'ಬೆಂಗಳೂರು ರಸ್ತೆಗಳ ನಿರ್ವಹಣೆ ಬಿಬಿಎಂಪಿ ಬದಲು ELCITA ಮಾಡಲಿ..' ಸರ್ಕಾರಕ್ಕೆ ಆಗ್ರಹಿಸಿದ ಕಿರಣ್ ಮಜುಂದಾರ್ ಶಾ

By Santosh Naik  |  First Published Oct 28, 2024, 7:26 PM IST

ಬೆಂಗಳೂರಿನ ರಸ್ತೆಗಳ ದುರಸ್ತಿ ಹಾಗೂ ನಿರ್ವಹಣೆಗೆ ಬಿಬಿಎಂಪಿ ಗುತ್ತಿಗೆದಾರರನ್ನು ಅವಲಂಬಿಸುವ ಬದಲು ELCITA ಗೆ ವಹಿಸಬೇಕು ಎಂದು 71 ವರ್ಷದ ಉದ್ಯಮಿ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.


ಬೆಂಗಳೂರು (ಅ.28): ಸಿಲಿಕಾನ್‌ ಸಿಟಿ ಎಂದು ಜಗತ್ತಿಗೆಲ್ಲಾ ಹೇಳುತ್ತಿದ್ದರೂ, ಬೆಂಗಳೂರಿನ ಕುಸಿಯುತ್ತಿರುವ ಮೂಲ ಸೌಕರ್ಯಗಳ ಬಗ್ಗೆ ಸಾರ್ವಜನಿಕರ ಆಕ್ರೋಶ ಮಾತ್ರ ನಿರಂತರವಾಗಿದೆ. ಇದಕ್ಕೆ ಬಯೋಕಾನ್‌ ಸಂಸ್ಥಾಪಕಿ ಕಿರಣ್‌ ಮಜುಂದಾರ್‌ ಶಾ ಬೆಂಗಳೂರಿನ ಗುಂಡಿಗಳ ಬಗ್ಗೆ ಹೊಸ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಗುಂಡಿಗಳಿಂದ ಕೂಡಿದ ರಸ್ತೆಗಳನ್ನು ದುರಸ್ತಿ ಹಾಗೂ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಪರಿಹಾರವನ್ನು ಪ್ರಸ್ತಾಪ ಮಾಡಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗುತ್ತಿಗೆದಾರರನ್ನು ಅವಲಂಬಿಸುವ ಬದಲು ನಗರದ ರಸ್ತೆಗಳ ನಿರ್ವಹಣೆಯನ್ನು ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿಗೆ (ELCITA) ನಿಯೋಜಿಸಬೇಕೆಂದು 71 ವರ್ಷದ ಉದ್ಯಮಿ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, 'ನಾವು ELCITA ಹೊಂದಿರುವಾಗ, ಹೆಚ್ಚಿನ ವಾಹನಗಳು ಸೇರುವ ಟ್ರಾಫಿಕ್‌ ವಲಯಗಳಲ್ಲಿ ಕಳಪೆ ಗುಣಮಟ್ಟದ ಗುತ್ತಿಗೆದಾರರು ಏಕೆ ಬಳಸುತ್ತಿದ್ದೇವೆ ಅನ್ನೋದೇ ಅರ್ಥವಾಗುತ್ತಿಲ್ಲ..' ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಹಾಗೂ ಐಟಿ ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನು ನೇರವಾಗಿ ಪ್ರಶ್ನೆ ಮಾಡಿರುವ ಅವರು, ರಸ್ತೆಗಳ ದುರಸ್ತಿ ಹಾಗೂ ನಿರ್ವಹಣೆಗೆ ELCITA ಪರಿಣತಿಯೇ ಸಮರ್ಥ ಪರಿಹಾರ ಎಂದು ಹೇಳಿದ್ದಾರೆ.

ರಸ್ತೆಯ ಮೇಲೆ ನಿಲ್ಲುವ ನೀರುವ ಗುಂಡಿಗಳನ್‌ನು ಉಂಟು ಮಾಡುತ್ತದೆ ಎಂದು ಕಿರಣ್‌ ಮಜುಂದಾರ್‌ ಶಾ ಗಮನಸೆಳೆದಿದ್ದಾರೆ. ಅಸಮರ್ಪಕ ಒಳಚರಂಡಿ ವ್ಯವಸ್ಥೆಗಳು ಬೆಂಗಳೂರಿನ ರಸ್ತೆ ಅವನತಿಗೆ ಪ್ರಮುಖ ಕಾರಣವಾಗಿದೆ ಎಂದಿದ್ದಾರೆ. ಇದೇ ವೇಳೆ ELCITA ಮೂಲ ಸೌಕರ್ಯವನ್ನು ಅವರು ಶ್ಲಾಘಿಸಿದ್ದಾರೆ. ಇದರಲ್ಲಿ 75 ಮಳೆನೀರು ಕೊಯ್ಲು ಹೊಂಡಗಳು ಮತ್ತು ಭಾರೀ ಮಳೆಯ ಸಮಯದಲ್ಲಿ ನೀರಿನ ಹರಿವನ್ನು ತಗ್ಗಿಸಲು ವಿನ್ಯಾಸಗೊಳಿಸಲಾದ ಸಮರ್ಥ ಒಳಚರಂಡಿ ಜಾಲವನ್ನು ಒಳಗೊಂಡಿದೆ ಎಂದಿದ್ದಾರೆ.

Tap to resize

Latest Videos

ಇನ್ನೊಂದು ಚಿತ್ರವನ್ನೂ ಕೂಡ ಅವರು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಬೊಮ್ಮನಹಳ್ಳಿ ಪ್ರದೇಶ ಹೊಂಡಗಳು ಹಾಗೂ ಹದಗೆಟ್ಟ ರಸ್ತೆಗಳ ವಿರುದ್ಧ ಹೋರಾಟ ಮಾಡುತ್ತಿದೆ. ಆದರೆ, ELCITA ನಿಂದ ನಿರ್ವಹಿಸಲ್ಪಡುವ ಎಲೆಕ್ಟ್ರಾನಿಕ್ಸ್ ಸಿಟಿ ಸಂಪೂರ್ಣವಾಗಿ ಭಿನ್ನವಾಗಿದೆ. ಅಲ್ಲಿನೇ ಸ್ಥಿತಿಯೇ ಬೇರೆ ರೀತಿಯಲ್ಲಿದೆ. ವಿಚಾರ ಏನೆಂದರೆ, ಅದು ಸ್ಮಾರ್ಟ್‌ ಮ್ಯಾನೇಜ್‌ಮೆಂಟ್‌ ಎಂದು ಹೇಳಿದ್ದಾರೆ.

ಏನಿದು ELCITA: ELCITA ಬೆಂಗಳೂರಿನ ಹೊರವಲಯದಲ್ಲಿರುವ 902 ಎಕರೆ ಕೈಗಾರಿಕಾ ಟೌನ್‌ಶಿಪ್ ಅನ್ನು 300 ಕ್ಕೂ ಹೆಚ್ಚು ಕಂಪನಿಗಳಿಗೆ ನೆಲೆಯಾಗಿರುವ ಪ್ರದೇಶದ  ಪುರಸಭೆ ಮತ್ತು ತೆರಿಗೆ ಪ್ರಾಧಿಕಾರವನ್ನು ಹೊಂದಿರುವ ಶಾಸನಬದ್ಧ ಸಂಸ್ಥೆಯಾಗಿದೆ. ಎಲೆಕ್ಟ್ರಾನಿಕ್ಸ್ ಸಿಟಿ ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಕೈಗಾರಿಕಾ ಪಾರ್ಕ್‌ಗಳಲ್ಲಿ ಒಂದಾಗಿದೆ.

 

ಪಿಂಕ್ ಟ್ಯಾಕ್ಸ್ ವಿರುದ್ಧ ಜೋರಾಯ್ತು ದನಿ; ಇದು ಮಹಿಳೆಯರಿಗೆ ಕಂಪನಿಗಳು ಮಾಡ್ತಿರೋ ಅನ್ಯಾಯವಲ್ವಾ?

ಇತ್ತೀಚೆಗೆ, ಬೆಂಗಳೂರು ಮೂಲದ ಉದ್ಯಮಿಯೊಬ್ಬರು ನಗರದ ಗುಂಡಿಗಳ ಸಮಸ್ಯೆಯನ್ನು ನಿಭಾಯಿಸಲು ವಿನೂತನ ಪರಿಹಾರವನ್ನು ಹೊಂದಿದ್ದಾರೆ. ಈ ಅಪಾಯಕಾರಿ ರಸ್ತೆ ಪರಿಸ್ಥಿತಿಗಳು ಅವರಿಗೆ ಅಗತ್ಯವಿರುವ ತುರ್ತು ಗಮನವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು, ಗುಂಡಿಗಳನ್ನು ರೇಟ್ ಮಾಡಲು ಮತ್ತು ಪರಿಶೀಲಿಸಲು ಬಳಕೆದಾರರಿಗೆ ಅನುಮತಿಸುವ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಅವರು ಹೊಂದಿದ್ದಾರೆ.

ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಇನ್ಫಿ ನಾರಾಯಣಮೂರ್ತಿಯವರನ್ನು ಹಿಂದಿಕ್ಕಿದ ಕನ್ನಡದ ಸಹೋದರರು!

ಬೆಂಗಳೂರು ಮೂಲದ ಉದ್ಯಮಿ ಶಿವ ನಾರಾಯಣನ್ ಅವರು ಇತ್ತೀಚೆಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, “ಬೆಂಗಳೂರಿನಲ್ಲಿನ ಗುಂಡಿಗಳನ್ನು ರೇಟ್ ಮಾಡಲು ಮತ್ತು ಪರಿಶೀಲಿಸಲು ನಾವು ಅಪ್ಲಿಕೇಶನ್ ಅನ್ನು ನಿರ್ಮಿಸಲು ಯೋಜಿಸುತ್ತಿದ್ದೇವೆ. ನಾನು ಇತ್ತೀಚೆಗೆ 7-ಸ್ಟಾರ್ ಪಾಟ್‌ಹೋಲ್‌ ಅನ್ನು ನೋಡಿದೆ ಮತ್ತು ಅದಕ್ಕೆ ಅರ್ಹವಾದ ಮನ್ನಣೆ ಸಿಗುತ್ತಿಲ್ಲ ಎಂದು ಬೇಸರವಾಯಿತು..' ಎಂದು ವ್ಯಂಗ್ಯವಾಡಿದ್ದಾರೆ. ಒಂದು ತಿಂಗಳ ಹಿಂದೆ, ನಗರದಾದ್ಯಂತ 2,795 ಗುಂಡಿಗಳನ್ನು ಗುರುತಿಸಿದ ಬಿಬಿಎಂಪು, ಅಂದಾಜು ₹ 660 ಕೋಟಿ ವೆಚ್ಚದಲ್ಲಿ ಅವುಗಳ ದುರಸ್ತಿಗೆ ಆದೇಶ ನೀಡಿತ್ತು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ.

When we have ELCITA I don’t understand why we use substandard contractors in high density traffic zones ⁦⁩ pic.twitter.com/rqGqidJIbg

— Kiran Mazumdar-Shaw (@kiranshaw)

 

 

click me!