ಬೆಂಗಳೂರು (ಮೇ.11) ಕೊರೋನಾ ಮಹಾಮಾರಿ ಏರುತ್ತಿದ್ದು ಅದಕ್ಕೀಗ ಇರುವ ಏಕೈಕ ಪರಿಹಾರ ಎಂದರೆ ವ್ಯಾಕ್ಸಿನ್. ಆ ವ್ಯಾಕ್ಸಿನ್ ಕೊರತೆ ಈಗ ಹೆಚ್ಚು ಜನಸಂಖ್ಯೆ ಇರುವ ಬೆಂಗಳೂರಿನಲ್ಲಿ ಅತಿಯಾಗಿ ಕಾಡುತ್ತಿದೆ. ಮೇ 10 ರಿಂದಲೇ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನೇಷನ್ ಪ್ರಕ್ರಿಯೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಲಸಿಕೆಗೆ ಇಷ್ಟುದ್ದ ಇರುವ ಕ್ಯೂ, ಸಿಗಲಿದೆ ಎನ್ನೋ ಭರವಸೆ ಇಲ್ಲದ ಕಾರಣ ಇಲ್ಲಿನ ನಿವಾಸಿಗಳೀಗ ಸುತ್ತಲ ಹಳ್ಳಿಗಳನ್ನು ಆಶ್ರಯಿಸುತ್ತಿದ್ದಾರೆ.
ಲಸಿಕೆ ಸೂಕ್ತ ಪ್ರಮಾಣದಲ್ಲಿ ಬೆಂಗಳೂರಲ್ಲಿ ಸಿಗದ ಕಾರಣ ಸುತ್ತಮುತ್ತಲಿನ ಜಿಲ್ಲೆಗಳ ಹಳ್ಳಿಗಳಿಗೆ ವ್ಯಾಕ್ಸಿನೇಷನ್‌ಗಾಗಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ. ಬೆಂಗಳೂರಿನ ಅಕ್ಕಪಕ್ಕದ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರು, ಮಂಡ್ಯ, ಮೈಸೂರು ಜಿಲ್ಲೆಗಳಿಗೆ ಬೆಂಗಳೂರಿಗರು ಪ್ರತಿದಿನ ತೆರಳುತ್ತಿದ್ದಾರೆ.
18 ಮೇಲ್ಪಟ್ಟವರಿಗೆ ಲಸಿಕೆ: ನೋಂದಣಿ ಮಾಡಿಕೊಂಡವರಿಗೆ ಮಾತ್ರ ಲಭ್ಯ! ...
ಏಕಾಏಕಿ ಜನ ಅಧಿಕ ಸಂಖ್ಯೆಯಲ್ಲಿ ಆಗಮಿಸುವುದು ಈ ಜಿಲ್ಲೆಗಳ ಮೇಲೆ ಮಾರಕ ಪರಿಣಾಮ ಉಂಟಾಗುತ್ತಿದೆ. ಒಂದು ಕೊರೋನಾ ಮಹಾಮಾರಿ ಆತಂಕ ಇನ್ನೊಂದು ಸ್ಥಳೀಯರಿಗೆ ವ್ಯಾಕ್ಸಿನೇಷನ್ ಪ್ರಕ್ರಿಯೆ ತಡವಾಗುತ್ತಿದೆ. ಆನ್‌ಲೈನ್‌ನಲ್ಲಿ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಲಾಗದ ಹಳ್ಳಿಗಳ ಜನರು ವಂಚಿತರಾಗುತ್ತಿದ್ದಾರೆ. ಹೈ ಸ್ಪೀಡ್ ಇಂಟರ್ನೆಟ್, ನೆಟ್ವರ್ಕಿಂಗ್, ಇನ್ಫರ್ಮೇಷನ್ ಇರುವ ಬೆಂಗಳೂರಿನ ಜನ ರಿಜಿಸ್ಟ್ರೇಷನ್ ಮಾಡಿಸಿಕೊಂಡು ಹಳ್ಳಿಗಳಲ್ಲಿ ಲಸಿಕೆ ಪಡೆದು ಹೋಗುತ್ತಿದ್ದಾರೆ.
ಪಕ್ಕದ ಹಳ್ಳಿಗಳಲ್ಲಿ ಆನ್ ಲೈನ್ ಬುಕ್ ಮಾಡೋದು ಇರೋಲ್ಲ. ಮೊದಲು ಬಂದ 100 ಜನರಿಗೆ ಟೋಕನ್ ಕೊಟ್ಟು ಲಸಿಕೆ ಕೊಡುತ್ತಾರೆ. ಹಳ್ಳಿಗರಿಗೆ ನೆಟ್ವರಕ್ ಪ್ಬಾಬ್ಲಂ, ಆನ್ ಲೈನ್ ಬುಕ್ ಮಾಡೋದು ಕಷ್ಟ ಎನ್ನುವ ಕಾರಣಕ್ಕೆ ಅದನ್ನು ನಗರದ ಜನರು ಮಿಸ್ ಯೂಸ್ ಮಾಡಿಕೊಳ್ಳುತ್ತಿದ್ದಾರೆ.
ರಾಜ್ಯಕ್ಕೆ ಆಘಾತ: 14 ರಾಜ್ಯಕ್ಕೆ ಕೋವ್ಯಾಕ್ಸಿನ್, ಕರ್ನಾಟಕಕ್ಕಿಲ್ಲ! .
ಹಲವು ಜಾಲತಾಣಗಳಲ್ಲಿ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಇರುವ ವ್ಯಾಕ್ಸಿನೇಷನ್ ಸೆಂಟರ್‌ಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದ್ದು ಈ ನಿಟ್ಟಿನಲ್ಲಿ ಅಲ್ಲಿ ಎಡತಾಕುವವರ ಸಂಖ್ಯೆ ಅತ್ಯಧಿಕ ಪ್ರಮಾಣದಲ್ಲಿದೆ. ಅಲ್ಲದೇ ಯಾರು ರಿಜಿಸ್ಟೇಷನ್ ಮಾಡಿಸಿ ಎಸ್‌ಎಂಎಸ್ ಕನ್ಫರ್ಮೇಷನ್ ಪಡೆದುಕೊಂಡಿರುತ್ತಾರೋ ಅಂತವರ ರಿಪೋರ್ಟ್ ನೋಡಿ ಪೊಲೀಸರು ಅವರಿಗೆ ಬೇರೆ ಜಿಲ್ಲೆಗಳಿಗೆ ತೆರಳಲು ಯಾವುದೇ ಅಡ್ಡಿಯನ್ನುಂಟು ಮಾಡುತ್ತಿಲ್ಲ. ನಿರಾತಂಕವಾಗಿ ಅವರ ಲಸಿಕಾ ಪ್ರಕ್ರಿಯೆ ಮುಗಿಯುತ್ತಿದೆ.
ಇನ್ನು ಲಸಿಕೆ ಪಡೆದುಕೊಳ್ಳಲು ತೆರಳಿದವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ತಮ್ಮ ಲಸಿಕಾ ಪ್ರಕ್ರಿಯೆ ಯಾವುದೇ ಅಡ್ಡಿ ಆತಂಕಗಳಿಲ್ಲದೇ ನೆರವೇರಿದೆ ಎಂದು ಹೇಳಿಕೊಂಡಿದ್ದಾರೆ.
ಕೋವಿನ್ ಪೋರ್ಟಲ್ ಮಾಹಿತಿ ಪ್ರಕಾರ ಸೋಮವಾರ ಮೇ 10 ರಂದು ಬಿಬಿಪಿಎಂ ವ್ಯಾಪ್ತಿಯಲ್ಲಿ 19.86 ಲಕ್ಷ, ಬೆಂಗಳೂರು ನಗರ (3.02 ಲಕ್ಷ ), ಮೈಸೂರು - 7.9 ಲಕ್ಷ, ಮಂಡ್ಯ 3.26 ಲಕ್ಷ ಲಸಿಕೆ ಹಂಚಿಕೆ ಮಾಡಲಾಗಿದೆ. ಈಗಾಗಲೇ ರಾಜ್ಯದಲ್ಲಿ 6 ಸಾವಿರ 18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆದುಕೊಂಡಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona