ಮಂಗಳೂರು ಬಸ್ಸಲ್ಲಿ ಅಪ್ರಾಪ್ತ ಹುಡುಗಿಗೆ ಕಿರುಕುಳ ಕೊಟ್ಟ ಮುಸ್ಲಿಂ ಮೌಲ್ವಿ; ಮನಸೋ ಇಚ್ಛೆ ಥಳಿಸಿದ ಪ್ರಯಾಣಿಕರು

By Sathish Kumar KH  |  First Published Jul 14, 2024, 8:44 PM IST

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮುಂದಿನ ಸೀಟಿನಲ್ಲಿ ಕುಳಿತ ಬಾಲಕಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆಂದು ಮುಸ್ಲಿಂ ಮೌಲ್ವಿಗೆ ಪ್ರಯಾಣಿಕರು ಗುಂಪಾಗಿ ಥಳಿಸಿದ ಘಟನೆ ನಡೆದಿದೆ. 


ಮಂಗಳೂರು (ಜು.14): ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮುಂದಿನ ಸೀಟಿನಲ್ಲಿ ಕುಳಿತ ಹಿಂದೂ ಅಪ್ರಾಪ್ತ ಯುವತಿಗೆ ಕಿರುಕುಳ ಕೊಟ್ಟಿದ್ದಾನೆಂದು ಆರೋಪಿಸಿ ಕೆಲವರು ಗುಂಪಾಗಿ ಸೇರಿಕೊಂಡು ಮುಸ್ಲಿಂ ಮೌಲ್ವಿಗೆ ಅಮಾನವೀಯವಾಗಿ ಥಳಿಸಿದ ಘಟನೆ ನಡೆದಿದೆ. 

ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಭಾನುವಾರ ಬೆಳಗ್ಗಿನ ಜಾವ ಈ ಘಟನೆ ನಡೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸನಾತನ ಎಂಬ ಎಕ್ಸ್‌ ಪೇಜ್ ಬಳಕೆದಾರರು ಇಂದು ಮಂಗಳೂರು ಬಸ್ಸಿನಲ್ಲಿ ಅಪ್ರಾಪ್ತ ಹಿಂದೂ ಬಾಲಕಿಗೆ ಕಿರುಕುಳ ನೀಡಿದ ಮುಸ್ಲಿಂ ಮೌಲ್ವಿಯನ್ನು ಹಿಂದೂ ಮಹಿಳೆಯರು ಥಳಿಸಿದ್ದಾರೆ' ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕೆಲವರು ಸೇರಿಕೊಂಡು ಗುಂಪಾಗಿ ಹಲ್ಲೆ ಮಾಡಿದ್ದಾರೆ.

Tap to resize

Latest Videos

undefined

ಬೆಡ್ ರೂಮ್ ವಿಡಿಯೋ ಹಂಚಿಕೊಂಡ ನಿವೇದಿತಾ ಗೌಡ; ಇದಕ್ಕಂತಲೇ ಡಿವೋರ್ಸ್ ಕೊಟ್ಟಿದ್ದಾ ಎಂದ ಚಂದನ್ ಫ್ಯಾನ್ಸ್

ಬೆಂಗಳೂರಿನಿಂದ ಮಂಗಳೂರಿಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ಸಿಗೆ ಹಾಸನದಿಂದ ಹತ್ತಿದ್ದ ಮುಸ್ಲಿಂ ವ್ಯಕ್ತಿಯ, ಮುಂದಿನ ಸೀಟಿನಲ್ಲಿ ಅಮ್ಮ ಹಾಗೂ ಇಬ್ಬರು ಮಕ್ಕಳು ಕುಳಿತಿದ್ದರು. ಬಸ್ ಹೋಗುತ್ತಿರುವಾಗ ಮುಂಬದಿ ಸೀಟಿನಲ್ಲಿ ಕುಳಿತಿದ್ದ ಅಪ್ರಾಪ್ತ ಬಾಲಕಿಗೆ ಸೀಟಿನ ಕೆಳಭಾಗದಿಂದ ಕೈ ಹಾಕಿ ಕಿರುಕುಳ ನೀಡಿದ್ದಾನೆ. ಇದರಿಂದ ಮೂರ್ನಾಲ್ಕು ಬಾರಿ ಅಸಹವಾಗಿ ಆಗಿರಬಹುದು ಎಂದು ಸುಮ್ಮನಿದ್ದಾಳೆ. ನಂತರ ತನ್ನ ತಾಯಿಗೆ ವಿಷಯ ತಿಳಿಸಿದ್ದಾಳೆ. ಬಾಲಕಿಯ ತಾಯಿ ಒಮ್ಮೆ ಗುರಾಯಿಸಿ ನೋಡಿ ಸುಮ್ಮನಾಗಿದ್ದಾರೆ. ಅಷ್ಟಕ್ಕೂ ಸುಮ್ಮನಾಗದ ಈ ವ್ಯಕ್ತಿ ಪುನಃ ಸೀಟಿನ ಸಂದಿಯಲ್ಲಿ ಕೈ ತೂರಿಸಿ ಕಿರುಕುಳ ನೀಡಿದ್ದಾನೆ. ಇದನ್ನು ಸಹೊಸದ ಬಾಲಕಿಯ ತಾಯಿ ಬಂದು ಬೈದು ನೀನ್ಯಾಕೆ ಹೀಗೆ ಮಾಡಿದೆ ಎಂದು ಪ್ರಶ್ನೆ ಮಾಡಿದ್ದಾಳೆ. ಆಗ ನನ್ನಿಂದ ತಪ್ಪಾಯ್ತು, ಇನ್ಮೇಲೆ ಹೀಗೆ ಮಾಡೊಲ್ಲ ಎಂದು ಹೇಳಿ ಕೈಮುಗಿದು ಬೇಡಿಕೊಂಡಿದ್ದಾನೆ. ಆಗ ಮುಸ್ಲಿಂ ವ್ಯಕ್ತಿ ಯಾವಾಗ ತಾನು ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಂಡನೋ ಆಗ ಅಕ್ಕಪಕ್ಕದಲ್ಲಿದ್ದವರೆಲ್ಲಾ ಎದ್ದು ಬಂದು ಪ್ರಶ್ನೆ ಮಾಡಿ ಹಲ್ಲೆ ಮಾಡಲು ಮುಂದಾಗಿದ್ದಾರೆ.

ವಿಧಾನ ಮಂಡಲ ಅಧಿವೇಶನ ಚರ್ಚೆಗೆ ಸಮರ್ಪಕ ಉತ್ತರ ಕೊಡಿ; ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

ಆಗ ಕಿರುಕುಳಕ್ಕೆ ಒಳಗಾದ ಬಾಲಕಿ ಮೌಲ್ವಿಗೆ ಒಂದು ಬಾರಿ ಬಾರಿಸಿದ್ದಾಳೆ. ಬಿಳಿ ಜುಬ್ಬ ಧರಿಸಿ ದೊಡ್ಡ ವ್ಯಕ್ತಿಯಂತೆ ಕುಳಿತಿದ್ದ ಮುಸ್ಲಿಂ ಮೌಲ್ವಿಗೆ ತಲೆಯ ಟೊಪ್ಪಿಗೆ ಬಿದ್ದು ಹೋಗುವ ಹಾಗೆ ಬಾರಿಸಿದ್ದಾರೆ. ಜೊತೆಗೆ, ನಾನು ಹೇಳುವುದನ್ನು ಕೇಳಿ ಎಂದು ಎಷ್ಟೇ ಮನವಿ ಮಾಡಿದರೂ ಗುಂಪಿನಲ್ಲಿ ಗೋವಿಂದ ಎನ್ನುವಂತೆ ಬಸ್‌ನಲ್ಲಿದ್ದ ಪ್ರಯಾಣಿಕರು ತಾನೊಂದು, ನಾನೊಂದು ಎಂಬಂತೆ ಹಲ್ಲೆ ಮಾಡಿದ್ದಾರೆ. ಇನ್ನು ಕೆಲವರು ಕತ್ತಿನ  ಪಟ್ಟಿಯನ್ನು ಹಿಡಿದುಕೊಂಡು ಅಶ್ಲೀಲವಾಗಿ ಬೈಯುತ್ತಾ ಥಳಿಸಿದ್ದಾರೆ. ಇನ್ನು ಬಹುತೇಕರು ಜಗಳವನ್ನು ನೋಡುವವರು ಇದ್ದರೇ ಹೊರತು, ಬಿಡಿಸಿಕೊಳ್ಳಲು ಯಾರೊಬ್ಬರೂ ಮುಂದಾಗಿಲ್ಲ. ಇನ್ನು ಕೆಲವರು ಮುಸ್ಲಿಂ ಮೌಲ್ವಿಗೆ ಥಳಿಸುವುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ.

ಮಂಗಳೂರು ಬಸ್ಸಿನಲ್ಲಿ ಅಪ್ರಾಪ್ತ ಹಿಂದೂ ಬಾಲಕಿಗೆ ಕಿರುಕುಳ ನೀಡಿದ ಮುಸ್ಲಿಂ ಮೌಲ್ವಿಯನ್ನು ಹಿಂದೂ ಮಹಿಳೆಯರು ಥಳಿಸಿದ್ದಾರೆ.

ಪೂರ್ತಿ ವಿಡಿಯೋ.

ಇದನ್ನು ಕೂಡ ಸಮರ್ಥನೆ ಮಾಡಿಕೊಳ್ಳುವ ಜನ ಇದ್ದಾರೆ. pic.twitter.com/wNGVPRCwcA

— ಸನಾತನ (@sanatan_kannada)
click me!