ಪ್ರಸ್ತುತ ದಿನಗಳಲ್ಲಿ ಪೋಷಕರು ಮಕ್ಕಳಿಗೆ ಆರೋಗ್ಯಕರ ಆಹಾರ ನೀಡುವಲ್ಲಿ ಬಹಳ ಎಚ್ಚರ ವಹಿಸಬೇಕು ಎಂದು ವಿವೇಕಾನಂದ ಅಸ್ಪತ್ರೆ ಮಕ್ಕಳ ತಜ್ಞ ಡಾ. ಅರುಣ್ ಕುಮಾರ್ ಸಲಹೆ ನೀಡಿದರು.
ಸರಗೂರು : ಪ್ರಸ್ತುತ ದಿನಗಳಲ್ಲಿ ಪೋಷಕರು ಮಕ್ಕಳಿಗೆ ಆರೋಗ್ಯಕರ ಆಹಾರ ನೀಡುವಲ್ಲಿ ಬಹಳ ಎಚ್ಚರ ವಹಿಸಬೇಕು ಎಂದು ವಿವೇಕಾನಂದ ಅಸ್ಪತ್ರೆ ಮಕ್ಕಳ ತಜ್ಞ ಡಾ. ಅರುಣ್ ಕುಮಾರ್ ಸಲಹೆ ನೀಡಿದರು.
ಪಟ್ಟಣದ ಆರ್ಯ ಈಡಿಗರ ಸಮುದಾಯ ಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ಸರಗೂರು ಘಟಕದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಕ್ಕಳ ಬೆಳವಣಿಗೆಗೆ ಪೂರಕ ಹಾಗೂ ಮಾರಕವಾಗಿರುವ ಅಂಶಗಳ ಬಗ್ಗೆ ವಿವರಿಸಿದರು.
undefined
ಸಂಸ್ಕೃತದಲ್ಲಿ "ಮಠ ಪಿತಾ ಗುರು ದೈವಂ" ಎಂಬ ನುಡಿಗಟ್ಟು ಬಹಳ ತಾಯಿಯಲ್ಲಿ ಮಗುವನ್ನು ರೂಪಿಸುವ ಮತ್ತು ಅಭಿವೃದ್ಧಿಪಡಿಸುವ ಪ್ರಕ್ರಿಯೆಯು ಮಗು ಜಗತ್ತಿನಲ್ಲಿ ಜನಿಸುವ ಮೊದಲು ಸಂಭವಿಸುತ್ತದೆ. ಬ್ರಹ್ಮಾಂಡಕ್ಕೆ ಕಾಲಿಡುವ ತಯಾರಿ ಗರ್ಭದಿಂದಲೇ ಪ್ರಾರಂಭವಾಗುತ್ತದೆ. ಮಗುವಿನ ವ್ಯಕ್ತಿತ್ವ ಮತ್ತು ದೈಹಿಕ ಬೆಳವಣಿಗೆಯು ಜನನದ ನಂತರ ಅವನ ಅಥವಾ ಅವಳ ಜೀವನದ ಎಲ್ಲ ಕ್ಷೇತ್ರಗಳ ಮೂಲಕ ಸಂಭವಿಸುತ್ತದೆ. ಆದ ಕಾರಣ ಗರ್ಭದಲ್ಲೇ ಮಗು ಬೆಳವಣಿಗಗೆ ಮಗು ಮತ್ತು ಅವನ ತಾಯಿಯ ನಡುವಿನ ಸಂಬಂಧವು ಮಗುವಿನ ಬೆಳವಣಿಗೆಗೆ ನಿರ್ಣಾಯಕವಾಗಿದೆ ಎಂದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವಲಯ ಪ್ರಮುಖ ಡಾ.ವಿ. ರಂಗನಾಥ್ ಮಾತನಾಡಿದರು, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಸರಗೂರು ಘಟಕದ ಅಧ್ಯಕ್ಷ ಶಾಂತ ವೀರಮೂರ್ತಿ, ಉಪಾಧ್ಯಕ್ಷ ಎಸ್.ಎಂ. ಶ್ರೀನಿವಾಸ್, ಶ್ರೀವತ್ಸ, ರಾಜು, ಮಾಧು, ಚನ್ನಪ್ಪ, ಅನಿತಾ, ಮಹಿಳೆಯರು, ಮಕ್ಕಳು ಇದ್ದರು.
ಮಕ್ಕಳನ್ನು (Children) ಆರೋಗ್ಯಕರವಾಗಿ ತಿನ್ನಲು ಪ್ರೋತ್ಸಾಹಿಸಿ
ಮಕ್ಕಳನ್ನು (Children) ಆರೋಗ್ಯಕರವಾಗಿ ತಿನ್ನಲು ಪ್ರೋತ್ಸಾಹಿಸುವುದು ಯಾವಾಗಲೂ ಪೋಷಕರಿಗೆ (Parents) ಸವಾಲಾಗಿದೆ. ಮಕ್ಕಳಿಗೆ ಆರೋಗ್ಯಕರ ಆಹಾರ ಮತ್ತು ಸಾಕಷ್ಟು ಪೋಷಣೆಯನ್ನು ಒದಗಿಸುವುದು ಪ್ರತಿಯೊಬ್ಬ ಪೋಷಕರ ಗುರಿಯಾಗಿದ್ದರೂ, ಮಕ್ಕಳು ಸ್ವಾಭಾವಿಕವಾಗಿ ಜಂಕ್ ಫುಡ್ (Junkfood) ಮತ್ತು ಸಕ್ಕರೆ ಪಾನೀಯವನ್ನು ಸವಿಯಲು ಹೆಚ್ಚು ಒಲವು ತೋರುತ್ತಾರೆ. ಇದರಿಂದ ಮಕ್ಕಳ ದೇಹಕ್ಕೆ ಯಾವುದೇ ರೀತಿಯ ಪ್ರೋಟೀನ್ (Protein), ಪೋಷಕಾಂಶಗಳು ಲಭಿಸದ ಕಾರಣ ಪೋಷಕರು ಆತಂಕಗೊಳ್ಳುವುದು ಸಹಜ. ಹಾಗಿದ್ರೆ ಮಕ್ಕಳು ಹೆಲ್ದೀ ಫುಡ್ ಇಷ್ಟಪಟ್ಟು ತಿನ್ನುವಂತೆ ಮಾಡುವುದು ಹೇಗೆ ? ಆಹಾರ ಪದ್ಧತಿಯನ್ನು ಬದಲಾಯಿಸಲು ಅವರಿಗೆ ಹೇಗೆ ಸಹಾಯ ಮಾಡಬಹುದು. ಇಲ್ಲಿದೆ ಕೆಲವೊಂದು ಟಿಪ್ಸ್.
ಸಮತೋಲಿತ ಊಟಕ್ಕೆ ಮಕ್ಕಳನ್ನು ಪ್ರೋತ್ಸಾಹಿಸುವುದು ಹೇಗೆ ಎಂಬ ಬಗ್ಗೆ, ಮಕ್ಕಳ ಅಭಿವೃದ್ಧಿ ಮತ್ತು ಪಾಲನೆಯ ತಜ್ಞರೂ ಆಗಿರುವ ಪೌಷ್ಟಿಕತಜ್ಞ ಡಾ.ಕೃತಿ ಇಸ್ರಾನಿ ಅವರು ಮಾಹಿತಿ ನೀಡಿದ್ದಾರೆ. ಆರೋಗ್ಯಕರ ಆಹಾರವನ್ನು ತಿನ್ನಲು ಮಕ್ಕಳನ್ನು ಪ್ರೋತ್ಸಾಹಿಸುವ ಕೆಲವು ವಿಧಾನಗಳು ಇಲ್ಲಿವೆ:
ಯಾವಾಗ್ಲೂ ಚಾಕ್ಲೇಟ್ ಬೇಕೆಂದು ರಚ್ಚೆ ಹಿಡಿಯೋ ಮಕ್ಕಳಿಗೆ ಈ ಹೆಲ್ದೀ ಸ್ವೀಟ್ಸ್ ಕೊಡಿ
1. ಪೋಷಕರು ಮಾಡುವುದನ್ನು ಮಕ್ಕಳು ಮಾಡುತ್ತಾರೆ
ಮಕ್ಕಳನ್ನು ಪ್ರೋತ್ಸಾಹಿಸುವ ಸರಳ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಪೋಷಕರು ಆರೋಗ್ಯಕರ ನಡವಳಿಕೆ ಮತ್ತು ಆರೋಗ್ಯಕರ ಆಹಾರವನ್ನು ಅನುಕರಿಸುವುದು. ಮಕ್ಕಳು ಸಾಮಾನ್ಯವಾಗಿ ತಮ್ಮ ಪೋಷಕರು ತಿನ್ನುವುದನ್ನೇ ತಿನ್ನಲು ಇಷ್ಟಪಡುತ್ತಾರೆ. ಹೀಗಾಗಿ ಪೋಷಕರು ಸಹ ಉತ್ತಮ ಆಹಾರ ಸೇವಿಸುವ ಅಭ್ಯಾಸ ಇಟ್ಟುಕೊಳ್ಳಿ. ಇದು ಮಕ್ಕಳಿಗೂ ಮಾದರಿಯಾಗುತ್ತದೆ.
2. ನೈಸರ್ಗಿಕ ಹಣ್ಣು, ತರಕಾರಿಗಳನ್ನು ತಿನ್ನಲು ಪ್ರೋತ್ಸಾಹಿಸಿ
ಮಕ್ಕಳಿಗೆ ಚಿಕ್ಕಂದಿನಿಂದಲೇ ಹೆಚ್ಚು ಹಣ್ಣು, ತರಕಾರಿಗಳನ್ನು ಕೊಡಲು ಅಭ್ಯಾಸ ಮಾಡಿ. ಸಲಾಡ್, ಕಿಚಡಿ ಮೊದಲಾದ ರೀತಿಯಲ್ಲಿ ಮಕ್ಕಳಿಗೆ ಹಣ್ಣು, ತರಕಾರಿಗಳನ್ನು ನೀಡಿ. ಅತ್ಯಾಕರ್ಷಕವಾಗಿ ಕಾಣುವ ಆಹಾರಗಳನ್ನು ಮಕ್ಕಳು ಬೇಗ ತಿನ್ನುತ್ತಾರೆ. ಹಣ್ಣುಗಳ ಜ್ಯೂಸ್ ಮಾಡಿಕೊಡುವುದನ್ನೂ ಅಭ್ಯಾಸ ಮಾಡಿ. ಮಕ್ಕಳು ಚಿಕ್ಕಂದಿನಿಂದಲೇ ಇದನ್ನು ಕುಡಿದರೆ ದೊಡ್ಡವರಾದಾಗಲೂ ಹಣ್ಣು, ತರಕಾರಿಗಳನ್ನು ಇಷ್ಟಪಟ್ಟು ತಿನ್ನುತ್ತಾರೆ.
3. ಸರಳ ಆರೋಗ್ಯಕರ ಆಹಾರ ತಯಾರಿಕೆಯಲ್ಲಿ ತೊಡಗಿಸಿಕೊಳ್ಳಿ
ಆರೋಗ್ಯಕರ ಊಟದ ತಯಾರಿಕೆಯಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವುದು ಮತ್ತೊಂದು ಯಶಸ್ವಿ ತಂತ್ರವಾಗಿದೆ. ಇದು ನಿಮ್ಮ ಮಗುವಿನೊಂದಿಗೆ ಧನಾತ್ಮಕ ಸಂಪರ್ಕವನ್ನು ಸೃಷ್ಟಿಸಲು ನೆರವಾಗುತ್ತದೆ. ಇದು ಅತ್ಯಂತ ಆಳವಾದ ಮಾನಸಿಕ ಪ್ರಭಾವವನ್ನು ಹೊಂದಿದೆ ಮತ್ತು ಆರೋಗ್ಯಕರ ಊಟದ ತಯಾರಿಕೆಯು ಮಗುವಿನ ಮನಸ್ಸಿನಲ್ಲಿ ಸಂತೋಷದ ನಿಕಟ ಕ್ಷಣಗಳೊಂದಿಗೆ ಸಂಬಂಧಿಸಿದೆ. ಆದ್ದರಿಂದ ಶಾಂತವಾಗಿ ಮತ್ತು ಬುದ್ಧಿವಂತಿಕೆಯಿಂದ ಬಳಸಿದರೆ, ಆರೋಗ್ಯಕರ ಊಟವನ್ನು ತಯಾರಿಸುವ ಕ್ರಿಯೆಯು ಮಕ್ಕಳ ಆಹಾರ ಪದ್ಧತಿಯ ಮೇಲೆ ಧನಾತ್ಮಕ ಪರಿಣಾಮ ಬೀರಬಹುದು.