ಪ್ರಸ್ತುತ ದಿನದಲ್ಲಿ ಸಮಾಜ ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಗಾಂಧೀಜಿ ಅವರ ಚಿಂತನೆಗಳಲ್ಲಿ ಸೂಕ್ತ ಪರಿಹಾರವಿದೆ ಎಂದು ಪ್ರಾಂಶುಪಾಲೆ ಡಾ. ಎಸ್ ಹಂಸವೇಣಿ ಹೇಳಿದರು.
ಕೆ.ಆರ್. ನಗರ : ಪ್ರಸ್ತುತ ದಿನದಲ್ಲಿ ಸಮಾಜ ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಗಾಂಧೀಜಿ ಅವರ ಚಿಂತನೆಗಳಲ್ಲಿ ಸೂಕ್ತ ಪರಿಹಾರವಿದೆ ಎಂದು ಪ್ರಾಂಶುಪಾಲೆ ಡಾ. ಎಸ್ ಹಂಸವೇಣಿ ಹೇಳಿದರು.
ಸಾಲಿಗ್ರಾಮ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಐಕ್ಯೂಎಸಿ ಸಮಿತಿ ಮತ್ತು ಸಾಂಸ್ಕೃತಿಕ ಸಮಿತಿಯಿಂದ ನಡೆದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
undefined
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಈ ಮಹಾನುಭಾವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕಾಲೇಜಿನಲ್ಲಿ ಶ್ರಮದಾನ ಮಾಡುವುದರ ಮುಖಾಂತರ ಕಾಲೇಜಿನ ಸ್ವಚ್ಛತೆ ಮಾಡಿದರು.
ಡಾ. ಗಾಯಿತ್ರಮ್ಮ, ಐಕ್ಯೂಎಸಿ ಸಂಚಾಲಕ ಶ್ರೀನಿವಾಸ್, ಸುರೇಶ್, ಮಂಡ್ಯ ರಾಜೇಶ್, ರಾಜಶೇಖರ್, ಶೇಖರ್ ಹೊಡೆನೂರು, ಮಧು, ಮಂಜುನಾಥ್, ಮಹೇಶ್, ಚೇತನ್, ಸುವರ್ಣ, ಯೋಗೇಶ್, ಸುಂದರ ರಾಜು, ಧರ್ಮ ಕುಮಾರ್, ಸುಶ್ಮಿತಾ ಹಾಗೂ ವಿದ್ಯಾರ್ಥಿಗಳು ಇದ್ದರು.
ಗಾಂಧೀಜಿ ಚಿಂತನೆಗಳನ್ನಿಟ್ಟುಕೊಂಡು ಸರ್ಕಾರದ ಕಾರ್ಯಕ್ರಮ
ಬೆಂಗಳೂರು (ಅ.3) : ಮಹಾತ್ಮ ಗಾಂಧೀಜಿ ಅವರ ಚಿಂತನೆಗಳನ್ನು ಆಧಾರವಾಗಿಟ್ಟುಕೊಂಡು ರಾಜ್ಯ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಗೊಳಿಸುತ್ತಿದೆ. ಆ ಮೂಲಕ ಮಹಾತ್ಮ ಗಾಂಧಿ ಅವರ ಚಿಂತನೆಗಳಿಗೆ ಗೌರವ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಗಾಂಧಿ ಸ್ಮಾರಕ ನಿಧಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆ, ಸಂಸ್ಥೆಗಳ ಸಹಯೋಗದಲ್ಲಿ ಸೋಮವಾರ ಗಾಂಧಿ ಭವನದಲ್ಲಿ ಏರ್ಪಡಿಸಲಾಗಿದ್ದ ಮಹಾತ್ಮ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲೋಕಸಭಾ ಚುನಾವಣೆ ಹೊತ್ತಲ್ಲೇ ಮತ್ತೆ ಮುನ್ನಲೆಗೆ ಬಂದ ಕುರುಬ ಸಮಾಜ ಎಸ್‌ಟಿ ಮೀಸಲಾತಿ ಹೋರಾಟ!
ಮಹಾತ್ಮ ಗಾಂಧಿ ಅವರು ಹಳ್ಳಿಗಳ ಅಭಿವೃದ್ಧಿಯಿಂದಷ್ಟೇ ದೇಶದ ಅಭಿವೃದ್ಧಿ ಸಾಧ್ಯ ಎಂದು ಬಲವಾಗಿ ನಂಬಿದ್ದರು. ಅದಕ್ಕಾಗಿಯೇ ದೇಶಕ್ಕಾಗಿ ಸರಳ ಆರ್ಥಿಕ ನೀತಿಯನ್ನು ಅವರು ಪ್ರತಿಪಾದಿಸಿ, ಹಳ್ಳಿಗಳ ಬೆಳವಣಿಗೆ ಬಗ್ಗೆ ತಿಳಿಸಿದ್ದರು. ಮಹಾತ್ಮ ಗಾಂಧೀಜಿ ಅವರು ಹಾಕಿಕೊಟ್ಟ ಮಾರ್ಗ ಹಾಗೂ ಅವರ ಚಿಂತನೆಯಂತೆ ಈಗ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ. ರಾಜ್ಯದ ಎಲ್ಲ ವಲಯ, ಪ್ರದೇಶ ಅಭಿವೃದ್ಧಿ ಆಗುವಂತಹ ಕಾರ್ಯವನ್ನು ಮಾಡುತ್ತಿದೆ. ಸರ್ಕಾರದ ಕಾರ್ಯಕ್ರಮಗಳು ಗಾಂಧೀಜಿ ಅವರ ಚಿಂತನೆಯಂತೆಯೇ ರೂಪಿಸಿ, ಅನುಷ್ಠಾನಗೊಳಿಸಲಾಗುತ್ತಿದೆ. ಆ ಮೂಲಕ ಮಹಾತ್ಮ ಗಾಂಧಿಗೆ ಗೌರವ ಸೂಚಿಸಲಾಗುತ್ತಿದೆ ಎಂದರು.
ಗಾಂಧೀಜಿ ಅವರ ಜೀವನ ಶೈಲಿ, ಚಿಂತನೆಗಳಿಂದಾಗಿ ರವೀಂದ್ರನಾಥ ಠಾಗೋರ್ ಅವರು ಗಾಂಧಿ ಅವರನ್ನು ಮಹಾತ್ಮ ಎಂದು ಕರೆದರೆ, ಸುಭಾಷಚಂದ್ರ ಬೋಸ್ ಅವರು ರಾಷ್ಟ್ರಪಿತ ಎಂದು ಸಂಭೋಧಿಸಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬಂದಾಗಲೂ ಅದನ್ನು ಸಂಭ್ರಮಿಸದೆ ದೇಶ ವಿಭಜನೆಯಿಂದ ಉಂಟಾದ ಸಮಸ್ಯೆಗಳನ್ನು ನಿವಾರಿಸುವಲ್ಲಿ ಗಾಂಧೀಜಿ ಮಗ್ನರಾಗಿದ್ದರು. ಹೀಗಾಗಿ ದೇಶಕ್ಕೆ ಗಾಂಧಿ ಮಾತ್ರ ಮಹಾತ್ಮ, ರಾಷ್ಟ್ರಪಿತ ಎಂಬುದನ್ನು ಎಲ್ಲರೂ ತಿಳಿಯಬೇಕು. ಗಾಂಧೀಜಿ ಅವರು ಬದುಕಿದ ರೀತಿಯಲ್ಲಿ ಬದುಕಲು ಸಾಧ್ಯವಾಗದಿದ್ದರೂ, ಅವರ ಚಿಂತನೆ, ಹಾಕಿಕೊಟ್ಟ ದಾರಿಯಲ್ಲಿ ಸಾಗುವಂತಹ ಪ್ರಯತ್ನ ನಾವೆಲ್ಲರೂ ಮಾಡಬೇಕು. ಆಮೂಲಕ ಅವರಿಗೆ ಗೌರವ ನೀಡಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಹೇಳಿದರು.
ಗಾಂಧೀಜಿ ಅವರಂತೆ ದೇಶ ಕಂಡ ಮತ್ತೊಬ್ಬ ಸರಳ ವ್ಯಕ್ತಿತ್ವ ಎಂದರೆ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರದ್ದು. ದೇಶ ಕಂಡ ಅತ್ಯಂತ ಪ್ರಾಮಾಣಿಕ ರಾಜಕಾರಣಿ. ಅವರು ಬಿಟ್ಟು ಹೋಗಿರುವ ಮೌಲ್ಯಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಆಮೂಲಕ ದೇಶದಲ್ಲಿ ಪ್ರಾಮಾಣಿಕತೆ ನೆಲೆ ನಿಲ್ಲುವಂತೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ ಮಾತನಾಡಿ, ದೇಶಕ್ಕೆ ತಮ್ಮ ಜೀವನವನ್ನೇ ತ್ಯಾಗ ಮಾಡಿದ ಮಹಾತ್ಮ ಗಾಂಧೀಜಿ ಅವರ ಮಹತ್ವವನ್ನು ನಾವೆಲ್ಲರೂ ಅರಿಯಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಹಾತ್ಮ ಗಾಂಧಿ ಕುರಿತಂತೆ ತಪ್ಪು ಮಾಹಿತಿ ಹರಡುತ್ತಾ, ಅವರಿಗೆ ಅವಹೇಳನ ಮಾಡಲಾಗುತ್ತಿದೆ. ಗಾಂಧಿ ಅವರಿಗೆ ಅಪಮಾನ ಮಾಡುವ ಕುತಂತ್ರಿಗಳನ್ನು ಪತ್ತೆ ಶಿಕ್ಷಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು ಎಂದರು.