Bengaluru: ರಾಜಕಾಲುವೆ ಒತ್ತುವರಿ ತೆರವಿಗೆ ಅಡ್ಡಿಪಡಿಸಿದ ನಂದೀಶ್‌ರೆಡ್ಡಿ ವಿರುದ್ಧ ದೂರು ದಾಖಲು

By Sathish Kumar KH  |  First Published Jun 20, 2023, 1:33 PM IST

ಬೆಂಗಳೂರಿನ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗಿದ್ದ ಬಿಬಿಎಂಪಿಗೆ ಅಡ್ಡಿಪಡಿಸಿದ ಮಾಜಿ ಶಾಸಕ ನಂದೀಶ್‌ರೆಡ್ಡಿ ವಿರುದ್ಧ ದೂರು ದಾಖಲು ಮಾಡಲಾಗುತ್ತದೆ.


ಬೆಂಗಳೂರು (ಜೂ.20): ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಲು ಕಾರಣವಾದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗಿದ್ದ ಬಿಬಿಎಂಪಿ ಕಾರ್ಯಕ್ಕೆ ಅಡ್ಡಿಪಡಿಸಿದ ಮಾಜಿ ಶಾಸಕ ನಂದೀಶ್‌ ರೆಡ್ಡಿ ವಿರುದ್ಧ ಬಿಬಿಎಂಪಿ ವತಿಯಿಂದ ದೂರು ದಾಖಲು ಮಾಡಲಾಗಿದೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು, ಬಿಬಿಎಂಪಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಬಿಬಿಎಂಪಿ ಅಧಿಕಾರಿಗಳ ಕೆಲಸಕ್ಕೆ ಅಡ್ಡಿ ಪಡಿಸಿದ ನಂದೀಶ್ ರೆಡ್ಡಿ ವಿರುದ್ಧ ದೂರು ದಾಖಲು ಮಾಡಲಾಗುತ್ತಿದೆ. ಮಾಜಿ ಶಾಸಕ ನಂದೀಶ್ ರೆಡ್ಡಿ ವಿರುದ್ಧ ದೂರು ನೀಡಲು ಸ್ಥಳೀಯ ವಲಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸುವಂತೆ ತಿಳಿಸಲಾಗಿದೆ. ಬಿಬಿಎಂಪಿ ಕಾರ್ಯಾಚರಣೆಗೆ ಯಾರೇ ಅಡ್ಡಿ ಪಡಿಸಿದರೂ ಕ್ರಿಮಿನಲ್ ಕೇಸ್ ದಾಖಲಿಸಲು ಸೂಚಿಸಿದ್ದೇನೆ ಎಂದು ತಿಳಿಸಿದರು.

Latest Videos

undefined

Bengaluru: ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಕೆಲವೇ ಗಂಟೆಗಳಲ್ಲಿ ಸ್ಥಗಿತ

ಬೆಂಗಳೂರಲ್ಲಿ ಮಳೆ ಚುರುಕುಗೊಂಡ ಕಾರಣ ಅಲರ್ಟ್‌:  ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಮಳೆ ಶುರುವಾಗಿದೆ. ಈ ವರ್ಷ ಮುಂಗಾರು ಮಳೆ ಬಹಳ ತಡವಾಗಿ ಮಳೆ ಆರಂಭಗೊಂಡಿದೆ. ಮಳೆ‌ ಎದುರಿಸಲು ಬಿಬಿಎಂಪಿ ಸಂಪೂರ್ಣ ಸಿದ್ಧವಾಗಿದೆ. ವಲಯ ಆಯುಕ್ತರ ಜೊತೆಗೂ ಈ ಸಂಬಂಧ ‌ನಿನ್ನೆ ಮೀಟಿಂಗ್ ಮಾಡಲಾಗಿದೆ. ಮಳೆ ಅವಾಂತರಗಳ ಬಗ್ಗೆ ಮೈಕ್ರೋ ಲೆವೆಲ್ ನಲ್ಲಿ ನಿಗಾ ವಹಿಸಲಾಗಿದೆ. ಎಲ್ಲೆಲ್ಲೆ ನೀರು‌ ನುಗ್ಗುತ್ತದೆಯೋ ಅಲ್ಲೆಲ್ಲಾ ಇಂಜಿನಿಯರ್ ಗಳನ್ನು ಅಲರ್ಟ್ ಮಾಡಲಾಗಿದೆ. ಈಗ ನಗರದಲ್ಲಿ ನಿರಂತರ ಮಳೆಯಾದರೂ ಯಾವುದೇ ತೊಂದರೆ ಇಲ್ಲ. ಮಳೆ ಎದುರಿಸಲು ಪಾಲಿಕೆ ರೆಡಿ ಇದೆ ಎಂದು ಮಾಹಿತಿ ನೀಡಿದರು.

ಒತ್ತುವರಿ ತೆರವು ತಾತ್ಕಾಲಿಕ ಸ್ಥಗಿತ: ನಗರದಲ್ಲಿ ಈಗ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಹದೇವಪುರ ವಲಯದ ವಿವಿಧೆಡೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸ್ಥಗಿತ ಮಾಡಲಾಗಿದೆ. ಮಳೆ ಸ್ಥಿತಿಗತಿ ನೋಡಿಕೊಂಡು ಕಾರ್ಯಾಚರಣೆ ನಡೆಸುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು.

Bengaluru- ಡಿಸಿಎಂ ಖಡಕ್‌ ವಾರ್ನಿಂಗ್: ದಿವ್ಯಶ್ರೀ, ಶಿವಕುಮಾರ ಯಾರೇ ಇರ್ಲಿ, ರಾಜಕಾಲುವೆ ಒತ್ತುವರಿ ತೆರವು ಮಾಡ್ಬೇಕಷ್ಟೇ!

ತೆರವು ಕಾರ್ಯಾಚರಣೆ ಮಾಡಿದಲ್ಲಿ ನೀರು ಹರಿಯಲು ಸಮಸ್ಯೆ:  ಮಳೆಯಲ್ಲಿ ಸರಿಯಾದ ಮಾರ್ಕಿಂಗ್‌ ಮಾಡಿ ತೆರವು ಮಾಡುವುದು ಕಷ್ಟವಾಗಲಿದೆ. ಜೊತೆಗೆ, ರಾಜಕಾಲುವೆ ಪಕ್ಕದಲ್ಲಿಯೇ ನಾವು ತೆರವು ಕಾರ್ಯ ಮಾಡಬೇಕಿದ್ದರಿಂದ ಡೆಮಾಲಿಶ್‌ ಮಾಡಿದ ಸ್ಥಳದಲ್ಲಿ ಬಿದ್ದ ತ್ಯಾಜ್ಯದಿಂದ ರನೀರು ಸರಾಗವಾಗಿ ಹರಿದು ಹೋಗಲು ಸಮಸ್ಯೆ ಆಗಲಿದೆ. ಈ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆಯನ್ನು ಸ್ಥಗಿತ ಮಾಡಲಾಗಿದೆ. ಒಂದು ವೇಳೆ ಬಿಬಿಎಂಪಿ ತೆರವು ಕಾರ್ಯಾಚರಣೆ ಮಾಡಿದಲ್ಲಿ ನೀರು ನಿಂತುಕೊಂಡರೆ ಮತ್ತಷ್ಟು ಸಮಸ್ಯೆ ಆಗಲಿದೆ. ಆದ್ದರಿಂದ ಮಳೆಯ ಸ್ಥಿತಿಗತಿ ಪರಿಶೀಲನೆ ಮಾಡಿಕೊಂಡು ಒತ್ತುವರಿ ತೆರವು ಕಾರ್ಯ ಮಾಡುತ್ತೇವೆ ಎಂದು ತಿಳಿಸಿದರು.

click me!