ಮೈಸೂರು ಜ್ಯುಬಿಲಿಯಂಟ್‌ಲ್ಲಿ ಜೀವರಕ್ಷಕ ರೆಮ್‌ಡೆಸಿವಿರ್ ಉತ್ಪಾದನೆ ಹೆಚ್ಚಳಕ್ಕೆ ಸೂಚನೆ

By Kannadaprabha NewsFirst Published May 11, 2021, 9:50 AM IST
Highlights
  • ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವಂತೆ ರೆಮ್‌ಡಿಸಿವಿರ್‌ ಔಷಧಿಗೆ ಬೇಡಿಕೆ
  • ನಂಜನಗೂಡಿನ ಔಷಧ ತಯಾರಿಕ ಕಂಪನಿ ಜ್ಯುಬಿಲೆಂಟ್‌ ಕಾರ್ಖಾನೆಗೆ  ಸಚಿವ ಎಸ್‌.ಟಿ. ಸೋಮಶೇಖರ್‌ ಭೇಟಿ
  • ಸಾಧ್ಯವಾದಷ್ಟುಮಟ್ಟಿಗೆ ಹೆಚ್ಚಿನ ಸಂಖ್ಯೆಯಲ್ಲಿ ಈ ಔಷಧಿಯನ್ನು ಉತ್ಪಾದಿಸುವಂತೆ ಸಚಿವರ ಸೂಚನೆ

ಮೈಸೂರು (ಮೇ.11):  ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವಂತೆ ರೆಮ್‌ಡಿಸಿವಿರ್‌ ಔಷಧಿಗೆ ಬೇಡಿಕೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು ಸೋಮವಾರ ನಂಜನಗೂಡಿನ ಔಷಧ ತಯಾರಿಕ ಕಂಪನಿ ಜ್ಯುಬಿಲೆಂಟ್‌ ಕಾರ್ಖಾನೆಗೆ ಭೇಟಿ ನೀಡಿ ಉಪಾಧ್ಯಕ್ಷ ಲಕ್ಷ್ಮೀ ನಾರಾಯಣ್‌ ಅವರೊಂದಿಗೆ ಚರ್ಚಿಸಿದರು.

ಕೋವಿಡ್‌ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ವಾಗುತ್ತಿದ್ದು, ಇದರಿಂದ ರೆಮ್ಡಿಸಿವಿರ್‌ ಔಷಧಿಗೆ ಬೇಡಿಕೆಯು ಹೆಚ್ಚಾದ ಹಿನ್ನೆಲೆಯಲ್ಲಿ ಔಷಧಿಯ ಅಭಾವ ಉಂಟಾಗುವ ಭೀತಿ ಉಂಟಾಗಿದೆ. ಹೀಗಾಗಿ ರೆಮ್‌ಡಿಸಿವಿರ್‌ ಉತ್ಪಾದಿಸುವ ಜುಬಿಲೆಂಟ್‌ ಕಾರ್ಖಾನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಹಕಾರ ಕೇಳಿದರು. ರಾಜ್ಯದಲ್ಲಿ ರೆಮ್‌ಡಿಸಿವೀರ್‌ ಇಂಜೆಕ್ಷನ್‌ಗಾಗಿ ಸರ್ಕಾರದ ಮೇಲೆ ಒತ್ತಡ ಉಂಟಾಗಿದೆ. ಇದರಿಂದ ಕೋವಿಡ್‌ ಪ್ರಕರಣಗಳು ಕಡಿಮೆಯಾಗುವವರೆಗೆ ಸಾಧ್ಯವಾದಷ್ಟುಮಟ್ಟಿಗೆ ಹೆಚ್ಚಿನ ಸಂಖ್ಯೆಯಲ್ಲಿ ಈ ಔಷಧಿಯನ್ನು ಉತ್ಪಾದಿಸುವಂತೆ ತಿಳಿಸಿದರು.

ಅಗತ್ಯಕ್ಕನುಗುಣವಾಗಿ ಜಿಲ್ಲೆಗಳಿಗೆ ಆಕ್ಸಿಜನ್ ಹಂಚಿಕೆ : ST ಸೋಮಶೇಖರ್...

ಕಾರ್ಖಾನೆಯ ಉಪಾಧ್ಯಕ್ಷ ಲಕ್ಷ್ಮಿ ನಾರಾಯಣ್‌ ಮಾತನಾಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಂದ ಬೇಡಿಕೆಯ ಪತ್ರವನ್ನು ಕಳುಹಿಸಿಕೊಟ್ಟರೆ ಆಡಳಿತ ಮಂಡಳಿಯ ಗಮನಕ್ಕೆ ತಂದು ರೆಮ್‌ಡಿಸಿವೀರ್‌ ಔಷಧಿ ನೀಡಲು ಪ್ರಯತ್ನಿಸಲಾಗುವುದು ಎಂದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!