Ballari Drinking Water Crisis ಬಳ್ಳಾರಿ ಜನರಿಗೆ ಕುಡಿಯಲು ಆಂಧ್ರದ  ಫಿಲ್ಟರ್ ನೀರು!

By Suvarna News  |  First Published Jun 20, 2022, 1:58 PM IST
  • ತುಂಗಭಧ್ರ ಜಲಾಶಯ ಇದ್ರೂ ಇಲ್ಲಿಯ ಜನರಿಗೆ ಕುಡಿಯಲು ನೀರಿಲ್ಲ
  • ದೀಪದ ಕೆಳಗೆ ಕತ್ತಲು ಎನ್ನುವ ಮಾತಿಗೆ ಉದಾಹರಣೆಯಾದ ಗ್ರಾಮಗಳು
  • ಹತ್ತು ರೂಪಾಯಿಗೊಂದು ಬಿಂದಿಗೆ ನೀರನ್ನು ಖರೀದಿ ಮಾಡೋ ಜನರು

ವರದಿ : ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್ 

ಬಳ್ಳಾರಿ (ಜೂನ್ 20): ಇದು ಅಕ್ಷರಶಃ ದೀಪದ ಕೆಳಗೆ ಕತ್ತಲು ಅಂದ್ರೂ ತಪ್ಪಾಗಲಿಕ್ಕಿಲ್ಲ. ಯಾಕಂದ್ರೇ, ಅವಳಿ ಜಿಲ್ಲೆಯ ಮಡಿಲಲ್ಲಿಯೇ ರಾಜ್ಯದ ಎರಡನೇ ಅತೀ ದೊಡ್ಡ ಜಲಾಶಯದ ಇದ್ರೂ, ಇಲ್ಲಿಯ ಜನರು ಮಾತ್ರ  ಕುಡಿಯೋ ನೀರಿಗಾಗಿ ಪರದಾಡುತ್ತಿದ್ದಾರೆ. ಪ್ರತಿ ವರ್ಷ ತುಂಗಭದ್ರ ಜಲಾಶಯ ತುಂಬಿ ಹರಿದು ಹೋಗುತ್ತಿದ್ರು. ಅದನ್ನು ಸಮರ್ಪಕವಾಗಿ ಬಳಕೆ ಮಾಡಲಾಗದ ಕಾರಣ, ಬಳ್ಳಾರಿ ತಾಲೂಕಿನ ಕೆಲ ಗ್ರಾಮದಲ್ಲಿ ಈಗಲೂ ಹತ್ತು ರೂಪಾಯಿಗೊಂದು ಕೊಡ ನೀರನ್ನು ಖರೀಧಿ ಮಾಡಿ ಕುಡಿಯುತ್ತಿದ್ದಾರೆ. ವಿಶೇಷವೆಂದ್ರೇ ಆಂಧ್ರದ ಗಡಿಭಾಗದ ಗ್ರಾಮಗಳಲ್ಲಿ ಆಂಧ್ರದ ಕೆಲ ವ್ಯಕ್ತಿಗಳು ಫಿಲ್ಟರ್ ನೀರೆಂದು ಸಾಮಾನ್ಯ ನೀರನ್ನು ಮಾರಾಟ ಮಾಡುತ್ತಿದ್ದಾರೆ.  
 
 ಹತ್ತು ರೂಪಾಯಿಗೆ ಒಂದು ಬಿಂದಿಗೆ ನೀರು!
ನೀರಿನ ಕೊಡಪಾನ ಹಿಡಿದುಕೊಂಡು ನೀರಿಗೂ ಕಾಯುತ್ತಿರುವ ಮಹಿಳೆಯರು. ಮತ್ತೊಂದು ಕಡೆ ಕುಡಿಯುವ ನೀರು ತರಲು ಓಡಿ ಓಡಿ ಹೋಗುತ್ತಿರುವ ಜನ.  ಆಂಧ್ರ ಗಡಿ ಹೊಂದಿಗೊಂಡಂತೆ ಇರೋ ಬಳ್ಳಾರಿಯ ಗ್ರಾಮೀಣ ಪ್ರದೇಶದ ಕೆಲ ಹಳ್ಳಿಗಳಲ್ಲಿ  ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. 

Tap to resize

Latest Videos

undefined

ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್, ಆನ್‌ಲೈನ್ ಮೂಲಕ ಸಾಲ ಪಡೆಯುವ ಅವಕಾಶ

ಬೇಸಿಗೆ ಹಿನ್ನೆಲೆ ಸಮರ್ಪಕ ನೀರು ಪೂರೈಕೆಯಾಗದ ಕಾರಣ ರೂಪನಗುಡಿ, ಶಂಕರ್ ಬಂಡೆ, ಶಂಕರ್ ಬಂಡೆ ಕ್ಯಾಂಪ್  ಸೇರಿದಂತೆ ಹತ್ತು ಹಲವು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಬಳಕೆಗೆ ಬೋರ್ ವೆಲ್ ನಿಂದ ಬರೋ ನೀರನ್ನು ಬಳಸುತ್ತಾರೆ. ಆದ್ರೇ, ಕುಡಿಯೋದಕ್ಕೆ ಮಾತ್ರ ಜನರು ನಿತ್ಯ ಪರದಾಡುತ್ತಿದ್ದಾರೆ. ಆರೋಗ್ಯದ ಹಿತದೃಷ್ಟಿ ಯಿಂದ ಫಿಲ್ಟರ್ ನೀರು ಕುಡಿಯೋದು ಅನಿವಾರ್ಯವಾಗಿದೆ. ಆದ್ರೇ, ಇದನ್ನೆ ನೆಪವಾಗಿರಿಸಿಕೊಂಡ ಕೆಲ ಆಂಧ್ರದದ ವರು  ಫಿಲ್ಟರ್ ನೀರು ಹೆಸರಲ್ಲಿ ದಂಧೆ ಮಾಡುತ್ತಿದ್ದಾರೆ.

 ಟ್ಯಾಂಕರ್ ಮೂಲಕ ನೀರನ್ನು ತಂದು, ಒಂದು ಕೊಡಕ್ಕೆ (ಬಿಂದಿಗೆಗೆ) ಹತ್ತು ರೂಪಾಯಿಯಂತೆ ಮಾರಾಟ ಮಾಡುತ್ತಿದ್ದಾರೆ. ಇದು ಶುದ್ಧವಾದ ನೀರೋ ಅಥವಾ ಸಾಮಾನ್ಯ ನೀರೋ ಗೊತ್ತಿಲ್ಲ ಜನರು ಅನಿವಾರ್ಯವಾಗಿ ಕುಡಿಯುತ್ತಿದ್ದಾರೆಂದು ಗ್ರಾಮದ ಮಂಜುನಾಥ್ , ಬಸವರಾಜ ಹೇಳುತ್ತಿದ್ದಾರೆ.

Agnipath Scheme; ಅಗ್ನಿವೀರರಿಗೆ ಜಾಬ್ ಆಫರ್ ನೀಡಿದ ಆನಂದ್ ಮಹೀಂದ್ರಾ
 
ಸಮರ್ಪಕವಾಗಿ ಪೂರೈಕೆಯಾಗದ ನೀರು ಕೈಕೊಟ್ಟ ಫಿಲ್ಟರ್ ಘಟಕ
ಇನ್ನೂ ಇಲ್ಲಿಯ ಗ್ರಾಮಗಳಲ್ಲಿ ಸಣ್ಣಪುಟ್ಟ ಕೆರೆಗಳಿವೆ. ಆದ್ರೇ, ಅಲ್ಲಿಯ ನೀರನ್ನು ಸಮರ್ಪಕವಾಗಿ ನಳದ ಮೂಲಕ ಮನೆ ಮನೆಗೆ ಸರಬರಾಜು ಮಾಡುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ. ಈ ಬಗ್ಗೆ ಹತ್ತಾರು ಬಾರಿ ಜಿಲ್ಲಾ ಪಂಚಾಯಿತಿ ಸಭೆಗಳಲ್ಲಿ ಚರ್ಚೆ ಮಾಡಿದ್ರು. ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದೆ. 

 ಇದರ ಜೊತೆ ಗ್ರಾಮಕ್ಕೊಂದು ಶುದ್ಧ ಕುಡಿಯುವ ನೀರಿನ ಘಟಕೆ ಇರಬೇಕು ಆದ್ರೆ, ಇಲ್ಲಿ ಕೆಟ್ಟ ವರ್ಷಗಳೇ ಕಳೆದ್ರೂ ಯಾರು ಕೇಳುವವರು ಇಲ್ಲದಂಗಾಗಿದೆ. ಇನ್ನೂ ಒಂದು ಸಣ್ಣ ಕುಟುಂಬಕ್ಕೆ ದಿನಕ್ಕೆ ಎರಡರಿಂದ ಮೂರು ಬಿಂದಿಗೆ ನೀರು ಕುಡಿಯಲು ಬೇಕು. ದಿನಕ್ಕೆ ಮೂವತ್ತರಿಂದ ಐವತ್ತು ರೂಪಾಯಿವರೆಗೂ ಕುಡಿಯಲು ಖರ್ಚು ಮಾಡಿದ್ರೇ, ತಿಂಗಳಿಗೆ ಸರಿಸುಮಾರಾಗಿ ಸಾವಿರರದಿಂದ ಹದಿನೈದು ಬೇಕಾಗುತ್ತದೆ. ಇಷ್ಟೊಂದು ಖರ್ಚು ಮಾಡಲು ಇಲ್ಲಿಯ ಬಡ ಕುಟುಂಬಕ್ಕೆ ಕಷ್ಟವಾಗುತ್ತದೆ. ಹೀಗಾಗಿ ಇದಕ್ಕೊಂದು ಪರಿಹಾರ ಕೊಡಿ ಎನ್ನುತ್ತಿದ್ದಾರೆ ಇಲ್ಲಿಯ ಜನರು .
 
ದೀಪದ ಕೆಳಗೆ ಕತ್ತಲು: ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ರಾಜ್ಯದ ಎರಡನೇ ಅತೀ ದೊಡ್ಟ ಡ್ಯಾಂ ತುಂಗಭದ್ರಾ ಜಲಾಶಯ ಇದೆ‌. ಹೀಗಿದ್ದರೂ ಅವಳಿ ಜಿಲ್ಲೆಯ ಜನರಿಗೆ ಕುಡಿಯುವ ನೀರ ಸಹ ಪೂರೈಕೆ ಮಾಡಲು ಈ ಸರ್ಕಾರಕ್ಕೆ ಆಗುತಿಲ್ಲ ದಿರುವುದು ನಾಚೀಕೆಗೇಡಿನ ಸಂಗತಿಯಾಗಿದೆ. ಇನ್ನಾದ್ರೂ  ಈ ಬಗ್ಗೆ ಗಂಭೀರವಾಗಿ ಪರಿಗಣಿಸೋ ಮೂಲಕ ಶಾಶ್ವತಪರಿಹಾರ ದೊರಕಿಸಿಕೊಡಬೇಕಿದೆ.  

click me!