ಏರ್ಪೋರ್ಟ್ ಪ್ರಯಾಣಿಕರೇ ಈ ಸ್ಟೋರಿ ಓದಲೇಬೇಕು: ಫೆಬ್ರವರಿ 17ರವರೆಗೆ ಏರ್ ಶೋ ಹಿನ್ನೆಲೆ ಸಂಚಾರ ದಟ್ಟಣೆ

By Govindaraj S  |  First Published Feb 9, 2023, 7:40 PM IST

ಯಲಹಂಕದ ಏರ್‌ಫೋರ್ಸ್ ಸ್ಟೇಷನ್​​ನಲ್ಲಿ ಫೆಬ್ರವರಿ 13 ರಿಂದ 17ರವರೆಗೆ 5 ದಿನಗಳ ಏರೋ ಇಂಡಿಯಾ-2023ರ ವೈಮಾನಿಕ ಪ್ರದರ್ಶನ ನಡೆಯಲಿದೆ. ವಿಮಾನಗಳ ತಾಲೀಮು ಹೀಗಾಗಲೇ ಶುರುವಾಗಿದ್ದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ. 


ವರದಿ: ರವಿಕುಮಾರ್ ವಿ, ಏಷ್ಯಾನೆಟ್ ಸುವರ್ಣ ನ್ಯೂಸ್, ದೇವನಹಳ್ಳಿ

ದೇವನಹಳ್ಳಿ (ಫೆ.09): ಯಲಹಂಕದ ಏರ್‌ಫೋರ್ಸ್ ಸ್ಟೇಷನ್​​ನಲ್ಲಿ ಫೆಬ್ರವರಿ 13 ರಿಂದ 17ರವರೆಗೆ 5 ದಿನಗಳ ಏರೋ ಇಂಡಿಯಾ-2023ರ ವೈಮಾನಿಕ ಪ್ರದರ್ಶನ ನಡೆಯಲಿದೆ. ವಿಮಾನಗಳ ತಾಲೀಮು ಹೀಗಾಗಲೇ ಶುರುವಾಗಿದ್ದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸುರಕ್ಷತೆಯ ದೃಷ್ಟಿಯಿಂದ ಕೆಐಎಎಲ್​ನ ವಿಮಾನಗಳ ಸೇವೆಯಲ್ಲಿ ಕೆಲ ಸಮಯ ವ್ಯತ್ಯಯವಾಗಲಿದ್ದು, ಪ್ರಯಾಣಿಕರು ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಏರ್ಪೋರ್ಟ್ ರಸ್ತೆಯಲ್ಲಿ ವಾಹನಗಳ ದಟ್ಟಣೆ ಉಂಟಾಗಲಿದೆ. ನಿಲ್ದಾಣಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ಪ್ರಯಾಣಿಕರು ಈ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿದ್ದಾರೆ.

Tap to resize

Latest Videos

ವಾಣಿಜ್ಯ ವಿಮಾನಗಳ ಹಾರಾಟ ವೇಳಾಪಟ್ಟಿ 
ಫೆಬ್ರವರಿ 8 ರಿಂದ 11: ಬೆಳಗ್ಗೆ 9 ರಿಂದ 12 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ
ಫೆಬ್ರವರಿ 12 ಮತ್ತು 13: ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ
ಫೆಬ್ರವರಿ 14 ಮತ್ತು 15: ಮಧ್ಯಾಹ್ನ 12 ರಿಂದ 2.30 ರವರೆಗೆ
ಫೆಬ್ರವರಿ 15 ಮತ್ತು 17: ಬೆಳಗ್ಗೆ 9. 30 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 2 ರಿಂದ 5 ರವರೆಗೆ

ಸಿರಿಯಾ-ಟರ್ಕಿಯಲ್ಲಿ ಸಿಲುಕಿದವರ ರಕ್ಷಣೆಗೆ ವಿಜಯಪುರ ಜಿಲ್ಲಾಡಳಿತ ಬದ್ಧ!

ಏರೋ ಇಂಡಿಯಾ ಶೋಗೆ  ಮಹಾನಗರ ಪಾಲಿಕೆ ಎಲ್ಲ ರೀತಿಯಲ್ಲಿ ಸಿದ್ಧತೆ ಕೈಗೊಂಡಿದೆ. ಯಲಹಂಕದ ವಾಯುನೆಲೆಯಲ್ಲಿ ನಡೆಯುವ ಏರ್‌ ಶೋ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಸ್ವಚ್ಛತೆ, ಆಗಮಿಸುವ ನಾಗರಿಕರಿಗೆ ಶೌಚಾಲಯ ಸೇರಿದಂತೆ ಇನ್ನಿತರ ಮೂಲ ಸೌಲಭ್ಯಗಳನ್ನು ಬಿಬಿಎಂಪಿ ವತಿಯಿಂದ ಕಲ್ಪಿಸಲಾಗುತ್ತಿದೆ. ಯಲಹಂಕ ವ್ಯಾಪ್ತಿಯಲ್ಲಿ ಬರುವ ಕೆರೆಗಳಲ್ಲಿ ಮೀನುಗಾರಿಕೆ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅದೇ ರೀತಿ ಈ ವ್ಯಾಪ್ತಿಯ ಮಾಂಸದಂಗಡಿಗಳನ್ನೂ ಮುಚ್ಚಲಾಗಿದೆ.

click me!