ಚಾಮರಾಜನಗರ: ಗ್ರಾಮದ ಹತ್ತಿರ ಕ್ರಷರ್ ನಿರ್ಮಾಣ ಮಾಡುವುದಕ್ಕೆ ಮುಂದಾದ ಪಟ್ಟಭದ್ರ ಹಿತಾಸಕ್ತಿಗಳು!

By Govindaraj SFirst Published Oct 28, 2024, 7:23 PM IST
Highlights

ಗ್ರಾಮದ ಕೂಗಳತೆ ದೂರದಲ್ಲೇ ನೂತನವಾಗಿ ಕ್ರಷರ್ ಆರಂಭಿಸಲು ಮುಂದಾದ ಪರಿಣಾಮ ರೊಚ್ಚಿಗೆದ್ದ ಗ್ರಾಮಸ್ಥರು ಪ್ರತಿಭಟಿಸಿದ್ರು. ಅಗತಗೌಡಹಳ್ಳಿ ಗ್ರಾಮಸ್ಥರ ವಿರೋಧದ ನಡುವೆ ಕ್ರಷರ್ ತೆರೆಯಲು ಮುಂದಾದವರ ವಿರುದ್ದ ಆಕ್ರೋಶ ವ್ಯಕ್ಪಡಿಸಿದ ಗ್ರಾಮಸ್ಥರು ಜಿಲ್ಲಾಡಳಿತದ ವಿರುದ್ದ ಸಿಡಿದೆದ್ದು ಪ್ರತಿಭಟಿಸಿದ್ರು. 

ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.

ಚಾಮರಾಜನಗರ (ಅ.28): ಗ್ರಾಮದ ಕೂಗಳತೆ ದೂರದಲ್ಲೇ ನೂತನವಾಗಿ ಕ್ರಷರ್ ಆರಂಭಿಸಲು ಮುಂದಾದ ಪರಿಣಾಮ ರೊಚ್ಚಿಗೆದ್ದ ಗ್ರಾಮಸ್ಥರು ಪ್ರತಿಭಟಿಸಿದ್ರು. ಅಗತಗೌಡಹಳ್ಳಿ ಗ್ರಾಮಸ್ಥರ ವಿರೋಧದ ನಡುವೆ ಕ್ರಷರ್ ತೆರೆಯಲು ಮುಂದಾದವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಜಿಲ್ಲಾಡಳಿತದ ವಿರುದ್ದ ಸಿಡಿದೆದ್ದು ಪ್ರತಿಭಟಿಸಿದ್ರು. ಜಮೀನಿನ ಮುಂದೆ ನಿಂತಿರೊ ನೂರಾರು ಗ್ರಾಮಸ್ಥರು. ನೆರೆದಿದ್ದ ಗ್ರಾಮಸ್ಥರ ಮೊಗದಲ್ಲಿ ಆಕ್ರೋಶದ ಕಟ್ಟೆ.. ಅದ್ಯಾರಿಗೊ ಹಿಡಿ ಹಿಡಿ ಶಾಪ ಹಾಕುತ್ತಿರೊ ಮಹಿಳೆಯರು. ಜೀವ ಬಿಟ್ಟೆವು ಕ್ರಷರ್ ನಿರ್ಮಾಣಕ್ಕೆ ಮಾತ್ರ ಅವಕಾಶ ನೀಡೆವೆಂದು ಪಟ್ಟು ಹಿಡಿದಿರುವ ವಯೋ ವೃದ್ಧರು. 

Latest Videos

ಈ ಎಲ್ಲಾ ದೃಶ್ಯ ಕಣ್ಣಿಗೆ ರಾಚಿದ್ದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಅಗತಗೌಡಹಳ್ಳಿಯಲ್ಲಿ. ಹೌದು ಕೈಗಾರಿಕ ಕೆಲಸಕ್ಕೆ ಅನುಮತಿ ಪಡೆದು ಈಗ 2.18 ಎಕರೆ ಜಮೀನಿನಲ್ಲಿ ನೂತನವಾಗಿ ಕ್ರಷರ್ ನಿರ್ಮಾಣಕ್ಕೆ ಮದುಸೂದನ್ ಎಂಬಾತ ಮುಂದಾಗಿದ್ದು ಇದರಿಂದ ಅಕ್ಕ ಪಕ್ಕದ ಜಮೀನಿಗೆ ಹಾಗೂ ಅಗತಗೌಡಹಳ್ಳಿ ಗ್ರಾಮಸ್ಥರಿಗೆ ಮತ್ತು ಶಾಲಾ ಮಕ್ಕಳಿಗೆ ಸಮಸ್ಯೆಯಾಗಲಿದೆ. ಇದರಿಂದ ಬೇಸತ್ತ ಅಗತಗೌಡಹಳ್ಳಿ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು ನೂತನವಾಗಿ ಕ್ರಷರ್ ನಿರ್ಮಾಣ ಮಾಡುತ್ತಿರುವ ಜಾಗದಲ್ಲಿ ಪ್ರತಿಭಟನೆ ನಡೆಸಿದ್ರು.

ಕ್ರಷರ್ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ ಯಿಂದ ನಿರಾಪೇಕ್ಷಣಾ ಪತ್ರ ನೀಡಿಲ್ಲ ಆದ್ರೆ ನಡಾವಳಿಯಲ್ಲಿ ಸೇರಿಸಿದ್ದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ. ಕ್ರಷರ್ ನಿರ್ಮಾಣವಾಗ ಬೇಕಾದ ಜಾಗದ ಪಕ್ಕದಲ್ಲೇ ಕೃಷಿ ಜಮೀನುಗಳಿವೆ ಅಲ್ಲದೆ 300 ಮೀಟರ್ ದೂರದಲ್ಲೇ ಅಗತಗೌಡನಹಳ್ಳಿ ಗ್ರಾಮವಿದೆ ಸಾಲ್ದು ಅಂತ ಸರ್ಕಾರಿ ಶಾಲೆ ವಸತಿ ನಿಲಯ ಸಹವಿದೆ. ಕ್ರಷರ್ ನಿರ್ಮಾಣವಾದ್ರೆ ಶಬ್ದ ಮಾಲಿನ್ಯ ಜೊತೆಜೊತೆಗೆ ವಾಯು ಮಾಲಿನ್ಯ ಸಹ ಆಗಲಿದೆ ಎಂಬುದು ಗ್ರಾಮಸ್ಥರವಾದ, ಯಾವಾಗ ಕ್ರಷರ್ ಗೆ ವಿರೋಧ ವ್ಯಕ್ತಪಡಿಸಿದ್ರೊ ಆಗ ರೌಡಿಗಳನ್ನ ಕರೆತಂದು ಜೀವ ಬೆದರಿಕೆ ಹಾಕಿದ್ದಾರೆಂದು ಗ್ರಾಮಸ್ಥರು ಆರೋಪ ವ್ಯಕ್ತ ಪಡಿಸುತ್ತಿದ್ದಾರೆ. 

ತೀವ್ರವಾಗಿ ಹರಡುತ್ತಿರುವ ಸಾಂಕ್ರಾಮಿಕ ಜ್ವರಕ್ಕೆ ಕೊಡಗು ತತ್ತರ: ನಿತ್ಯ ಆಸ್ಪತ್ರೆಗೆ ಅಲೆಯುತ್ತಿರುವ ನೂರಾರು ಜನರು

ಐಎಎಸ್ ದರ್ಜೆಯ ಅಧಿಕಾರಿ ಈ ವಿಚಾರದಲ್ಲಿ ಭಾಗಿಯಾಗಿದ್ದು ತಮ್ಮ ಅಧಿಕಾರದ ಪ್ರಭಾವದಿಂದ ಕ್ರಷರ್ ನಿರ್ಮಾಣ ಮಾಡಲಾಗುತ್ತಿದೆ ಎಂಬ ಗುಮಾನಿಯನ್ನ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ಇನ್ನು ಈ ಕುರಿತು ಕ್ಯಾಮರ ಮುಂದೆ ಪ್ರತಿಕ್ರಿಯೆಗೆ ಸಿಗದ ಜಮೀನಿನ ಮಾಲೀಕ ಮದುಸೂದನ್ ಮೊಬೈಲ್ ನಲ್ಲಿ ಮಾತನಾಡಿ ಎಲ್ಲ ಪಕ್ಕಾ ದಾಖಲಾತಿಗಳಿವೆ ಎಂದು ಸಮರ್ಥನೆ ಮಾಡಿ ಕೊಂಡಿದ್ದಾರೆ. ಒಟ್ಟಾರೆ ಕ್ರಷರ್ ನಿರ್ಮಾಣವಾದ್ರೆ ಸುತ್ತಾ ಮುತ್ತಲಿನ ಗ್ರಾಮಕ್ಕು ತೊಂದರೆ ಕಟ್ಟಿಟ್ಟ ಬುತ್ತಿಯಾಗಲಿದ್ದು ಆದಷ್ಟು ಬೇಗ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯ ಮಾಡುತ್ತಿದ್ದಾರೆ.

click me!