Video: ಉತ್ತರ ಭಾರತೀಯರ ದಿವಾಳಿ Vs ಕನ್ನಡ ದೀಪಾವಳಿ ವ್ಯತ್ಯಾಸ ತಿಳಿಸಿದ ವಿಕ್ಕಿಪೀಡಿಯಾ

By Sathish Kumar KH  |  First Published Oct 29, 2024, 12:49 PM IST

ಕನ್ನಡಿಗರ ದೀಪಾವಳಿ ಹಬ್ಬವನ್ನು ಉತ್ತರ ಭಾರತದಲ್ಲಿ ದಿವಾಳಿ ಎಂದು ಕರೆಯಲಾಗುತ್ತದೆ. ಈ ಹೆಸರಿನ ವ್ಯತ್ಯಾಸದಿಂದ ಉಂಟಾಗುವ ಗೊಂದಲಗಳನ್ನು ವಿವರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಿವಾಳಿ ಎಂಬ ಪದಕ್ಕೆ ಕನ್ನಡದಲ್ಲಿ ಬೇರೆಯದ್ದೇ ಅರ್ಥವಿರುವುದರಿಂದ ಈ ಗೊಂದಲ ಉಂಟಾಗುತ್ತದೆ.


ಬೆಂಗಳೂರು (ಅ.29): ದೇಶದಾದ್ಯಂತ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಉತ್ತರ ಭಾರತದಲ್ಲಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ದೀಪಾವಳಿ ಹಬ್ಬವನ್ನು ದಿವಾಳಿ (DIWALI) ಎಂದು ಕರೆಯಲಾಗುತ್ತದೆ. ಹೀಗಾಗಿ, ಸೋಷಿಯಲ್ ಮೀಡಿಯಾ ಇನ್ಪ್ಯೂಯೆನ್ಸರ್ ವಿಕ್ಕಿಪೀಡಿಯಾ ಅವರು ಹಾಡಿನ ಮೂಲಕ ದೀಪಾವಳಿ ಹಾಗೂ ದಿವಾಳಿಗೂ ಇರುವ ವ್ಯತ್ಯಾಸವನ್ನು ತಿಳಿಸಿಕೊಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ 1.3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದಿದೆ.

ದೀಪಾವಳಿ ಹಬ್ಬ ಎಂದರೆ ಎಲ್ಲರೂ ಇಷ್ಟಪಡುವ ಹಬ್ಬ. ಇದನ್ನು ದೀಪದ ಹಬ್ಬ, ಬೆಳಕಿನ ಹಬ್ಬ, ಪಟಾಕಿ ಹಬ್ಬ ಎಂತಲೂ ಕರೆಯುತ್ತಾರೆ. ದೀಪಾವಳಿ ಹಬ್ಬಕ್ಕೆ ಪ್ರತಿ ಹಿಂದೂಗಳ ಮನೆಗಳ ಮುಂದೆ ಮಿನುಗುವ ದೀಪಗಳು, ಎಲ್ಲೆಡೆ ಪಟಾಕಿ ಶಬ್ದಗಳು ಕಂಡುಬರುತ್ತದೆ. ದಕ್ಷಿಣ ಭಾರದ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ರಾಜ್ಯಗಳು ಸೇರಿದಂತೆ ಎಲ್ಲ ದಕ್ಷಿಣದ ರಾಜ್ಯಗಳಿಗಿಂತ ಉತ್ತರ ಭಾರತದಲ್ಲಿ ದೀಪಾವಳಿಯನ್ನು ಭರ್ಜರಿಯಾಗಿ ಆಚರಣೆ ಮಾಡಲಾಗುತ್ತದೆ. ಆದರೆ, ದೀಪಾವಳಿ ಹಬ್ಬಕ್ಕೆ ಅವರು ದಿವಾಳಿ ಎಂದು ಕರೆಯುತ್ತಾರೆ. ಆದರೆ, ಈ ಮಾತು ಕರ್ನಾಟಕದಲ್ಲಿ ದಿವಾಳಿ ಎಂಬ ಪದಕ್ಕೆ ಬೇರೆಯದ್ದೇ ಅರ್ಥವಿದೆ.

Tap to resize

Latest Videos

undefined

ಉತ್ತರ ಭಾರತದಿಂದ ಬೆಂಗಳೂರಿಗೆ ದುಡಿಮೆ, ಉದ್ಯಮ ಹಾಗೂ ವ್ಯಾಪಾರಕ್ಕೆ ಬಂದ ಲಕ್ಷಾಂತರ ಜನರು ಬೆಂಗಳೂರು ನಿವಾಸಿಗಳಾಗಿಯೇ ಆಗಿ ಹೋಗಿದ್ದಾರೆ. ಆದರೆ, ಅವರೆಲ್ಲರೂ ದೀಪಾವಳಿ ಹಬ್ಬಕ್ಕೆ ದಿವಾಳಿ ಎಂದು ಹೇಳುವುದು ಸಾಮಾನ್ಯವಾಗಿದೆ. ಇನ್ನು ಬೆಂಗಳೂರಿನ ಒಂದು ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ಕನ್ನಡಿಗರು ಮತ್ತು ಉತ್ತರ ಭಾರತೀಯ ಕುಟುಂಬದವರು ವಾಸವಿದ್ದರೆ ಅವರ ನಡುವೆ ಎಲ್ಲ ಹಬ್ಬದ ಶುಭಾಶಯಗಳು ಕೂಡ ವಿನಿಮಯ ಆಗುತ್ತವೆ. ಆಗ ಉತ್ತರ ಭಾರತದ ಹುಡುಗಿ ಬಂದು ಕನ್ನಡದ ವರ ಮನೆಗೆ ಹ್ಯಾಪಿ ದಿವಾಳಿ ಎಂದು ಶುಭ ಕೋರುತ್ತಾಳೆ. ಆಗ ದಿವಾಳಿ ಅಲ್ಲ, ದೀಪಾವಳಿ ಎಂದು ಕನ್ನಡದ ಮಹಿಳೆ ತಿದ್ದಿ ಹೇಳುತ್ತಾರೆ. ಇದಕ್ಕೆ ಹೂ ಎನ್ನುವ ಯುವತಿ ಪುನಃ ಹ್ಯಾಪಿ ದಿವಾಳಿ ಎಂದು ಶುಭ ಕೋರಿ ಅಲ್ಲಿಂದ ನಗುತ್ತಾ ಹೋಗುತ್ತಾಳೆ.

ಇದನ್ನೂ ಓದಿ: ಬೆಂಗಳೂರು: ಚಿನ್ನದ ಸರ ವಾಪಸ್ ಕೊಟ್ಟ ಪ್ರಾಮಾಣಿಕ ಆಟೋ ಚಾಲಕ

ಉತ್ತರ ಭಾರತದಿಂದ ಬೆಂಗಳೂರಿಗೆ ಬಂದು ಸುಮಾರು ಹತ್ತಾರು ವರ್ಷಗಳು ಕಳೆದವರು ಕೂಡ ಈಗಲೂ ದೀಪಾವಳಿಗೆ ದಿವಾಳಿ ಎಂತಲೇ ಕರೆಯುತ್ತಾರೆ. ಇನ್ನು ಕನ್ನಡದ ವ್ಯಕ್ತಿ ಅಲ್ಲಿಂದ ಬಂದವರಿಗೆ ದಿವಾಳಿ ಅಲ್ಲ, ದೀಪಾವಳಿ ಎಂಬುದನ್ನು ಕಳೆದ 10 ವರ್ಷಗಳಿಂದ ಹೇಳಿ ಕೊಡುತ್ತಲೇ ಬಂದಿದ್ದೇವೆ. ಆದರೆ, ಈವರೆಗೆ ಅವರು ಅದನ್ನು ತಿದ್ದಿಕೊಂಡಿಲ್ಲ. ದಿವಾಳಿ ಎಂದರೆ ಹಣವನ್ನು ಕಳೆದುಕೊಂಡು ಬೀದಿಗೆ ಬೀಳುವುದು ಎಂದರ್ಥ. ಹೀಗಾಗಿ, ದಿವಾಳಿ ಎನ್ನಬೇಡಿ ಎಂದು ಹೇಳಿ ಹೇಳಿ ಸಾಕಾಯ್ತು. ಅದನ್ನು ಯಾವಾಗ ತಿದ್ದಿಕೊಳ್ಳುತ್ತಾರೋ ಗೊತ್ತಿಲ್ಲ ಎಂದು ಹಣೆ ಮೇಲೆ ಕೈ ಇಟ್ಟುಕೊಳ್ಳುತ್ತಾರೆ. ಒಟ್ಟಾರೆ, ಭಾರತ ವಿವಿಧತೆಯಲ್ಲಿ ಏಕತೆ ಇರುವ ದೇಶ ಎನ್ನುವುದಕ್ಕೆ ಈ ಹಬ್ಬಗಳ ಆಚರಣೆಯೂ ಒಂದಾಗಿದೆ.

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ವಿಕ್ಕಿಪಿಡಿಯಾ ಅವರು ಹಂಚಿಕೊಂಡಿರುವ ದೀಪಾವಳಿ ಹಾಗೂ ದಿವಾಳಿ ಕುರಿತ ವಿಡಿಯೋವನ್ನು ಬರೋಬ್ಬರಿ 2.7 ಲಕ್ಷಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ. ಇನ್ನು ಈ ವಿಡಿಯೋಗೆ ಹಲವು ಸಿನಿಮಾ ಮತ್ತು ಧಾರಾವಾಹಿ ನಟಿಯರೂ ಕೂಡ ಲೈಕ್ ಮಾಡಿ ಕಾಮೆಂಟ್ ಮಾಡಿದ್ದಾರೆ. ಕನ್ನಡದಲ್ಲಿ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಶುಭ ಕೋರಿದ್ದಾರೆ. ಇನ್ನು ಉತ್ತರ ಭಾರತೀಯರೊಬ್ಬರು ಈ ವಿಡಿಯೋ ಕಾಮೆಂಟ್ ಮಾಡುತ್ತಾ 'ಹಿಂದು ಭಾಂಧವರೇ ದೀಪಾವಳಿ ಹಬ್ಬದ ಶುಭಾಶಯ ಎನ್ನುವುದು ತಪ್ಪು, ದಿವಾಳಿ ಹಬ್ಬದ ಹಾರ್ದಿಕ್ ಶುಭಾಶಯ್ ಸರಿ' ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಇಲ್ಲಿ ಆಸ್ತಿ ಮಾಡೋಕೆ ಅಲ್ಲಾ ಏನು ಭಾರತದವನಾ? ನೋಟೀಸ್ ಕೊಡೋಕೆ ಇವರಪ್ಪನ ಮನೆ ಆಸ್ತೀನಾ? ಪ್ರಹ್ಲಾದ್ ಜೋಶಿ!

click me!