ಅಡಕೆಗಷ್ಟೇ ಅಲ್ಲ, ಸರ್ಕಾರಕ್ಕೂ ಕೊಳೆರೋಗ; ಸುಂದರೇಶ್‌ ಟೀಕೆ

By Kannadaprabha News  |  First Published Oct 19, 2022, 8:50 AM IST
  • ಅಡಕೆಗಷ್ಟೇ ಅಲ್ಲ, ಸರ್ಕಾರಗಳಿಗೂ ಕೊಳೆರೋಗ: ಸುಂದರೇಶ್‌ ಟೀಕೆ
  • ದೇಶಿ ಅಡಕೆಯೇ ರಫ್ತು ಮಾಡುವಷ್ಟುಇರುವಾಗ ಭೂತಾನ್‌ ಅಡಕೆ ಆಮದು ಏಕೆ?

ಶಿವಮೊಗ್ಗ (ಅ.19) : ಜಿಲ್ಲೆಯಲ್ಲಿ ಕೊಳೆರೋಗವು ಅಡಕೆ ಬೆಳೆಯನ್ನು ಬಾಧಿಸುತ್ತಿದೆ. ಇದರಿಂದಾಗಿ ರೈತರು ನಲುಗಿಹೋಗಿದ್ದಾರೆ. ಇಷ್ಟಾದರೂ ರೈತರ ನೆರವಿಗೆ ಬಾರದ ಸರ್ಕಾರಕ್ಕೂ ಕೊಳೆರೋಗ ಬಂದಿದೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಎಸ್‌. ಸುಂದರೇಶ್‌ ಆಕ್ರೋಶ ವ್ಯಕ್ತಪಡಿಸಿದರು.

ಅಡಕೆ ಕೊಳೆರೋಗ ನಿಯಂತ್ರಣಕ್ಕೆ ಸಿಗದ ಸಹಾಯಧನ

Tap to resize

Latest Videos

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡ ಅಡಕೆ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಕೊಳೆರೋಗದಿಂದ ಅಡಕೆ ತೋಟಗಳೇ ವಿನಾಶದತ್ತ ಸಾಗಿವೆ. ರೈತರು ಆತ್ಮಹತ್ಯೆ ದಾರಿ ತುಳಿದಿದ್ದಾರೆ. ತೋಟಗಾರಿಕೆ ಇಲಾಖೆ ಮತ್ತು ತಜ್ಞರು ನೀಡಿದ ಸಲಹೆಗಳು ಔಷಧಿ ಪ್ರಯೋಜನಕ್ಕೆ ಬರುತ್ತಿಲ್ಲ. ಅಡಕೆ ಬೆಳೆಗಾರರ ಜೊತೆಗೆ ಕೃಷಿ ಕುಟುಂಬದವರು ಸಂಕಷ್ಟಪಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಹೆಸರಲ್ಲಿ ಅಧಿಕಾರ ಹಿಡಿದು ಈಗ ರೈತರನ್ನೇ ಮರೆತಿದ್ದಾರೆ ಎಂದು ಆರೋಪಿಸಿದರು.

ಗಾಯದ ಮೇಲೆ ಬರೆ ಎಂಬಂತೆ ಕೇಂದ್ರ ಸರ್ಕಾರ ಅಡಕೆಯನ್ನು ಆಮದು ಮಾಡಿಕೊಳ್ಳಲು ಹೊರಟಿದೆ. ದೇಶೀಯ ಅಡಕೆಯೇ ರಫ್ತು ಮಾಡುವಷ್ಟುಇರುವಾಗ ಭೂತಾನ್‌ನಿಂದ ಏಕೆ ಅಡಕೆ ಆಮದು ಮಾಡಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ? ಇದರ ಜೊತೆಗೆ ಮಳೆಯ ಸಂಕಷ್ಟದಿಂದ ಅತಿವೃಷ್ಠಿಯಿಂದ ಇಡೀ ರಾಜ್ಯದ ರೈತರು ಬೆಳೆ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರೂ ಅವರ ಕಷ್ಟಆಲಿಸಿಲ್ಲ. ಕಳೆದ ವರ್ಷದ ಪರಿಹಾರದ ಹಣವೇ ಇನ್ನೂ ಬಂದಿಲ್ಲ. ಮುಳುಗಡೆ ಪ್ರದೇಶದ ಜನರ ಸಮಸ್ಯೆ ಇನ್ನೂ ಹಾಗೆಯೇ ಉಳಿದಿದೆ. ಮಾತು ಮಾತಿಗೆ ಕಾಂಗ್ರೆಸ್‌ ಸರ್ಕಾರವನ್ನು ಟೀಕಿಸುವ ಬಿಜೆಪಿ ಮುಖಂಡರು ಈಗ ಮಾಡುತ್ತಿರುವುದು ಏನು ಎಂದು ಪ್ರಶ್ನಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಇದ್ದಾರೆಯೇ?:

ಜಿಲ್ಲೆಯಲ್ಲಿ ಮರುಳು ಮಾಫಿಯಾ, ಗಾಂಜಾ ಮಾರಾಟ, ಓಸಿ ದಂಧೆ ಎಗ್ಗಿಲ್ಲದೆ ನಡೆಯುತ್ತಿವೆ. ಜಿಲ್ಲೆಯವರೇ ಗೃಹ ಸಚಿವ ಆಗಿದ್ದರೂ ಅವರಿಗೆ ಇದ್ಯಾವೂ ಗೊತ್ತಿಲ್ಲ. ಇನ್ನು ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಿದ್ದಾರೆ ಎಂದು ಹುಡುಕಬೇಕಿದೆ. ಬಿಜೆಪಿಯವರಿಗೆ ಈಗ ರೈತರು, ಬಡವರ ಕಲ್ಯಾಣ ಬೇಕಾಗಿಲ್ಲ. ಅವರಿಗೆ ಚುನಾವಣೆಯೇ ಮುಖ್ಯವಾಗಿದೆ. ಅಧಿಕಾರದ ಅಮಲು ನೆತ್ತಿಗೇರಿದೆ. ದೇಶ, ರಾಜ್ಯ ದಿವಾಳಿಯತ್ತ ಸಾಗುತ್ತಿದೆ. ಭ್ರಷ್ಟಾಚಾರ ಮುಗಿಲುಮುಟ್ಟಿದೆ. ಮೀಸಲಾತಿ ಬಗ್ಗೆ ಮಾತನಾಡಿರುವುದು ಮೂಗಿಗೆ ತುಪ್ಪ ಹಚ್ಚುವ ಕೆಲಸ ಎಂದು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರಾಮೇಗೌಡ, ಎಚ್‌.ಸಿ. ಯೋಗೀಶ್‌, ಯಮುನಾ ರಂಗೇಗೌಡ, ಚಂದ್ರಶೇಖರ್‌, ಕೆ.ಎಲ…. ಜಗದೀಶ್‌, ಲಕ್ಷ್ಮಣಪ್ಪ, ಎನ್‌.ಡಿ. ಪ್ರವೀಣ್‌, ರಂಗೇಗೌಡ, ಸಂಜಯ್‌ ಕಶ್ಯಪ್‌ ಇದ್ದರು

.ಅಡಕೆಗೆ ಮತ್ತೊಂದು ವಿಚಿತ್ರ ರೋಗ: ಆತಂಕದಲ್ಲಿ ಬೆಳೆಗಾರರು

ಭಾರತ್‌ ಜೋಡೋ ಯಾತ್ರೆ ಯಶಸ್ವಿಯಾಗಿ ಸಾಗಿದೆ. ಯುವ ಉತ್ಸಾಹಿ ರಾಹುಲ್‌ ಸುಮಾರು 3300 ಕಿ.ಮೀ. ಪಾದಯಾತ್ರೆ ಕೈಗೊಂಡಿದ್ದಾರೆ. ಬಿಜೆಪಿಯವರಿಗೆ ಇದು ನಿದ್ರೆ ಬರದಂತೆ ಮಾಡಿದೆ. ಆದ್ದರಿಂದ ಯಾತ್ರೆ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದಾರೆ. ರಾಹುಲ್‌ ಗಾಂಧಿ ಅಂತಃಕರಣ ನೋಡಿ ಎಲ್ಲ ವರ್ಗದ ಜನರು ವಿಸ್ಮಯದಿಂದ, ಸಂಭ್ರಮದಿಂದ ನೋಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ

- ಎಚ್‌.ಎಸ್‌.ಸುಂದರೇಶ್‌, ಜಿಲ್ಲಾಧ್ಯಕ್ಷ, ಕಾಂಗ್ರೆಸ್‌

click me!