ಸರ್ಕಾರ ವರ್ಗಾಯಿಸಿದ್ದ ಅಧಿಕಾರಿ ನಮಗೆ ಬೇಡ ಎಂದು ಪತ್ರ

By Kannadaprabha NewsFirst Published Jan 23, 2020, 7:51 AM IST
Highlights

ಸರ್ಕಾರದಿಂದ ವರ್ಗಾವಣೆಯಾದ ಭ್ರಷ್ಟ ಅಧಿಕಾರಿ ನಮಗೆ ಬೇಡ ಎಂದು ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ತಿಳಿಸಲಾಗಿದೆ. 

ಬೆಂಗಳೂರು [ಜ.23]: ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಎನ್‌.ಜಿ.ಗೌಡಯ್ಯ ಅವರ ಸೇವೆ ಪಾಲಿಕೆಗೆ ಅವಶ್ಯಕತೆ ಇಲ್ಲ ಎಂದು ನಗರಾಭಿವೃದ್ಧಿ ಇಲಾಖೆಗೆ ಬಿಬಿಎಂಪಿ ಪತ್ರ ಬರೆದಿದೆ.

ನಗರಾಭಿವೃದ್ಧಿ ಇಲಾಖೆಯು ಜ.18 ರಂದು ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಹಾಗೂ ಇಲಾಖೆ ತನಿಖೆ ಬಾಕಿ ಇರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧೀಕ್ಷಕ ಇಂಜಿನಿಯರ್‌ ಆಗಿದ್ದ ಎನ್‌.ಜಿ.ಗೌಡಯ್ಯ ಅವರಿಗೆ ಮುಂಬಡ್ತಿ ನೀಡಿ ಬಿಬಿಎಂಪಿಯ (ಕೇಂದ್ರ) ವಿಭಾಗದ ಯೋಜನೆಗಳ ಮುಖ್ಯ ಎಂಜಿನಿಯರ್‌ ಆಗಿ ನೇಮಿಸಿ ಆದೇಶಿಸಿತ್ತು. ಇದರ ಬೆನ್ನಲ್ಲಿ ಸಾಕಷ್ಟುಆಕ್ಷೇಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು.

ಈ ನಡುವೆ ಎನ್‌.ಜಿ.ಗೌಡಯ್ಯ ಮಂಗಳವಾರ ಬಿಬಿಎಂಪಿಯ ಯೋಜನೆಗಳ ಮುಖ್ಯ ಎಂಜಿನಿಯರ್‌ ಆಗಿ ಅಧಿಕಾರ ಸ್ವೀಕಾರಕ್ಕೆ ಪಾಲಿಕೆ ಆಡಳಿತ ವಿಭಾಗ ವಿಶೇಷ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು. ಆದರೆ, ಬಿಬಿಎಂಪಿ ಆಯುಕ್ತರು ಈ ರೀತಿ ಭ್ರಷ್ಟಾಚಾರ ಆರೋಪ ಹೊಂದಿರುವ ಅಧಿಕಾರಿ ಬಿಬಿಎಂಪಿಗೆ ಬೇಡ ಎಂದು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯುವುದಕ್ಕೆ ಆಡಳಿತ ವಿಭಾಗದ ವಿಶೇಷ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ನಿಯಮಗಳ ಪ್ರಕಾರ, ತನಿಖೆ ಪೂರ್ಣಗೊಳ್ಳುವವರೆಗೆ ಆರೋಪಿತ ಅಧಿಕಾರಿಗೆ ಕಾರ್ಯಕಾರಿ ಹುದ್ದೆ ನೀಡುವಂತಿಲ್ಲ. ಗೌಡಯ್ಯ ಇಲಾಖೆ ತನಿಖೆ ಎದುರಿಸುತ್ತಿದ್ದಾರೆ. ಈ ನಡುವೆ ಗೌಡಯ್ಯ ಅವರಿಗೆ ಬಡ್ತಿ ನೀಡಿ, ಮುಖ್ಯ ಎಂಜಿನಿಯರ್‌ ಹುದ್ದೆಯನ್ನು ನೀಡಲಾಗಿದೆ ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತವಾಗಿತ್ತು.

ಆದೇಶ ವಾಪಸ್‌ ಪಡೆಯಿರಿ:

ಈ ಕುರಿತು ಪ್ರತಿಕ್ರಿಯೆ ನೀಡಿ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜೀದ್‌ ಮಾತನಾಡಿ, ಕೆಸಿಎಸ್‌ಆರ್‌ ನಿಯಮ ಉಲ್ಲಂಘಿಸಿ ಇಲಾಖೆ ತನಿಖೆ ಬಾಕಿ ಇರುವಾಗಲೇ ಅಧೀಕ್ಷಕ ಎಂಜಿನಿಯರ ಹುದ್ದೆಯಿಂದ ಮುಖ್ಯ ಎಂಜಿನಿಯರ್‌ ಹುದ್ದೆಗೆ ಬಡ್ತಿ ನೀಡಲಾಗಿದೆ. ಪಾಲಿಕೆಯ ಯೋಜನಾ ವಿಭಾಗದ ಸಾವಿರಾರು ಕೋಟಿ ವೆಚ್ಚದಲ್ಲಿ ಎಲಿವೇಟೆಡ್‌ ಕಾರಿಡಾರ್‌ ಯೋಜನೆಗೆ ಉಸ್ತುವಾರಿ ಮೇಲೆ ನಿಯೋಜನೆ ಮಾಡಿರುವುದು ಕಾನೂನು ಬಾಹಿರವಾಗಿರುತ್ತದೆ. ಸರ್ಕಾರವು ಇಂತಹ ಭಷ್ಟ್ರ ಅಧಿಕಾರಿಗಳಿಗೆ ಇನ್ನು ಹೆಚ್ಚಿನ ಭಷ್ಟಾ್ರಚಾರ ನಡೆಸಲು ಉತ್ತೇಜನ ನೀಡಲಾಗುತ್ತಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ. ಇದರಿಂದ ಸಮಾಜಕ್ಕೆ ಕೆಟ್ಟಸಂದೇಶ ಹೋಗಲಿದೆ. ಅದ್ದರಿಂದ ಸರ್ಕಾರ ಹೊರಡಿಸಿರುವ ಆದೇಶವನ್ನು ಕೂಡಲೇ ವಾಪಾಸ್‌ ಪಡೆಬೇಕು ಎಂದು ಆಗ್ರಹಿಸಿದ್ದಾರೆ.

ಬಿಬಿಎಂಪಿ ವಿರುದ್ಧ ಹೈಕೋರ್ಟ್ ಕೆಂಡಾಮಂಡಲ!...

ಅಪಾರ ಅಕ್ರಮ ಆಸ್ತಿ ಒಡೆಯ!

ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು 2018ರ ಅಕ್ಟೋಬರ್‌ನಲ್ಲಿ ಗೌಡಯ್ಯಅವರ ನಿವಾಸ, ಕಚೇರಿ ಮತ್ತು ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ 77 ಲಕ್ಷ ರು. ನಗದು, ಬ್ಯಾಂಕ್‌ ಖಾತೆಗಳಲ್ಲಿ 15 ಲಕ್ಷ ರು., 18 ಕೆ.ಜಿ. ಚಿನ್ನ, 10 ಕೆ.ಜಿ. ಬೆಳ್ಳಿ, 8 ನಿವೇಶನಗಳು, 14 ಫ್ಲ್ಯಾಟ್‌ಗಳು, 3 ಕಾರು ಮತ್ತು 3 ದ್ವಿಚಕ್ರ ವಾಹನಗಳು ಪತ್ತೆಯಾಗಿದ್ದವು. ಇದಲ್ಲದೇ ಬಿಡಿಎಗೆ ಸಂಬಂಧಿಸಿದ ಟೆಂಡರ್‌ ದಾಖಲೆಗಳು ಸಹ ಸಿಕ್ಕಿದ್ದವು. ಆ ಬಳಿಕ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು.

ಚುನಾವಣೆಗೆ ಜೆಡಿಎಸ್‌ ಟಿಕೆಟ್‌ ಬೇಕಾ: ಅರ್ಜಿ ಸಲ್ಲಿಸಿ.

ಆದಾಯ ಮೀರಿ ಆಸ್ತಿ ಗಳಿಸಿರುವ ಆರೋಪ ಹೊತ್ತಿರುವ ಗೌಡಯ್ಯ ಅವರನ್ನು ಮುಖ್ಯ ಎಂಜಿನಿಯರ್‌ ಸ್ಥಾನಕ್ಕೆ ಎರವಲು ಸೇವೆ ಮೇಲೆ ನಿಯೋಜಿಸಿ, 2500 ಕೋಟಿ ರು. ವೆಚ್ಚದಲ್ಲಿ 596 ರಸ್ತೆಗಳ ಅಭಿವೃದ್ಧಿ, 1 ಸಾವಿರ ಕೋಟಿ ರು. ವೆಚ್ಚದ ಎಲಿವೇಟೆಡ್‌ ಕಾರಿಡಾರ್‌ ಯೋಜನೆಗಳ ಉಸ್ತುವಾರಿ ವಹಿಸುವುದಕ್ಕೆ ಮುಂದಾಗಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

click me!