1500 ಕೋಟಿಯಲ್ಲಿ 171 ಕಿ.ಮೀ. ಬೆಂಗಳೂರು Rajakaluve ಅಭಿವೃದ್ಧಿ

By Suvarna News  |  First Published Jun 20, 2022, 2:30 PM IST
  • 1500 ಕೋಟಿಯಲ್ಲಿ 171 ಕಿ.ಮೀ. ರಾಜಕಾಲುವೆ ಅಭಿವೃದ್ಧಿ
  • ಸರ್ಕಾರದ ಅನುದಾನದಲ್ಲಿ ಕ್ರಿಯಾ ಯೋಜನೆ ಸಿದ್ಧ
  • ಬಿಬಿಎಂಪಿಯಿಂದಲೇ ತೃತೀಯ ಹಂತದ ರಾಜಕಾಲುವೆ ಉನ್ನತೀಕರಣ

ಬೆಂಗಳೂರು (ಜೂ.20): ನಗರದ ರಾಜಕಾಲುವೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರವು ಬಿಬಿಎಂಪಿಗೆ ಬಿಡುಗಡೆ ಮಾಡಿರುವ  1,500 ಕೋಟಿ ಅನುದಾನವನ್ನು ಪ್ರಾಥಮಿಕ ಹಾಗೂ ದ್ವಿತೀಯ ಹಂತದ ರಾಜಕಾಲುವೆ ಅಭಿವೃದ್ಧಿಗೆ ಬಳಸಲಾಗುತ್ತದೆ.

ಮಳೆಯಿಂದಾಗಿ ನಗರದ ತಗ್ಗು ಪ್ರದೇಶಗಳು ಹಾಗೂ ರಾಜಕಾಲುವೆಯ ಅಕ್ಕ-ಪಕ್ಕದ ಪ್ರದೇಶಗಳು ಜಲಾವೃತಗೊಳ್ಳುವ ಸಮಸ್ಯೆ ಪರಿಹರಿಸಲು ರಾಜ್ಯ ಸರ್ಕಾರ ನೀಡಿರುವ ಅನುದಾನಕ್ಕೆ ತಕ್ಕಂತೆ ಪಾಲಿಕೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುಷ್ಠಾನಗೊಳಿಸಲಾಗುತ್ತಿದೆ.

Tap to resize

Latest Videos

ಬಿಬಿಎಂಪಿ ವ್ಯಾಪ್ತಿಯಲ್ಲಿ 840 ಕಿ.ಮೀ. ಉದ್ದದ ರಾಜಕಾಲುವೆಗಳಿವೆ. ಅದರಲ್ಲಿ 400 ಕಿ.ಮೀ. ಉದ್ದದ ರಾಜಕಾಲುವೆ ದುರಸ್ತಿ ಹಾಗೂ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ. ಇದೀಗ 171.49 ಕಿ.ಮೀ. ಉದ್ದದ 359 ಕಡೆಗಳಲ್ಲಿ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ರಾಜಕಾಲುವೆಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಾಥಮಿಕ ಹಂತದ 47.49 ಕಿ.ಮೀ. ಉದ್ದದ ರಾಜಕಾಲುವೆ ಅಭಿವೃದ್ಧಿಗೆ 481.88 ಕೋಟಿ, 123.3 ಕಿ.ಮೀ. ಉದ್ದದ ದ್ವಿತೀಯ ಹಂತದ ಕಾಲುವೆ ದುರಸ್ತಿಗೆ .1,005.12 ಕೋಟಿ ಖರ್ಚು ಮಾಡಲಾಗುತ್ತಿದೆ.

Kodagu Soldier Family Boycott ; ಯೋಧನ ಕುಟುಂಬಕ್ಕೆ ಗ್ರಾಮಸ್ಥರ ಬಹಿಷ್ಕಾರ!

ಸರ್ಕಾರದಿಂದ ಷರತ್ತು: ಕ್ರಿಯಾ ಯೋಜನೆಗೆ ಅನುಮತಿ ನೀಡಿರುವ ಸರ್ಕಾರ, ಕಾಮಗಾರಿ ಅನುಷ್ಠಾನಕ್ಕೆ ಕೆಲವೊಂದು ಷರತ್ತು ವಿಧಿಸಿದ್ದು, ತೃತೀಯ ಹಂತದ ಕಾಲುವೆಗಳನ್ನು ಬಿಬಿಎಂಪಿ ಸ್ವಂತ ಅನುದಾನದಲ್ಲಿ ಅಭಿವೃದ್ಧಿಪಡಿಸಬೇಕು, ಪ್ರತಿ ಗುತ್ತಿಗೆ .10 ಕೋಟಿಗಿಂತ ಕಡಿಮೆ ಇರಬಾರದು ಎಂದು ಸೂಚಿಸಲಾಗಿದೆ.

ರೈಲ್ವೆ ಸೇತುವೆಗೆ .32 ಕೋಟಿ: ರಾಜಕಾಲುವೆ ಅಭಿವೃದ್ಧಿ ಜತೆಗೆ ಗೆದ್ದಲಹಳ್ಳಿ ರೈಲ್ವೆ ಸೇತುವೆ ಅಗಲೀಕರಣಕ್ಕೂ ಅನುಮತಿಸಲಾಗಿದೆ. ಇದಕ್ಕೆ ಅಮೃತ್‌ ನಗರೋತ್ಥಾನ ಯೋಜನೆಯ ಅನುದಾನದಲ್ಲಿ .32 ಕೋಟಿ ನೀಡುವ ಬಗ್ಗೆಯೂ ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ.

ಯಾವ ಕ್ಷೇತ್ರಕ್ಕೆ ಎಷ್ಟುಅನುದಾನ:

ಸರ್ವಜ್ಞನಗರ 40 ಕೋಟಿ
ಶಾಂತಿನಗರ 21 ಕೋಟಿ
ಸಿ.ವಿ,ರಾಮನ್‌ ನಗರ 50 ಕೋಟಿ
ಶಿವಾಜಿ ನಗರ 20 ಕೋಟಿ
ಹೆಬ್ಬಾಳ 40 ಕೋಟಿ
ಪುಲಕೇಶಿ ನಗರ 17 ಕೋಟಿ
ಮಹಾಲಕ್ಷ್ಮಿ ಲೇಔಟ್‌ 20 ಕೋಟಿ
ಗಾಂಧಿ ನಗರ 25 ಕೋಟಿ
ಮಲ್ಲೇಶ್ವರ 30 ಕೋಟಿ
ಚಾಮರಾಜಪೇಟೆ 20 ಕೋಟಿ
ರಾಜಾಜಿ ನಗರ 21 ಕೋಟಿ
ಗೋವಿಂದರಾಜ ನಗರ 55 ಕೋಟಿ
ವಿಜಯ ನಗರ 20 ಕೋಟಿ 
ಬಸವನಗುಡಿ 30 ಕೋಟಿ 
ಪದ್ಮನಾಭ ನಗರ 75 ಕೋಟಿ
ಬಿಟಿಎಂ ಲೇಔಟ್‌ 17 ಕೋಟಿ 
ಚಿಕ್ಕಪೇಟೆ 22 ಕೋಟಿ
ಜಯನಗರ 25 ಕೋಟಿ 
ಬ್ಯಾಟರಾಯನಪುರ 35 ಕೋಟಿ 
ಯಲಹಂಕ 110 ಕೋಟಿ 
ಕೆಆರ್‌ಪುರ 110 ಕೋಟಿ 
ಮಹದೇವಪುರ 110 ಕೋಟಿ 
ಬೊಮ್ಮನಹಳ್ಳಿ 140 ಕೋಟಿ 
ಬೆಂಗಳೂರು ದಕ್ಷಿಣ 140 ಕೋಟಿ 
ಯಶವಂತಪುರ 120 ಕೋಟಿ 
ಆರ್‌ಆರ್‌ ನಗರ 126 ಕೋಟಿ 
ದಾಸರಹಳ್ಳಿ 48 ಕೋಟಿ 

BALLARI DRINKING WATER CRISIS ಬಳ್ಳಾರಿ ಜನರಿಗೆ ಕುಡಿಯಲು ಆಂಧ್ರದ  ಫಿಲ್ಟರ್ ನೀರು!

ಇನ್ನು ಕಳೆದ ಒಂದು ತಿಂಗಳ ಅವಧಿಯಲ್ಲಿ ಸುರಿದ ಮಳೆಯಿಂದಾಗಿ ಅದೆಷ್ಟೋ ಮನೆಗಳಿಗೆ ನೀರು ನುಗ್ಗಿ ನೂರಾರು ಸಂಸಾರಗಳು ಬೀದಿಗೆ ಬಂದಿದ್ವು. ಇದಕ್ಕೆಲ್ಲ ವರುಣರಾಯನೇ ಕಾರಣ ಅಂತ ಹೇಳಿದ್ರೆ ತಪ್ಪಾಗುತ್ತೆ, ಇದಕ್ಕೆ ಬಹುಮುಖ್ಯ ಕಾರಣ ಅಂದ್ರೆ ನಿರ್ವಹಣೇಯೇ ಇಲ್ಲದಿರೋ ರಾಜಕಾಲುವೆ (Rajakaluve). 

ಬೆಂಗಳೂರಿನದ್ಯಂತ ಹಬ್ಬಿರುವ ರಾಜಕಾಲುವೆಯಿಂದಲೇ ಸಾಕಷ್ಟು ಅವಾಂತರ ಸೃಷ್ಟಿ ಆಗಿತ್ತು. ಈ ಹಿನ್ನೆಲೆ ಮುಂಬರುವ ಮಳೆಗಾಲಕ್ಕೂ ಮುಂಚಿತವಾಗಿ ರಾಜಕಾಲುವೆ ನಿರ್ವಹಣೆ ಮಾಡಬೇಕು ಎಂಬ ಖಡಕ್ ಸೂಚನೆಯನ್ನ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ (BBMP Commissioner Tushar Girinath) ಕಳೆದ ಮೇ ಅಂತ್ಯದಲ್ಲಿ ಅಧಿಕಾರಿಗಳಿಗೆ ನೀಡಿದ್ದು, ಅದರ ಬೆನ್ನಲ್ಲೇ ಇದೀಗ ಬಿಬಿಎಂಪಿ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಸಮಸ್ಯೆ ಆಗುವ ರಾಜಕಾಲುವೆಯ ಲಿಸ್ಟನ್ನ ರೆಡಿ ಮಾಡಲಾಗಿದೆ.

ಬಿಬಿಎಂಪಿ ( Bruhat Bengaluru Mahanagara Palike) ಲಿಸ್ಟ್ ನಲ್ಲಿ ಒಟ್ಟು 72 ರಾಜಕಾಲುವೆ ಡೇಂಜರ್ ಝೋನ್ ನಲ್ಲಿದೆ ಎಂದು ಪಟ್ಟಿ ಮಾಡಲಾಗಿದ್ದು, ಈ ಪೈಕಿ 27 ರಾಜಕಾಲುವೆ ಸಾಮಾನ್ಯ ಮಳೆಗೂ ಉಕ್ಕಿ ಹರಿಯುವಂತಹ ಪರಿಸ್ಥಿತಿಯಲ್ಲಿದೆ. ಇದರ ಹೊರತಾಗಿ 45 ಕಡೆಗಳಲ್ಲಿ ವಿಪರೀತ ಮಳೆಯಾದರೆ ಡೇಂಜರ್ ಎಂದು ಬಿಬಿಎಂಪಿ ಪಟ್ಟಿ ಮಾಡಿದೆ.

click me!