ಸಿರಿಯಾ-ಟರ್ಕಿಯಲ್ಲಿ ಸಿಲುಕಿದವರ ರಕ್ಷಣೆಗೆ ವಿಜಯಪುರ ಜಿಲ್ಲಾಡಳಿತ ಬದ್ಧ!

By Suvarna News  |  First Published Feb 9, 2023, 7:23 PM IST

ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ವಿಜಯಪುರ ಜಿಲ್ಲೆಯ‌ ನಾಗರಿಕರು ಸಿಲುಕಿಕೊಂಡಿದ್ದರೆ, ವಿಜಯಪುರ ಜಿಲ್ಲಾಡಳಿತವನ್ನು ಅವರ ಸಂಬಂಧಿಕರು ಸಂಪರ್ಕಿಸಿದರೆ ಅಂತವರ ಸಹಾಯಕ್ಕೆ ಜಿಲ್ಲಾಡಳಿತ ಎಲ್ಲ ರೀತಿ ನೆರವು ನೀಡಲು ಸಿದ್ದವಾಗಿದೆ. 


ವಿಜಯಪುರ (ಫೆ.09): ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ವಿಜಯಪುರ ಜಿಲ್ಲೆಯ‌ ನಾಗರಿಕರು ಸಿಲುಕಿಕೊಂಡಿದ್ದರೆ, ವಿಜಯಪುರ ಜಿಲ್ಲಾಡಳಿತವನ್ನು ಅವರ ಸಂಬಂಧಿಕರು ಸಂಪರ್ಕಿಸಿದರೆ ಅಂತವರ ಸಹಾಯಕ್ಕೆ ಜಿಲ್ಲಾಡಳಿತ ಎಲ್ಲ ರೀತಿ ನೆರವು ನೀಡಲು ಸಿದ್ದವಾಗಿದೆ.  ಈ ಸಂಬಂಧ ರಾಜ್ಯ ಸರ್ಕಾರ ನೋಡಲ್ ಅಧಿಕಾರಿಯನ್ನು ನೇಮಿಸಿದ್ದು ಅವರ ಮೂಲಕ ಸಿಲುಕಿಕೊಂಡಿರುವರ ರಕ್ಷಣೆಗೆ ಮುಂದಾಗಲಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನ್ನಮ್ಮನವರ ಮಾಹಿತಿ ನೀಡಿದ್ದಾರೆ.‌ 

ಈ ಸಂಬಂಧ ಸುದ್ದಿಗಾರರಿಗೆ ಮಾಹಿತಿ ನೀಡಿರುವ ಅವರು, ಸೋಮವಾರ ಪ್ರಬಲ ಭೂಕಂಪವಾದ ಮೇಲೆ ಇಲ್ಲಿಯವರೆಗೆ ಜಿಲ್ಲೆಯವರು ಜಿಲ್ಲಾಡಳಿತವನ್ನು ಸಂಪರ್ಕಿಸಿಲ್ಲ. ಯಾರಾದರೂ ತಕ್ಷಣ ಜಿಲ್ಲಾಡಳಿತವನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ನೀಡಿದರೆ ಜಿಲ್ಲಾಡಳಿತ ಅಂಥವರ ನೆರವಿಗೆ ಬರಲಿದೆ ಎಂದು ತಿಳಿಸಿದ್ದಾರೆ. ದಿನದ 24/7ಸೇವೆ ಹೊಂದಿದ್ದು, ಟರ್ಕಿ ಹಾಗೂ ಸಿರಿಯಾದಲ್ಲಿ ಯಾರಾದರೂ ಸಿಲುಕಿಕೊಂಡಿದ್ದರೇ, ಅವರ ಸಂಬಂಧಿಕರು ಹೆಲ್ಪೆ ಲೈನ್ 080-1070, 080-22340676 ಇಲ್ಲವೇ ಈ ಮೇಲ್ seockarataka@gmail.com ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. 

Tap to resize

Latest Videos

ಉಕ್ಕು ಕಾರ್ಖಾನೆ ಉಳಿಸಲು ಎಲ್ಲ ಪ್ರಯತ್ನ: ಸಿಎಂ ಬೊಮ್ಮಾಯಿ ಭರವಸೆ

ಟರ್ಕಿಯಲ್ಲಿ ಭಾರತದ ಕಾರ್ಯಾಚರಣೆ ಆರಂಭ: ಭೀಕರ ಭೂಕಂಪಕ್ಕೆ ತುತ್ತಾಗಿರುವ ಟರ್ಕಿಗೆ ತೆರಳಿರುವ ಭಾರತದ ನೆರವಿನ ತಂಡ ಬುಧವಾರದಿಂದಲೇ ತನ್ನ ಕಾರ್ಯಾಚರಣೆ ಆರಂಭಿಸಿದೆ. ಎನ್‌ಡಿಆರ್‌ಎಫ್‌ನ ರಕ್ಷಣಾ ಕಾರ್ಯಾಚರಣೆ ಮತ್ತು ಸೇನೆಯ ವೈದ್ಯಕೀಯ ತಂಡ ಸಂಕಷ್ಟಪೀಡಿತ ಜನರಿಗೆ ನೆರವು ನೀಡುವ ಕೆಲಸವನ್ನು ಆರಂಭಿಸಿದೆ. ಟರ್ಕಿ ಮತ್ತು ಸಿರಿಯಾಗೆ ಆಪರೇಷನ್‌ ದೋಸ್‌್ತ ಹೆಸರಿನಲ್ಲಿ ನೆರವಿನ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. 

ಈ ನಡುವೆ ರಕ್ಷಣಾ ಕಾರ್ಯಾಚರಣೆಗಾಗಿ ಎನ್‌ಡಿಆರ್‌ಎಫ್‌ನ ಮತ್ತೊಂದು ತಂಡವನ್ನು ಬುಧವಾರ ಟರ್ಕಿಗೆ ರವಾನಿಸಿದೆ. ಈಗಾಗಲೇ ಟರ್ಕಿ ತಲುಪಿರುವ ಭಾರತದ ರಕ್ಷಣಾ ತಂಡಗಳು ಗಾಜಿಯಾಂಟೆಪ್‌ ಪ್ರಾಂತ್ಯದಲ್ಲಿ ಮತ್ತು ಉರ್ಫಾ ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿವೆ. ‘ನಮ್ಮ ರಕ್ಷಣಾ ಪಡೆಗಳು ಟರ್ಕಿಯ ಸರ್ಕಾರ ಮತ್ತು ಭಾರತದ ರಾಯಭಾರಿ ಕಚೇರಿ ಅಧೀನದಲ್ಲಿ ಈಗಾಗಲೇ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿವೆ. 

ಅಭಿ​ವೃದ್ಧಿ ವಿಚಾ​ರ​ದಲ್ಲಿ ಶಿರಾ​ಳ​ಕೊಪ್ಪ, ಶಿಕಾ​ರಿ​ಪುರ ಕಣ್ಣು​ಗ​ಳಿ​ದ್ದಂತೆ: ಸಂಸದ ಬಿ.ವೈ.ರಾಘವೇಂದ್ರ

ಈ ತಂಡಗಳು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವ ಮೃತದೇಹಗಳನ್ನು ಹೊರತೆಗೆಯಲು ಹಾಗೂ ಸಂತ್ರಸ್ತರಿಗೆ ಅವಶ್ಯವಾದ ವೈದ್ಯಕೀಯ ನೆರವನ್ನು ಒದಗಿಸುವತ್ತ ಕಾರ್ಯೋನ್ಮುಖವಾಗಿವೆ’ ಎಂದು ಎನ್‌ಡಿಆರ್‌ಎಫ್‌ ನಿರ್ದೇಶಕ ಅತುಲ್‌ ಕರ್ವಾಲ್‌ ಹೇಳಿದ್ದಾರೆ. ಬುಧವಾರ ಭಾರತದಿಂದ ಹೊರಟ ವಿಮಾನದಲ್ಲಿ ಡೀಸೆಲ್‌, ಸೋಲಾರ್‌ ದೀಪಗಳು, ತಿನ್ನಲು ಸಿದ್ದವಾದ ಆಹಾರವನ್ನು ಕಳುಹಿಸಲಾಗಿದೆ. ಟರ್ಕಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್‌ಡಿಆರ್‌ಎಫ್‌ ತಂಡಗಳಲ್ಲಿ ಐವರು ಮಹಿಳೆಯರು ಸಹ ಸೇರಿದ್ದಾರೆ.

click me!