ಗಂಡನ 2ನೇ ಮದುವೆ ನಿಲ್ಲಿಸಿದ ಮೊದಲ ಹೆಂಡತಿ; ನಾನವನಲ್ಲ ಎಂದ ಪತಿರಾಯ!

By Sathish Kumar KHFirst Published Aug 21, 2024, 5:08 PM IST
Highlights

ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿದ್ದ ಮದುವೆಯೊಂದರಲ್ಲಿ ವಧುವಿನ ಆಗಮನದ ವೇಳೆ ಮೊದಲ ಪತ್ನಿ ಎಂಟ್ರಿ ನೀಡಿ ಗಲಾಟೆ ಮಾಡಿದ್ದಾರೆ. 

ಚಿಕ್ಕಬಳ್ಳಾಪುರ (ಆ.21): ಅದ್ಧೂರಿಯಾದ ಮದುವೆ ಸಿದ್ಧತೆ, ಪಕ್ಕದಲ್ಲಿ ಸುಂದರವಾದ ಹುಡುಗಿ ಇನ್ನೇನು ಒಂದೆರೆಡು ಮಂತ್ರ ಪಠಣೆಯ ನಂತರ ಉಂಗುರ ತೊಡಿಸಿ ಮದುವೆಯಾಗಬೇಕು ಎನ್ನುವಷ್ಟರಲ್ಲಿ ಮೊದಲ ಪತ್ನಿ ಬಂದು ಮದುವೆಯನ್ನು ನಿಲ್ಲಿಸಿದ್ದಾಳೆ. ಆದರೆ, ಮದುವೆ ಮನೆಯಲ್ಲಿ ಪೇಚಿಗೆ ಸಿಲುಕಿದ ಗಂಡ ನಾನವನಲ್ಲ, ನಾನವನಲ್ಲಾ.. ಎಂದು ಹೇಳಿದ್ದಾನೆ.

ಮದುವೆ ಮನೆಗೆ ನುಗ್ಗಿ ಮೊದಲನೇ ಹೆಂಡತಿ ಹಾಗೂ ಆಕೆಯ ಅಕ್ಕನ ಗಲಾಟೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಕ್ರೈಸ್ಟ್ ಚರ್ಚ್ ನಲ್ಲಿ ನಡೆದಿದೆ. ಮೊದಲನೇ ಹೆಂಡತಿ ರಶ್ಮಿ ಹಾಗೂ ಅವರ ಅಕ್ಕ ರೋಸಿ ಎಂಬಾಕೆಯಿಂದ ಗಲಾಟೆ ಮಾಡಲಾಗಿದೆ. ಇನ್ನು ಇಲ್ಲಿ ಮದುವೆ ಮಾಡಿಕೊಳ್ಳುತ್ತಿರುವ ವಧು ನನ್ನನ್ನು ಮೊದಲ ಮದುವೆ ಮಾಡಿಕೊಂಡು, ಡಿವೋರ್ಸ್‌ ನೀಡಿದೇ ಪುನಃ ಎರಡನೇ ಮದುವೆಯಾಗುತ್ತಿದ್ದಾನೆ ಎಂದು ಮದುವೆ ಮನೆಯಲ್ಲಿ ಆರೋಪ ಮಾಡಿದ್ದಾಳೆ. ಇದರಿಂದ ಮದುವೆ ಮಂಟಪದಲ್ಲಿದ್ದವರು ಬೆಚ್ಚಿ ಬಿದ್ದಿದ್ದಾರೆ.

Latest Videos

ನಮ್ಮ ಹುಡುಗ್ರು ಮಾಡಿರೋದು, ನಾನೇನು ಮಾಡಿಲ್ಲ ಸಾರ್; ಎಸಿಪಿ ಚಂದನ್‌ಗೆ ಅವಾಜ್ ಹಾಕಿದ್ದ ನಟ ದರ್ಶನ್

ಆದರೆ, ಇಲ್ಲಿ ತನಗೇನೂ ಗೊತ್ತಿಲ್ಲವೆಂಬಂತೆ ಚರ್ಚ್‌ನ ಪಾದ್ರಿಯ ನೇತೃತ್ವದಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳುತ್ತಿದ್ದ ನೋಹನ್ ಕಾಂತ್ ಮೊದಲ ಹೆಂಡತಿಯ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ಅವರು ಆರೋಪ ಮಾಡುತ್ತಿರುವಂತಹ ವ್ಯಕ್ತಿ ನಾನಲ್ಲ. ನಾನು ಈಗಾಗಲೇ ಮೊದಲ ಹೆಂಡತಿಗೆ ಡಿವೋರ್ಸ್ ನೀಡಿದ್ದು, ಅದಾದ ನಂತರವೇ ಈಗ 2ನೇ ಮದುವೆ ಮಾಡಿಕೊಳ್ಳುತ್ತಿದ್ದೇನೆ. ಇವರು ಯಾವುದೇ ದುರುದ್ದೇಶ ಇಟ್ಟುಕೊಮಡೇ ಮದುವೆಯನ್ನು ನಿಲ್ಲಿಸಲು ಬಂದಿದ್ದಾರೆ ಎಂದು ಹೇಳಿದ್ದಾನೆ.

ಇನ್ನು ಮೊದಲ ಹೆಂಡತಿ ಮದುವೆ ಮನೆಗೆ ಬಂದ ಹಿನ್ನೆಲೆಯಲ್ಲಿಯೇ ಮದುವೆಗೆ ಸಿಂಗಾರಗೊಂಡಿದ್ದ ಚರ್ಚ್‌ನಲ್ಲಿ ಗಾಲಾಟೆ ವಾತಾವರಣ ನಿರ್ಮಾಣವಾಗಿದೆ. ಎಲ್ಲರ ನಡುವೆಯೂ ವಾದ, ವಾಗ್ವಾದಗಳು ಏರ್ಪಟ್ಟಿವೆ. ಇನ್ನು ಮದುವೆ ನಿಲ್ಲಿಸಲು ಬಂದಿದ್ದ ಮೊದಲ ಪತ್ನಿಗೂ, ಮದುವೆ ಹುಡುಗ ಮತ್ತು ಅವರ ಮನೆಯವರೊಂದಿಗೆ ಪರಸ್ಪರ ಜೋರು ವಾಗ್ವಾದ ನಡೆದಿದೆ. ಜೊತೆಗೆ, ಮದುವೆ ಮಾಡಿಕೊಡುತ್ತಿದ್ದ ವಧುವಿನ ಕಡೆಯವರೂ ಕೂಡ ವಾಗ್ವಾದ ನಡೆಸಿದ್ದಾರೆ. ಮದುವೆ ಮಂಟಪದಲ್ಲಿ ಪರಸ್ಪರರು ಕೈ ಕೈ ಮಿಲಾಯಿಸುವ ಹಂತಕ್ಕೆ ಪರಿಸ್ಥಿತಿ ತಲುಪಿತ್ತು.

ಸರ್ಕಾರಿ ಬಸ್ಸಿನಲ್ಲಿ ಜನಿಸಿದ ಮಗುವಿಗೆ ಜೀವನಪೂರ್ತಿ ಉಚಿತ ಪ್ರಯಾಣದ ಕೊಡುಗೆ ಕೊಟ್ಟ ಸಾರಿಗೆ ಸಂಸ್ಥೆ!

ಚಿಕ್ಕಬಳ್ಳಾಪುರ ನಗರದ ನಿವಾಸಿ ನೋಹನ್ ಕಾಂತ್ ಅವರು 2018ರಲ್ಲಿ ಬೆಂಗಳೂರು ಮೂಲದ ನಿವಾಸಿ ರಶ್ಮಿಯನ್ನು ಮದಿವೆ ಮಾಡಿಕೊಂಡಿದ್ದರು. ಈಗ ನೋಹನ್ ಕಾಂತ್ 2ನೇ ಮದುವೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ನೋಹನ್ ಕಾಂತ್ ಈಗಾಗಲೇ ಮೊದಲ ಹೆಂಡತಿಗೆ ಡಿವೋರ್ಸ್ ಕೊಟ್ಟಿರುವುದಾಗಿ ಹೇಳಿದರೆ, ಆತನ ಹೆಂಡತಿ ನನಗೆ ಡಿವೋರ್ಸ್ ಕೊಡದೇ ಎರಡನೇ ಮದುವೆ ಆಗುತ್ತಿದ್ದಾನೆ ಎಂದು ಆರೋಪ ಮಾಡಿದ್ದಾಳೆ. ಗಲಾಟೆ ವಾತಾವರಣದ ಬೆನ್ನಲ್ಲಿಯೇ ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಎರಡು ಕಡೆಯವರ ಮನವೊಲಿಸುವ ಕಾರ್ಯ ಮಾಡಿದ್ದಾರೆ. ಆದರೂ, ಇ್ಬರ ನಡುವಿನ ಗಲಾಟೆ ತಗ್ಗದ ಹಿನ್ನೆಲೆಯಲ್ಲಿ ಮದುವೆಯನ್ನು ನಿಲ್ಲಿಸಿ ರಶ್ಮಿ ಹಾಗೂ ರೋಸಿಯನ್ನ ಪೊಲೀಸ್ ಠಾಣೆಗೆ ಕರೆದೊಯ್ದು ಸಂಧಾನ ಮಾಡುವ ಯತ್ನ ಮಾಡುತ್ತಿದ್ದಾರೆ.

click me!