ಬೆಂಗಳೂರಿನ ನಮ್ಮೂರ ತಿಂಡಿ ಹೋಟೆಲ್‌ ಸ್ಟೀಮರ್‌ ಬ್ಲಾಸ್ಟ್‌: ಮೂವರಿಗೆ ಗಂಭೀರ ಗಾಯ

By Sathish Kumar KHFirst Published Aug 12, 2023, 2:24 PM IST
Highlights

ಶುಚಿ-ರುಚಿಗೆ ಪ್ರಸಿದ್ಧವಾದ ಹೋಟೆಲ್‌ಗಳಲ್ಲಿ ಒಂದಾಗಿರುವ ಬೆಂಗಳೂರಿನ ನಮ್ಮೂರ- ತಿಂಡಿ ಹೋಟೆಲ್‌ನಲ್ಲಿ ಸ್ಟೀಮರ್‌ ಬ್ಲಾಸ್ಟ್‌ ಆಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಂಗಳೂರು (ಆ.12): ರಾಜ್ಯ ರಾಜಧಾನಿಯಲ್ಲಿ ಶುಚಿ-ರುಚಿಗೆ ಪ್ರಸಿದ್ಧವಾದ ಹೋಟೆಲ್‌ಗಳಲ್ಲಿ ಒಂದಾಗಿರುವ ಬೆಂಗಳೂರಿನ ನಮ್ಮೂರ- ತಿಂಡಿ ಹೋಟೆಲ್‌ನಲ್ಲಿ ಸ್ಟೀಮರ್‌ ಬ್ಲಾಸ್ಟ್‌ ಆಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಈಗಾಗಲೇ ಬಿಬಿಎಂಪಿ ಕೇಂದ್ರ ಕಚೇರಿಯ ಗುಣ ನಿಯಂತ್ರಣ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿ 9 ಜನರಿಗೆ ತೀವ್ರ ಗಾಯಗಳಾಗಿವೆ. ಈಗ ಬೆಂಗಳೂರಿನ ನಾಗರಬಾವಿಯಲ್ಲಿರುವ ನಮ್ಮೂರ ತಿಂಡಿ ಹೋಟೆಲ್‌ನಲ್ಲಿ ಸ್ಟೀಮರ್‌ ಬ್ಲಾಸ್ಟ್‌ ಆಗಿದೆ. ಈ ವೇಳೆ ಹೋಟೆಲ್‌ನ ಕಿಚನ್‌ನಲ್ಲಿ ಕೆಲಸ ಮಾಡುತ್ತಿದ್ದ ಮೂವರಿಗೆ ಗಂಭೀರವಾಗಿ ಗಾಯವಾಗಿದೆ. ಉಳಿದಂತೆ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಗ್ರಾಹಕರಿಗೆ ತೊಂದರೆ ಆಗಿಲ್ಲ. ಇನ್ನು ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೋಟೆಲ್‌ ಮಾಲೀಕರು ಮಾಹಿತಿ ನೀಡಿದ್ದಾರೆ.

ಬೆಂಗಳೂರು ಪೆಟ್ರೋಲ್‌ ಬಂಕ್‌ ಯುವತಿ ಎಳೆದೊಯ್ದ ಕಾಮುಕ, ಕೊಲೆ ಮಾಡಿ ಮನೆಮುಂದೆ ಎಸೆದ

ಪ್ರೆಶರ್‌ ಜಾಸ್ತಿಯಾಗಿ ಬ್ಲಾಸ್ಟ್‌ ಆದ ಸ್ಟೀಮರ್: ಹೋಟೆಲ್‌ನಲ್ಲಿ ಎಂದಿನಂತೆ ಕೆಲಸ ಕಾರ್ಯಗಳು ನಡೆಯುತ್ತಿದ್ದವು. ಆದರೆ, ದಿನನಿತ್ಯ ಬಳಸುವಂತೆ ಸ್ಟೀಮರ್‌ ಆನ್‌ ಮಾಡಿ ಬಳಸುತ್ತಿದ್ದರು. ಆದರೆ, ಶನಿವಾರ ಪ್ರತಿದಿನದಂತೆ ಹೋಟೆಲ್‌ ಕಿಚನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ಟೀಮರ್‌ನಲ್ಲಿ ಪ್ರೆಶರ್ ಜಾಸ್ತಿಯಾಗಿ ಬ್ಲಾಸ್ಟ್ ಆಗಿದೆ. ಬ್ಲಾಸ್ಟ್ ತೀವ್ರತೆಗೆ ಇಡೀ ಹೋಟೆಲ್ ಕಿಚನ್ ಚಿದ್ರವಾಗಿದೆ. ಈ ವೇಳೆ ಗಾಯಗೊಂಡವರನ್ನು ಐಶ್ವರ್ಯ, ಬಸಿಕುಮಾರ್ ಹಾಗೂ ಕಾರ್ತೀಕ್‌  ಎಂದು ಗುರುತಿಸಲಾಗಿದೆ. ಈಗ ಮೂವರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಜ್ಞಾನಭಾರತಿ ಪೊಲೀಸರ ಭೇಟಿ: ಇನ್ನು ಘಟನೆ ನಡೆದ ಸ್ಥಳಕ್ಕೆ ಜ್ಞಾನಭಾರತಿ ಠಾಣೆಯ ಪೊಲೀಸರು ಬಂದು ಪರಿಶೀಲನೆ ಮಾಡಿದ್ದಾರೆ. ಘಟನೆಯ ಬಗ್ಗೆ ಹೋಟೆಲ್‌ ಮಾಲೀಕರಿಂದ ನಿರ್ಲಕ್ಷ್ಯ ಮಾಡಲಾಗಿದೆಯೇ ಎಂಬುದನ್ನು ಪರಿಶೀಲನೆ ಮಾಡಿ ಅಡುಗೆ ಸಿಬ್ಬಂದಿ ಮತ್ತು ಮಾಲೀಕರನ್ನು ವಿಚಾರಣೆ ಮಾಡುತ್ತಿದ್ದಾರೆ. ಇನ್ನು ಹೋಟೆಲ್‌ ಸೇವೆಯನ್ನು ಕೆಲಕಾಲ ಸ್ಥಗಿತ ಮಾಡಲಾಗಿದ್ದು, ಅಡುಗೆ ಮನೆಯಲ್ಲಿ ಉಂಟಾದ ಅವ್ಯಸವ್ಥೆಯನ್ನು ದುರಸ್ತಿ ಮಾಡಲಾಗುತ್ತಿದೆ. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಹೋಟೆಲ್‌ ಮಾಲೀಕರಿಗೆ ಪೊಲೀಸರು ತಿಳಿಸಿದ್ದಾರೆ.

ಬಿಬಿಎಂಪಿ ಅಗ್ನಿ ದುರಂತ: ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು, ಬೆಂಕಿ ಇಟ್ಟವರ‍್ಯಾರು?

ಕಮಿಷನ್ ಆರೋಪ ಬೆನ್ನಲ್ಲೇ ಬಿಬಿಎಂಪಿ ಲ್ಯಾಬ್‌ಗೆ ಬೆಂಕಿ: ಬೆಂಗಳೂರು (ಆ.12): ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಕೇಂದ್ರ ಕಚೇರಿ ಆವರಣದ ಕಟ್ಟಡದಲ್ಲಿರುವ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಪ್ರಯೋಗಾಲಯದ ಮುಖ್ಯ ಅಭಿಯಂತರ ಸೇರಿ 9 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. ಸಂಜೆ 5ರ ಸುಮಾರಿಗೆ ಈ ಘಟನೆ ನಡೆದಿದೆ. ಈ ಘಟನೆಯಲ್ಲಿ ಪ್ರಯೋಗಾಲಯದ ಮುಖ್ಯ ಅಭಿಯಂತರ ಶಿವಕುಮಾರ್‌, ಕಾರ್ಯಪಾಲಕ ಎಂಜಿನಿಯರ್‌ಗಳಾದ ಕಿರಣ್‌, ಸಂತೋಷ್‌ ಕುಮಾರ್‌, ವಿಜಯಮಾಲಾ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶ್ರೀಧರ್‌, ಪ್ರಥಮ ದರ್ಜೆ ಸಹಾಯಕ ಸಿರಾಜ್‌, ಆಪರೇಟರ್‌ ಜ್ಯೋತಿ, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್‌ ಕನ್ಸಲ್ಟೆಂಟ್‌ ಶ್ರೀನಿವಾಸ, ಗಣಕಯಂತ್ರ ನಿರ್ವಾಹಕ ಮನೋಜ್‌ ಗಾಯಗೊಂಡಿದ್ದಾರೆ. ಅವಘಡದಲ್ಲಿ 9 ಮಂದಿಗೂ ಶೇ.35-40ರಷ್ಟುಸುಟ್ಟು ಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!