ಬೆಂಗಳೂರು ಉತ್ತರ ವಿವಿಯಲ್ಲಿ ₹35,000 ಸಂಬಳದ ಹುದ್ದೆಗಳಿಗೆ ಅರ್ಜಿ ಆಹ್ವಾನ: ಪರೀಕ್ಷೆ ಇಲ್ಲ, ಅರ್ಜಿ ಶುಲ್ಕವೂ ಇಲ್ಲ!

Published : Nov 04, 2026, 08:22 AM IST
Bengaluru north University Jobs

ಸಾರಾಂಶ

ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು (BNU) 5 'ಸೂಪರ್ ಸ್ಕಿಲ್ಡ್ ಅಸಿಸ್ಟೆಂಟ್' ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಬಿ.ಟೆಕ್, ಬಿ.ಇ ಅಥವಾ ಎಂ.ಎಸ್ಸಿ ಮುಗಿಸಿದವರು ಅರ್ಜಿ ಸಲ್ಲಿಸಬಹುದು. ಯಾವುದೇ ಲಿಖಿತ ಪರೀಕ್ಷೆ ಮತ್ತು ಅರ್ಜಿ ಶುಲ್ಕವಿಲ್ಲದೆ ನೇರ ಸಂದರ್ಶನದ ಮೂಲಕ ಆಯ್ಕೆ ನಡೆಯಲಿದ್ದು, ನವೆಂಬರ್ 16 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಬೆಂಗಳೂರು/ಕೋಲಾರ (ನ.04): ಕರ್ನಾಟಕದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಮುಗಿಸಿ ಉದ್ಯೋಗ ಹುಡುಕುತ್ತಿರುವ ಯುವಜನತೆಗೆ ಇಲ್ಲಿದೆ ಒಂದು ಉತ್ತಮ ಅವಕಾಶ. ಕೋಲಾರದಲ್ಲಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು (BNU) ತಾತ್ಕಾಲಿಕ ನೆಲೆಯಲ್ಲಿ ‘ಸೂಪರ್ ಸ್ಕಿಲ್ಡ್ ಅಸಿಸ್ಟೆಂಟ್’ (Super Skilled Assistant) ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ವಿಶೇಷವೆಂದರೆ, ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ ಹಾಗೂ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವನ್ನು ನಿಗದಿಪಡಿಸಿಲ್ಲ. ಕೇವಲ ನೇರ ಸಂದರ್ಶನದ ಮೂಲಕವೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಹುದ್ದೆಯ ಪ್ರಮುಖ ವಿವರಗಳು:

  • ನೇಮಕಾತಿ ಸಂಸ್ಥೆ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ (BNU)
  • ಹುದ್ದೆಯ ಹೆಸರು: ಸೂಪರ್ ಸ್ಕಿಲ್ಡ್ ಅಸಿಸ್ಟೆಂಟ್
  • ಒಟ್ಟು ಹುದ್ದೆಗಳು: 05
  • ಮಾಸಿಕ ವೇತನ: ಪ್ರತಿ ತಿಂಗಳು ₹35,000/-
  • ಕೆಲಸದ ಸ್ಥಳ: ತಮಕ, ಕೋಲಾರ (ಕರ್ನಾಟಕ)
  • ಆಯ್ಕೆ ಪ್ರಕ್ರಿಯೆ: ನೇರ ಸಂದರ್ಶನ (Interview)
  • ಅರ್ಜಿ ಶುಲ್ಕ: ಯಾವುದೇ ಶುಲ್ಕವಿಲ್ಲ (ಉಚಿತ)

ಶೈಕ್ಷಣಿಕ ವಿದ್ಯಾರ್ಹತೆ:

ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಟೆಕ್ (B.Tech), ಬಿ.ಇ (B.E) ಅಥವಾ ಎಂ.ಎಸ್ಸಿ (M.Sc) ಪದವಿಯನ್ನು ಪೂರ್ಣಗೊಳಿಸಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಧಿಸೂಚನೆ ಮತ್ತು ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಸ್ಪಷ್ಟವಾಗಿ ಭರ್ತಿ ಮಾಡಿ. ಶೈಕ್ಷಣಿಕ ಅಂಕಪಟ್ಟಿಗಳು ಹಾಗೂ ಅಗತ್ಯ ದಾಖಲೆಗಳ ಎರಡು ಜೆರಾಕ್ಸ್ ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ. ಭರ್ತಿ ಮಾಡಿದ ಅರ್ಜಿಯನ್ನು ನವೆಂಬರ್ 16ರ ಸಂಜೆ 5:00 ಗಂಟೆಯೊಳಗೆ ಕೆಳಕಂಡ ವಿಳಾಸಕ್ಕೆ ತಲುಪುವಂತೆ ಸಲ್ಲಿಸಬೇಕು.

ಅರ್ಜಿ ಸಲ್ಲಿಸಬೇಕಾದ ವಿಳಾಸ:
ರಿಜಿಸ್ಟ್ರಾರ್ (ಕುಲಸಚಿವರು),
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ,
ಆಡಳಿತ ಕಚೇರಿ, ಶ್ರೀ ದೇವರಾಜ್ ಅರಸು ಲೇಔಟ್,
ತಮಕ, ಕೋಲಾರ – 563103.

PREV
Read more Articles on
click me!

Recommended Stories

ಅಡಕೆ-ವೀಳ್ಯೆದೆಲೆ ಸೇವನೆಯಿಂದ ಕ್ಯಾನ್ಸರ್ ಬರೋಲ್ಲ, ಗುಣವಾಗುತ್ತೆ: ತುಮ್‌ ಕೋಸ್ ಅಧ್ಯಕ್ಷರ ಅಚ್ಚರಿಯ ಹೇಳಿಕೆ! ಏನಿದು ಪೊಗಸಾರಂ?
ಬೇಡ್ತಿ ಅಘನಾಶಿನಿ ನದಿ ಜೋಡಣೆಗೆ ಭಾರೀ ಜನಾಕ್ರೋಶ, ವಿರೋಧದ ನಡುವೆ ಬೆಳಗ್ಗೆ ಹಾರಾಡಿದ ನಿಗೂಢ ವಿಮಾನ ಯಾವುದು?