ಬೆಂಗಳೂರು ಮೂರು ತಿಂಗಳಿಂದ ಮನೆ ಬಾಡಿಗೆ ಕುಸಿತ; ವರ್ಕ್‌ ಫ್ರಮ್ ಹೋಮ್ ಬಿಟ್ಟುಬರದ ಟೆಕ್ಕಿಗಳಿಂದ ಮಹಾ ಹೊಡೆತ

By Sathish Kumar KH  |  First Published Jul 14, 2024, 3:54 PM IST

ಐಟಿ ಕಂಪನಿಗಳು ಕಡಿಮೆ ಸಂಬಳ ಕೊಟ್ಟರೂ ಪರವಾಗಿಲ್ಲ ವರ್ಕ್‌ ಫ್ರಮ್ ಕೊಡಿ ಎನ್ನುವ ನೆರೆ ರಾಜ್ಯದ ಟೆಕ್ಕಿಗಳಿಂದಾಗಿ ಬೆಂಗಳೂರಿನಲ್ಲಿ ಮನೆಗಳ ಬಾಡಿಗೆ ತೀವ್ರ ಕುಸಿತವಾಗಿದೆ.


ಬೆಂಗಳೂರು (ಜು.14): ಸಿಲಿಕಾನ್ ಸಿಟಿಯಲ್ಲಿ ಕಳೆದ ಮೂರ್ನಾಲ್ಕು ತಿಂಗಳಿಂದ ಮನೆ ಬಾಡಿಗೆಗಳ ಸಂಖ್ಯೆ ತೀವ್ರ ಇಳಿಕೆಯಾಗಿದೆ. ಇದಕ್ಕೆ ಕಾರಣ ಆರ್ಥಿಕ ವರ್ಷ ಮುಕ್ತಾಯಗೊಂಡ ಬೆನ್ನಲ್ಲಿಯೇ ನಮಗೆ ಸಂಬಳ ಕಡಿಮೆ ಕೊಟ್ಟರೂ ಸರಿ ವರ್ಕ್ ಪ್ರಮ್ ಹೋಮ್ ಕೆಲಸವೇ ಕೊಡಿ ಎನ್ನುವ ಟೆಕ್ಕಿಗಳ ಸಂಖ್ಯೆ ಹೆಚ್ಚಾಗಿದೆ ಎನ್ನುವುದು ಹೊಸ ವಿಚಾರವಾಗಿದೆ. ಆದರೆ, ಇದರಿಂದ ಹೊರ ವಲಯಗಳಲ್ಲಿ ದೊಡ್ಡ ದೊಡ್ ಮನೆಗಳನ್ನು ಕಟ್ಟಿಸಿಕೊಂಡು ಬಾಡಿಗೆ ನಿರೀಕ್ಷೆಯಲ್ಲಿದ್ದ ಮನೆ ಮಾಲೀಕರಿಗೆ ಸಂಕಷ್ಟ ಎದುರಾಗಿದೆ.

ಸಾಮಾನ್ಯವಾಗಿ ಆರ್ಥಿಕ ವರ್ಷ ಮಾ.31ಕ್ಕೆ ಮುಕ್ತಾಯಗೊಂಡು ಏ.1ರಿಂದ ಹೊಸ ಆರ್ಥಿಕ ವರ್ಷ ಆರಂಭವಾಗುತ್ತದೆ. ಈ ವೇಳೆ ಎಲ್ಲ ಕಂಪನಿಗಳಲ್ಲಿಯೂ ಕೂಡ ಸಂಬಳ ಹೆಚ್ಚಳ, ವರ್ಗಾವಣೆ ಸೇರಿ ಇನ್ನಿತರೆ ಕಾರ್ಯಗಳು ನಡೆಯುತ್ತವೆ. ಆದರೆ, ಈ ವೇಳೆ ನಮಗೆ ಸಂಬಳ ಹೆಚ್ಚಳ ಮಾಡಿದ್ದರೂ ಪರವಾಗಿಲ್ಲ ವರ್ಕ್ ಫ್ರಮ್ ಹೋಮ್ ಆಪ್ಶನ್ ಕೊಡಿ ಎಂದು ಕೇಳಿರುವ ಟೆಕ್ಕಿಗಳ ಸಂಖ್ಯೆಯೇ ಹೆಚ್ಚಾಗಿದೆ ಎಂದು ಕೇಳಿಬಂದಿದೆ. ಇನ್ನು ಹೇಳಿಕೇಳಿ ಬೆಂಗಳೂರು ತಮಿಳುನಾಡು, ಆಂಧ್ರ ಪ್ರದೇಶ, ಕೇರಳ ರಾಜ್ಯಗಳ ಗಡಿಗೆ ಸಮೀಪದಲ್ಲಿದೆ. ಹೀಗಾಗಿ, ಹೊರ ರಾಜ್ಯಗಳಿಂದ ಬರುವ ಟೆಕ್ಕಿಗಳ ಸಂಖ್ಯೆಯೇ ಅಧಿಕವಾಗಿದೆ. ನೆರೆ ರಾಜ್ಯದವರು ಸ್ಥಳೀಯ ಕನ್ನಡದ ಉದ್ಯೋಗಾಕಾಂಕ್ಷಿಗಳಿಗಿಂತ ಕಡಿಮೆ ವೇತನಕ್ಕೆ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಹೀಗಾಗಿ, ಕಡಿಮೆ ಸಂಬಳಕ್ಕೆ ಸೇರಿಕೊಂಡು ವರ್ಕ್ ಫ್ರಮ್ ಹೋಮ್ ಆಪ್ಶನ್ ಪಡೆದು ಮನೆಯಿಂದಲೇ ಕೆಲಸ ಮಾಡಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಾಸ ಮಾಡುವವರ ಸಂಖ್ಯೆ ಇಳಿಮುಖ ಆಗುತ್ತಿದೆ.

Tap to resize

Latest Videos

undefined

ಶಕ್ತಿ ಯೋಜನೆಗೆ 1 ವರ್ಷ ತುಂಬಿದ ಬೆನ್ನಲ್ಲಿಯೇ ಶೇ.20 ಕೆಎಸ್‌ಆರ್‌ಟಿಸಿ ಬಸ್ ದರ ಹೆಚ್ಚಳ!

ಸಿಲಿಕಾನ್ ಸಿಟಿಯಲ್ಲಿ ಐಟಿಬಿಟಿ ಕಂಪನಿಗಳಲ್ಲಿ ಕೆಲಸ ಮಾಡುವ ಹೊರ ರಾಜ್ಯದ ಟೆಕ್ಕಿಗಳು ಕೋವಿಡ್ ನಂತರವೂ ವರ್ಕ್‌ ಫ್ರಮ್ ಹೋಮ್ ಬಿಟ್ಟುಬರಲು ಆಸಕ್ತಿ ತೋರುತ್ತಿಲ್ಲ. ನೀವು ಸಂಬಳ ಹೆಚ್ಚಳ ಮಾಡದಿದ್ದರೂ ಪರವಾಗಿಲ್ಲ, ನೀವು ಕಡಿಮೆ ಸಂಬಳ ಆಫರ್ ಮಾಡಿದರೂ ಪರವಾಗಿಲ್ಲ ವರ್ಕ್ ಫ್ರಮ್ ಹೋಮ್ ಇರುವ ಕೆಲಸವನ್ನೇ ಕೊಡಿ ಎಂದು ಟೆಕ್ಕಿಗಳು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಟೆಕ್ಕಿಗಳ ವಾಸ ಸ್ಥಳಗಳಾದ ವೈಟ್ ಫೀಲ್ಡ್, ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ವಿವಿಧೆಡೆ ಬಾಡಿಗೆ ದರಗಳು ಭಾರೀ ಕುಸಿತವಾಗಿವೆ. ಈ ಹಿನ್ನೆಲೆಯಲ್ಲಿ ಮನೆ ಮಾಲೀಕರು ಸಿಕ್ಕಷ್ಟು ಬೆಲೆಗೆ ಸ್ಥಳೀಯರಿಗೆ ಮನೆಗಳನ್ನು ಬಾಡಿಗೆ ಕೊಡುವ ಪರಿಸ್ಥಿತಿಗೆ ಮುಂದಾಗಿದ್ದಾರೆ.

ಟ್ರಾಫಿಕ್ ಜಾಮ್‌ನಿಂದಲೂ ಕೆಲಸ ಸಮಯ ವ್ಯರ್ಥ: ಬೆಂಗಳೂರಿನಲ್ಲಿ ಕೋವಿಡ್ ಇಳಿಕೆಯಾದ ನಂತರ ಟ್ರಾಫಿಕ್ ಜಾಮ್ ಭಾರಿ ದೊಡ್ಡ ಮಟ್ಟದಲ್ಲಿ ಏರಿಕೆಯಾಗಿದೆ. ಟ್ರಾಫಿಕ್ ಪೊಲೀಸರು ಹಾಗೂ ಬಿಬಿಎಂಪಿ ವಾಹನ ಸಂಚಾರ ದಟ್ಟಣೆ ನಿವಾರಣೆಗೆ ಏನೇ ಕಸರತ್ತು ಮಾಡಿದರೂ ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಕ್ಕಿಲ್ಲ. ಹೀಗಾಗಿ, ಹೆಬ್ಬಾಳ ಮೇಲ್ಸೇತುವೆ, ಎಲೆಕ್ಟ್ರಾನಿಕ್ ಸಿಟಿ, ಕೆ.ಆರ್. ಪುರಂ, ಸಿಲ್ಕ್‌ ಬೋರ್ಡ್, ಕೋರಮಂಗಲ ಸೇರಿ ವಿವಿಧೆಡೆ ಭಾರಿ ದೊಡ್ಡ ಮಟ್ಟದಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಕೆಲಸ ಮಾಡಲು ಕಚೇರಿಗೆ ಹೋಗುವುದಕ್ಕೆ ಸುಮಾರು 1 ರಿಂದ 2 ಗಂಟೆ ಸಮಯ ಬೇಕಾಗುತ್ತದೆ. ಇನ್ನು ಕಚೇರಿಯಿಂದ ಮನೆಗೆ ಬರುವಾಗಲೂ ಪುನಃ 1 ರಿಂದ 2 ಗಂಟೆ ಸಮಯ ಹೋಗುತ್ತದೆ. ದಿನಕ್ಕೆ 8 ಗಂಟೆ ಕೆಲಸ ಮಾಡಲು ಟ್ರಾಫಿಕ್ ಜಾಮ್‌ನಲ್ಲಿ 3-4 ಗಂಟೆ ಸಂಚಾರ ಮಾಡಬೇಕಿದೆ. ಇದನ್ನು ತಪ್ಪಿಸಿ ಮನೆಯಿಂದಲೇ ಒಂದು ಗಂಟೆ ಹೆಚ್ಚಾಗಿ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಅವಕಾಶ ನೀಡಲಾಗುತ್ತದೆ. ಇದರಿಂದ ಖುಷಿಯಾಗಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಉಡುಪಿ ಆಪತ್ಬಾಂಧವ ಆಸಿಫ್ ಕರಾಳಮುಖ ತೆರೆದಿಟ್ಟ ಪತ್ನಿ ಶಬನಮ್!

ಬೆಂಗಳೂರಿನಲ್ಲಿ ವಿಶೇಷವಾಗಿ ಬೇಡಿಕೆಯಿರುವ ಕೋರಮಂಗಲದಂತಹ, ವೈಟ್‌ ಫೀಲ್ಡ್, ಕೆ.ಆರ್.ಪುರಂ, ಕೆಂಗೇರಿ, ಕಾಡುಗೋಡಿ, ಹೂಡಿ, ಚನ್ನಸಂದ್ರ ಸೇರಿ ವಿವಿಧ ಪ್ರದೇಶಗಳಲ್ಲಿ 1 ಬಿಹೆಚ್‌ಕೆ ಮನೆಗೆ 3ರಿಂದ 5000 ರೂ., 2 ಬಿಹೆಚ್‌ಕೆ ಮನೆಗೆ 5,000ರಿಂದ 8,000 ರೂ. ಹಾಗೂ 3 ಬಿಹೆಚ್‌ಕೆ ಮನೆಗೆ 10,000ರಿಂದ ರೂ. ಬಾಡಿಗೆ ಹಣ ಕಡಿಮೆಯಾಗಿದೆ. ಅಂದರೆ ಈಗ ಈ ಪ್ರದೇಶಗಳಲ್ಲಿ 10 ರಿಂದ 20 ಸಾವಿರ ರೂ.ಗೆ 1 ಬಿಹೆಚ್‌ಕೆ, 20 ರಿಂದ 35 ಸಾವಿರ ರೂ.ಗೆ 2 ಬಿಹೆಚ್‌ಕೆ ಹಾಗೂ 25ರಿಂದ 35 ಸಾವಿರ ರೂ.ವರೆಗೆ 3 ಬಿಹೆಚ್‌ಕೆ ಮನೆಗಳು ಬಾಡಿಗೆಗೆ ಲಭ್ಯವಾಗಲಿವೆ ಎಂದು ತಿಳಿದುಬಂದಿದೆ.

ಕನ್ನಡಿಗರಿಗೆ ಉದ್ಯೋಗ ಕೊಡಿ ಅಭಿಮಾನ ನಡೆದಿತ್ತು: ಬೆಂಗಳೂರಿನಲ್ಲಿರುವ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡದೇ ಕಡೆಗಣನೆ ಮಾಡಲಾಗುತ್ತಿದೆ. ಉದ್ಯೋಗ ನೇಮಕಾತಿ ಮಾಡಿಕೊಳ್ಳುವ ಹೆಚ್.ಆರ್.ತಂಡದ ಸದಸ್ಯರು ಹೊರ ರಾಜ್ಯದವರಾಗಿದ್ದು, ಅವರು ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯ ಸೇರಿ ಉತ್ತರ ಭಾರತದವರಿಗೂ ಉದ್ಯೋಗ ನೀಡಲು ಆದ್ಯತೆ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಕಳೆದ 3 ತಿಂಗಳ ಹಿಂದೆ ಸಾಮಾಜಿಕ ಜಾಲತಾಣದ ಟ್ವಿಟರ್ (ಎಕ್ಸ್), ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಲಿಂಕ್ಡ್‌ಇನ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕೊಡಿ ಅಭಿಯಾನವೂ ನಡೆದಿತ್ತು. ಈಗ ಬಾಡಿಗೆ ದರದ ಮೇಲೆ ಪರಿಣಾಮ ಬೀರುತ್ತಿದೆ.

click me!