ಭಾರೀ ಮಳೆ: ಗೋಕಾಕ ಜಲಪಾತದತ್ತ ಪ್ರವಾಸಿಗರು ತೆರಳದಂತೆ ಖಾಕಿ ನಿರ್ಬಂಧ

By Kannadaprabha NewsFirst Published Jul 20, 2023, 9:30 PM IST
Highlights

ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ಗೋಕಾಕ ಜಲಪಾತ ಮೈದುಂಬಿ ಹರಿಯುತ್ತಿದೆ. ಪ್ರವಾಸಿಗರು ತಮ್ಮ ಮಕ್ಕಳ ಬಗ್ಗೆ ನಿಗಾ ವಹಿಸಬೇಕು ಹಾಗೂ ಯುವಕರು ಮದ್ಯ ಸೇವನೆ ಮಾಡಿ ಹುಡುಗಾಟ ಮಾಡದೆ ಜಲಪಾತ ಸೌಂದರ್ಯ ಸವಿಯುವಂತೆ ಪ್ರವಾಸಿಗರಲ್ಲಿ ಮನವಿ ಮಾಡಿದ ಪೊಲೀಸರು. 

ಗೋಕಾಕ(ಜು.20): ಕಳೆದ ಹಲವು ದಿನಗಳಿಂದ ಗೋಕಾಕ ಜಲಪಾತದಲ್ಲಿ ಪ್ರವಾಸಿಗರು ಜಲಪಾತದ ತುತ್ತ ತುದಿಗೆ ತೆರಳಿ ಸೇಲ್ಪಿ ತೆಗೆದುಕೊಳ್ಳುತ್ತಿರುವ ಹಿನ್ನೆಲೆ ಸ್ಥಳೀಯ ಪೊಲೀಸ್‌ ಇಲಾಖೆ ಸೂಕ್ತ ಕ್ರಮವಹಿಸಿ ಮಹಾಲಿಂಗೇಶ್ವರ ದೇವಸ್ಥಾನದ ಮುಂದೆ ಬ್ಯಾರಿಕೇಡ್‌ ಅಳವಡಿಸಿ ಪ್ರವಾಸಿಗರು ಜಲಪಾತದತ್ತ ತೆರಳದಂತೆ ನಿರ್ಬಂಧ ವಿಧಿಸಿದ್ದಾರೆ.

ಪಶ್ಚಿಮ ಘಟ್ಟಅರಣ್ಯ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಕಳೆದೆರಡು ದಿನಗಳಿಂದ ಗೋಕಾಕ ಜಲಪಾತ ಹಾಗೂ ಗೊಡಚಿನಮಲ್ಕಿ ಜಲಪಾತದಲ್ಲಿ ನೀರಿನ ಹರಿವು ಹೆಚ್ಚುತ್ತಿದ್ದು ಪ್ರವಾಸಿಗರು ಮುಂಜಾಗೃತೆ ವಹಿಸಿ ಪೊಲೀಸ್‌ ಇಲಾಖೆ ನಿಗದಿ ಪಡಿಸಿದ ಸ್ಥಳದಿಂದ ಜಲಪಾತ ವೀಕ್ಷಿಸಬೇಕು. ಪೊಲೀಸ್‌ ಇಲಾಖೆ ನಿಗದಿ ಪಡಿಸಿದ ಸ್ಥಳದಿಂದ ಮುಂದೆ ಹೊದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ಡಿ.ಎಸ್‌.ಮುಲ್ಲಾ ತಿಳಿಸಿದ್ದಾರೆ. 

Latest Videos

ಮುಂದುವರೆದ ಮಳೆ ಆರ್ಭಟ: ಬೆಳಗಾವಿಯಲ್ಲಿ ಸೇತುವೆ, ಮಂದಿರ ಜಲಾವೃತ

ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ಗೋಕಾಕ ಜಲಪಾತ ಮೈದುಂಬಿ ಹರಿಯುತ್ತಿದೆ. ಪ್ರವಾಸಿಗರು ತಮ್ಮ ಮಕ್ಕಳ ಬಗ್ಗೆ ನಿಗಾ ವಹಿಸಬೇಕು ಹಾಗೂ ಯುವಕರು ಮದ್ಯ ಸೇವನೆ ಮಾಡಿ ಹುಡುಗಾಟ ಮಾಡದೆ ಜಲಪಾತ ಸೌಂದರ್ಯ ಸವಿಯುವಂತೆ ಪ್ರವಾಸಿಗರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಗೋಕಾಕ ಶಹರ ಠಾಣೆ ಪಿಎಸೈ ಎಂ.ಡಿ.ಘೋರಿ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.

click me!