
ಬೆಂಗಳೂರು (ಜು.20): ಸಿಲಿಕಾನ್ ಸಿಟಿ, ಐಟಿ- ಸಿಟಿ ಎಂದು ಕರೆಯುವ ಬೆಂಗಳೂರಿನಲ್ಲಿ ಬೀದಿ ನಾಯಿಗಳನ್ನು ಸಮೀಕ್ಷೆ ಮಾಡುವುದಕ್ಕೂ ಕೂಡ ಹೈಟೆಕ್ ತಂತ್ರಜ್ಞಾನವಾದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (Artificial intelligence- AI) ಅನ್ನು ಬಳಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತೀರ್ಮಾನಿಸಿದೆ. ಕೃತಕ ಬುದ್ದಿ ಮತ್ತೆ (ಎಐ) ಹಾಗೂ ಡ್ರೋನ್ ಬಳಸಿ ಬೀದಿ ನಾಯಿ ಸಮೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ.
ಜಾಗತಿಕವಾಗಿ ಕೃತಕ ಬುದ್ಧಿಮತ್ತೆ (ಎಐ) ಇನ್ನೂ ಹೆಚ್ಚಾಗಿ ಪ್ರಸಾರಗೊಂಡಿಲ್ಲ. ಆದರೆ, ಪೂರ್ಣಕಾಲಿಕವಾಗಿ ತಂತ್ರಜ್ಞಾನವನ್ನೇ ಬಳಕೆ ಮಾಡುವ ಕ್ಷೇತ್ರಗಳಲ್ಲಿ ಎಐ ಟೆಕ್ನಾಲಜಿ ಬಳಸುವ ಕಾರ್ಯ ನಡೆಯುತ್ತಿವೆ. ಇನ್ನು ಹಾಲಿವುಡ್‌ನಲ್ಲಿ ಸಿನಿಮಾ ನಿರ್ಮಾಣಕ್ಕೆ ಎಐ ಟೆಕ್ನಾಲಜಿ ಬಳಕೆ ಮಾಡುವುದರಿಂದ ಸಿನಿಮಾ ಸಹ ಕಲಾವಿದರಿಗೆ ಸಮಸ್ಯೆ ಆಗಿದ್ದು, ದೊಡ್ಡ ಮಟ್ಟದ ಹೋರಾಟ ಮಾಡುತ್ತಿದ್ದಾರೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ಇನ್ನೂ ಸುದ್ದಿವಾಚನೆ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ಮಾತ್ರ ಎಐ ಬಳಕೆ ಆಗುತ್ತಿದೆ. ಆದರೆ, ಒಂದು ಹೆಜ್ಜೆ ಮುಂದೆ ಹೋಗಿರುವ ಬಿಬಿಎಂಪಿ ಬೀದಿ ನಾಯಿಗಳ ಗಣತಿಯನ್ನು ಮಾಡಲು ಕೃತಕ ಬುದ್ಧಿಮತ್ತೆ (ಎಐ) ಹಾಗೂ ಡ್ರೋನ್‌ಗಳನ್ನು ಜಂಟಿಯಾಗಿ ಬಳಸಲು ಮುಂದಾಗಿದೆ.
ಸರ್ಕಾರಿ ನೌಕರಿಗಾಗಿ ಹಣ ಕೊಟ್ಟು ಮೋಸ ಹೋಗಿದ್ದೀರಾ? ಇಲ್ಲಿದೆ ಹಣ ವಾಪಸ್ ಪಡೆವ ಮಾರ್ಗ!
ಸಾಮಾನ್ಯವಾಗಿ ರಸ್ತೆಯಲ್ಲಿ ಬೀದಿ ನಾಯಿಗಳ ಸಮೀಕ್ಷೆಯನ್ನು ಜನರೇ ಹೋಗಿ ನಡೆಸಲಿದ್ದಾರೆ. ಕೆರೆಗಳು, ಖಾಲಿ ಜಾಗ, ಪೊದೆಗಳ ಬಳಿ ಸಮೀಕ್ಷೆ ನಡೆಸಲು ಡ್ರೋನ್ ಬಳಕೆ ಮಾಡಲಾಗುತ್ತದೆ. ಈ ವೇಳೆ ಡ್ರೋನ್‌ಗಳ ಮೂಲಕ ಮೂಲಕ ಸೆರೆ ಹಿಡಿಯಲಾದ ಬೀದಿ ನಾಯಿಗಳ ಫೋಟೋಗಳನ್ನು ಬಿಬಿಎಂಪಿಯಿಂದ ನೇಮಕ ಮಾಡಿದ ಸಿಬ್ಬಂದಿ ಗುರುತಿಸಿ ದಾಖಲು ಮಾಡುತ್ತಿದ್ದರು. ಆದರೆ, ಈಗ ಡ್ರೋನ್‌ಗಳು ಸೆರೆ ಹಿಡಿದ ಬೀದಿ ನಾಯಿಗಳ ಫೋಟೋಗಳನ್ನು ಕೃತಕ ಬುದ್ದಿ ಮತ್ತೆ (ಎಐ) ಬಳಸಿ ದಾಖಲು ಮಾಡಿಕೊಳ್ಳುವುದಕ್ಕೆ ಖಚಿತಪಡಿಸಿಕೊಳ್ಳಲಾಗುತ್ತದೆ.
ಇನ್ನು ಪ್ರಾಯೋಗಿಕವಾಗಿ ಎಐ ಡ್ರೋನ್ ಬಳಕೆಯನ್ನು ಕೆಲವೇ ಸ್ಥಳಗಳಲ್ಲಿ ನಡೆಸಲಾಗುತ್ತದೆ. ಈ ಪ್ರಯೋಗವು ಯಶಸ್ವಿಯಾದಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ಇಡೀ ಬೆಂಗಳೂರು ನಗರದಲ್ಲಿ ಎಐ-ಡ್ರೋನ್‌ಗಳನ್ನು ಬಳಸಿಕೊಂಡೇ ಬೀದಿ ನಾಯಿಗಳ ಸಮೀಕ್ಷೆಯನ್ನು ಮಾಡಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಸಹಯೋಗದಲ್ಲಿ ವೈಡಿನ್ ಎಂಬ ಸ್ಟಾರ್ಟ್ ಅಪ್ ಕಂಪನಿ ಈ ಪ್ರಾಯೋಗಿಕ ಸಮೀಕ್ಷೆ ನಡೆಸಲಿದೆ ಎಂಬ ಮಾಹಿತಿ ತಿಳಿದುಬಂದಿದೆ.
Bengaluru: ರಾಜ್ಯದಲ್ಲಿ ಪೊಲೀಸರಿಗೆ ಇಲ್ಲ ರಕ್ಷಣೆ, ನಡುರಸ್ತೆಯಲ್ಲೇ ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ!
ಬಿಬಿಎಂಪಿ ವತಿಯಿಂದ ಪ್ರಾಯೋಗಿಕವಾಗಿ ಸೀಗೆಹಳ್ಳಿ, ಹುಳಿಮಾವು ಹಾಗೂ ಎಲೆಮಲ್ಲಪ್ಪ ಶೆಟ್ಟಿ ಕೆರೆಗಳ ಬಳಿ ಕೃತಕ ಬುದ್ಧಿಮತ್ತೆ -ಡ್ರೋನ್‌ಗಳನ್ನು ಬಳಸಿ ಮೊದಲ ಹಂತದಲ್ಲಿ ಸಮೀಕ್ಷೆ ನಡೆಯಲಿದೆ. ಇದರ ಸುತ್ತಮುತ್ತ ಸಮೀಕ್ಷಾ ತಂಡವೂ ಕೂಡ ಸಮೀಕ್ಷೆ ನಡೆಸಲಿದೆ. ಇದರಿಂದ ಸಮೀಕ್ಷೆಯ ನಿಖರತೆ ಹೆಚ್ಚಲಿದೆ. ಸಮೀಕ್ಷೆ ನಿಖರವಾದಷ್ಟು ಬೀದಿ ನಾಯಿಗಳ ನಿಯಂತ್ರಣಕ್ಕೆ ಪರಿಣಾಮಕಾರಿ ಯೋಜನೆ ರೂಪಿಸಬಹುದು ಎಂದು ಬಿಬಿಎಂಪಿ ಆಲೋಚನೆ ಮಾಡಿದೆ.