ಗಾಂಜಾ ಸೇವನೆಯ ಅಡ್ಡೆ ಆಯ್ತಾ ಪಾಳು ಬಿದ್ದ ಶಿವನ ದೇವಾಲಯ?: ಇಲ್ಲಿ ಹೇಳೋರು ಇಲ್ಲ ಕೇಳೋರು ಇಲ್ಲ!

Published : Feb 04, 2025, 08:24 PM IST
ಗಾಂಜಾ ಸೇವನೆಯ ಅಡ್ಡೆ ಆಯ್ತಾ ಪಾಳು ಬಿದ್ದ ಶಿವನ ದೇವಾಲಯ?: ಇಲ್ಲಿ ಹೇಳೋರು ಇಲ್ಲ ಕೇಳೋರು ಇಲ್ಲ!

ಸಾರಾಂಶ

ಅದೊಂದು ಶಿವನ ದೇವಾಲಯ. ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ.  ಪುಂಡಪೋಕರಿಗಳ ತಾಣವಾಗಿರುವ ಇಲ್ಲಿ ಶಿವಲಿಂಗದ ಮುಂದೆಯೇ ಎಣ್ಣೆ ಸಿಗರೇಟು ಹೊಡೀತಾರೆ. ಅಷ್ಟೆ ಅಲ್ಲ ಇಲ್ಲಿ ಗಾಂಜಾ ಅಡ್ಡೆಯು ಆಗಿದೆ ಎಂಬ ಗಂಭೀರ ಆರೋಪ ಇದೆ. 

ವರದಿ: ಪುಟ್ಟರಾಜು.ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ (ಫೆ.04): ಅದೊಂದು ಶಿವನ ದೇವಾಲಯ. ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ.  ಪುಂಡಪೋಕರಿಗಳ ತಾಣವಾಗಿರುವ ಇಲ್ಲಿ ಶಿವಲಿಂಗದ ಮುಂದೆಯೇ ಎಣ್ಣೆ ಸಿಗರೇಟು ಹೊಡೀತಾರೆ. ಅಷ್ಟೆ ಅಲ್ಲ ಇಲ್ಲಿ ಗಾಂಜಾ ಅಡ್ಡೆಯು ಆಗಿದೆ ಎಂಬ ಗಂಭೀರ ಆರೋಪ ಇದೆ. ನೋಡಿ.. ನೋಡಿ... ಏಷಿಯಾನೆಟ್ ಸುವರ್ಣ ನ್ಯೂಸ್ ಕ್ಯಾಮೆರಾ ಕಂಡ ತಕ್ಷಣ ಶಿವಲಿಂಗದ ಮುಂದೆ ಎಣ್ಣೆ ಹೊಡೀತಾ ಕೂತಿದ್ದ ಯುವಕರು ಮುಖಮುಚ್ಕೊಂಡು ಎದ್ನೋ ಬಿದ್ನೋ ಅಂತ ಓಡಿ ಹೋಗ್ತಿದ್ದಾರೆ. ಇದು ಶಿವನ ದೇವಾಲಯವಾದರು ಇದೀಗ ಪುಂಡುಪೋಕರಿಗಳ ತಾಣವಾಗಿದೆ. 

ಇದು ಚಾಮರಾಜನಗರದ 17 ನೇ ವಾರ್ಡ್ ನ ಉಪ್ಪಾರ ಬೀದಿಯಲ್ಲಿರೋ  ಶಿವನ ದೇವಾಲಯ. ಇದನ್ನು ಮೈಸೂರು ಮಹಾರಾಜರು ಕಟ್ಟಿಸಿದ್ದರು ಎಂಬ ಇತಿಹಾಸವಿದೆ. ಆದರೆ ಕೆಲವಾರು ವರ್ಷಗಳಿಂದ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ. ದೇವಾಲಯದ ಒಳಗೆ ಒಂದು ಶಿವಲಿಂಗವಿದ್ದು ಕುಡುಕರು ಇದರ ಪಾವಿತ್ರ್ಯತೆಯನ್ನೆ ಹಾಳು ಮಾಡಿದ್ದಾರೆ. ಶಿವಲಿಂಗದ ಮುಂದೆಯೇ ಇಲ್ಲಿ ಎಣ್ಣೆ ಸಿಗರೇಟ್ ಹೊಡೀತಾರೆ. ಕುಡುಕರ ಪಾಲಿಗೆ ಇದೊಂಥರಾ ಬಾರ್ ಅಂಡ್ ರೆಸ್ಟೋರೆಂಟ್ ಆಗಿದೆ. 

ಶಿವಲಿಂಗದ ಸುತ್ತಮುತ್ತ ಎಣ್ಣೆಬಾಟಲಿಗಳು ಹಾಗು ಬೀಡಿಸಿಗರೇಟ್ ತುಂಡುಗಳ ರಾಶಿಯೇ ಬಿದ್ದಿದೆ. ಸ್ಥಳೀಯರು ಹೇಳುವ ಪ್ರಕಾರ ಇಲ್ಲಿ ಇದು ಗಾಂಜಾ ಅಡ್ಡೆಯು ಆಗಿದೆಯಂತೆ. ಎಲ್ಲಿಂದಲೋ ಗಾಂಜಾ ತಂದು ಇಲ್ಲಿ ಶಿವಲಿಂಗದ ಮುಂದೆ ಕುಳಿತು  ಹಾಡು ಹಗಲೇ ಎಣ್ಣೆ ಹೊಡೀತಾ ಗಾಂಜಾ ನಿಶೆಯಲ್ಲಿ ತೇಲುತ್ತಾರೆ ಪಡ್ಡೆ ಹುಡುಗರು. ಇಲ್ಲಿ ಗಾಂಜಾ ಸೇವನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ. 

ವೈದ್ಯರ ಎಡವಟ್ಟಿಗೆ ಆರು ತಿಂಗಳ ಹಸುಗೂಸು ಬಲಿ: ಕಿವಿ ಚುಚ್ಚಿಸಲು ಕರೆತಂದಿದ್ದ ಮಗುವಿಗೆ ಅನಸ್ತೇಷಿಯಾ ಓವರ್ ಡೋಸ್!

ಕುಡುಕರ ಹಾವಳಿಯಿಂದ ಸ್ಥಳೀಯರು ಬೇಸತ್ತು ಹೋಗಿದ್ದಾರೆ. ಪುಂಡುಪೋಕರಿಗಳು ಗಲಾಟೆ ಮಾಡುವ ಭಯದಿಂದ ನಮಗ್ಯಾಕೆ ಇದರ ಉಸಾಬರಿ ಎಂದು ಯಾರಿಗೂ ದೂರು ಕೊಡದೆ ಸಹಿಸಿಕೊಂಡು ಹೋಗ್ತಿದ್ದಾರೆ. ಇಲ್ಲಿ ಹೇಳೋರು ಕೇಳೋರು ಯಾರು ಇಲ್ಲವಾಗಿದ್ದು ಪೂಜೆ ಪುನಸ್ಕಾರಗಳ ತಾಣವಾಗಿ ಇರಬೇಕಾದ ಈ ದೇವಾಲಯ ದುಶ್ಟಟಗಳ  ವೇದಿಕೆಯಾಗಿರೋದು ದುರಂತವೇ ಸರಿ.

PREV
click me!

Recommended Stories

ಬೆಂಗಳೂರು: ಸೈಬರ್ ವಂಚನೆ ತಡೆಗೆ ಎಐ ಅಸ್ತ್ರ ಪ್ರಯೋಗ
ಮಿರ್ಜಾ ಇಸ್ಮಾಯಿಲ್ ಮೊಮ್ಮಗಳ ಹಂತಕನಿಗೆ ಜೈಲೇ ಗತಿ, ಏನಿದು ಪ್ರಕರಣ?