ನಮ್ಮ ತಂದೆಯನ್ನು ಗುರಿಯಾಗಿಸಿಕೊಂಡು ಸ್ಫೋಟಕ ದಾಳಿ : ನಲಪಾಡ್‌

Kannadaprabha News   | Asianet News
Published : Jan 23, 2020, 07:44 AM ISTUpdated : Jan 23, 2020, 12:30 PM IST
ನಮ್ಮ ತಂದೆಯನ್ನು ಗುರಿಯಾಗಿಸಿಕೊಂಡು ಸ್ಫೋಟಕ ದಾಳಿ : ನಲಪಾಡ್‌

ಸಾರಾಂಶ

ಶಾಸಕ ಹ್ಯಾರಿಸ್ ಮೇಲೆ ನಡೆದ ದಾಳಿಯೂ ಉದ್ದೇಶಪೂರ್ವಕವಾಗಿದುದು, ಪಕ್ಕದ ಕಟ್ಟಡದಿಂದ ಸ್ಫೋಟಕ ವಸ್ತು ಹಾರಿ ಬಂದಿತ್ತು ಎಂದು ಹ್ಯಾರಿಸ್ ಪುತ್ರ ನಲಪಾಡ್ ಹೇಳಿದ್ದಾರೆ.

ಬೆಂಗಳೂರು [ಜ.23]:  ನಮ್ಮ ತಂದೆಯನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸಿ ಕಾರ್ಯಕ್ರಮದಲ್ಲಿ ಕೆಲವರು ದುಷೃತ್ಯಕ್ಕೆ ಎಸಗಿದ್ದಾರೆ. ಇದು ಖಂಡಿತವಾಗಿಯೂ ಪಟಾಕಿದಿಂದಾಗಿರುವ ಸ್ಫೋಟಲ್ಲ. ಕಚ್ಚಾ ಬಾಂಬ್‌ ಬಳಸಿರುವ ಅನುಮಾನವಿದೆ ಎಂದು ಶಾಸಕರ ಪುತ್ರ ಮೊಹಮ್ಮದ್‌ ನಲಪಾಡ್‌ ಆರೋಪಿಸಿದ್ದಾರೆ.

"

ಘಟನೆ ಬಳಿಕ ತಂದೆ ದಾಖಲಾಗಿದ್ದ ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕ್ಷೇತ್ರದಲ್ಲಿ ಯಾರೂ ವೈರಿಗಳಿಲ್ಲ. ದೇವರ ದಯೆಯಿಂದ ತಂದೆ ಪಾರಾಗಿದ್ದಾರೆ. ಅವರಿಗೆ ಕಾಲಿಗೆ ಸುಟ್ಟು ಗಾಯವಾಗಿದ್ದು, ಸೆಂಟ್‌ ಫಿಲೋಮಿನಾ ಆಸ್ಪತ್ರೆಯ ಸಾಮಾನ್ಯ ವಾರ್ಡ್‌ನಲ್ಲಿ ಅವರಿಗೆ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ಒಂದು ದಿನ ವೈದ್ಯರು ಸಲಹೆ ನೀಡಿದ್ದಾರೆ ಎಂದು ನಲಪಾಡ್‌ ಹೇಳಿದರು.

ಬರುವಷ್ಟರಲ್ಲಿ ಘಟನೆಯಾಗಿತ್ತು:

ವಿವೇಕನಗರ ಬಳಿಯ ವನ್ನಾರಪೇಟೆಯಲ್ಲಿ ಜನ್ಮ ದಿನಾಚರಣೆ ಕಾರ್ಯಕ್ರಮವಿತ್ತು. ನಮ್ಮ ತಂದೆ ಜೊತೆ ನಾನು ಸಹ ಪಾಲ್ಗೊಂಡಿದ್ದೆ. ಆದರೆ ಕಾರ್ಯಕ್ರಮಕ್ಕೆ ನಾನು ಐದು ನಿಮಿಷ ತಡವಾಗಿ ತೆರಳಿದೆ. ಆ ವೇಳೆ ಘಟನೆ ನಡೆದಿತ್ತು. ನಾನು ಕೂಡಲೇ ತಂದೆ ಅವರೊಂದಿಗೆ ಆಸ್ಪತ್ರೆಗೆ ಧಾವಿಸಿದೆ. ಇತರ ಮೂವರು ಸಹ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದರು.

ಪ್ಲಾಸ್ಟಿಕ್‌ ಕವರ್‌ ರೀತಿಯ ವಸ್ತು ಸ್ಫೋಟ:

ಸಮಾರಂಭಗಳಲ್ಲಿ ತಂದೆ ಅವರಿಗೆ ದೊಡ್ಡ ಕುರ್ಚಿ ಹಾಕುತ್ತಾರೆ. ಯಾವತ್ತೂ ದೊಡ್ಡ ಕುರ್ಚಿಯಲ್ಲಿ ಅವರು ಕುಳಿತುಕೊಳ್ಳುವುದಿಲ್ಲ. ಇವತ್ತು ಕೂಡಾ ಅವರು, ದೊಡ್ಡ ಕುರ್ಚಿಯಲ್ಲಿ ಕಾರ್ಯಕ್ರಮದ ಆಯೋಜಕರಾದ ವಾರ್ಡ್‌ ಅಧ್ಯಕ್ಷ ಮೋಹನ್‌ ಅವರನ್ನು ಕೂರಿಸಿದ್ದರು. ಕಾರ್ಯಕ್ರಮ ಆರಂಭವಾದ ಕೆಲವೇ ನಿಮಿಷದಲ್ಲಿ ಮೋಹನ್‌ ಮೇಲೆ ಪ್ಲಾಸ್ಟಿಕ್‌ ಕವರ್‌ನ ರೀತಿಯ ವಸ್ತು ಬಂದು ಬಿದ್ದು ಸಿಡಿದಿದೆ. ಅವರ ಪಕ್ಕದಲ್ಲಿ ಆಸೀನರಾಗಿದ್ದ ತಂದೆ ಅವರಿಗೆ ಸುಟ್ಟಗಾಯವಾಗಿದೆ. ಕಿವಿಯಲ್ಲಿ ಗುಂಯ್‌ ಅಂತ ಶಬ್ದವಾಗಿದೆ. ಕಾರ್ಯಕ್ರಮದಲ್ಲಿದ್ದವರು ಆಘಾತಗೊಂಡಿದ್ದಾರೆ. ಕೂಡಲೇ ಗಾಯಾಳುಗಳನ್ನು ಹತ್ತಿರದ ಸೆಂಟ್‌ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನಲಪಾಡ್‌ ವಿವರಿಸಿದರು.

ಘಟನೆಯಲ್ಲಿ ಶಾಸಕರ ಕಾಲಿಗೆ ಸುಟ್ಟಗಾಯವಾಗಿದೆ. ಇನ್ನುಳಿದ ಮೂವರಿಗೆ ಕಾಲು, ಮುಖ ಹಾಗೂ ಕೈಗಳಿಗೆ ಗಾಯವಾಗಿದೆ. ವೇದಿಕೆಯಲ್ಲಿ ಮಹಿಳೆಯರಿಗೆ ಸಹ ಪೆಟ್ಟಾಗಿದೆ. ನಮಗೆ ಕ್ಷೇತ್ರದಲ್ಲಿ ನಮಗೆ ಯಾರೂ ವೈರಿಗಳಿಲ್ಲ. ಆದರೆ ಉದ್ದೇಶಪೂರ್ವಕವಾಗಿಯೇ ಕೃತ್ಯ ಎಸಗಿರುವುದು ಸ್ಪಷ್ಟವಾಗಿದೆ. ಪೊಲೀಸರ ತನಿಖೆಯಿಂದ ಸತ್ಯ ಗೊತ್ತಾಗಲಿದೆ ಎಂದು ನಲಪಾಡ್‌ ಹೇಳಿದರು.

‘ಪಕ್ಕದ ಕಟ್ಟಡದಿಂದ ಬಾಲ್‌ ಮಾದರಿ ಸ್ಫೋಟಕ ಎಸೆತ’

"

ಕಾರ್ಯಕ್ರಮ ನಡೆಯುತ್ತಿದ್ದ ಪಕ್ಕದ ಕಟ್ಟಡದ ಮೇಲಿನಿಂದ ಸ್ಪೋಟಕವನ್ನು ಶಾಸಕ ಹ್ಯಾರಿಸ್‌ ಅವರನ್ನು ಗುರಿಯಾಗಿಸಿಕೊಂಡು ಎಸೆಯಲಾಗಿದೆ. ಅದು ಟೆನ್ನಿಸ್‌ ಬಾಲ್‌ ಮಾದರಿಯ ಸ್ಪೋಟಕವಾಗಿತ್ತು. ಸ್ಪೋಟಕ ಸಿಡಿದು ಹ್ಯಾರಿಸ್‌ ಹಾಗೂ ಅವರೊಂದಿಗೆ ವೇದಿಕೆ ಮೇಲೆ ಇದ್ದವರಿಗೆ ಗಾಯವಾಗಿದೆ. ಹ್ಯಾರಿಸ್‌ ಅವರ ಪ್ರಾಣಕ್ಕೆ ಯಾವುದೇ ತೊಂದರೆ ಇಲ್ಲ ಎಂಬುದಾಗಿ ವೈದ್ಯರು ಹೇಳಿದ್ದಾರೆ ಎಂದು ಸ್ಥಳೀಯ ಕಾಂಗ್ರೆಸ್‌ ಮುಖಂಡ ಶಿವಕುಮಾರ್‌ ಹೇಳಿದ್ದಾರೆ.

ಸಿಲ್ವರ್‌ ಬಣ್ಣದ ಗಂಡುಗಳು ಪತ್ತೆ

ಶಾಸಕ ಹ್ಯಾರಿಸ್‌ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಸ್ಫೋಟ ಸಂಭವಿಸಿದ ಸ್ಥಳದ ಸಮೀಪ ಸಿಲ್ವರ್‌ ಬಣ್ಣದ ಚಿಕ್ಕ ಚಿಕ್ಕ ಗುಂಡುಗಳು ಹಾಗೂ ಸಿಡಿ ಮದ್ದಿಗೆ ಬಳಸುವ ರಾಸಾಯನಿಕ ವಸ್ತುಗಳು ಪತ್ತೆಯಾಗಿವೆ.

ವನ್ನಾರಪೇಟೆಯ ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ತಜ್ಞರು, ಸ್ಫೋಟ ಸಂಭವಿಸಿದ ಸುತ್ತಮುತ್ತ ಪರಿಶೀಲಿಸಿದರು. ಆಗ ರಾಸಾಯನಿಕ ಪುಡಿ ಹಾಗೂ ಸಿಲ್ಪರ್‌ ಬಣ್ಣದ ಸಣ್ಣ ಪ್ರಮಾಣದ ಗುಂಡುಗಳು ಲಭಿಸಿವೆ. ಇವುಗಳನ್ನು ಏತಕ್ಕೆ ಬಳಸಲಾಗಿತ್ತು ಎಂಬ ಪ್ರಶ್ನೆ ಮೂಡಿದೆ.

ಬ್ರೆಕಿಂಗ್: ಬೆಂಗಳೂರಲ್ಲಿ ಲಘು ಸ್ಫೋಟ, ಶಾಸಕ ಹ್ಯಾರೀಸ್ ಸೇರಿ ನಾಲ್ವರು ಆಸ್ಪತ್ರೆಗೆ ದಾಖಲು...

ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್‌ ಆಯುಕ್ತ (ಪಶ್ಚಿಮ) ಉಮೇಶ್‌ ಕುಮಾರ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಆಗಮಿಸಿ ಪರಿಶೀಲಿಸಿದರು. ಶ್ವಾನ ದಳ ಸಹ ತಪಾಸಣೆ ನಡೆಸಿತು.

"

PREV
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಜನರ ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್, ಚುನಾವಣೆಗೇ ಬನ್ನಿ: ಸರ್ಕಾರಕ್ಕೆ ಸಿ.ಟಿ.ರವಿ ಸವಾಲು