ಬಿಬಿಎಂಪಿಗೆ ಇಡಿ ನೊಟೀಸ್: ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಪ್ರತಿಕ್ರಿಯೆ

By Girish GoudarFirst Published Dec 28, 2022, 12:02 PM IST
Highlights

ಕಾಮಗಾರಿಯ ಮೊತ್ತದ‌ ಪ್ರಮಾಣ ಹೆಚ್ಚಾಗಿದೆ ಅಂತ ದೂರಿನನ್ವಯ. ನಮಗೆ ನವೆಂಬರ್‌ನಲ್ಲಿ ನೊಟೀಸ್ ಬಂದಿದೆ. ನೊಟೀಸ್‌ನಲ್ಲಿ ಕೇಳಿದ್ದ ಪ್ರಶ್ನೆಗಳಿಗೆ ಪೂರ್ಣವಾದ ಮಾಹಿತಿ‌ಯನ್ನ ನೀಡಿದ್ದೇವೆ: ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್.

ಬೆಂಗಳೂರು(ಡಿ.28): ಬಿಬಿಎಂಪಿ ಔಟರ್ ಝೋನ್‌ನಲ್ಲಿ ಅವ್ಯವಹಾರ ಆಗಿದೆ ಅಂತ ಎಸಿಬಿಗೆ‌ ದೂರು ನೀಡಲಾಗಿತ್ತು. ಈ ವಿಚಾರವಾಗಿ ಎಸಿಬಿ ಹಾಗೂ ಇಡಿಯಲ್ಲಿ ಎಫ್‌ಐಆರ್ ದಾಖಲಾಗಿದ್ದವು. ಕಾಮಗಾರಿಯ ಮೊತ್ತದ‌ ಪ್ರಮಾಣ ಹೆಚ್ಚಾಗಿದೆ ಅಂತ ದೂರಿನನ್ವಯ. ನಮಗೆ ನವೆಂಬರ್‌ನಲ್ಲಿ ನೊಟೀಸ್ ಬಂದಿದೆ. ನೊಟೀಸ್‌ನಲ್ಲಿ ಕೇಳಿದ್ದ ಪ್ರಶ್ನೆಗಳಿಗೆ ಪೂರ್ಣವಾದ ಮಾಹಿತಿ‌ಯನ್ನ ನೀಡಿದ್ದೇವೆ ಅಂತ ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಬಿಬಿಎಂಪಿಗೆ ಇಡಿ ನೊಟೀಸ್ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೊಟೀಸ್‌ನಲ್ಲಿ ಚೀಫ್ ಎಂಜಿನಿಯರ್‌ಗಳ‌ ಹೆಸರು ಇದೆ. ಬೋರ್‌ವೆಲ್ ವಿಚಾರವೊಂದನ್ನೇ ನಾವು ಪರಿಶೀಲನೆ ಮಾಡಿಲ್ಲ. ಆರ್‌ಓ ಪ್ಲಾಂಟ್ ಹಾಗೂ ಅದೇ ಜಾಗದಲ್ಲಿರುವ ಬೋರ್‌ವೆಲ್ ಪರಶೀಲನೆ ಮಾಡಿದ್ದೇವೆ. ಈ ವಿಚಾರವಾಗಿ ಎಂಜಿನಿಯರ್ ಇನ್ ಚೀಫ್ ಪ್ರಹ್ಲಾದ್ ರನ್ನು ನೋಡಲ್ ಆಫೀಸರ್ ಮಾಡಿದ್ದೇವೆ ಅಂತ ಮಾಹಿತಿ ಹೇಳಿದ್ದಾರೆ. 

ಬೆಂಗಳೂರು: ಮತದಾರರ ಮಾಹಿತಿ ಕದ್ದ ಚಿಲುಮೆ ಕಪ್ಪು ಪಟ್ಟಿಗೆ ಸೇರ್ಪಡೆ

ಬಿಬಿಎಂಪಿ ಹೊರ ವಲಯದಲ್ಲಿ 2016-19 ರವರೆಗೆ ಹಾಕಲಾದ RO ಪ್ಲ್ಯಾಂಟ್ ಬಗ್ಗೆ ಇಡಿ ಮಾಹಿತಿಯನ್ನ ಕೇಳಿದೆ. ಇದು ಮೊದಲು ಎಸಿಬಿನಲ್ಲಿ ದೂರು ದಾಖಲಾಗಿದೆ, ಆ ಬಳಿಕ ಇಡಿಗೆ ವರ್ಗವಾಗಿದೆ. ನವೆಂಬರ್ ತಿಂಗಳಲ್ಲಿ ನಮಗೆ ನೋಟೀಸ್ ಬಂದಿತ್ತು. ಈ ವಿಚಾರವಾಗಿ ನಾನು ಇಂಜಿನಿಯರ್ ಚೀಫ್ ಪ್ರಹ್ಲಾದ್ ಅವರಿಗೆ ನೋಡೆಲ್ ಅಧಿಕಾರಿಯಾಗಿ ಮಾಡಿದ್ದೇನೆ. RO ಪ್ಲ್ಯಾಂಟ್ ಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿ ನಾವು ಇಡಿಗೆ ಕೊಡ್ತಿದ್ದೇವೆ. ಮುಖ್ಯವಾಗಿ ಪಾಲಿಕೆ‌ ವ್ಯಾಪ್ತಿಯ ಐದು ವಲಯಗಳಲ್ಲಿ ಅವ್ಯವಹಾರ ಆಗಿದೆ ಅಂತ ಹೇಳಲಾಗ್ತಿದೆ. ಈಗ ಇಡಿಯಿಂದ ತನಿಖೆ ನಡಿಯುತ್ತಿದೆ. ಅವರಿಗೆ ಕೆಲವು  ಮಾಹಿತಿ ನಾವು ಕೊಡ್ತೇವೆ. ಅವರಿಗೆ ಮಾಹಿತಿ ಬೇಕಾದಾಗ ಮಾಹಿತಿ ಕೊರತೆಯಾದಗ ಮಾಹಿತಿ ಪಡೆಯುತ್ತಾರೆ ಅಂತ ತಿಳಿಸಿದ್ದಾರೆ. 

ಚಿಲುಮೆ ಸಂಸ್ಥೆಯನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಿರೋ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ತುಷಾರ್ ಗಿರಿನಾಥ್ ಅವರು, ಮತದಾರರ ಮಾಹಿತಿಯನ್ನು ಅಕ್ರಮವಾಗಿ ಕಲೆಹಾಕುತ್ತಿದ್ದಾರೆ ಅನ್ನೋ ವಿಚಾರವಾಗಿ ಚಿಲುಮೆ ಸಂಸ್ಥೆಗೆ ನೋಟೀಸ್ ನೀಡಿ, ಮೂರು ದಿನದಲ್ಲಿ ಮಾಹಿತಿ ನೀಡುವಂತೆ ತಿಳಿಸಿದ್ದೆವು. 15 ದಿನ ಕಳೆದ್ರೂ ಚಿಲುಮೆ ಸಂಸ್ಥೆಯಿಂದ ಯಾವುದೇ ಉತ್ತರ ಬರಲಿಲ್ಲ. ಹೀಗಾಗಿ ಇನ್ನು ಮುಂದೆ ಅವರಿಗೆ ಚುನಾವಣೆ ಅಥವಾ ಬಿಬಿಎಂಪಿಯಲ್ಲಿ ಯಾವುದೇ ಕೆಲಸ ನೀಡಬಾರದು ಅಂತ ಚಿಲುಮೆ ಸಂಸ್ಥೆಯನ್ನ ಬ್ಲಾಕ್ ಲಿಸ್ಟ್‌ಗೆ ಸೇರಿಸಲಾಗಿದೆ ಅಂತ ತಿಳಿಸಿದ್ದಾರೆ. 

click me!