ಬೆಳಗಾವಿ: ಭಾರಿ ಮಳೆಯಿಂದ ಹೈರಾಣಾದ ಮೊರಾರ್ಜಿ ಶಾಲಾ ಮಕ್ಕಳಿಗೆ ಹಿಗ್ಗಾಮುಗ್ಗಾ ಥಳಿಸಿದ ಶಿಕ್ಷಕ

By Sathish Kumar KH  |  First Published Jul 26, 2024, 3:09 PM IST

ಮೊರಾರ್ಜಿ ವಸತಿ ಶಾಲೆಯಲ್ಲಿರುವ ಮಕ್ಕಳಿಗೆ ಇಲ್ಲಿನ ಶಿಕ್ಷಕರೊಬ್ಬರೋ ಸುಖಾ ಸುಮ್ಮನೇ ಕ್ಷುಲ್ಲಕ ಕಾರಣಕ್ಕೆ ಮನಸೋ ಇಚ್ಛೆ ಹಲ್ಲೆ ಮಾಡಿದ ಘಟನೆ ನಡೆದಿದೆ.


ಬೆಳಗಾವಿ (ಜು.26): ರಾಜ್ಯದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಿರಂತರ ಮಳೆಯಿಂದಾಗಿ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ತರಗತಿ ನಡೆಯಲಾರದೇ ಹೈರಾಣಾಗಿದ್ದಾರೆ. ಆದರೆ, ಮೊರಾರ್ಜಿ ವಸತಿ ಶಾಲೆಯಲ್ಲಿರುವ ಮಕ್ಕಳಿಗೆ ಇಲ್ಲಿನ ಶಿಕ್ಷಕರೊಬ್ಬರೋ ಸುಖಾ ಸುಮ್ಮನೇ ಕ್ಷುಲ್ಲಕ ಕಾರಣಕ್ಕೆ ಮನಸೋ ಇಚ್ಛೆ ಹಲ್ಲೆ ಮಾಡಿದ ಘಟನೆ ನಡೆದಿದೆ.

ಹೌದು, ವಸತಿ ಶಾಲಾ ವಿದ್ಯಾರ್ಥಿಗಳ ಮೇಲೆ ಶಿಕ್ಷಕನಿಂದ ಮನಸೊಇಚ್ಚೆ ಥಳಿತ ಆರೋಪ ವ್ಯಕ್ತವಾಗಿದೆ. ಮಕ್ಕಳ ಮೇಲೆ ಹಲ್ಲೆಗೈದ ಶಿಕ್ಷಕನ ವಿರುದ್ಧ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸಾಲಹಳ್ಳಿಯಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯಲ್ಲಿ ಘಟನೆ ನಡೆದಿದೆ. ಸಾಲಹಳ್ಳಿಯಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯ ಶಿಕ್ಷಕನಿಂದ ಮಕ್ಕಳ ಮೇಲೆ ದೌರ್ಜನ್ಯ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ವಸತಿ ಶಾಲೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ 12ಕ್ಕೂ ಹೆಚ್ಚು ಮಕ್ಕಳ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಲಾಗಿದೆ.

Latest Videos

undefined

ರೇಣುಕಾಸ್ವಾಮಿ ಪತ್ನಿಗೆ ನೆರವು ನೀಡಲು ಹೇಳಿದ್ರಾ ನಟ ದರ್ಶನ್? 1 ಲಕ್ಷ ರೂ. ಚೆಕ್ ಕೊಟ್ಟ ವಿನೋದ್ ರಾಜ್!

ಮೋರಾರ್ಜಿ ದೆಸಾಯಿ ವಸತಿ ಶಾಲೆಯ ಹಿಂದಿ ಬೋಧಿಸುವ ಸಹ ಶಿಕ್ಷಕ ನಿಂಗನಗೌಡ್ರ ಹೊಸಗೌಡ್ರ ಅವರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಶಿಕ್ಷಕ ಹಲ್ಲೆ ಮಾಡಿರುವ ಕುರಿತು ಅಳಲು ತೋಡಿಕೊಂಡ ವಿದ್ಯಾರ್ಥಿಗಳು. ನಾವು ತರಗತಿಯಿಂದ ಹೊರಗೆ ಬಂದಾಗ, ಹಿಂದಿ ಮೇಸ್ಟ್ರು ತರಗತಿಗೆ ಬಂದರು. ಈ ವೇಳೆ ನಾವು ಒಳಗೆ ಹೋಗಿ ಓದುತ್ತಾ ಕುಳಿತರೂ ಸುಮ್ಮನಿರದೇ ಕೋಲು ತೆಗೆದುಕೊಂಡು ಕೈ, ಕಾಲು, ತಲೆ, ಬೆನ್ನು, ತೊಡೆ ಭಾಗ ಸೇರಿದಂತೆಬ ವಿವಿಧೆಡೆ ಗಾಯಗಳಾಗುವಂತೆ ತೀವ್ರವಾಗಿ ಥಳಿಸಿದ್ದಾರೆ ಎಂದು ಮಕ್ಕಳು ಗಾಯಗಳನ್ನು ತೋರಿಸಿ ಅಳಲು ತೋಡಿಕೊಂಡಿದ್ದಾರೆ.

ಇನ್ನು ಮಕ್ಕಳ ಮೇಲೆ ಹಲ್ಲೆ ಮಾಡಿದ ಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ 12 ಮಕ್ಕಳ ಪೋಷಕರು  ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿಗೆ ದೂರು ನೀಡಿದ ಪೋಷಕರು ಹಾಗೂ ವಿದ್ಯಾರ್ಥಿಗಳು. ಇನ್ನು ಘಟನೆ ನಡೆದ ಬೆನ್ನಲ್ಲಿಯೇ ಶಿಕ್ಷಕ ಯಾವುದೇ ಪ್ರತಿಕ್ರಿಯೆ ನೀಡದೇ ಸುಮ್ಮನಾಗಿದ್ದಾನೆ. ಜೊತೆಗೆ, ಮಕ್ಕಳು ಈ ಶಿಕ್ಷಕರು ಹಾಸ್ಟೆಲ್‌ನಲ್ಲಿ ಪುನಃ ಥಳಿಸುವ ಸಾಧ್ಯತೆಯಿದ್ದು, ರಕ್ಷಣೆ ನೀಡುವಂತೆಯೂ ಮನವಿ ಮಾಡಿದ್ದಾರೆ.

ಭಾರಿ ಮಳೆಯಿಂದ ಖುಷಿಯಾದ ರೈತ, ಜಲಾವೃತ ಪ್ರದೇಶದಲ್ಲಿ ಅಪ್ಪ ಮಗನ ಭರ್ಜರಿ ಸ್ಟೆಪ್ಸ್!

ಭಾರಿ ಮಳೆಯಿಂದ ವಿದ್ಯಾರ್ಥಿಗಳು ಹೈರಾಣು: ಬೆಳಗಾವಿಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಆಟವಿಲ್ಲದೇ ಕೇವಲ 4 ಗೋಡೆಗಳ ಮಧ್ಯದಲ್ಲಿ ಪಾಠ ಪ್ರವಚನ ಕೇಳುತ್ತಾ ಕೂರುವಂತಾಗಿದೆ. ಶಾಲೆ ಎಂದಮೇಲೆ ಒಂದಷ್ಟು ತುಂಟತನ ಇದ್ದೇ ಇರುತ್ತದೆ. ಆದರೆ, ಅಂತಹ ವಿದ್ಯಾರ್ಥಿಗಳನ್ನು ಭೀಕರವಾಗಿ ಥಳಿಸುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ. ಇನ್ನು ಶಿಕ್ಷಕರು ಹೀಗೆ ಹಲ್ಲೆ ಮಾಡುವ ಹಿನ್ನೆಲೆಯಲ್ಲಿ ಮಕ್ಕಳ ಪೋಷಕರು ಪ್ರತಿ ಒಂದು ವಾರಕ್ಕೊಮ್ಮೆ ವಸತಿ ಶಾಲೆಗೆ ಬಂದು ಹೋಗುವಂತಾಗಿದೆ.

click me!