ಕನಕಗಿರಿಯಲ್ಲಿ ಬಾಲಕ ಸಾವು ಪ್ರಕರಣ: ಆರೋಗ್ಯ ಇಲಾಖೆಯಿಂದ ಪತ್ರಿಕಾ ಪ್ರಕಟಣೆ

By Ravi Janekal  |  First Published Jun 20, 2023, 8:15 AM IST

ನಿನ್ನೆ‌ ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ 5 ವರ್ಷದ ಕನಕರಾಯ ಎನ್ನುವ ಬಾಲಕ ಸಾವನ್ನಪ್ಪಿದ್ದ ಪ್ರಕರಣಕ್ಕೆ ಆರೋಗ್ಯ ಇಲಾಖೆಯಿಂದ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.


ಕೊಪ್ಪಳ (ಜೂ.20): ನಿನ್ನೆ‌ ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ 5 ವರ್ಷದ ಕನಕರಾಯ ಎನ್ನುವ ಬಾಲಕ ಸಾವನ್ನಪ್ಪಿದ್ದ ಪ್ರಕರಣಕ್ಕೆ ಆರೋಗ್ಯ ಇಲಾಖೆಯಿಂದ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ಕನಕರಾಯ ಸಾವು ಸಂಭವಿಸಿದ ಏರಿಯಾದಲ್ಲಿ ಕಲುಷಿತ ನೀರಿ‌ನ ಸಮಸ್ಯೆ ಇಲ್ಲ. ಜೊತೆಗೆ ಯಾವುದೇ ವಾಂತಿ-ಬೇಧಿ ಪ್ರಕರಣಗಳಿಲ್ಲ ನಿನ್ನೆ ಉಸಿರಾಟದ ಸಮಸ್ಯೆಯಿಂದ ಬಾಲಕ ಸಾವನ್ನಪ್ಪಿದ್ದಾನೆ. ವಾಂತಿ ಬೇಧಿಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಕನಕರಾಯ. ಚಿಕಿತ್ಸೆ ಫಲಕಾರಿಯಾಗದೆ ಸಾವು. ಈಗಾಗಲೇ ಜಿಲ್ಲೆಯಲ್ಲಿ ವಾಂತಿ-ಬೇಧಿ ಯಿಂದ ಮೂವರು ಮೃತಪಟ್ಟಿದ್ದಾರೆ. 

Tap to resize

Latest Videos

undefined

ಕನಕರಾಯನಿಗೆ ಜ್ವರದ ಜೊತೆಗೆ ವಾಂತಿ-ಬೇಧಿ ಆಗಿದೆ. ಕನಕಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಮನೆಗೆ ತೆರಳಿದ್ದಾನೆ. ಮನೆಯಲ್ಲಿ ತಾಯಿ ಇಡ್ಲಿ ತಿನಿಸಿದ್ದಾಳೆ. ಈ ವೇಳೆ ಆತ‌ನಿಗೆ ವಾಂತಿಯಾಗಿದೆ. ಪೂರ್ತಿ ವಾಂತಿ ಮಾಡಿಕೊಳ್ಳದೆ ಕನಕ ಮಲಗಿದ್ದಾನೆ. ವಾಂತಿ ಶ್ವಾಸಕೋಶದ ಒಳಗೆ ಹೋಗಿ ಉಸಿರಾಟದ ಸಮಸ್ಯೆಯಿಂದ ಕನಕರಾಯ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕುಷ್ಟಗಿ: ಕಲುಷಿತ ನೀರು ಸೇವಿಸಿ ಮಗು ಸಾವು, ಮೃತರ ಸಂಖ್ಯೆ 2ಕ್ಕೇರಿಕೆ

click me!