ಚಿಕನ್‌ ಪೀಸ್‌ ಇಲ್ಲದ ಬಿರಿಯಾನಿ ಕೊಟ್ಟ ಹೋಟೆಲ್‌ ವಿರುದ್ಧ ಕೇಸ್‌ ಹಾಕಿ ಪರಿಹಾರ ಗೆದ್ದ ಬೆಂಗಳೂರು ನಿವಾಸಿ!

By Suvarna News  |  First Published Dec 6, 2023, 10:46 AM IST
ಬೆಂಗಳೂರಿನ ರೆಸ್ಟೊರೆಂಟ್‌ನಲ್ಲಿ ಚಿಕನ್ ಇಲ್ಲದೆ ಚಿಕನ್ ಬಿರಿಯಾನಿ ನೀಡಿದ್ದಕ್ಕಾಗಿ ಗ್ರಾಹಕ ನ್ಯಾಯಾಲಯ ರೆಸ್ಟೋರೆಂಟ್‌ಗೆ  1000 ರೂ ದಂಡ ವಿಧಿಸಿ, ಗ್ರಾಹಕನಿಗೆ ಪರಿಹಾರ ನೀಡುವಂತೆ ಆದೇಶಿಸಿದೆ.

ದುಡ್ಡು ಕೊಟ್ಟು ಚಿಕನ್‌ ಬಿರಿಯಾನಿ ತಿನ್ನೋಕೆ ಹೋದಾಗ ಬಿರಿಯಾನಿಯಲ್ಲಿ ಪೀಸೇ ಇಲ್ಲದಿದ್ದರೆ ಮನಸ್ಸಿಗೆ ಎಷ್ಟು ಸಂಕಟವಾಗುತ್ತೆ ಅನ್ನೋದು ಅನುಭವಿಸಿದವರಿಗೇ ಗೊತ್ತು ಬಿಡಿ. ಅಂದ ಹಾಗೆ ಇಲ್ಲಿ ಆಗಿದ್ದು ಇಷ್ಟೆ. ಮನೆಯಲ್ಲಿ ಗ್ಯಾಸ್‌ ಸಿಲಿಂಡರ್‌ ಖಾಲಿಯಾಗಿತ್ತು ಎಂಬ ಕಾರಣಕ್ಕೆ ಬೆಂಗಳೂರಿನ ನಿವಾಸಿ ಕೃಷ್ಣಪ್ಪ ಎಂಬುವವರು ಐಟಿಐ ಲೇಔಟ್‌ನಲ್ಲಿರುವ ಹೋಟೆಲ್‌ ಪ್ರಶಾಂತ್‌ಗೆ ಹೋಗಿ 150 ರು. ಕೊಟ್ಟು ಬಿರಿಯಾನಿ ಪಾರ್ಸಲ್‌ ತಗೊಂಡು ಬಂದಿದ್ದರಂತೆ. ಮನೇಲಿ ಬಿರಿಯಾನಿ ಓಪನ್‌ ಮಾಡಿ ನೋಡಿದ್ರೆ ಪೀಸೇ ಇರಲಿಲ್ಲವಂತೆ. ಹೋಟೆಲ್‌ ಮಾಲೀಕನಿಗೆ ವಿಷಯ ಮುಟ್ಟಿಸಿದಾಗ 5 ನಿಮಿಷದಲ್ಲಿ ಬೇರೆ ಪಾರ್ಸೆಲ್‌ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ.

ಆದರೆ 2 ಗಂಟೆ ಕಳೆದರೂ ಹೋಟೆಲ್‌ನಿಂದ ಯಾವುದೇ ಪ್ರತಿಕ್ರಿಯೆ ಬರದೇ ಇದ್ದಾಗ ಬಳಿಕ ಅವರು ಹೋಟೆಲ್‌ಗೆ ಸರಿಯಾಗಿ ಪಾಠ ಕಲಿಸುವ ಅಂತಾ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ. ಸಾಕ್ಷಿಗೆಂದು ಬಿರಿಯಾನಿ ಫೋಟೋನೆ ನೀಡಿದ್ದರಂತೆ , ಮೇ ತಿಂಗಳಿನಲ್ಲಿ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವನ್ನು ಭೇಟಿ ಮಾಡಿ ಉಪಾಹಾರ ಗೃಹದ ಮಾಲೀಕರ ವಿರುದ್ಧ ದೂರು ನೀಡಿ  30,000 ಪರಿಹಾರ ನೀಡುವಂತೆ ಕೋರಿದ್ದರು. ಬಳಿಕ ಕೋರ್ಟ್ ಹೋಟೆಲ್‌ಗೆ 1,000 ಪರಿಹಾರ ಮತ್ತು 150 ರು. ನೀಡುವಂತೆ ಆದೇಶಿಸಿದೆ.

Latest Videos

undefined

ಝೊಮೆಟೋದಲ್ಲಿ ಆರ್ಡರ್ ಮಾಡಿದ ಬಿರಿಯಾನಿಯಲ್ಲಿ ಸಿಕ್ತು ಸತ್ತ ಹಲ್ಲಿ!

ಕೃಷ್ಣಪ್ಪ ಅವರು ಯಾವುದೇ ವಕೀಲರನ್ನು ನೇಮಿಸಿಕೊಳ್ಳದೆ ಸ್ವಂತವಾಗಿ ವಾದ ಮಂಡಿಸಿದ್ದರು. ಅವರು ಬಿರಿಯಾನಿಯ ಛಾಯಾಚಿತ್ರಗಳನ್ನು ತೆಗೆದುಕೊಂಡಿದ್ದರು.  ಮತ್ತು ಅವರ ಪತ್ನಿ ಆ ದಿನ ಆಹಾರವನ್ನು ಬೇಯಿಸಲು ಸಾಧ್ಯವಾಗದೆ ಮಾನಸಿಕ ಸಂಕಟವನ್ನು ಅನುಭವಿಸಿದರು ಎಂದು ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದರು. ವಾದವನ್ನು ಪರಿಗಣಿಸಿದ ನ್ಯಾಯಾಧೀಶರು, ರೆಸ್ಟೋರೆಂಟ್ ತಿಳಿದೋ ತಿಳಿಯದೆಯೋ ತಪ್ಪು ಮಾಡಿದೆ ಮತ್ತು ಗ್ರಾಹಕರಿಗೆ ಸರಿಯಾದ ಸೇವೆಗಳನ್ನು ನೀಡಲಿಲ್ಲ ಎಂದು ಪರಿಹಾರವಾಗಿ 1 ಸಾವಿರ ರೂಪಾಯಿ ಮತ್ತು 150 ರೂ ಮರಳಿಸುವಂತೆ ಹೇಳಿದೆ.

ಬನ್ನಿಕೋಡು ಗ್ರಾಮದಲ್ಲಿ ಚಿಕನ್ ಮಾಡದ್ದಕ್ಕೆ ಚಾಕುವಿನಿಂದ ಪತ್ನಿ ಕೊಲೆ ಪ್ರಕರಣ
ದಾವಣಗೆರೆ: ಊಟಕ್ಕೆ ಚಿಕನ್ ಮಾಡಿಲ್ಲವೆಂದು ಚಾಕುವಿನಿಂದ ಪತ್ನಿಯನ್ನೇ ಇರಿದು ಕೊಂದಿದ್ದ ಅಪರಾಧಿ ಪತಿಗೆ 6 ವರ್ಷ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರು. ದಂಡ ವಿಧಿಸಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ.

ಮಸಾಲಾ ಟೀ ಸಿಗದೇ ಉಜ್ಬೇಕಿಸ್ತಾನದಲ್ಲಿ ಹೋಟೆಲ್‌ ತೆರೆದ ಬೆಂಗ್ಳೂರಿಗ: ಮಸಾಲೆ ದೋಸೆ, ಚಿಕನ್ ಬಿರಿಯಾನಿಗೂ ಫುಲ್‌ ಕ್ಯೂ!

ಹರಿಹರ ತಾಲೂಕು ಬನ್ನಿಕೋಡು ಗ್ರಾಮದ ಮಾಗಾನಹಳ್ಳಿ ಕೆಂಚಪ್ಪ ಶಿಕ್ಷೆಗೆ ಗುರಿಯಾದ ಅಪರಾಧಿ ಪತಿ. ಅದೇ ತಾಲೂಕಿನ ಉಕ್ಕಡಗಾತ್ರಿ ಗ್ರಾಮದ ಗುತ್ಯಮ್ಮ ಹನುಮಂತಪ್ಪ ಎಂಬುವರ ಪುತ್ರಿ ಶೀಲಾಳನ್ನು ಬನ್ನಿಕೋಡು ಗ್ರಾಮದ ಮಾಗಾನಹಳ್ಳಿ ಕೆಂಚಪ್ಪನಿಗೆ ಮದುವೆ ಮಾಡಿಕೊಡಲಾಗಿತ್ತು.

ಮಾಗಾನಹಳ್ಳಿ ಕೆಂಚಪ್ಪ 8.6.2022ರಂದು ಸಂಜೆ 7 ಗಂಟೆ ಹೊತ್ತಿನಲ್ಲಿ ಮದ್ಯಪಾನ ಮಾಡಿ ಮನೆಗೆ ಬಂದವನು ತನ್ನ ಪತ್ನಿ ಶೀಲಾ ಚಿಕನ್ ಮಾಡಿಲ್ಲವೆಂದು ಜಗಳ ಮಾಡಿದ್ದಾನೆ. ಚಿಕನ್ ಅಡುಗೆ ಮಾಡಿಲ್ಲವೆಂದು ಶೀಲಾ ಜೊತೆ ಜಗಳವಾಡಿ, ಚಾಕುವಿನಿಂದ ಆಕೆಯ ಎಡ ಭುಜಕ್ಕೆ ಹೊಡೆದು, ಕೊಲೆ ಮಾಡಿದ್ದನು ಈ ಬಗ್ಗೆ ಮೃತಳ ತಾಯಿ ಹರಿಹರ ಗ್ರಾಮಾಂತ ರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ತನಿಖಾಧಿಕಾರಿ ಯು.ಸತೀಶ ಪ್ರಕರಣದ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜೆ.ವಿಜಯಾನಂದ ಪ್ರಕರಣದ ವಿಚಾರಣೆ ನಡೆಸಿ ಮಾಗಾನಹಳ್ಳಿ ಕೆಂಚಪ್ಪನ ತನ್ನ ಪತ್ನಿ ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 6 ವರ್ಷ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರು. ದಂಡ ವಿಧಿಸಿ ಆದೇಶ ನೀಡಿದೆ. ಪಿರ್ಯಾದಿ ಪರ ಸರ್ಕಾರಿ ವಕೀಲ ಸತೀಶ ಕುಮಾರ ನ್ಯಾಯ ಮಂಡನೆ ಮಾಡಿದ್ದರು.

click me!