ಮನೆ ಗೋಡೆ ಕುಸಿದುಇಡೀ ಕುಟುಂಬವೇ ಜೀವಂತ ಸಮಾಧಿಯಾಗುವುದು ಸ್ವಲ್ಪ ದರಲ್ಲೇ ತಪ್ಪಿತ್ತು!

By Ravi Janekal  |  First Published Jul 26, 2024, 2:26 PM IST

ಭಾರೀ ಮಳೆಯಿಂದ ಮನೆ ಗೋಡೆ ಕುಸಿದು ಇಡೀ ಕುಟುಂಬವೇ ಜೀವಂತ ಸಮಾಧಿಯಾಗಬೇಕಿದ್ದ ದುರಂತದಲ್ಲಿ ಪವಾಡ ಸದೃಶ್ಯವಾಗಿ ಪ್ರಾಣಾಪಾಯದಿಂದ ಪಾರಾದ ಘಟನೆ ಶಿವಮೊಗ್ಗ ಜಿಲ್ಲೆಯ  ವಿದ್ಯಾನಗರದ ಎನ್ ಆರ್ ಪುರ ರಸ್ತೆಯ ಡಬಲ್ ಟ್ಯಾಂಕ್ ಬಳಿಯ ಫಸ್ಟ್ ಕ್ರಾಸ್ ನಲ್ಲಿ ನಡೆದಿದೆ.


ಶಿವಮೊಗ್ಗ (ಜು.26): ಭಾರೀ ಮಳೆಯಿಂದ ಮನೆ ಗೋಡೆ ಕುಸಿದು ಇಡೀ ಕುಟುಂಬವೇ ಜೀವಂತ ಸಮಾಧಿಯಾಗಬೇಕಿದ್ದ ದುರಂತದಲ್ಲಿ ಪವಾಡ ಸದೃಶ್ಯವಾಗಿ ಪ್ರಾಣಾಪಾಯದಿಂದ ಪಾರಾದ ಘಟನೆ ಶಿವಮೊಗ್ಗ ಜಿಲ್ಲೆಯ  ವಿದ್ಯಾನಗರದ ಎನ್ ಆರ್ ಪುರ ರಸ್ತೆಯ ಡಬಲ್ ಟ್ಯಾಂಕ್ ಬಳಿಯ ಫಸ್ಟ್ ಕ್ರಾಸ್ ನಲ್ಲಿ ನಡೆದಿದೆ.

ಮನೆ ಗೋಡೆ ಕುಸಿದು ಒಂದೇ ಕುಟುಂಬದ ಆರು ಜನರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ನೂರ್‌ಜಾನ್ ಎಂಬ ವಯೋವೃದ್ಧೆ ಮಹಿಳೆಯ ಮನೆ ಗೋಡೆ ಕುಸಿದುಬಿದ್ದಿದೆ. ಗಾರೆ ಕೆಲಸ ಮಾಡಿಕೊಂಡಿದ್ದ ಪುತ್ರ, ಸೊಸೆ ಹಾಗೂ ಮೊಮ್ಮಕ್ಕಳು ಒಂದೇ ಮನೆಯಲ್ಲಿ ಆರೇಳು ಜನರು ವಾಸವಾಗಿದ್ದರು. ನಿನ್ನೆ ಮಧ್ಯೆರಾತ್ರಿವರೆಗೆ ಭಾರೀ ಮಳೆಯಾಗಿದೆ ನಡುರಾತ್ರಿ ಕುಟುಂಬದವರು ಮಲಗಿದ್ದ ವೇಳೆ ಏಕಾಏಕಿ ಮನೆಗೋಡೆ ಕುಸಿದುಬಿದ್ದಿದೆ. ನೂರ್ ಜಹಾನ್ ಮೇಲೆ ಮನೆಗೋಡೆ ಕುಸಿದುಬಿಳುತ್ತಿದ್ದಂತೆ ಕೂಗಿದ ಹಿನ್ನೆಲೆ ಮನೆಯವರೆಲ್ಲ ಎಚ್ಚೆತ್ತು ತಕ್ಷಣ ಅವರನ್ನು ಎಳೆದುಕೊಂಡು ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಎಲ್ಲರೂ ಹೊರಗಡೆ ಓಡಿಬರುತ್ತಿದ್ದಂತೆ ಇಡೀ ಮನೆಯ ಗೋಡೆ ಛಾವಣಿ ಕುಸಿದುಬಿದ್ದಿದೆ. 

Tap to resize

Latest Videos

undefined

ಮಹಾಮಳೆಗೆ ತತ್ತರಿಸಿದ ಮುಂಬೈ ನಗರಿ: ನಾಲ್ವರು ಬಲಿ, ರೈಲು ವಿಮಾನ ಸೇವೆಯಲ್ಲಿ ವ್ಯತ್ಯಯ

ಬಡಕುಟುಂಬಕ್ಕೆ ಆಧಾರವಾಗಿದ್ದ ಮನೆಯೂ ಕುಸಿದುಬಿದ್ದಿರುವುದರಿಂದ ಅಕ್ಷರಶಃ ಕುಟುಂಬ ಬೀದಿಪಾಲಾಗಿದೆ. ಮಳೆಯಲ್ಲಿ ಹೊರಗಡೆ ನಿಂತಿರುವ ಕುಟುಂಬ. 'ನಮಗೆ ಯಾರೂ ಸಹಕಾರ ನೀಡುತ್ತಿಲ್ಲ, ಬಂದು ನೋಡುತ್ತಿಲ್ಲ ಎಂದು ಅಳಲು ತೋಡಿಕೊಂಡಿರುವ ಕುಟುಂಬ. ಇನ್ನು ವಯೋವೃದ್ಧೆ ನೂರ್ ಜಹಾನ್ ಮಾತನಾಡಿದ್ದು, 'ಮನೆಗೋಡೆ ಬಿದ್ದು ನಾನು ಸಾಯಬೇಕಿತ್ತು, ದೇವರ ಧಯೆಯಿಂದ ಬದುಕುದ್ದೇನೆ. ಇಡೀ ಮನೆ ನೆಲಸಮಗೊಂಡಿದೆ. ನನ್ನ ಕುಟುಂಬಕ್ಕೆ ಯಾರು ದಿಕ್ಕು ಎಂದು ಸುರಿವ ಮಳೆಯಲ್ಲೇ ಕಣ್ಣೀರು ಹಾಕಿದ ವೃದ್ಧೆ.

click me!