ಹೋಂ ಗಾರ್ಡ್‌ಗೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಉಚಿತ!

Published : Feb 10, 2020, 10:57 AM ISTUpdated : Feb 10, 2020, 10:58 AM IST
ಹೋಂ ಗಾರ್ಡ್‌ಗೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಉಚಿತ!

ಸಾರಾಂಶ

ಹೋಂ ಗಾರ್ಡ್‌ಗೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಉಚಿತ| ಗೃಹರಕ್ಷ ದಳದ ಸಿಬ್ಬಂದಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವಂತೆ ಆದೇಶ

ಬೆಂಗಳೂರು[ಫೆ.10]: ಬೆಂಗಳೂರು ಮಹಾನಗರ ಸಾರಿಗೆ ನಿಗಮದ(ಬಿಎಂಟಿಸಿ) ಸಾಮಾನ್ಯ ಬಸ್‌ಗಳಲ್ಲಿ ಗೃಹರಕ್ಷ ದಳದ ಸಿಬ್ಬಂದಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವಂತೆ ಆದೇಶಿಸಲಾಗಿದೆ.

BMTC ನಕಲಿ ವಿದ್ಯಾರ್ಥಿ ಪಾಸ್‌ ಮಾಡುತ್ತಿದ್ದವ ಅರೆಸ್ಟ್‌

ಕಳೆದ ಕೆಲ ವರ್ಷಗಳಿಂದ ಕರ್ತವ್ಯ ನಿರತ ಗೃಹರಕ್ಷದಳದ ಸಿಬ್ಬಂದಿ ಸಮವಸ್ತ್ರ ಧರಿಸಿ, ಗುರುತಿನ ಚೀಟಿ ತೋರಿಸಿ ನಿಗಮದ ಸಾಮಾನ್ಯ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಗುರುತಿನ ಚೀಟಿ ತೋರಿಸಿದರೂ ಚಾಲನಾ ಸಿಬ್ಬಂದಿ ಪ್ರಯಾಣಿಸಲು ಅವಕಾಶ ನೀಡದೆ ಅವಮಾನಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಹೀಗಾಗಿ ಈ ಬಗ್ಗೆ ಚಾಲನಾ ಸಿಬ್ಬಂದಿಗೆ ಸೂಕ್ತ ಮಾಹಿತಿ ನೀಡಬೇಕು.

ಲೇಡೀಸ್‌ ಸೀಟ್‌ ಬಿಡಿ ಎಂದ ಕಂಡಕ್ಟರ್‌ ಮೇಲೆ ಪುಂಡರಿಂದ ಹಿಗ್ಗಾಮುಗ್ಗಾ ಥಳಿತ

ಸಮವಸ್ತ್ರ ಧರಿಸಿದ, ಗೃಹರಕ್ಷದಳದ ಗುರುತಿನ ಚೀಟಿ ಹೊಂದಿರುವ ಸಿಬ್ಬಂದಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುವಂತೆ ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ನಿಗಮದ ಎಲ್ಲ ವಿಭಾಗೀಯ ನಿಯಂತ್ರಾಣಾಧಿಕಾರಿಗಳಿಗೆ ಸೂಚಿಸಿದ್ದಾರೆ.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!