
ಬಳ್ಳಾರಿ (ಫೆ.5): ಬಳ್ಳಾರಿ ಜಿಲ್ಲಾಸ್ಪತ್ರೆ ಮಕ್ಕಳ ವೈದ್ಯ ಡಾ ಸುನೀಲ್ ಕಿಡ್ನಾಪ್ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಇಡೀ ಕಿಡ್ನಾಪ್ ಪ್ರಕರಣದ ಸೂತ್ರಧಾರಿ, ಪಾತ್ರಧಾರಿ ಕಾಂಗ್ರೆಸ್ ಮುಖಂಡನನ್ನು ಅರೆಸ್ಟ್ ಮಾಡಲಾಗಿದೆ. ಕಾಂಗ್ರೆಸ್ ಮುಖಂಡ ವಿಜಯ ಕುಮಾರ್ ಕಿಡ್ನಾಪ್ ಪ್ರಕರಣದ ಕಿಂಗ್ ಪಿನ್ ಎಂದು ಗುರುತಿಸಲಾಗಿದೆ. ಜಿಲ್ಲೆಯ ಕಾಂಗ್ರೆಸ್ ನಾಯಕರಿಗೆ ವಿಜಯಕುಮಾರ್ ಅತ್ಯಾಪ್ತ ವ್ಯಕ್ತಿಯಾಗಿದ್ದ. ಕಾಂಗ್ರೆಸ್ ನಾಯಕರ ಆಪ್ತ ವ್ಯಕ್ತಿ ಆಗಿದ್ದ ಕಾರಣಕ್ಕೆ ಬಚಾವ್ ಮಾಡೋದಕ್ಕೆ ಪ್ಲ್ಯಾನ್ ಕೂಡ ನಡೆದಿತ್ತು. ಹಣದಾಸೆಗೆ ಸಂಚು ರೂಪಿಸಿ ಡಾ.ಸುನೀಲ್‌ರನ್ನು ಸ್ವತಃ ವಿಜಯ್‌ಕುಮಾರ್ ಕಿಡ್ನಾಪ್ ಮಾಡಿಸಿದ್ದ ಎನ್ನಲಾಗಿದೆ.
ಬಳ್ಳಾರಿ ನಗರಸಭೆಯ ಮಾಜಿ ಉಪಾಧ್ಯಕ್ಷರ ಪುತ್ರನಾಗಿರುವ ವಿಜಯಕುಮಾರ್, ಪ್ರಕರಣದಲ್ಲಿ ತನ್ನ ಪಾತ್ರದ ಕುರಿತು ಎಲ್ಲರಿಗೂ ಗೊತ್ತಾಗುತ್ತಿದ್ದಂತೆ ನಾಪತ್ತೆಯಾಗಿದ್ದ. ಕಾಂಗ್ರೆಸ್ ಮುಖಂಡ ಅನ್ನೋ ಕಾರಣಕ್ಕೆ ವಿಜಯಕುಮಾರ್ ರಕ್ಷಣೆಗೆ ಕಾಂಗ್ರೆಸ್ ಪ್ರಭಾವಿ ನಾಯಕರುಗಳು ನಿಂತಿದ್ದರು ಎಂದು ವರದಿಯಾಗಿದೆ.
News Hour: ಶಂಕರ್ ಗುರು ರೀತಿ ಇದ್ದ ರೆಡ್ಡಿ-ರಾಮುಲು, ಹಾವು-ಮುಂಗುಸಿ ಆಗಿದ್ದೇಗೆ?
ಏಳು ಆರೋಪಿಗಳ ಬಂಧನದ ಬಳಿಕ ಈಗ ವಿಜಯ್ ಕುಮಾರ್ ಕೂಡ ಅರೆಸ್ಟ್ ಆಗಿದ್ದಾನೆ. ಘಟನೆ ನಡೆದು ನಾಲ್ಕು ದಿನಗಳ ಬಳಿಕ ಪೊಲೀಸರ ಕೈಗೆ ವಿಜಯ್‌ಕುಮಾರ್ ಸಿಕ್ಕಿ ಹಾಕಿಕೊಂಡಿದ್ದಾರೆ. ಇದೀಗ ಕಿಡ್ನಾಪ್ ಪ್ರಕರಣದಲ್ಲಿ ಇದೇ ವಿಜಯಕುಮಾರ್ ಎ1 ಆರೋಪಿ ಎನ್ನಲಾಗಿದೆ. ಕಿಡ್ನಾಪ್ ಪ್ರಕರಣದ ಸೂತ್ರದಾರನಾಗಿದ್ದ ವಿಜಯಕುಮಾರ್ ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ ಎಂದು ಬಳ್ಳಾರಿ ಎಸ್‌ಪಿ ಶೋಭಾರಾಣಿ ತಿಳಿಸಿದ್ದಾರೆ.
ಕೋಣ ಮಾಲೀಕನ ಪತ್ತೆ ಹಚ್ಚಲು ಡಿಎನ್‌ಎ ಟೆಸ್ಟ್‌ಗೆ ನಿರ್ಧಾರ, ಬಳ್ಳಾರಿಯಲ್ಲಿ ವಿಚಿತ್ರ ಬಡಿದಾಟ!