ಕಳೆದ ಹಲವು ದಿನಗಳಿಂದ ಪಟ್ಟಣ ಪ್ರವೇಶಿಸಿ ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ್ದ ಕರಡಿಯೊಂದನ್ನು ಅರಣ್ಯ ಇಲಾಖೆ, ಬೆಂಗಳೂರಿನ ವನ್ಯಜೀವಿ ರಕ್ಷಣಾ ತಂಡ, ಪಶು ಇಲಾಖೆ ಸಹಕಾರದಿಂದ ಶುಕ್ರವಾರ ಸೆರೆ ಹಿಡಿಯಲಾಗಿದೆ.
ಹೊಸದುರ್ಗ (ಜು.8) : ಕಳೆದ ಹಲವು ದಿನಗಳಿಂದ ಪಟ್ಟಣ ಪ್ರವೇಶಿಸಿ ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ್ದ ಕರಡಿಯೊಂದನ್ನು ಅರಣ್ಯ ಇಲಾಖೆ, ಬೆಂಗಳೂರಿನ ವನ್ಯಜೀವಿ ರಕ್ಷಣಾ ತಂಡ, ಪಶು ಇಲಾಖೆ ಸಹಕಾರದಿಂದ ಶುಕ್ರವಾರ ಸೆರೆ ಹಿಡಿಯಲಾಗಿದೆ.
ಪಟ್ಟಣದ ಅಯ್ಯಪ್ಪಸ್ವಾಮಿ ಬಡಾವಣೆಯಲ್ಲಿ ಮುಂಜಾನೆಯೇ ಕರಡಿ ಅಲೆದಾಡುತಿತ್ತು. ಇದನ್ನು ಕಂಡು ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆ ಸಂದರ್ಭದಲ್ಲಿ ಸಾಕಷ್ಟುಜನ ಜಮಾಯಿಸಿದ್ದರಿಂದ ಗದ್ದಲದಿಂದ ಗಾಬರಿಗೊಂಡು ಕರಡಿ ಪೊದೆಯಲ್ಲಿ ಅವಿತುಕೊಂಡಿತ್ತು. ಸ್ಥಳದಲ್ಲಿದ್ದ ಅರಣ್ಯ ಇಲಾಖೆ, ಪಶು ಇಲಾಖೆ ಸಿಬ್ಬಂದಿಗಳು ಅರವಳಿಕೆ ನೀಡಿ ಕರಡಿಯನ್ನು ಶಾಂತಗೊಳಿಸಿ ಸೆರೆ ಹಿಡಿಯಲಾಯಿತು. ಬಳಿಕ ಪ್ರಾಥಮಿಕ ಚಿಕಿತ್ಸೆ ನೀಡಿ ಕರಡಿಯನ್ನು ಅಲ್ಲಿಂದ ಸ್ಥಳಾಂತರಿಸಲಾಯಿತು.
ನಾಗರ ಹಾವಿಗೆ ಬಾಟಲಿಯಲ್ಲಿ ನೀರು ಕುಡಿಸಿದ ವ್ಯಕ್ತಿ
ಅರಣ್ಯ ಇಲಾಖೆ ಎಸಿಎಪ್ ರಮೇಶ್ ಮಾತನಾಡಿ, ಕಳೆದ 15 ದಿನಗಳಿಂದ ಮೂರು ಕರಡಿಗಳು ಕಾಣಿಸಿಕೊಂಡು ಜನರ ಆತಂಕಕ್ಕೆ ಕಾರಣವಾಗಿವೆ. ಜನರು ಕರಡಿ ಕಂಡಾಗ ಅದರ ಹಿಂದೆ ಓಡುವುದು, ಕಲ್ಲಿನಿಂದ ಹೊಡೆಯಬಾರದು. ತಕ್ಷಣವೇ ಅರಣ್ಯ ಇಲಾಖೆ ಗಮನಕ್ಕೆ ತರಬೇಕು. ಸದ್ಯ ಅಯ್ಯಪ್ಪಸ್ವಾಮಿ ಬಡಾವಣೆಯಲ್ಲಿ ಏಳು ವರ್ಷದ ಗಂಡು ಕರಡಿಯನ್ನು ಸೆರೆಹಿಡಿದಿದ್ದೇವೆ. ಉಳಿದ ಎರಡು ಕರಡಿಗಳನ್ನು ಹಿಡಿಯಲು ತಂಡ ರಚನೆ ಮಾಡಿದ್ದೇವೆ. ಯಾರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕಳೆದ ಒಂದು ತಿಂಗಳಿನಿಂದ ನಾಲ್ಕೈದು ಕರಡಿಗಳು ಹಾಡುಹಗಲೇ ಜನವಸತಿ ಪ್ರದೇಶಕ್ಕೆ ಧಾವಿಸಿ ದಾಂಗುಡಿಯಿಡುತ್ತಿವೆ. ಗುರುವಾರ ರಾತ್ರಿ ಹುಳಿಯಾರು ರಸ್ತೆಯಲ್ಲಿನ ಶಿವಗಂಗ ಕಲ್ಯಾಣ ಮಂಟಪ, ಪೆಟ್ರೋಲ್ ಬಂಕ್ ಸನಿಹ ಕರಡಿ ಓಡಾಡಿತ್ತು. ಮುಂಜಾನೆಯೇ ಅಯ್ಯಪ್ಪಸ್ವಾಮಿ ಬಡಾವಣೆಯಲ್ಲಿ ಕಾಣಿಸಿಕೊಂಡ ಕರಡಿ ಬಡಾವಣೆಗಳಲ್ಲೆಲ್ಲಾ ಓಡಾಡಿ ಇಲ್ಲಿನ ನಿವಾಸಿಗಳನ್ನು ಆತಂಕಕ್ಕೆ ದೂಡಿತ್ತು. ಇದರಿಂದಾಗಿ ಜನರು ಮನೆಯಿಂದ ಹೊರಬರಲಿಲ್ಲ. ಕೆಲ ಮಕ್ಕಳು ಶಾಲೆಗೆ ತೆರಳಲು ಸಾಧ್ಯವಾಗಲಿಲ್ಲ.
ಕಳೆದ ಒಂದು ತಿಂಗಳಿನಿಂದ ಕರಡಿಗಳು ಪಟ್ಟಣ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿವೆಯಾದರೂ ಯಾರ ಮೇಲೂ ದಾಳಿ ನಡೆಸದೆ ಇರುವುದು ಸಮಾಧಾನಕರ ವಿಷಯವಾಗಿದೆ. ಏನೇ ಆದರೂ ಅರಣ್ಯ ಇಲಾಖೆ ಆದಷ್ಟುಬೇಗ ಉಳಿದ ಕರಡಿಗಳನ್ನು ಸೆರೆಹಿಡಿದು ಕರಡಿ ಧಾಮಕ್ಕೆ ಬಿಡುವ ಕೆಲಸವಾಗಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಎನ್.ಆರ್.ಪುರ ಸಮೀಪ ಓಡಾಡುತ್ತಿರುವ 15 ಕಾಡಾನೆಗಳ ಹಿಂಡು; ತೋಟಗಾರಿಕೆ ಬೆಳೆ ನಾಶ!
ಕಾರ್ಯಾಚರಣೆಯಲ್ಲಿ ಆರ್‌ಎಪ್‌ಓ ಸುಜಾತ, ಹೊಳಲ್ಕೆರೆ ಆರ್‌ಎಪ್‌ಓ ವಸಂತ್, ಸಾಮಾಜಿಕ ಅರಣ್ಯ ವಲಯ ಅಕಾರಿ ದಯಾನಂದ್, ವನ್ಯಜೀವಿ ಪರಿಪಾಲಕರ ರಘುರಾಮ್, ಡಿಆರ್‌ಎಫ್‌ಗಳಾದ ಹರೀಶ್, ಮಂಜಪ್ಪ, ಚಂದ್ರಪ್ಪ, ನಿಜಲಿಂಗನಾಯ್‌್ಕ, ಅರಣ್ಯ ಪಾಲಕರಾದ ರಮೇಶ್, ವಿಜಯ್, ರಂಗನಾಥ್, ಈಶ್ವರ್, ಮಹಾಲಿಂಗಪ್ಪ, ಪಶು ಇಲಾಖೆ, ಪೋಲಿಸ್ ಇಲಾಖೆ ಸಿಬ್ಬಂದಿ ಇದ್ದರು.