ಉಡುಪಿ ಆಪತ್ಬಾಂಧವ ಆಸಿಫ್ ಕರಾಳಮುಖ ತೆರೆದಿಟ್ಟ ಪತ್ನಿ ಶಬನಮ್!

By Sathish Kumar KH  |  First Published Jul 14, 2024, 1:16 PM IST

ಉಡುಪಿಯಲ್ಲಿ ವೃದ್ಧರು, ಅಂಗವಿಕಲರಿಗೆ ನೆರವಾಗುತ್ತಾ ಸಮಾಜ ಸೇವೆಯಲ್ಲಿ ಆಪತ್ಭಾಂಧವ ಎಂದೇ ಪ್ರಸಿದ್ಧಿಯಾಗಿದ್ದ ಆಸಿಫ್ ಕರಾಳ ಮುಖವನ್ನು ಆತನ ಪತ್ನಿಯೇ ತೆರದಿಟ್ಟಿದ್ದಾಳೆ.


ಉಡುಪಿ (ಜು.14): ಕರ್ನಾಟಕ ಕರಾವಳಿ ಜಿಲ್ಲೆಯಾದ ಉಡುಪಿಯಲ್ಲಿ ವೃದ್ಧರು, ಅಂಗವಿಕಲರಿಗೆ ನೆರವಾಗುತ್ತಾ ಸಮಾಜ ಸೇವೆಯಲ್ಲಿ ಆಪತ್ಭಾಂಧವ ಎಂದೇ ಪ್ರಸಿದ್ಧಿಯಾಗಿದ್ದ ಆಸಿಫ್ ಕರಾಳ ಮುಖವನ್ನು ಆತನ ಪತ್ನಿಯೇ ತೆರದಿಟ್ಟಿದ್ದಾಳೆ. ಈತನೊಬ್ಬ ಡ್ರಗ್ಸ್ ವ್ಯಸನಿ, ಹೆಂಡತಿ ಮಕ್ಕಳ ಮೇಲೆ ಕ್ರೂರವಾಗಿ ಹಲ್ಲೆ ಮಾಡುವುದು ಮಾತ್ರವಲ್ಲದೇ, ಮಗಳ ಪ್ರೀತಿಯನ್ನು ವಿರೋಧಿಸಿ ಎಡಿಟೆಡ್ ವಿಡಿಯೋ ಹರಿಬಿಟ್ಟಿದ್ದಾನೆ ಎಂದು ಆತನ ಪತ್ನಿ ಶಬನಮ್ ಆರೋಪಿಸಿ ದೂರು ನೀಡಿದ್ದಾಳೆ.

ಹೌದು, ಕರಾವಳಿ ಭಾಗವಲ್ಲದೇ ಇಡೀ ರಾಜ್ಯಕ್ಕೆ ಆಪದ್ಭಾಂಧವ ಆಸಿಫ್ ಚಿರಪರಿಚಿತ ಆಗಿದ್ದಾರೆ. ವೃದ್ಧರು, ಅಂಗವಿಕಲರು, ನಿರುದ್ಯೋಗಿಗಳು ಸೇರಿ ಇತರರಿಗೆ ಸಹಾಯ ಮಾಡುತ್ತಾ ಪ್ರಸಿದ್ಧಿ ಗಳಿಸಿದ್ದಾರೆ. ಆದರೆ, ಆಸಿಫ್ ನ ಅಸಲಿ ಮುಖವನ್ನು ಆತನ ಪತ್ನಿ ಶಬನಮ್  ತೆರೆದಿಟ್ಟಿದ್ದಾಳೆ., ತನ್ನ ಪತಿ ಆಸಿಫ್ ಡ್ರಗ್ಸ್ ವ್ಯಸನಿಯಾಗಿದ್ದು, ಬ್ರೌನ್ ಶುಗರ್ ಸೇವನೆ ಮಾಡುತ್ತಿದ್ದಾನೆ. ಆತ ಡ್ರಗ್ಸ್ ಸೇವಿಸಿ ಹಲ್ಲೆ ಮಾಡುತ್ತಿದ್ದನು ಎಂದು ಪತ್ನಿ ಶಬನಮ್ ಅರೋಪಿಸಿದ್ದಾಳೆ.

Tap to resize

Latest Videos

undefined

ಪ್ರೀತಿಸಿ ಮದುವೆಯಾದ ಕುಟುಂಬದಲ್ಲಿ ಗಂಡ ಸಾವು; ಮಗನನ್ನು ನೇಣು ಬಿಗಿದು, ತಾನೂ ಆತ್ಮಹತ್ಯೆಗೆ ಶರಣಾದ ತಾಯಿ!

ಉಡುಪಿ ಭಾಗದಲ್ಲಿ ಮೈಮುನಾ ಫೌಂಡೇಶನ್ ಹೆಸರಿನಲ್ಲಿ ಆಶ್ರಮ ನಡೆಸುತ್ತಿದ್ದ ಆಸಿಫ್, ವೃದ್ಧರಿಗೆ, ವಿಶೇಷ ಚೇತನರಿಗೆ ಆಶ್ರಯ ನೀಡಿದ್ದನು. ಆದರೆ, ಈ ಮೈಮುನಾ ಆಶ್ರಮದಲ್ಲೂ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾನೆ. ಆಸಿಫ್ ತನ್ನ ಹಾಗೂ ಮಗಳ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಹಿನ್ನೆಲೆಯಲ್ಲಿ ಸಮಾಜ ಸೇವೆಯಲ್ಲಿ ಹೆಸರು ಪಡೆದಿದ್ದ ಆಪತ್ಬಾಂಧವ ಆಸಿಫ್ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಹಲ್ಲೆ, ವಿಡಿಯೋ ಮತ್ತು ಫೋಟೋ ಎಡಿಟ್ ಮಾಡಿ ಹರಿಬಿಟ್ಟ ಹಿನ್ನೆಲೆಯಲ್ಲಿ ಐಟಿ ಕಾಯ್ದೆ ಅನ್ವಯ ಕೇಸ್ ದಾಖಲಿಸಲಾಗಿದೆ. ಇನ್ನು ಪ್ರಕರಣ ದಾಖಲಾಗುತ್ತಲೇ ಆರೋಪಿ ಆಸಿಫ್ ತಲೆಮರೆಸಿಕೊಂಡಿದ್ದಾನೆ.

ಆಸಿಫ್ ಅವರ ಮಗಳು ದ್ವಿತೀಯ ಪಿಯುಸಿ ಅಭ್ಯಾಸ ಮಾಡುತ್ತಿದ್ದು, ಈೆ ಓದಿನೊಂದಿಗೆ ಬೇರೊಬ್ಬ ಹುಡುಗನನ್ನು ಪ್ರೀತಿ ಮಾಡಿದ್ದಾಳೆ. ಆದರೆ, ಮಗಳ ಪ್ರೀತಿಯನ್ನು ವಿರೋಧಿಸಿ ಹಲ್ಲೆ ಮಾಡುತ್ತಿದ್ದ ಆಸಿಫ್ ತನ್ನ ಮಗಳ ವೀಡಿಯೋವನ್ನು ಎಡಿಟ್ ಮಾಡಿ ಹರಿಬಿಟ್ಟಿದ್ದಾನೆ. ಇದರಿಂದ ಮನನೊಂದ ಪುತ್ರಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾಳೆ. ಮಗಳು ಪಿನಾಯಿಲ್ ಕುಡಿದು ಆತ್ಮಹತ್ಯೆ ಯತ್ನಿಸಿದ್ದು, ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ತನ್ನ ಮಗಳು ಪ್ರೀತಿಸುತ್ತಿದ್ದ ಕಾರಣಕ್ಕಾಗಿ ಫೋಟೋ, ವೀಡಿಯೋ ವೈರಲ್ ಮಾಡಿದ್ದಾನೆ ಎಂದು ಆತನ ಪತ್ನಿ ಶಬನಮ್ ಆರೋಪ ಮಾಡಿದ್ದಾಳೆ. 

ತೂಕ ಇಳಿಸಿಕೊಳ್ಳಲು ಹೋಗಿ ಜೀವಂತ ಅಸ್ಥಿಪಂಜರವಾದ ಸುಂದರಿ; ಈಕೆ ದೇಹದಲ್ಲಿ ಹುಡುಕಿದರೂ ಪಾವ್ ಕೆಜಿ ಮಾಂಸವಿಲ್ಲ!

ಆಸಿಫ್‌ನ ಪುತ್ರಿ ಹಾಗೂ ಆಕೆ ಪ್ರೀತಿಸುವ ಹುಡುಗನ ಫೋಟೋ, ವೀಡಿಯೋ ಎಡಿಟ್ ಮಾಡಿ ವೈರಲ್ ಆಗುತ್ತಿದೆ. ವಿಡಿಯೋ ಎಡಿಟೆಡ್ ಮಾಡಿ ವಾಟ್ಸಾಪ್ ಗ್ರೂಪ್ ವೊಂದರಲ್ಲಿ ವೈರಲ್ ಮಾಡಿದ್ದಾರೆ. ಮಗಳ ಪ್ರೀತಿಗೆ ವಿರೋಧಿಸಿ ಅಶ್ಲೀಲವಾಗಿ ವೀಡಿಯೋ ಎಡಿಟ್  ಮಾಡಿದ್ದಾನೆ ಎಂದು ಸಮಾಜ ಸೇವಕನಾಗಿ ಗುರುತಿಸಿಕೊಂಡಿರುವ ಆಸಿಫ್ ವಿರುದ್ಧ ದೂರು ದಾಖಲಿಸಿದ್ದಾರೆ.

click me!