ವಿಸಿಟಿಂಗ್‌ ಕಾರ್ಡ್‌ ಪತ್ರಕರ್ತರಾಗದೆ ವೃತ್ತಿ ನಿಷ್ಠೆಗೆ ಬದ್ಧರಾಗಿರಿ: ಶಿವಾನಂದ ತಗಡೂರು

By Kannadaprabha News  |  First Published Oct 19, 2022, 9:03 AM IST

ಪತ್ರಿಕಾರಂಗದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿದ್ದ ಪ್ರಾಮಾಣಿಕ ಬದ್ಧತೆ ಈಗ ಇಲ್ಲದಾಗಿದೆ. ಪತ್ರಕರ್ತರು ವಸ್ತುನಿಷ್ಠ ವರದಿಗಳ ಮಾಡಿ ಸಮಾಜದಲ್ಲಿ ತಮ್ಮ ಸ್ಥಾನದ ಪ್ರಜ್ಞೆ ತಿಳಿದು ಅರಿತು ವರದಿ ಮಾಡಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.


ನ್ಯಾಮತಿ (ಅ.19) : ಪತ್ರಿಕಾರಂಗದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿದ್ದ ಪ್ರಾಮಾಣಿಕ ಬದ್ಧತೆ ಈಗ ಇಲ್ಲದಾಗಿದೆ. ಪತ್ರಕರ್ತರು ವಸ್ತುನಿಷ್ಠ ವರದಿಗಳ ಮಾಡಿ ಸಮಾಜದಲ್ಲಿ ತಮ್ಮ ಸ್ಥಾನದ ಪ್ರಜ್ಞೆ ತಿಳಿದು ಅರಿತು ವರದಿ ಮಾಡಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.

ಮಾಧ್ಯಮ ಸಮಾಜ ತಿದ್ದುವ ಕೆಲಸ ಮಾಡಲಿ; ಅಪ್ಪಚ್ಚು ರಂಜನ್

Latest Videos

undefined

ಪಟ್ಟಣದ ಮಹಾಂತೇಶ್ವರ ವೀರಶೈವ ಕಲ್ಯಾಣ ಮಂದಿರದಲ್ಲಿ ನಡೆದ ನ್ಯಾಮತಿ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ತಾಲೂಕು ಘಟಕದ ನಾಮ ಫಲಕ ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಇಂದಿನ ಸಮಾಜದಲ್ಲಿ ಜಾಲತಾಣಗಳ ಪತ್ರಕರ್ತರು ಹೆಚ್ಚುತ್ತಿದ್ದು, ಸಮಾಜದಲ್ಲಿ ವೃತ್ತಿನಿಷ್ಠ ಪ್ರಾಮಾಣಿಕ ಪತ್ರಕರ್ತರಿಗೆ ಅಂತವರಿಂದ ಅಪಾಯವಿದೆ. ಪತ್ರಕರ್ತರು ವಿಸಿಟಿಂಗ್‌ ಕಾರ್ಡ್‌ ಪತ್ರಕರ್ತರಾಗದೆ ವೃತ್ತಿ ನಿಷ್ಠೆ, ಶ್ರಮ,ಬದ್ಧತೆ, ಛಲ ಇದ್ದರೆ ಯಶಸ್ಸು ಎಂಬುದಕ್ಕೆ ಪತ್ರಿಕೆ ಹಂಚುತ್ತಿದ್ದ ಅಬ್ದುಲ್‌ ಕಲಾಂ ಮತ್ತು ಚಹಾ ಮಾರುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರೇ ದೊಡ್ಡ ಸಾಕ್ಷಿ, ಗಾಂಧೀಜಿ, ಅಂಬೇಡ್ಕರ್‌ ಮಾರ್ಗದಲ್ಲಿ ಮುನ್ನಡೆಯುವಂತೆ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಹಲವು ಯೋಜನೆಗಳ ಹಾಕಿದ್ದು ಪ್ರಥಮ ಬಾರಿಗೆ ಶೇ.90ಕ್ಕೂ ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮ ಬೆಂಗಳೂರಿನಲ್ಲಿ ಮಾಡುವ ಮೂಲಕ ಅವರ ಮಕ್ಕಳನ್ನು ಪ್ರೋತ್ಸಾಹಿಸಿರುವುದಾಗಿ ಹೇಳಿದರು. ಕೊರೋನಾ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಪತ್ರಕರ್ತರಿಗೆ ಹಲವು ರೀತಿಯ ಸಹಾಯ ಹಸ್ತ ಸಹಕಾರ ನೀಡಿರುವುದಾಗಿ ತಿಳಿಸಿದರು.

ಅತೀ ದೊಡ್ಡ ಸಂಘಟನೆ:

ಕರ್ನಾಟಕ ಪತ್ರಕರ್ತರ ಸಂಘ ರಾಜ್ಯ ಕಾರ್ಯದರ್ಶಿ ಜಿ.ಸಿ.ಲೋಕೇಶ್‌ ಸನ್ಮಾನ ಸ್ವೀಕರಿಸಿ ಮಾತನಾಡಿ ಪತ್ರಕರ್ತರ ಸಂಘ ರಾಜ್ಯದ ಅತೀ ದೊಡ್ಡ ಸಂಘಟನೆಯಾಗಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ 500 ರು.ಸಹಾಯಧನದಿಂದ ಸಂಘ ಸ್ಥಾಪನೆಯಾದಾಗ ಇದ್ದದ್ದು ನಾಲ್ಕು ಜನ ಇಂದು ದೇಶದ ಅತೀ ದೊಡ್ಡ ಮತ್ತು 91ವರ್ಷ ಸಂಘಟನೆಯಲ್ಲಿ ಮುನ್ನಡೆಯುತ್ತಿರುವ ಸಂಘವೇ ಕ.ಕಾ.ಪ.ಸಂಘ ಎಂದರು. ಹೊನ್ನಾಳಿ ವಲಯ ಅರಣ್ಯಾಧಿಕಾರಿ ಕೆ.ಆರ್‌.ಚೇತನ್‌ ರಕ್ತದಾನ ಶಿಬಿರ ರಕ್ತದಾನ ಮಾಡಿ ಉದ್ಘಾಟಿಸಿ ಮಾತನಾಡಿ ಫಲವನಹಳ್ಳಿ ಗ್ರಾಮದಲ್ಲಿ ರೈತ ಮಹಿಳೆ ಮೇಲೆ ಚಿರತೆ ದಾಳಿ ಹತ್ಯೆಗೈದ ಸಂದರ್ಭದಲ್ಲಿ ಮಾಧ್ಯಮದವರ ಸಹಕಾರವನ್ನು ಶ್ಲಾಘಿಸಿದರು.

ಮಾಧ್ಯಮಗಳು ವಸ್ತುನಿಷ್ಠತೆಗೆ ಆದ್ಯತೆ ನೀಡಲಿ; ಶಾಸಕ ಯಶವಂತರಾಯಗೌಡ

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಿ.ಜಿ.ಶಾಂತನಗೌಡರು, ಲಿಂಗರಾಜು ಹವಳದ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಆನಂದ, ರಾಮೇಶ್ವರ ನೈಸರ್ಗಿಕ ಕೃಷಿಕ ಮಲ್ಲಿಕಾರ್ಜುನಪ್ಪ ಮಾತನಾಡಿದರು. ದಿವ್ಯಸಾನ್ನಿಧ್ಯ ಸದ್ಗುರು ಶಿವಯೋಗಿ ಮಹಾಲಿಂಗ ಹಾಲ ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆ ಎಂ.ಎಸ್‌.ಶಾಸ್ತ್ರೀ ಹೊಳೆಮಠ ವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಶಿವರುದ್ರಯ್ಯ ಹಿರೇಮಠ, ಶಿವಾನಂದಪ್ಪ ಎಚ್‌, ಪತ್ರಿಕೆ ವಿತರಕ ಜಿ.ರುದ್ರಪ್ಪ, ನಿವೃತ್ತ ಯೋಧ ಬಿ.ಎಂ.ವೀರೇಶ್‌, ನೈಸರ್ಗಿಕ ಕೃಷಿಕ ಮಲ್ಲಿಕಾರ್ಜುನಪ್ಪರನ್ನು ಸನ್ಮಾನಿಸಲಾಯಿತು. ಕ.ಕಾ.ಪ.ಸಂಘದ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ, ಕೆ.ಚಂದ್ರಣ್ಣ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬದರೀನಾಥ, ಎ.ಎಂ.ಕೊಟ್ರೇಶ್‌, ಹೊನ್ನಾಳಿ ತಾಲೂಕು ಅಧ್ಯಕ್ಷ ಕೋರಿ ಯೋಗೀಶ್‌, ಎ.ಕೆ.ಹಾಲೇಶ್‌ ಮತ್ತಿತರಿದ್ದರು. ಕಾರ್ಯಕ್ರಮ ನಿರೂಪಣೆ ಶಿಕ್ಷಕಿ ಬಿ.ಜಿ.ಚೈತ್ರಾ ತಿಪ್ಪೇಸ್ವಾಮಿ, ನವುಲೆ ಗಂಗಾಧರ್‌ ನೆರವೇರಿಸಿದರು. ಕು.ಮೋನಿಕಾ, ಕೆಂಚಿಕೊಪ್ಪ ರುದ್ರೇಶ್‌ ಪ್ರಾರ್ಥಿಸಿದರು. ಎಂಪಿಎಂ ವಿಜಯಾನಂದಸ್ವಾಮಿ ಪ್ರಾಸ್ತವಾವಿಕವಾಗಿ ಮಾತನಾಡಿದರು. ವಿಜಯೇಂದ್ರ ಮಹೇಂದ್ರಕರ್‌ ವಂದಿಸಿದರು.

click me!