ಮ(53) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಪುಟ್ಟರಾಜು ಹಾಗೂ ಕಾಂತಮ್ಮ ಅವರಿಗೆ ಮಕ್ಕಳಿರಲಿಲ್ಲ. ಇದರಿಂದ ಕಾಂತಮ್ಮ ಅವರ ಅಕ್ಕನ ಮಗ ಹಾಗೂ ತಂಗಿಯ ಮಗಳನ್ನು ದತ್ತು ಪಡೆದು ಚಿಕ್ಕಂದಿನಿಂದ ತಾವೇ ಸಾಕಿ ಬೆಳೆಸಿ, ಓದಿಸಿದ್ದರು. 

ತಾಯಿ ಅಂತ್ಯ ಸಂಸ್ಕಾರ ಮುಗಿಸಿ ಬಂದ ಮಗನೂ ಸಾವು ...

2 ವರ್ಷಗಳ ಹಿಂದೆ ಮಗನಿಗೆ ಮದುವೆ ಮಾಡಿದ್ದರು. ಮದುವೆಯಾದ ನಂತರ ಮಗ ಇಲ್ಲಸಲ್ಲದ ಕಾರಣ ತೆಗೆದು ಬೂವನಹಳ್ಳಿಯಲ್ಲಿರುವ ತನ್ನ ಹೆತ್ತಮ್ಮನ ಮನೆ ಸೇರಿಕೊಂಡ. ಇದರಿಂದ ಪುಟ್ಟರಾಜು ಹಾಗೂ ಕಾಂತಮ್ಮ ತೀವ್ರವಾಗಿ ಖಿನ್ನತೆಗೆ ಒಳಗಾಗಿದ್ದರು.

ಈ ನಡುವೆ ಮಗಳಿಗೆ ಮದುವೆ ಮಾಡಲು ಸಿದ್ಧತೆ ನಡೆಸಿ ಅರಕಲಗೂಡು ತಾಲೂಕಿನ ಹಂಡ್ರಂಗಿ ಗ್ರಾಮದ ಹುಡುಗನ ಜತೆ ಫೆ.14 ರಂದು ನಿಶ್ಚಿತಾರ್ಥ ಇಟ್ಟುಕೊಂಡಿದ್ದರು. ಆದರೆ ಮಗಳು ನಿಶ್ವಿತಾರ್ಥಕ್ಕೆ ಸುತಾರಾಂ ಒಪ್ಪಲೇ ಇಲ್ಲ. ಇದಕ್ಕೆ ಕಾರಣ ಅವಳು ಬೇರೊಬ್ಬನನ್ನು ಪ್ರೀತಿಸುತ್ತಿದ್ದಳು. ಮಗಳನ್ನು ಎಷ್ಟೇ ಮನವೊಲಿಸಿದರೂ ಒಪ್ಪದೇ ಅವಳೇ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿದ್ದಳು. ಕಡೆಗೆ ನಿಶ್ಚಿತಾರ್ಥ ಕಾರ್ಯಕ್ರಮ ಮುರಿದುಬಿತ್ತು. ಕುಟುಂಬದ ಗೌರವ ಹಾಳಾಯಿತು ಎಂದು ನೊಂದ ದಂಪತಿ ನೇಣು ಬಿಗಿದುಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

PREV
click me!

Recommended Stories

ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ
ಬೆಂಗಳೂರು ಕಬ್ಬನ್‌ಪಾರ್ಕ್‌ ಪುಷ್ಪ ಪ್ರದರ್ಶನಕ್ಕೆ ಇಂದು ತೆರೆ